ಗಣಿತ ನಗರ(ಜು ,25) : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದ್ದು, ಜುಲೈ 26ರ ಶನಿವಾರದಂದು ಅಪರಾಹ್ನ 3.30ಕ್ಕೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ “ಬಹುರತ್ನ ಪ್ರಸವೀ ಭಾರತೀ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅನುಭವ ಕೇಂದ್ರಿತ ಶಿಕ್ಷಣಕ್ಕೆ ಪ್ರೇರಣೆ – ಜಾನ್ ಡಿ’ಸೋಜಾ
ಕುಂದಾಪುರ(ಜು. 23): ವಿದ್ಯಾರ್ಥಿಗಳ ಬದುಕು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಬಾರದು, ಅದು ಅನುಭವ ಕೇಂದ್ರಿತವಾಗಿರಬೇಕು. ಆ ನಿಟ್ಟಿನಲ್ಲಿ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ವಿವಿಧ ಅನುಭವಕೇಂದ್ರಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ಕುಂದಾಪುರದ ಹಿರಿಯ ಪತ್ರಕರ್ತರಾದ ಜಾನ್ ಡಿ’ಸೋಜ ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಐಕ್ಯೂಎಸಿ ಘಟಕ ಹಮ್ಮಿಕೊಂಡ ‘ಪ್ರೇರಣಾ’ […]
ಬಿ.ಬಿ. ಹೆಗ್ಡೆ ಕಾಲೇಜು: ಉತ್ತಮ ಆರೋಗ್ಯವೇ ನಿಜವಾದ ಸಂಪತ್ತು–ಡಾ| ಸೋನಿ ಡಿ’ಕೋಸ್ಟ
ಕುಂದಾಪುರ (ಜು.24): ದಿನನಿತ್ಯದ ಪ್ರಾರ್ಥನೆ, ವ್ಯಾಯಾಮ, ಗುಣಮಟ್ಟದ ಆಹಾರ ಪದ್ಧತಿ ಹಾಗೂ ಒತ್ತಡ ನಿರ್ವಹಣೆ ಇಂತಹ ಆರೋಗ್ಯಕರ ಅಭ್ಯಾಸಗಳಿಂದ ಮಾತ್ರ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯ ಎಂದು ಕುಂದಾಪುರದ ಇಶಾನಿ ಮೆಡಿಕಲ್ ಸೆಂಟರ್ನ ವೈದ್ಯಾಧಿಕಾರಿ ಡಾ| ಸೋನಿ ಡಿಕೋಸ್ಟ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಐಕ್ಯೂಎಸಿ ಘಟಕ ಹಮ್ಮಿಕೊಂಡ ‘ಪ್ರೇರಣಾ’ ಶಿಬಿರದಲ್ಲಿ ‘ಉತ್ತಮ ಆರೋಗ್ಯ’ […]
ಹೊಸಂಗಡಿ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ರಚನೆ
ಹೊಸಂಗಡಿ (ಜು,24): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ 2025 – 26 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕ ಹಾಗೂ ನಾಯಕಿಯ ಆಯ್ಕೆ, ಪದಾಧಿಕಾರಿಗಳ ಆಯ್ಕೆ ವಿದ್ಯಾರ್ಥಿ ಸಂಸತ್ತು ರಚನೆ ಮತ್ತು ಮಂತ್ರಿಮಂಡಲದ ರಚನೆ ( Cabinet Formation) ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಭಾರತೀಯ ಚುನಾವಣಾ ಮಾದರಿಯ ಕುರಿತು ವಿದ್ಯಾರ್ಥಿಗಳಿಗೆ ಪ್ರಾತಕ್ಷಿಕೆ ನೀಡುವುದರ ಜೊತೆಗೆ, ಚುನಾವಣೆಯ ಬಗ್ಗೆ ನೇರ ಅನುಭವ ನೀಡಬೇಕು ಎಂಬ ಆಕಾಂಕ್ಷೆಯೊಂದಿಗೆ ಎಲ್ಲವೂ ಕೂಡಾ […]
ಬಿ. ಬಿ. ಹೆಗ್ಡೆ ಕಾಲೇಜು: ‘ಪ್ರೇರಣಾ’ಪೂರ್ವ ಪರಿಚಯ ಉದ್ಘಾಟನೆ
ಕುಂದಾಪುರ (ಜು.23): ಶಿಕ್ಷಣದ ಗುಣಮಟ್ಟ ವ್ಯಕ್ತಿತ್ವದ ನಿರ್ಮಾಣಕ್ಕೆ ಸಹಾಯಕವಾಗಬೇಕು. ಅಂತಹ ಶಿಕ್ಷಣ ಆಂತರ್ಯದ ಶಕ್ತಿಯನ್ನು ಉದ್ದೀಪನಗೊಳಿಸಿ ಜ್ಞಾನ ಸಂಪಾದಿಸುವAತಾಗಬೇಕಾದರೆ ಪಠ್ಯದೊಂದಿಗೆ ಪಠ್ಯಪೂರಕ ಚಟುವಟಿಕೆಗಳು ಮುಖ್ಯ. ಅವುಗಳಿಂದ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ ಈ ರೀತಿಯ ಚಟುವಟಿಕೆಗಳು ವರ್ತಮಾನದ ತುರ್ತು ಎಂದು ಉಡುಪಿಯ ಎಮ್ಜಿಎಮ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ. ಸುರೇಂದ್ರನಾಥ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ […]
ಕ್ರಿಯೇಟಿವ್ ಪಿ.ಯು.ಕಾಲೇಜು : ಎನ್.ಸಿ.ಸಿ ನೌಕಾ ಘಟಕ ಉದ್ಘಾಟನೆ
ಕಾರ್ಕಳ(ಜು ,18) : ಇಲ್ಲಿನ ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ 6/8 ಕರ್ನಾಟಕ ಎನ್.ಸಿ.ಸಿ ಉಪನೌಕಾ ಘಟಕ ಇತ್ತೀಚೆಗೆ ಉದ್ಘಾಟನೆ ಗೊಂಡಿತು. ಉದ್ಘಾಟಕರಾಗಿ ಆಗಮಿಸಿದ 6 ಕರ್ನಾಟಕ ಎನ್.ಸಿ.ಸಿ ನೌಕಾ ಘಟಕ ಉಡುಪಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ರವರು ಮಾತನಾಡಿ ಎನ್.ಸಿ.ಸಿ ಯ ಶ್ರೇಷ್ಠತೆ, ಅದರಲ್ಲಿರುವ ಅವಕಾಶಗಳು, ಭಾರತೀಯ ರಕ್ಷಣಾ ಪಡೆಯೊಂದಿಗಿನ ನಂಟು, ಯುವಜನತೆಯ ಪಾತ್ರ ಮತ್ತು ದೇಶದ ಭವಿಷ್ಯ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ […]
ಎಚ್ಎಮ್ಎಮ್ ಮತ್ತು ವಿ ಕೆ ಆರ್ ಶಾಲೆ: ಪೋಷಕತ್ವದ ಕುರಿತಾದ ಕಾರ್ಯಗಾರ
ಕುಂದಾಪುರ(ಜುಲೈ 18) : ಕುಂದಾಪುರ ಎಜುಕೇಶನ್ ಸೊಸೈಟಿ ( ರಿ. )ಪ್ರವರ್ತಿತ ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗಳು, ಈಶಾನ್ಯ ಇಂಡಿಯನ್ ಫೌಂಡೇಶನ್ ಬೆಂಗಳೂರು ಮತ್ತು ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಕರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಮನೆಯು ಕಲಿಕೆಗೆ ಪೂರಕವಾದ ವಾತಾವರಣವಾಗಿರಬೇಕು. ಪೋಷಕರು ಮಗುವಿನ ಭಾವನೆಗಳಿಗೆ ಸ್ಪಂದಿಸಿ ಅವರಿಗೆ ಬೆನ್ನೆಲುಬಾಗಿ ಪ್ರತಿಯೊಂದು ಚಟುವಟಿಕೆಯಲ್ಲಿ ಸಹಕರಿಸಬೇಕು ಎಂದು ಡಾ. […]
ಬಿ. ಬಿ. ಹೆಗ್ಡೆ ಕಾಲೇಜು: 5 ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಾಗಾರ ಉದ್ಘಾಟನೆ
ಕುಂದಾಪುರ (ಜು.21): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮ್ಯಾಜಿಕ್ ಬಸ್ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ 5 ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಾಗಾರವನ್ನು ಕೆನರಾ ಬ್ಯಾಂಕ್ ಕುಂದಾಪುರ ಶಾಖೆಯ ಮುಖ್ಯ ಪ್ರಬಂಧಕರಾದ ಶ್ರೀ ರಾಜು ಕೆ. ಉದ್ಘಾಟಿಸಿ, ಕಾಲೇಜು ನೀಡುತ್ತಿರುವ ಈ ತರಬೇತಿಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ […]
ಗಂಗೊಳ್ಳಿ : ಸರಸ್ವತಿ ವಿದ್ಯಾಲಯದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆ ಮತ್ತು ಉಳಿತಾಯ ಮಾಹಿತಿ ಕಾರ್ಯಕ್ರಮ
ಗಂಗೊಳ್ಳಿ(ಜು.23): ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಗಂಗೊಳ್ಳಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಇಂಟೆಗ್ರೇಟೆಡ್ ಎಂಟರ್ಪ್ರೈಸಸ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಮ್ಯೂಚುಯಲ್ ಫಂಡ್ ಹೂಡಿಕೆ ಮತ್ತು ಉಳಿತಾಯದ ಕುರಿತಾದ ಮಾಹಿತಿ ಕಾರ್ಯಕ್ರಮವು ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಚ್ ಡಿ ಎಫ್ ಸಿ ಮ್ಯೂಚುಯಲ್ ಫಂಡ್ ರಿಲೇಷನ್ಶಿಪ್ ಮ್ಯಾನೇಜರ್ ಸುದೀಪ್ […]
ಕುಂದಾಪುರ : ಜ್ಯೂನಿಯರ್ ರೆಡ್ಕ್ರಾಸ್ ಉದ್ಘಾಟನೆ
ಕುಂದಾಪುರ(ಜು ,22): ಕುಂದಾಪುರ ರೆಡ್ಕ್ರಾಸ್ ಘಟಕದ ಅಂಗಸಂಸ್ಥೆಯಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಜ್ಯೂನಿಯರ್ ರೆಡ್ಕ್ರಾಸ್ ಘಟಕವನ್ನು ಕುಂದಾಪುರ ರೆಡ್ಕ್ರಾಸ್ ಘಟಕದ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಅಧ್ಯಕ್ಷತೆ ವಹಿಸಿದ್ದರು. ರೆಡ್ಕ್ರಾಸ್ ಸಂಚಾಲಕರಾದ ಶ್ರೀ ದಿನಕರ ಶೆಟ್ಟಿ ರೆಡ್ಕ್ರಾಸ್ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜ್ಯೂನಿಯರ್ ರೆಡ್ಕ್ರಾಸ್ 2025-26 ನೇ ಸಾಲಿನ ಅಧ್ಯಕ್ಷರಾದ ದ್ವಿತೀಯ ಪಿಯುಸಿ ಅಮೂಲ್ಯ, ಕಾರ್ಯದರ್ಶಿ ಪ್ರಥಮ ಪಿಯುಸಿ […]










