ಉಡುಪಿ (ಮಾ.6): ಇಂದು ಆಧುನಿಕ ಜಗತ್ತು ಸಂಪೂರ್ಣವಾಗಿ ಡಿಜಿಟಲೀಕರಣವಾಗುತ್ತಿದೆ. ತಂತ್ರಜ್ಞಾನದ ಅಭಿವೃದ್ದಿಯು ಹೊಸ ಆಲೋಚನೆಗಳ ಆವಿಷ್ಕಾರಗಳು, ಉತ್ತಮ ಸೌಲಭ್ಯಗಳು ಐಷಾರಾಮಿ ಜೀವನ ಶೈಲಿಗಳಿಗೆ ಕಾರಣವಾಗಿದೆ. ಇಂಟರ್ನೆಟ್ಗೆ ಸಂಪರ್ಕ ಹೊಂದಿದ ಅನೇಕ ಸಾಧನೆಗಳು ಜೀವನದ ವಿಧಾನವನ್ನು ಬದಲಾಯಿಸಿದೆ ಹಾಗು ಇಂತಹ ತಂತ್ರಜ್ಞಾನದ ಕಲಿಕೆಯು ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಹೆಚ್ಚಲು ಪೂರಕ ಎಂದು ಬಂಟಕಲ್ ಕಾಲೇಜಿನ ಡಾ| ರಾಘವೇಂದ್ರ ಎಸ್. ರವರು ಹೇಳಿದರು. ಅವರು ಶಿರ್ವ ಸಂತಮೇರಿ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಸ್ಪೂರ್ತಿ – ಶ್ರೀಮತಿ ಮಹಿಮಾ ಮಧು
ಮಧುವನ (ಮಾ.4) : ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳ ಬೇಕು. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ವ್ಯಕ್ತಿತ್ವ ವಿಕಸನ ಗೊಳಿಸಿಕೊಳ್ಳ ಬೇಕು ಎಂದು ಇ. ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನದ ನಿರ್ದೇಶಕರಾದ ಶ್ರೀಮತಿ ಮಹಿಮಾ ಮಧು ಹೇಳಿದರು. ಅವರು ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನದಲ್ಲಿ ಪಠ್ಯೇತರ ಚಟುವಟಿಕೆಗಳ ಕುರಿತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲರಾದ ಶ್ರೀ […]
ಮೂಡ್ಲಕಟ್ಟೆ ಎಂ.ಐ.ಟಿ. ಕಾಲೇಜು : ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಆಚರಿಸಲಾಯಿತು.
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಹರಿಕಥಾ ಕಲಾಕ್ಷೇಪ ಕಾರ್ಯಕ್ರಮ
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ‘ಹರಿಕಥಾ ಕಲಾಕ್ಷೇಪ’ ಎನ್ನುವ ಹರಿಕಥಾ ಪ್ರವಚನ ಕಾರ್ಯಕ್ರಮ ಮಾರ್ಚ್ 02 ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಬಂಟಕಲ್ ಇಂಜಿನಿಯರಿಂಗ್ ಕಾಲೇಜು : ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿಜ್ಞಾನ ವಿಭಾಗ ಹಾಗೂ ಕಾಲೇಜಿನ ಐಎಸ್ಟಿಇ ಘಟಕದ ಸಹಯೋಗದೊಂದಿಗೆ “ನ್ಯಾನೋ ತಂತ್ರಜ್ಞಾನ ಮತ್ತು ಅದರ ಅನ್ವಯಿಕೆಗಳು” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಶ್ರೇಷ್ಠ ಭಾರತೀಯ ಭೌತವಿಜ್ಞಾನಿ ಸರ್. ಸಿ. ವಿ ರಾಮನ್ ಅವರ ನೆನಪಿಗಾಗಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯ ಅಂಗವಾಗಿ 26 ಫೆಬ್ರವರಿ 2021ರಂದು ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು
ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದ ಪಾತ್ರ ಅತಿಮುಖ್ಯ : ಪ್ರೊ. ಕೆ. ಉಮೇಶ್ ಶೆಟ್ಟಿ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಅನೇಕ ಅವಕಾಶಗಳಿದ್ದು ವಿದ್ಯಾರ್ಥಿಗಳು ತಮಗೆ ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಇ .ಸಿ .ಆರ್. ಕಾಲೇಜು ರೆಡ್ ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ
ಮಧುವನ(ಫೆ.24) ಇ .ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ 2020-21 ಶೈಕ್ಷಣಿಕ ಸಾಲಿನ ರೆಡ್ಕ್ರಾಸ್ ಘಟಕದ ಕಾರ್ಯ ಚಟುವಟಿಕೆ ಫೆಬ್ರವರಿ 23 ರಂದು ಉದ್ಘಾಟನೆಗೊಂಡಿತು. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿವಿಧ ವಿಭಾಗಗಳಿಗೆ ಹಸ್ತಾಂತರಿಸುವ ಮೂಲಕ ಕಾರ್ಯ ಚಟುವಟಿಕೆ ಗಳನ್ನು ಪ್ರಾರಂಭಿಸಲಾಯಿತು. ಘಟಕದ ಯೋಜನಾಧಿಕಾರಿಗಳಾದ ಕುಮಾರಿ ಶ್ರೀನಿಧಿ ಹೆಗ್ಡೆ ಹಾಗೂ ಶ್ರೀಮತಿ ಕುಸುಮಾವತಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಪುರುಷ ವಸತಿ ನಿಲಯ ಹಾಗೂ ಮಹಿಳಾ ವಸತಿ ನಿಲಯದ ಮೇಲ್ವಿಚಾರಕರಿಗೆ , […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಅಂತರ್ಕಾಲೇಜು ಮಹಿಳೆಯರ ತ್ರೋಬಾಲ್ ಪಂದ್ಯಕೂಟ- ಸಮಾರೋಪ ಸಮಾರಂಭ
ಕುಂದಾಪುರ(ಫೆ.25): ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಮಂಗಳೂರು ವಿ. ವಿ. ಕುಂದಾಪುರ ವಲಯ ಮಟ್ಟದ ಅಂತರ್ಕಾಲೇಜು ಮಹಿಳಾ ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭ ಫೆ. 24ರ ಸಂಜೆ 4.30ಕ್ಕೆ ಕಾಲೇಜಿನ ಬಿ.ಎಂ.ಎಸ್. ಕ್ರೀಡಾಂಗಣದಲ್ಲಿ ನಡೆಯಿತು. ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಇದರ ಕಾರ್ಯದರ್ಶಿಗಳಾದ ಶ್ರೀ ಸೀತಾರಾಮ ನಕ್ಕತ್ತಾಯ ವಹಿಸಿದ್ದರು. ಮುಖ್ಯ […]
ಕಲಾಸೃಷ್ಟಿ ಅರ್ಪಿಸುವ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ
Magic – The Art of Life ಎನ್ನುವ ಪರಿಕಲ್ಪನೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದು ಆಸಕ್ತರು ತಾವು ರಚಿಸಿದ ಚಿತ್ರವನ್ನು ಫೆಬ್ರವರಿ 23ರ ಒಳಗೆ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ಡಾ. ಬಿ. ಬಿ. ಹೆಗ್ಡೆ ಕಾಲೇಜು – ಫೆ.24 ರಂದು ಅಂತರ್ ಕಾಲೇಜು ಮಹಿಳಾ ವಿಭಾಗದ ತ್ರೋಬಾಲ್ ಪಂದ್ಯಾಕೂಟ
ಕುಂದಾಪುರ ಎಜುಕೇಶನ್ ಸೊಸೈಟಿ(ರಿ) ಪ್ರವರ್ತಿತ ಡಾl ಬಿ.ಬಿ ಹೆಗ್ದೆ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಕುಂದಾಪುರ ವಲಯ ಮಟ್ಟದ ಮಹಿಳಾ ವಿಭಾಗದ ತ್ರೋಬಾಲ್ ಪಂದ್ಯಾಕೂಟ ಇದೇ ಫೆಬ್ರವರಿ 24ರಂದು ಕಾಲೇಜಿನ ಬಿ.ಎಂ.ಎಸ್. ಕ್ರೀಡಾಂಗಣದಲ್ಲಿ ನಡೆಯಲಿದೆ.










