ಕುಂದಾಪುರ (ಫೆ.06): ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಇಂಡಿಯನ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಇಂಡಿಯನ್ ರೆಡ್ ಕ್ರಾಸ್ ಘಟಕದ ಸಭಾಪತಿಗಳಾದ ಶ್ರೀ ಜಯಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಯುವ ರೆಡ್ ಕ್ರಾಸ್ ಕಾರ್ಯವೈಕರಿಯಲ್ಲಿ ಇಂದಿನ ಯುವ ಪೀಳಿಗೆ ಹೇಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಡಾ.ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಅಮುಕ್ತ್ ವತಿಯಿಂದ ಸನ್ಮಾನ
ಕುಂದಾಪುರ (ಫೆ 06): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘ (ರಿ.) (ಅಮುಕ್ತ್) ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಫೆಬ್ರವರಿ 05 ರ ಆದಿತ್ಯವಾರ ನಡೆಸಿದ 36 ನೆಯ ವಾರ್ಷಿಕ ಸಮ್ಮೇಳನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪುರಸ್ಕೃತರಾದ ಶ್ರೀ ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಅಮುಕ್ತ್ ನ ಪರವಾಗಿ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ನ ನಿರ್ದೇಶಕರಾದ ಡಾ. ಅಪ್ಪಾಜಿಗೌಡ ಸನ್ಮಾನಿಸಿ ಗೌರವಿಸಿದರು. ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ […]
ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಕೊಲ್ಲೂರು: ರಾಷ್ಟ್ರೀಯ ಮತದಾರರ ದಿನಾಚರಣೆ
ಕುಂದಾಪುರ ( ಫೆ,06): ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯಮತದಾರರ ದಿನ ಆಚರಣೆಯನ್ನು ಪ್ರತಿಜ್ಞಾ ವಿಧಿ ಭೋಧಿಸುವುದರ ಮೂಲಕ ಆಚರಿಸಲಾಯಿತು. ಈ ಪ್ರತಿಜ್ಞಾ ವಿಧಿಯನ್ನು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಂಗೀತಾ ಶೆಟ್ಟಿ ಬಗ್ವಾಡಿ ಭೋಧಿಸಿ ವಿದ್ಯಾರ್ಥಿಗಳಲ್ಲಿ ಮತಧಾನದ ಪ್ರಾಮುಖ್ಯತೆ ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ.ಬಿ ವಹಿಸಿ ಮತದಾನದ ಹಕ್ಕು […]
ಡಾ| ಬಿ. ಬಿ. ಹೆಗ್ಡೆ ಕಾಲೇಜಿಗೆ ಸಾಫ್ಟ್ ಬಾಲ್ ನಲ್ಲಿ ಬಿ.ಎಂ. ಸುಕುಮಾರ್ ಶೆಟ್ಟಿ ಪರ್ಯಾಯ ಪಾರಿತೋಷಕ ಪ್ರಶಸ್ತಿ
ಕುಂದಾಪುರ (ಫೆ.6): ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವುನಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಫ್ಟ್ ಬಾಲ್ ಪಂದ್ಯಾಟದಲ್ಲಿ ಸಮಗ್ರ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಬಿ.ಎಂ.ಎಸ್. ಪರ್ಯಾಯ ಪಾರಿತೋಷಕವನ್ನು ಪಡೆದುಕೊಂಡಿದೆ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ , ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ರಂಜಿತ್ ಟಿ.ಎನ್. ತಂಡಕ್ಕೆ […]
ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿ ಎ ಫೌಂಡೇಶನ್ ಪರೀಕ್ಷೆ ಫಲಿತಾಂಶ ಅತ್ಯಧಿಕ ಸಾಧನೆ
ಕುಂದಾಪುರ(ಫೆ,6): ಸಿಎ/ಸಿಎಸ್ ಪ್ರೊಫೆಶನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್(ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ಚಾರ್ಚರ್ಡ್ ಅಕೌಂಟೆoಟ್ಸ್ ಆಫ್ ಇಂಡಿಯ ಡಿಸೆಂಬರ್2022 ರಲ್ಲಿ ನೆಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊoದಿಗೆ ತೇರ್ಗಡೆ ಹೊಂದುದರ ಮೂಲಕ ಶ್ರೇಷ್ಠ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಉತ್ತಮ ಅಂಕಗಳೊoದಿಗೆ ತೇರ್ಗಡೆ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಸಂಸ್ಕೃತ ಸಂಘ ಉದ್ಘಾಟನೆ
ಕುಂದಾಪುರ ( ಫೆ .04): ಸಂಸ್ಕೃತ ಭಾಷೆ ಭಾರತದ ಅತ್ಯಂತ ಹಳೆಯ ಭಾಷೆಯಾಗಿದ್ದು, ಭಾರತೀಯ ಸಂಸ್ಕೃತಿ ಪರಂಪರೆಯ ಸಂಕೇತವಾಗಿದೆ. ಈ ಭಾಷೆ ಹಲವು ಭಾಷೆಗಳ ತಾಯಿ. ಇದನ್ನು ಸಾಮಾನ್ಯ ಜನರ ಮುಂದೆ ತರಬೇಕು. ಇಂಗ್ಲೀಷ್ ಪದಗಳು ಸಂಸ್ಕೃತದ ಹಲವು ಪದಗಳಿಂದ ರೂಪುಗೊಂಡಿದೆ. ಹಾಗೇಯೇ ಭಾಷೆ ಕಲಿಯುವ ಅಗತ್ಯತೆಯ ಕುರಿತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವಿದ್ವಾನ್ ವೆಂಕಟೇಶ್ ಮೂರ್ತಿ ಅವರು ಹೇಳಿದರು. ಅವರು ಡಾ| ಬಿ. […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಅಂತರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಖಾರ್ವಿಗೆ ಸನ್ಮಾನ
ಕುಂದಾಪುರ (ಜ.04): ನಗರದ ಗಾಂಧಿ ಮೈದಾನದಲ್ಲಿ ನಡೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಕುಂದಾಪುರದ ಸತೀಶ್ ಖಾರ್ವಿಗೆ ಸನ್ಮಾನಿಸಲಾಯಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ , ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು, ಕೊಲ್ಲೂರಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಸುಕೇಶ್ ಶೆಟ್ಟಿ ಹೊಸಮಠ, ಏಕಲವ್ಯ ಪ್ರಶಸ್ತಿ ವಿಜೇತ ಶ್ರೀ ಸಾಕ್ಷತ್, ಹೆಚ್.ಎಮ್.ಎಮ್. […]
ಅಧ್ಯಾಪನ ವೃತ್ತಿಯನ್ನು ಪ್ರೀತಿಸಿ – ಶ್ರೀ ವಸಂತ್ ಶೆಟ್ಟಿ
ಕುಂದಾಪುರ (ಜ.30): ಸಮರ್ಥ ಶಿಕ್ಷಕನೊಬ್ಬ ಮಾತ್ರ ಮಗುವಿನ ಮನಸ್ಸನ್ನು ತಲುಪಲು ಸಾಧ್ಯ. ಮಗುವಿಗೆ ಸ್ಫೂರ್ತಿ ತುಂಬಿ ಪ್ರಭಾವ ಬೀರುವ ಶಿಕ್ಷಕ ತನ್ನ ವೃತ್ತಿಯನ್ನು ಪ್ರೀತಿಸುವುದರೊಂದಿಗೆ ಬೋಧಿಸುವ ವಿಷಯದಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ವಿದ್ಯಾರ್ಥಿಗಳಲ್ಲಿನ ಅದ್ಭುತ ಶಕ್ತಿಯನ್ನು ಹೊರತೆಗೆಯಬಲ್ಲ ಅಭೂತಪೂರ್ವ ಅವಕಾಶವಿರುವ ವೃತ್ತಿಯೇ ಅಧ್ಯಾಪನ ವೃತ್ತಿ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ್ ಶೆಟ್ಟಿ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ […]
ಕೋಟ:ಶಿವರಾಮ ಕಾರಂತ ಥೀಮ್ ಪಾಕ೯ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನಾಮಫಲಕ ಅನಾವರಣ
ಕೋಟ( ಜ,27): ಇಲ್ಲಿನ ಶಿವರಾಮ ಕಾರಂತ ಥೀಮ್ ಪಾಕ೯ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನಾಮಫಲಕ ಅನಾವರಣ ಕಾಯ೯ಕ್ರಮ ಜ ,27 ರಂದು ನಡೆಯಿತು. ಸ್ವರಾಜ್ಯ 75 ತಂಡದ ಹೊಂಬೆಳಕು ಇದು ಸ್ವಾತಂತ್ರ್ಯದ ಹಣತೆ ಎಂಬ ಅಡಿ ಬರಹದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಥಳ ಗುರುತಿಸುವ ಕಾಯ೯ವಾಗಿ 23 ಸ್ಥಳವಾಗಿ ಕಡಲತಡಿಯ ಭಾರ್ಗವ ಎಂದೇ ಜನ ಮನ್ನಣೆ ಪಡೆದಿರುವ ಡಾ.ಕೋಟ ಶಿವರಾಮ ಕಾರಂತ ಥಿಮ್ ಪಾಕ೯ನಲ್ಲಿ ನಾಮಫಲಕ ವನ್ನು ಹಿರಿಯ ಪರಿಸರವಾದಿ ಗುರುತಿಸಿಕೊಂಡಿರುವ ಕೋಟ […]
ನಾಡ: ಜ,28 ಹಾಗೂ 29 ರಂದು ಡಾ. ಜಿ ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನವೀಕರಣ ಹಾಗೂ ಹೊಸ ಕಾರ್ಡ್ ನೋಂದಾವಣೆ
ಹೆಮ್ಮಾಡಿ (ಜ,27): ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ, ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಹಾಗೂ ಹಾಡಿಗರಡಿ ದೈವಸ್ಥಾನ ಆಡಳಿತ ಮಂಡಳಿ ನಾಡ ಇವರ ಸಹಯೋಗದೊಂದಿಗೆ, ಡಾ. ಜಿ ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನವೀಕರಣ ಹಾಗೂ ಹೊಸ ಕಾರ್ಡ್ ನೋಂದಾವಣೆ ಅಭಿಯಾನ ಜನವರಿ 28 ರ ಶನಿವಾರ ಸಮಯ ಬೆಳಿಗ್ಗೆ 9.30ರಿಂದ ಸಂಜೆ 4.00 ಘಂಟೆ ತನಕ ಹಾಗೂ […]










