ಉಡುಪಿ(ನ,8): ಆಗಸ್ಟ್ 15ರಂದು ದೇಶಾಭಿಮಾನ, ನವೆಂಬರ್ 1ರಂದು ಭಾಷಾಭಿಮಾನಗಳು ಜಾಗೃತವಾಗುತ್ತವೆ. ದಿನನಿತ್ಯ ಕನ್ನಡವನ್ನು ಆಡಿದ ಅಥವಾ ಓದಿದ ಮಾತ್ರಕ್ಕೆ ಕನ್ನಡ ಬೆಳೆಯುವುದಿಲ್ಲ. ಭಾಷೆಯನ್ನು ಪ್ರೀತಿಸದೆ, ಗೌರವಿಸದೆ, ಮಮಕಾರವಿಲ್ಲದೆ ಭಾಷೆಯನ್ನು ಬೆಳೆಸುವುದಕ್ಕೆ ಅಥವಾ ಉಳಿಸುವುದಕ್ಕೆ ಸಾಧ್ಯವಿಲ್ಲ. ತಮಿಳರಿಗೆ, ಮಲಯಾಳಿಗಳಿಗೆ ಹೋಲಿಸಿದರೆ ನಮ್ಮಲ್ಲಿ ಭಾಷಾಭಿಮಾನದ ಕೊರತೆ ಎದ್ದುಕಾಣುತ್ತದೆ. ನಾವು ಅವರಿಂದ ಭಾಷಾಭಿಮಾನ, ಭಾಷಿಕ ಪ್ರೀತಿ, ಗೌರವಗಳನ್ನು ಕಲಿಯಬೇಕಾಗಿದೆ. ಭಾಷೆ ಎಂಬುದು ಕೇವಲ ಸಂವಹನ ಸಾಧನ ಮಾತ್ರವಲ್ಲ, ಅದೊಂದು ಸಂಸ್ಕೃತಿಯೂ ಹೌದು, ಅದೊಂದು ಪರಂಪರೆಯೂ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಡಾ| ಬಿ. ಬಿ. ಹೆಗ್ಡೆ ಕಾಲೇಜು: ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಕುರಿತು ಮಾಹಿತಿ ಕಾರ್ಯಕ್ರಮ
ಕುಂದಾಪುರ( ನ,8) : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ ಮತ್ತು ತರಬೇತಿ ವಿಭಾಗದ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಐಎಎಸ್ & ಕೆಎ ಎಸ್ ಮತ್ತು ಇತರೆ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಯುನಿವರ್ಸಲ್ ಕೋಚಿಂಗ್ ಸೆಂಟರ್ನ ತರಬೇತುದಾರರಾದ ಶ್ರೀ ಅಖಿಲೇಶ್ ಶೆಟ್ಟಿ ಮಾತನಾಡಿ, ಸರ್ಕಾರಿ […]
ಕುಂದಾಪುರದ ಎಕ್ಸಲೆಂಟ್ ಪಿ.ಯು ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕುಂದಾಪುರ( ನ,8): ಎಕ್ಸಲೆಂಟ್ ಪಿ. ಯು ಕಾಲೇಜು, ಸುಣ್ಣಾರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ , ವಕೀಲರ ಸಂಘ (ರಿ) ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಎಕ್ಸಲೆಂಟ್ ಪಿ ಯು ಕಾಲೇಜಿನಲ್ಲಿ ನವೆಂಬರ್ 7 ರಂದು “ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರೀಕರ ಸಬಲೀಕರಣ” ಎನ್ನುವ ವಿಷಯದ ಕುರಿತು ಕಾರ್ಯಕ್ರಮ ಜರುಗಿತು. ಕಾನೂನು ಅರಿವು ಕಾರ್ಯಕ್ರಮವನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ […]
ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಮಾಲೀಕ ಶ್ರೀ ರಾಮ ದೇವಾಡಿಗ ನಿಧನ
ಕುಂದಾಪುರ( ನ,7): ಇಲ್ಲಿನ ಭಗವಾನ್ ಬಿಲ್ಡಿಂಗ್ ರಸ್ತೆಯಲ್ಲಿ 1987 ರಿಂದ ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಎನ್ನುವ ಲೈಬ್ರರಿ ನಡೆಸುತ್ತಾ , ನೂರಾರು ಜನರಿಗೆ ಪುಸ್ತಕದ ರುಚಿ ಹತ್ತಿಸಿದ, ಅದರ ಮಾಲೀಕರಾದ ಶ್ರೀ ರಾಮ ದೇವಾಡಿಗರು (58) ನ.07 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮಾಸ್ತಿಕಟ್ಟೆ ಹತ್ತಿರ “ರಾಧಿಕಾ ಡ್ರೆಸ್ ಸೆಂಟರ್” ಅನ್ನುವ ಬಟ್ಟೆ ಅಂಗಡಿ ನಡೆಸಿ ಪ್ರಸಿದ್ಧರಾಗಿದ್ದ ಇವರು ಇತ್ತೀಚೆಗೆ ಹೊಸ ಅಂಗಡಿಗೆ ಸ್ಥಳಾಂತರಗೊಂಡಿದ್ದರು. ಕ್ರೀಡಾಪಟುವೂ ಆಗಿದ್ದ ರಾಮ ದೇವಾಡಿಗರು […]
ವ್ಯಕ್ತಿಯ ಸಂಸ್ಕಾರದಿಂದ ವ್ಯವಹಾರದ ಉನ್ನತೀಕರಣ – ನರೇಂದ್ರ ಎಸ್ .ಗಂಗೊಳ್ಳಿ
ಗಂಗೊಳ್ಳಿ(ನ,8): ಸಮಾಜದ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುವುದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿಯ ಸಂಸ್ಕಾರ ಎನ್ನುವುದು ಅವನ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಯುವ ಬರಹಗಾರ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ವೆಂಕಟೇಶ ಕೃಪಾ ಟ್ರೇಡರ್ಸ್ ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಧಮಾಕ ವಿಶೇಷ ಕೊಡುಗೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. […]
ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸಡಗರದ ದೀಪಾವಳಿ ಹಾಗೂ ತುಳಸಿ ಹಬ್ಬ
ಕಾರ್ಕಳ(ನ,07): ಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬವನ್ನು ನ.05 ರಂದು ದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯಲು ಮತ್ತು ಹಬ್ಬಗಳ ಮಹತ್ವ ತಿಳಿಯಲು ಭಾರತೀಯ ಪರಂಪರೆಯ ಹಬ್ಬಗಳು ಮಾದರಿಯಾಗಿವೆ ಎಂದು ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ತಿಳಿಸಿದರು. ಸಂಸ್ಥಾಪಕರಲ್ಲೊಬ್ಬರಾದ ಅಶ್ವಥ್ ಎಸ್ ಎಲ್ ಮಾತನಾಡಿ ಭಾರತೀಯ ಹಬ್ಬಗಳು ವೈಜ್ಞಾನಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವ ಹೊಂದಿದೆ. ಆಧ್ಯಾತ್ಮಿಕವಾಗಿ ನೋಡಿದಾಗಲು ಶ್ರೇಷ್ಠ […]
ಕಾಕ೯ಳ: ಮುಳ್ಕಾಡಿನ ಸ್ವಾತಂತ್ರ್ಯ ಹೋರಾಟಗಾರ ಮುಳ್ಕಾಡು ಗಾಂಧಿ ಕಾಂತಪ್ಪ ಪೂಜಾರಿ ಮನೆಗೆ ನಾಮಫಲಕ ಅನಾವರಣ
ಕಾಕ೯ಳ(ನ,07): ಕಾಕ೯ಳ ತಾಲೂಕು ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಕಾಡಿನ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕಾಂತಪ್ಪ ಪೂಜಾರಿ ಇವರ ಮನೆಗೆ ನ.07 ರಂದು ಸ್ವಾತಂತ್ರ್ಯ ಹೋರಾಟಗಾರರ ಮನೆ ಎನ್ನುವ ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ” ಸ್ವರಾಜ್ಯ 75 ” ರ 19ನೇ ಮನೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಗೌರವ ಕಾಯ೯ದಶಿ೯ಯವರಾಗಿರುವ ಶ್ರೀ ನರೇಂದ್ರ ಕುಮಾರ್ ಕೋಟ ಇವರು ನಾಮ ಫಲಕ ಅನಾವರಣ ನೆರವೇರಿಸಿ ಮಾತನಾಡಿದರು.ರಾಷ್ಟ್ರ […]
ಶಿರ್ವ: ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಭೇಟಿ
ಶಿರ್ವ(ನ,7): ಇಲ್ಲಿನ ಶಿರ್ವ ಸಂತ ಮೇರಿ ವಿದ್ಯಾಲಯಕ್ಕೆ 21 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ, ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಅವರ ಭೇಟಿ ನೀಡಿದರು. ಯುವ ಸೇನಾದಳದ ಕೆಡೆಟ್ಗಳನ್ನು ಉದ್ದೇಶಿಸಿ ಮಾತನಾಡುತ್ತಾ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಎನ್ ಸಿಸಿ ಸಹಾಯಕಾರಿ. ಎನ್ಸಿಸಿ ತರಬೇತಿಯಿಂದ ಕ್ಯಾಡೆಡ್ಗಳಲ್ಲಿ ದೇಶ ಸೇವೆ ಹಾಗೂ ಸಾಮಾಜಿಕ ಸೇವೆ ಮಾಡಲು ಪ್ರೇರೇಪಿಸುತ್ತದೆ. ಶಿಸ್ತುಬದ್ಧವಾದ ಜೀವನವನ್ನು ನಡೆಸಲು, ಉನ್ನತ ಉದ್ಯೋಗ ಪಡೆಯಲು ಕ್ಯಾಡೆಡ್ಗಳಿಗೆ ಎನ್ಸಿಸಿ […]
ವಿದ್ಯಾರ್ಥಿಗಳೇ ದೇಶದ ಶಕ್ತಿ: ಡಾ.ಎಸ್.ಭಾಸ್ಕರ್ ಶೆಟ್ಟಿ
ಕುಂದಾಪುರ (ನ,7): ವಿದ್ಯಾರ್ಥಿಗಳೇ ದೇಶದ ಆಸ್ತಿ. ಯುವ ಸಮುದಾಯವು ಕಲಿಕೆಯ ಜೊತೆಗೆ ಬದುಕಿನ ಕೌಶಲ್ಯಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗ ಬೇಕು. ವಿದ್ಯಾರ್ಥಿಗಳು ದೇಶದ ಶಕ್ತಿ ಇದ್ದಂತೆ,ಆ ನಿಟ್ಟಿನಲ್ಲಿ ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕು ಎಂದು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ,ಉಡುಪಿ ಇದರ ಪ್ರಾಂಶುಪಾಲರಾದ ಡಾ.ಎಸ್.ಭಾಸ್ಕರ್ ಶೆಟ್ಟಿಯವರು ಹೇಳಿದರು. ಅವರು ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2022-23 ನೇ ಸಾಲಿನ […]
ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ: ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ
ಹೆಮ್ಮಾಡಿ(ನ,06): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ), ಅಂಬಲಪಾಡಿ ಉಡುಪಿ ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇವರ ಸಹಯೋಗದೊಂದಿಗೆ ನ.06 ರಂದು ನೆಡದ ಸಾರ್ವಜನಿಕ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ […]










