ಇ. ಸಿ. ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ವತಿಯಿಂದ ಜನವರಿ 26 ರಂದು ಕಾಲೇಜಿನ ಆವರಣದಲ್ಲಿ 72 ನೇ ಗಣತಂತ್ರ ದಿನವನ್ನು ಆಚರಿಸಲಾಯಿತು.
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಇ. ಸಿ. ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ : ಆನ್ಲೈನ್ ಭಾಷಣ ಸ್ಪರ್ಧೆ
ಮಧುವನ: ಇ. ಸಿ. ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ವತಿಯಿಂದ 72ನೇ ಗಣರಾಜ್ಯೋತ್ಸವದ ಪ್ರಯುಕ್ತ, “ನನ್ನ ಮೆಚ್ಚಿನ ರಾಷ್ಟ್ರೀಯ ಸ್ವಾತಂತ್ರ ಹೋರಾಟಗಾರ” ಎಂಬ ವಿಷಯದ ಬಗ್ಗೆ ಅಂತರ್ ಕಾಲೇಜು ಮಟ್ಟದ ಆನ್ಲೈನ್ ಭಾಷಣ ಸ್ಪರ್ಧೆಯನ್ನು ದಿನಾಂಕ ೨೨-೦೧-೨೦೨೧ ರಂದು ಆಯೋಜಿಸಲಾಗಿತ್ತು. ಗಣತಂತ್ರ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಮಲ್ಯಾಡಿ ಶಿವರಾಮ ಶೆಟ್ಟಿ ಅಧ್ಯಕ್ಷರು ಭೂ ಅಭಿವೃದ್ಧಿ ಬ್ಯಾಂಕ್ ಕುಂದಾಪುರ, ಮಾಜಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಹಾಗೂ […]
ಫೆಬ್ರವರಿ 2 ರಿಂದ 5 ಗಂಗೊಳ್ಳಿ ಮಾರಿಜಾತ್ರೆ
ಕನ್ನಡ ಕರಾವಳಿಯ ಕುಂದಾಪುರ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ಇದರ ವಾರ್ಷಿಕ ಮಾರಿಜಾತ್ರೆ ಇದೇ ಫೆಬ್ರವರಿ 2 ರಿಂದ 5 ನೇ ತಾರಿಕಿನ ತನಕ ನಡೆಯಲಿದ್ದು ಜಾತ್ರೆಯ ಪ್ರಯುಕ್ತ ವಿಶೇಷ ವಾರ್ಷಿಕ ರಂಗಪೂಜೆ, ಗೆಂಡಸೇವೆ ಧಕ್ಕೆಬಲಿ, ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುತ್ತದೆ
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ರಕ್ಷಕ-ಶಿಕ್ಷಕ ಸಭೆ
ಕುಂದಾಪುರ, ಜನವರಿ 28 : ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಹೆತ್ತವರ ಮೇಲಿದೆ ಎಂದು ಡಾ.ಅತುಲ್ ಕುಮಾರ್ ಶೆಟ್ಟಿ ಹೇಳಿದರು.ಅವರು ಡಾ.ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 28ರಂದು ನಡೆದ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ […]
ಶ್ರೀ ಶಾರದ ಕಾಲೇಜು ಬಸ್ರೂರು: ಹೊಸ ಸರ್ಟಿಫಿಕೇಟ್ ಕೋರ್ಸುಗಳ ಉದ್ಘಾಟನೆ
ಕುಂದಾಪುರ: ಶ್ರೀ ಶಾರದ ಕಾಲೇಜು ಬಸ್ರೂರು ಇದರ ಐಕ್ಯೂಎಸಿ ,ಇತಿಹಾಸ ವಿಭಾಗ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಗೊಳ್ಳಲಿರುವ ಪುರಾತತ್ವ ದಾಖಲೀಕರಣ ಮತ್ತು ಅಧ್ಯಯನ ಕೇಂದ್ರ ಹಾಗೂ ಕನ್ನಡ ಪ್ರಾತಿನಿಧಿಕ ಸರ್ಟಿಫಿಕೇಟ್ ಕೋರ್ಸುಗಳನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಜಗದೀಶ ಶೆಟ್ಟಿ ಉದ್ಘಾಟಿಸಿದರು. ಅವರು ಜನವರಿ 27ರಂದು ಕಾಲೇಜಿನಲ್ಲಿ ಆಯೋಜಿಸಿದ್ದ ಸರ್ಟಿಫಿಕೇಟ್ ಕೋರ್ಸುಗಳನ್ನು ಉದ್ಘಾಟಿಸಿ ಬಸ್ರೂರಿನ ಮಹತ್ವದ ಬಗ್ಗೆ ತಿಳಿಸಿದರು.ಬಸ್ರೂರು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡ […]
ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆ – ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ರಾಜೇಶ್ ಪ್ರಥಮ ಸ್ಥಾನ
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಶಾಖೆ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೊಡಗು ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಯೂಥ್ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಾಮಿ ವಿವೇಕಾನಂದರ 158 ನೇ ಜನ್ಮ ದಿನದ ಪ್ರಯುಕ್ತ ಜನವರಿ 12 ರಂದು ರವೀಂದ್ರ ಕಲಾಭವನ, ವಿಶ್ವವಿದ್ಯಾನಿಲಯ ಕಾಲೇಜು, ಹಂಪ್ಪನಕಟ್ಟೆ, ಮಂಗಳೂರು ಇಲ್ಲಿ ನಡೆಸಿದ “ನ್ಯಾಷನಲ್ ಯೂಥ್ ಡೇ” ಮಂಗಳೂರು […]
ಕರಾವಳಿಯ ಉದಯೋನ್ಮುಖ ಹಿನ್ನೆಲೆ ಗಾಯಕ ಅಕ್ಷಯ್ ಬಡಾಮನೆಗೆ “ಅತ್ಯುತ್ತಮ ಗಾಯಕ ಪ್ರಶಸ್ತಿ”
ಅಕ್ಷಯ್ ಬಡಾಮನೆ ಓರ್ವ ಉದಯೋನ್ಮುಕ ಪ್ರತಿಭೆ. ಹತ್ತು ಹಲವು ಹಾಡುಗಳಿಗೆ ಧ್ವನಿಯಾಗಿ ಎಲ್ಲರ ಮನೆಮಾತಾದವರು. ರಿಹಾ ಇಂಡಿಯನ್ ಆರ್ಗ್ ಸಂಸ್ಥೆ ಇವರ ಗಾಯನಕ್ಕೆ ಮೆಚ್ಚಿ ಈ ವರ್ಷದ ಅತ್ಯುತ್ತಮ ಗಾಯಕ ಪ್ರಶಸ್ತಿ (ಅಲ್ಬಂ ಹಾಡು ಹಾಗೂ ಕಿರುಚಿತ್ರ ಹಾಡುಗಳ ವಿಭಾಗ) ನೀಡಿರುತ್ತಾರೆ. ರಿಹಾ ಐದಾರು ವರ್ಷಗಳಿಂದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸುತ್ತದ್ದು, ಈ ವರ್ಷದ ಪ್ರಶಸ್ತಿ ಸಮಾರಂಭವನ್ನು ಗೋವಾದಲ್ಲಿ ನೆಡೆಸುವ ತಯಾರಿಯಲ್ಲಿದೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಅಕ್ಷಯ್ ಬಡಾಮನೆ […]
ಮೂಡ್ಲಕಟ್ಟೆ ಎಂ. ಐ. ಟಿ. : ರೌಟರ್ ತಂತ್ರಜ್ಞಾನ ವೆಬಿನಾರ್
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ “ರೌಟರ್ ತಂತ್ರಜ್ಞಾನ” ವಿಷಯದ ಮೇಲೆ ವೆಬಿನಾರ್ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸಿಸ್ಕೋ ಕಂಪನಿಯಲ್ಲಿ ಟೆಕ್ನಿಕಲ್ ಲೀಡ್ ಇಂಜಿನಿಯರ್ ಆಗಿರುವ ಶ್ರೀ. ವಿವೇಕ್ ದಿನಕರ ರವರು ಭಾಗವಹಿಸಿದ್ದರು. ಶ್ರೀ. ವಿವೇಕ್ ದಿನಕರ ರವರು ಇಲೆಕ್ಟ್ರಾನಿಕ್ಸ್ ಸಂವಹನದಲ್ಲಿ ವಿವಿಧ ರೀತಿಯ ರೌಟರ್ ತಂತ್ರಜ್ಞಾನದ ಉಪಯೋಗ ಮತ್ತು ಬಳಕೆಯ ಕುರಿತು ಉಪನ್ಯಾಸ ನೀಡಿದರು. ವಿವಿಧ ರೀತಿಯ ರೌಟರ್ ಪ್ರೋಟೋಕಾಲ್ ಕುರಿತು ಮಾಹಿತಿ […]
ಕುಂದಗನ್ನಡದ ಬಹು ನಿರೀಕ್ಷೆಯ ಚಿತ್ರ : ಜಿ ಸಿ ಮೂವಿಸ್ರವರ ‘ದಿ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ’
ಸಿನಿಮಾಗಳಲ್ಲಿ ಕುಂದಗನ್ನಡ ಭಾಷೆ ಕಾಣಸಿಗುವುದೇ ಅಪರೂಪ, ಸಿಕ್ಕರೂ ಅಲ್ಲಿಲ್ಲೊಂದು ಸಿಗಬಹುದೋ ಏನೋ. ಒಂದೆರಡು ಕುಂದಗನ್ನಡ ಸಿನಿಮಾಗಳು ಬಂದುಹೋದವು ಕೂಡ.
ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ ಗೋಪಾಡಿ ವಾರ್ಷಿಕ ಜಾತ್ರಾ ಮಹೋತ್ಸವ
ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ – ಗೋಪಾಡಿ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 28ರಿಂದ 30ರ ತನಕ ನಡೆಯಲಿದೆ.










