ಕುಂದಾಪುರ (ಏ, 18) : ಜೆಸಿಐ ಕುಂದಾಪುರ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಏಪ್ರಿಲ್ 18 ರಂದು ಕುಂದಾಪುರದಲ್ಲಿ ನಡೆಯಿತು. ಹೊರ ವಲಯ ಅಧಿಕಾರಿ ಅಶೋಕ ತೆಕ್ಕಟ್ಟೆ ರಕ್ತದಾನ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೆ.ಸಿ.ಐ ಕುಂದಾಪುರ ಸಂಸ್ಥೆಯ ಸದಸ್ಯರು ಈ ಸಂದರ್ಭದಲ್ಲಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಜೆಸಿಐ ಇಂಡಿಯಾದ ಪೂರ್ವ ಕಾನೂನು ಸಲಹೆಗಾರರಾದ ಜೆ.ಸಿ ಶ್ರೀಧರ ಪಿ.ಎಸ್, ವಲಯಾಧಿಕಾರಿಗಳಾದ ಪ್ರಶಾಂತ್ ಹವಾಲ್ದಾರ್, ಕುಂದಾಪುರ ಅಧ್ಯಕ್ಷ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಯುವ ಬ್ರಿಗೇಡ್ ಸ್ವಚ್ಚತಾ ಕಾರ್ಯದ ಪ್ರತಿಫಲ : ಸಂಪೂರ್ಣ ಮುಚ್ಚಿ ಹೊಗಿದ್ದ ಬಸ್ರೂರಿನ ಗುಪ್ಪಿ ಸದಾನಂದ ದೇವಾಲಯಕ್ಕೆ ಗ್ರಾಮಸ್ಥರಿಂದ ಕಟ್ಟೆ ಪೂಜೆ
ಕುಂದಾಪುರ (ಏ, 18) : 500 ವರ್ಷ ಇತಿಹಾಸ ಹೊಂದಿರುವ ಸಂಪೂರ್ಣ ಮುಚ್ಚಿ ಹೋಗಿರುವ ಬಸ್ರೂರಿನ ಗುಪ್ಪಿ ಸದಾನಂದ ದೇವಾಲಯವನ್ನು ಕಳೆದ ವರ್ಷ ಯುವಾಬ್ರಿಗೇಡ್ ವತಿಯಿಂದ ಊರವರ ಸಹಕಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು.ತದ ನಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ಇದರ ಫಲವಾಗಿ ಇತ್ತೀಚೆಗೆ ಊರವರೆಲ್ಲ ಸೇರಿ ಕಟ್ಟೆ ಪೂಜೆ ನೆರವೇರಿಸಿದ್ದಾರೆ.ಮಣ್ಣಿನಲ್ಲಿ ಹುದುಗಿಹೋಗಿದ್ದ ಬಸ್ರೂರಿನ ಈ ಗುಪ್ಪಿ ಸದಾನಂದ ದೇವಾಲಯ ಇಂದು ಭಕ್ತಿ ಪ್ರಿಯ ಕ್ಷೇತ್ರವಾಗುತ್ತದೆ . […]
ಫ್ಯಾಶನ್ ಜುವೆಲ್ಲರ್ಸ ಕುಂದಾಪುರ : ಉದ್ಘಾಟನೆ
ಕುಂದಾಪುರ (ಎ, 16): ಕುಂದಾಪುರದ ವಿಠ್ಠಲ ನೇತ್ರಾಲಯ ರಸ್ತೆ ಯಲ್ಲಿ ನೂತನವಾಗಿ ಪ್ರಾರಂಭವಾದ ಫ್ಯಾಶನ್ ಜುವೆಲರ್ಸ್ ನ್ನು ನಾವುಂದ ರಿಚರ್ಡ್ ಅಲ್ಮೇಡಾ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀ ಸಿಲ್ವೆಸ್ಟರ್ ಡಿ’ ಅಲ್ಮೇಡಾ ಉದ್ಘಾಟಿಸಿದರು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳನ್ನು ವಿವಿಧ ವಿನ್ಯಾಸಗಳಲ್ಲಿ ನಿರ್ಮಾಣ ಮಾಡಿ ಗ್ರಾಹಕರನ್ನು ಸಂತ್ರಪ್ತಿಗೊಳಿಸುವಲ್ಲಿ ಫ್ಯಾಶನ್ ಜುವೆಲರ್ಸ್ ಯಶಸ್ಸುಕಾಣಲಿದೆ ಎಂದು ಅವರು ಶುಭಹಾರೈಸಿದರು. ಕುಂದಾಪುರದ ವಿಠ್ಠಲ ನೇತ್ರಾಲಯದ ಡಾ|ಶ್ರೀನಾಥ್ ಕಾಮತ್ ಹಾಗೂ ತುಕಾರಾಮ್ ನಾಯಕ್ ಮುಖ್ಯ ಅತಿಥಿಗಳಾಗಿ […]
ಎಪ್ರಿಲ್ 18 ಕ್ಕೆ ನಡೆಯ ಬೇಕಿದ್ದ NEET-PG 2021 ಪರೀಕ್ಷೆ ಮುಂದೂಡಿಕೆ
ಬೆಂಗಳೂರು (ಏ, 16) : ವೈದ್ಯಕೀಯ ಕೋರ್ಸ್ಗಳ 2021ನೇ ಸಾಲಿನ ಪ್ರವೇಶಕ್ಕಾಗಿ ಎಪ್ರಿಲ್ 18 ಕ್ಕೆ ನಡೆಯ ಬೇಕಿದ್ದ NEET-PG 2021 ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆ ಯನ್ನು ಕೋವಿಡ್ ಕಾರಣದಿಂದಾಗಿ ಮಂದೂಡಲಾಗಿದೆ . ಮೂಂದುಡಲ್ಪಟ್ಟ ಪರೀಕ್ಷಾ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್.ಟಿ.ಎ.)ಗೆ ಕೇಂದ್ರ ಸರ್ಕಾರ ನೀಡುವ ಸಲಹೆ ಮೇರೆಗೆ ತಿಳಿಸಲಾಗುವುದು.
ಜನತಾ ಸಮೂಹ ಸಂಸ್ಥೆ ಕೋಟ : ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮ
ಕೋಟ (ಎ. 15) : ಕರಾವಳಿ ಭಾಗದಲ್ಲಿ ಮೀನುಗಾರಿಕೆ, ಸಹಕಾರಿ ಸಂಘ, ಸಮಾಜಸೇವೆ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸಿದ ಜನತಾ ಸಮೂಹ ಸಂಸ್ಥೆ ಕೋಟ-ಪಡುಕರೆ ಇದರ ಸಂಸ್ಥಾಪಕರಾದ ದಿ .ಕೆ.ಸಿ. ಕುಂದರ್ ಅವರ ಸಂಸ್ಮರಣೆ ಕಾರ್ಯಕ್ರಮ ಎಪ್ರಿಲ್ 13ರಂದು ಜನತಾ ಸಂಸ್ಥೆಯ ಕ್ಯಾಂಪಸ್ ನಲ್ಲಿ ಜರಗಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಹಾಗೂ ಗೀತಾನಂದ ಫೌಂಡೇಶನ್(ರಿ) ನ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಮಾತನಾಡಿ, ದಿ.ಕೆ.ಸಿ. […]
ಕನ್ನಡದ ಋಣ
ಮಾತೆಯ ತನುವಿಂದ ಬಿಳ್ಕೊಟ್ಟ ದಿನಸ್ವಾಗತಿಸಿತು ನನ್ನಿ ಹೆಮ್ಮೆಯ ನೆಲಉದರದಿಂದುಚ್ಚರಿಸಿದೆ ಕನ್ನಡದ ಪದಅದುವೇ ನನ್ನ ಬಾಳಿನ ಉತ್ತುಂಗದ ಸುದಿನ ಬರೆದೆನು ಅದೆಷ್ಟೋ ಕನ್ನಡದಕ್ಷರಹಾಡ ಬಯಸಿದೆ ಕನ್ನಡದ ಕವಿತೆಗಳ ಇಂಚರಎಲ್ಲವೂ ನನ್ನಿ ಹೆಮ್ಮೆಯ ನೆಲದಲಿಕನ್ನಡಾಂಬೆಯ ಪ್ರೀತಿಯ ಕೃಪೆಯಲಿ ದುಃಖದಲಿ ನಗುವಾಗಿ, ಸೋತಾಗ ಗೆಲುವಾಗಿಮನಸಲ್ಲಿ ಕೂತವಳು ಕನ್ನಡದ ತಾಯಿಮನೆಯಲ್ಲಿ ಶಕ್ತಿಯಾಗಿ, ಮನಸಲ್ಲಿ ನೆಮ್ಮದಿಯಾಗಿ ಅನ್ನವ ತಿನಿಸಿದಳು ಕನ್ನಡದ ತಾಯಿ ಬಾಳಬಂಡಿಗೊಂದು ಕನ್ನಡದ ಚುಕ್ಕಿಒಡಲಿಂದ ಕೊಟ್ಟಳು ಖುಷಿಯಿಂದ ಹೆಕ್ಕಿಬಲು ಚಂದ ನಮ್ಮಿ ಭಾಷೆಯ ಪಯಣತೀರಿಸಲಸಾದ್ಯ ಈ ಕನ್ನಡದ […]
ಆ ದಿನ ರಾತ್ರಿ
ಆ ದಿನ ರಾತ್ರಿ ಸಮಯ 10 ಗಂಟೆ… ಊಟ ಮಾಡಿ ಮನೆಯವರೆಲ್ಲರೂ ನಿದ್ದೆಗೆ ಜಾರುತ್ತಿದ್ದ ಸಮಯ… ನಿದ್ದೆಗೆ ಜಾರಿದ ಸ್ವಲ್ಪ ಹೊತ್ತಿನಲ್ಲಿ ದೇಹದ ಉಸಿರಾಟದಲ್ಲಿ ಏರಿಳಿತವಾದ ಅನುಭವವಾಯಿತು.. ಸ್ವಲ್ಪ ಹೊತ್ತು ಎದ್ದು ಕೂತು ಮತ್ತೆ ಮಲಗಿದೆ.ಆದರೂ ಉಸಿರಾಟ ಅಸಹಜವಾಗಿತ್ತು. ಇನ್ನೆನೂ ಉಸಿರೆ ನಿಂತಂತೆ ಭಾಸವಾಯಿತು.. ಅಯ್ಯೋ ದೇವರೆ .. ಇದೆಂತ ದುರ್ವಿಧಿ.. ನನಗೆನಾದರೂ ಕರೋನಾ ಸೋಂಕು ತಗುಲಿತೆ ಎಂದು ಭ್ರಮಿತನಾದೆ.ನನ್ನಿಂದಾಗಿ ಮನೆ ಮಂದಿಯೆಲ್ಲಾ ಸಂಕಷ್ಟಕ್ಕೆ ಸಿಲುಕಿದರೆಂಬ ಭಯ ಕಾಡತೊಡಗಿತು. ಭವಿತವ್ಯದ […]
ಏಪ್ರಿಲ್ 17 ರಂದು ನೈಕಂಬ್ಳಿಯಲ್ಲಿ ಪ್ರೇರಣೋತ್ಸವ – 21
ಹೆಮ್ಮಾಡಿ (ಏ, 15): ಚಿತ್ತೂರು -ಮಾರಣಕಟ್ಟೆ ಪರಿಸರದಲ್ಲಿ ಹಲವು ವರ್ಷಗಳಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿರುವ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ -ಚಿತ್ತೂರು ಇವರ 8ನೇ ವಾರ್ಷಿಕೋತ್ಸವ ಪ್ರೇರಣೋತ್ಸವ-21 ಇದೇ ಏಪ್ರಿಲ್ 17 ರ ಶನಿವಾರ ಸಂಜೆ 6.30ರಿಂದ ಮಾರಣಕಟ್ಟೆ ಸಮೀಪದ ನೈಕಂಬ್ಳಿ ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ. ಈ ಪ್ರೇರಣೋತ್ಸವ – 21ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ .ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಮಾರಣಕಟ್ಟೆ […]
ಏಪ್ರಿಲ್ 25 ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET)
ಮೈಸೂರು (ಏ, 16): ಮೈಸೂರು ವಿಶ್ವವಿದ್ಯಾನಿಲಯ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.) ಇದೇ ಎಪ್ರಿಲ್ 25 ರ ಭಾನುವಾರದಂದು ನಡೆಯಲಿದೆ. ಈ ಹಿಂದೆ ಏಪ್ರಿಲ್11 ರಂದು ನಡೆಯಬೇಕಿದ್ದ ಕೆ.ಎಸ್.ಇ.ಟಿ. (KSET)ಪರೀಕ್ಷೆಯನ್ನು ಕಾರಣಾಂತರಗಳಿಂದಮುಂದೂಡಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ನೊಂದಾಯಿತ ಅಭ್ಯರ್ಥಿಗಳು ಈ ಕೆಳಗಿನ ಕೆಸೆಟ್ ವೆಬ್ಸೈಟ್ನ್ನು http://kset.uni-mysore.ac.in ಸಂಪರ್ಕಿಸಲು ತಿಳಿಸಲಾಗಿದೆ.










