ಗಂಗೊಳ್ಳಿ (ನ,6): ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಟೆನ್ನಿ ಕಾಯ್ಟ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಿಶನ್ ಡಿ ಪೂಜಾರಿ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಹಿಮಾ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆ ಆಗಿರುತ್ತಾರೆ. ಇವರನ್ನು ಕಾಲೇಜಿನ ಬಳಗ ಮತ್ತು […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ
ಹೆಮ್ಮಾಡಿ(ನ,6): ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ,ವಕೀಲರ ಸಂಘ(ರಿ)ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ,ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರಿಕರ ಸಬಲೀಕರಣ ಈ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ವಹಿಸಿದ್ದರು.ಸಮಾರಂಭವನ್ನು ಹಿರಿಯ ಸಿವಿಲ್ […]
ಯಡ್ತರೆ: ಕ್ಯಾನ್ಸರ್ ಪೀಡಿತ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವು ಕೋರಿ ಮನವಿ
ಬೈಂದೂರು (ನ,6) : ಇಲ್ಲಿನ ಯಡ್ತರೆಯ ಸಂಜೀವಿನಿ ಎನ್ನುವ ಮಗು ಕ್ಯಾನ್ಸರ್ ಪೀಡಿತೆಯಾಗಿದ್ದು ,ಮಗುವಿನ ಶಸ್ತ್ರ ಚಿಕಿತ್ಸೆಗೆ ಹತ್ತು ಲಕ್ಷಕ್ಕೂ ಮಿಕ್ಕಿ ಅಧಿಕ ಹಣದ ಅವಶ್ಯಕತೆ ಇದ್ದು ,ಮಗುವಿನ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಮಗುವಿನ ಮನೆಯವರಿಗೆ ಕಷ್ಟ ಆಗುತ್ತಿದ್ದು ,ಬಡತನದಲ್ಲಿರುವ ಮಗುವಿನ ಕುಟುಂಬ ದಿಕ್ಕು ತೋಚದಾಗಿದೆ. ಸಹ್ರದಯಿ ದಾನಿಗಳಿಂದ ಸಹಾಯ ಧನ ಕ್ಕಾಗಿ ಮನವಿ ಮಾಡಿದ್ದಾರೆ . ಮಗುವಿನ ಶಸ್ತ್ರ ಚಿಕಿತ್ಸೆಗೆ ಧನ ಸಹಾಯ ಮಾಡಲಿಚ್ಚಿಸುವರು ಕೆಳಗೆ ತಿಳಿಸಿದ […]
ಕುಂದಾಪುರ: ಆರ್. ಎನ್.ಶೆಟ್ಟಿ ಪಿ ಯು ಕಾಲೇಜಿಗೆ ಶ್ರೀ ಸುನೀಲ್ ಆರ್ .ಎನ್ ಶೆಟ್ಟಿ ಭೇಟಿ
ಕುಂದಾಪುರ( ನ,4): ಇಲ್ಲಿನ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಮಹಾಪೋಷಕರಾದ ದಿ. ಆರ್. ಎನ್. ಶೆಟ್ಟಿಯವರ ಪುತ್ರ ಶ್ರೀ ಸುನೀಲ್ ಶೆಟ್ಟಿಯವರು ನ.04 ರಂದು ಕಾಲೇಜಿಗೆ ಭೇಟಿ ನೀಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು ಶ್ರೀ ಸುನೀಲ್ ಶೆಟ್ಟಿಯವರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಉಪಸ್ಥಿತರಿದ್ದರು.
ಡಾ|ಬಿ.ಬಿ.ಹೆಗ್ಡೆ ಕಾಲೇಜಿಗೆ ಖ್ಯಾತ ಉದ್ಯಮಿ ಸುನೀಲ್ ಆರ್.ಎನ್ ಶೆಟ್ಟಿ ಭೇಟಿ
ಕುಂದಾಪುರ (ನ,4): ಇಲ್ಲಿನ ಪ್ರತಿಷ್ಠಿತ ಡಾ|ಬಿ.ಬಿ. ಹೆಗ್ಡೆ ಕಾಲೇಜಿಗೆ ಆರ್.ಎನ್.ಶೆಟ್ಟಿ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸುನೀಲ್ ಆರ್.ಎನ್ . ಶೆಟ್ಟಿಯವರು ನ.04 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬೈಂದೂರಿನ ಶಾಸಕ,ಕುಂದಾಪುರ ಎಜುಕೇಶನ್ ಸೊಸೈಟಿ(ರಿ), ಕುಂದಾಪುರ ಹಾಗೂ ಕಾಲೇಜಿನ ಅಧ್ಯಕ್ಷರಾದ ಶ್ರೀ ಬಿ.ಎಮ್.ಸುಕುಮಾರ ಶೆಟ್ಟಿ ಯವರು ಶ್ರೀ ಸುನೀಲ್. ಆರ್.ಶೆಟ್ಟಿ ಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು. ಕಾಲೇಜಿನ ಬೆಳವಣಿಗೆ ಹಾಗೂ ಶಿಸ್ತಿನ ಶೈಕ್ಷಣಿಕ ವಾತಾವರಣದ ಕುರಿತು ಶ್ರೀ ಸುನೀಲ್. ಆರ್.ಶೆಟ್ಟಿ […]
ಸಂಗೀತ ಸ್ಪರ್ಧೆಯಲ್ಲಿ ವಿ. ಕೆ. ಆರ್. ಶಾಲೆಗೆ ಪ್ರಥಮ ಸ್ಥಾನ
ಕುಂದಾಪುರ ( ನ,4): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಧ್ವನಿ ಮ್ಯೂಸಿಕಲ್ (ರಿ.) ಕುಂದಾಪುರ ಇವರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅಂತರ್ ಶಾಲಾ ಮಟ್ಟದ ಸಂಗೀತ ಸ್ಪರ್ಧೆ “ಪ್ರತಿಭಾ 2022” ರಲ್ಲಿ ಭಾಗವಹಿಸಿ ವಿಜೇತರಾಗಿ ಸಂಸ್ಥೆಗೆ ಹೆಮ್ಮೆ ತಂದಿರುತ್ತಾರೆ. ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ […]
ಮಣ್ಣ್ ಅರಳಿ ಹಣತೆಯಾಗಿ………….
ಏ ಸಖಿ,………….ನಾ ನಿನಗೆ ದೀಪಾವಳಿಯ ಕಥೆ ಹೇಳಲೆಂದೆ ಬಂದೆ. ಆದರೆ ಕಥೆ ಮುಗಿಯುವ ತನಕ ನಾನು ಕರೆದುಕೊಂಡಲ್ಲಿ ನೀನು ಬರಬೇಕು ಅಷ್ಟೆ! ಸರಿ ಎಂದು ತಲೆ ಆಡಿಸಿದ ಆರು ವರುಷದ ಪುಟಾಣಿ ಸಖಿ, ಕಿವಿಗಳೆರಡು ನೆಟ್ಟಗೆ ಮಾಡಿಕೊಂಡು ಬಾ ಎಂದು ಕರೆದೊಯ್ದಿದ್ದು ದೇವಲೋಕಕ್ಕೆ. ಕಲ್ಪನಾಲೋಕದ ಕಥಾಯಾನ ಶುರು. ಹೀಗೆ ಕಥೆ ಪ್ರಾರಂಭವಾಯಿತು. ಒಮ್ಮೆ ದೇವಲೋಕದಲ್ಲಿ ಒಂದು ಸಭೆಯನ್ನು ಏರ್ಪಡಿಸಲಾಗುತ್ತದೆ. ಆ ಸಭೆಯಲ್ಲಿ ಬೆಳಕಿನ ಕಿಡಿಗಳು ತಮ್ಮ ನಿಜವಾದ […]
ಜಾನಪದ ಗೀತೆಯಲ್ಲಿ ವಿ. ಕೆ. ಆರ್ ಆಂಗ್ಲ ಮಾಧ್ಯಮ ಶಾಲೆ ಜಿಲ್ಲಾ ಮಟ್ಟಕ್ಕೆ
ಕುಂದಾಪುರ (ನ,4): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಜಯಶ್ರೀ ತಂತ್ರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ನೇತೃತ್ವದಲ್ಲಿ ಅ,31 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯ ಜಾನಪದ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ […]
ಡಾ | ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು:ಏಕತಾ ದಿವಸ ಆಚರಣೆ
ಕುಂದಾಪುರ(ಅ,31) : ಸ್ವತಂತ್ರ ಭಾರತವನ್ನು ಒಗ್ಗೂಡಿಸಿದ ದೇಶದ ಉಕ್ಕಿನ ಮನುಷ್ಯ ಹಾಗೂ ದೇಶದ ಮೊದಲ ಗೃಹ ಮಂತ್ರಿ ಸರ್ದಾರ ವಲ್ಲಭಬಾಯಿ ಪಟೇಲರ ಜನ್ಮದಿನವನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಏಕತಾ ದಿವಸ ಎಂದು ಆಚರಿಸಲಾಗುತ್ತಿದೆ. ಆ ಹಿನ್ನಲೆಯಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಸರ್ದಾರ ವಲ್ಲಭಬಾಯಿ ಪಟೇಲ್ರವರ ಕೊಡುಗೆಯನ್ನು ಸ್ಮರಿಸುತ್ತಾ ಏಕತಾ ದಿವಸವನ್ನು ಆಚರಿಸಲಾಯಿತು. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಪ್ರವೀಣ ಮೊಗವೀರ ಗಂಗೊಳ್ಳಿ ಏಕತಾ ಪ್ರತಿಜ್ಞಾ ವಿಧಿಯನ್ನು […]
ಎಚ್. ಎಮ್. ಎಮ್. ಶಾಲೆಯಲ್ಲಿ ಗ್ರ್ಯಾಂಡ್ ಪೇರೆಂಟ್ಸ್ ಡೇ ಆಚರಣೆ
ಕುಂದಾಪುರ ( ನ,3): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್,ಎಮ್ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಗ್ರ್ಯಾಂಡ್ ಪೇರೆಂಟ್ಸ್ ಡೇ ಆಚರಿಸುವ ಮೂಲಕ ಮಕ್ಕಳಿಗೆ ಕುಟುಂಬದ ಹಿರಿಯರ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ.ಚಿಂತನಾ ರಾಜೇಶ್ ಕಾರ್ಯಕ್ರಮದ ಆಶಯದ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕಿ ಲತಾ. ಜಿ. ಭಟ್ ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿ ಡಾ. ಪಾರ್ವತಿ ಜಿ. ಐತಾಳ್ ಮೊಮ್ಮಕ್ಕಳ ಜೀವನದಲ್ಲಿ ಅಜ್ಜಿ […]










