ಕಲ್ಯಾಣಪುರ(ಸೆ,07): ಗುರು ಮಾಡಿದ ಪಾಠವು ವರವಾಗಿ ನನ್ನ ಸಾಧನೆಗೆ ಮೆಟ್ಟಿಲಾಗಿ ನಿಂತ ಕ್ಷಣವನ್ನು ನೆನಪಿಸಿ ಶಿಕ್ಷಕರ ದಿನಾಚರಣೆಯೆಂದು ತವರು ಮನೆ ಟ್ರಸ್ಟ್ ನ ಸಂಸ್ಥಾಪಕಿ ಶೈನಾ ಕಲ್ಯಾಣಪುರ ತನ್ನ ಶಿಕ್ಷಕ ಶೇಖರ್ ಶೆಟ್ಟಿ ಮಟಪಾಡಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು. 6 ನೇ ತರಗತಿಯಲ್ಲಿ ತಾನು ಕಲಿತ ಪಾಠದ ವಿಷಯಗಳಾದ ಸತಿ ಪದ್ಧತಿ, ಹೆಣ್ಣು ಮಕ್ಕಳ ಶೋಷಣೆ, ಭ್ರೂಣ ಹತ್ಯೆ, ಲೈಂಗಿಕ ಶೋಷಣೆ ಇದರ ಬಗ್ಗೆ ಸಮಾಜ ವಿಜ್ಞಾನದ ಶಿಕ್ಷಕರಾದ ಶೇಖರ್ ಶೆಟ್ಟಿ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಗುರು ಮಾತೆ – ಅಕ್ಷರ ಕಲಿಸಿದ ವಿದ್ಯಾ ಸರಸ್ವತಿ : ಸಿಂಗಾರಿ ಅಮ್ಮ ಟೀಚರ್ ನಾವುಂದ
ಗುರು ಎನ್ನುವ ಪರಿಕಲ್ಪನೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಏಕೆಂದರೆ ಒರ್ವ ಗುರು ತಂದೆ-ತಾಯಿಯ ಎರಡು ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನಾಗಿದ್ದು, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಭಾವಿಸುವ ,ಪ್ರೀತಿಸುವ ಹಾಗೂ ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಮತ್ತು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವ ದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಹಾಕಲು ಶಿಕ್ಷಕರು ಮಾರ್ಗದರ್ಶಕರಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವು ಅಜ್ಞಾನವನ್ನು ಓಡಿಸುವುದೇ ಆಗಿದೆ. ಪ್ರತಿಯೊಬ್ಬರ ಜೀವನದ ಏಳು- ಬೀಳುಗಳಿಗೆ […]
ಸಂತ ಮೇರಿ ಮಹಾವಿದ್ಯಾಲಯ ಶಿರ್ವ: ಸ್ವಚ್ಛ ಸರ್ವೇಕ್ಷಣ ಜನಾಂದೋಲನ -2021
ಶಿರ್ವ(ಸೆ.4): ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛ ಸರ್ವೆಕ್ಷಣ ಗ್ರಾಮೀಣ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಸುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ ಚಾಲನೆಯಲ್ಲಿರುವ ಈ ಯೋಜನೆಯನ್ನು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ, ಎನ್.ಎಸ್.ಎಸ್, ಹಾಗು ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಚ್ಚತೆ […]
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ : ಮಹಿಳಾ ಸಬಲೀಕರಣದ ಸೈಕಲ್ ಜಾಥಾಕ್ಕೆ ಸ್ವಾಗತ
ಕುಂದಾಪುರ (ಸೆ. 02) : ಕೇರಳದ ಮಲ್ಲಾಪುರಂನಿಂದ ಕಾಶ್ಮೀರದ ತನಕ ಸೈಕಲ್ ಜಾಥಾ ಮೂಲಕ ಮಹಿಳಾ ಸಬಲೀಕರಣದ ಉದ್ದೇಶವನ್ನು ಇಟ್ಟುಕೊಂಡು ಸರಿಸುಮಾರು ಒಂದು ತಿಂಗಳ ಕಾಲಾವಕಾಶದ ಗುರಿಯನ್ನು ಹಾಕಿಕೊಂಡು ಸೈಕಲ್ ಜಾಥಾ ಮೂಲಕ ಹೊರಟ ಕೇರಳದ ವಿದ್ಯಾರ್ಥಿನಿ ತನ್ನ ಮೂವರು ಸಹಪಾಠಿಗಳ ಜೊತೆ ಕುಂದಾಪುರಕ್ಕೆ ತಲುಪಿದಾಗ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಹೂಗುಚ್ಛ ನೀಡಿ ಸ್ವಾಗತಿಸಿ ಬರಮಾಡಿಕೊಂಡರು. ಆಗ ವಿದ್ಯಾರ್ಥಿನಿ ಮಹಿಳಾ […]
ಡಾನ್ ಬಾಸ್ಕೋ ಶಾಲೆ ತ್ರಾಸಿ : ರಾಷ್ಟ್ರೀಯ ಕ್ರೀಡಾ ದಿನಾಚರಣೆ
ತ್ರಾಸಿ (ಸೆ.01) : ಇಲ್ಲಿನ ಡಾನ್ ಬಾಸ್ಕೋ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಮೇಜರ್ ಧ್ಯಾನಚಂದ್ ರವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಗಸ್ಟ್ 29 ರಂದು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಂಶುಪಾಲರಾದ ಫಾ. ಮ್ಯಾಕ್ಸಿಮ್ ಡಿಸೋಜಾಉದ್ಘಾಟಿಸಿದರು. ಮಧ್ಯಮ ಮತ್ತು ಸೆಕೆಂಡರಿ ಸೆಕ್ಷನ್ ನ ಸಂಯೋಜಕರಾದ ಶ್ರೀಮತಿ ಸ್ಮಿತಾ ಕುಮಾರಿ ಮತ್ತು ಆರೋಗ್ಯ ಮತ್ತು ದೈಹಿಕ ಶಿಕ್ಷಣ ಸಂಯೋಜಕರಾದ ಶ್ರೀ ಶಿವಾನಂದ್ ಉಪಸ್ಥಿತರಿದ್ದರು. […]
ಎಕ್ಸಲೆಂಟ್ ಕಾಲೇಜು ಕುಂದಾಪುರ :ಮೊಬೈಲ್ ಆ್ಯಪ್ ಲೋಕಾರ್ಪಣೆ
ಕುಂದಾಪುರ(ಸೆ.02): ಸುಜ್ಞಾನ ಎಜುಕೇಶನ್ ಟ್ರಸ್ಟ್ ಮೂಡುಬಿದಿರೆ ಇದರ ನೂತನ ಆಡಳಿತದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ಮತ್ತು ಪಿ.ಯು ಕಾಲೇಜು ವಿದ್ಯಾರ್ಥಿಗಳು ಮತ್ತು ಪೋಷಕರ ಅನುಕೂಲಕ್ಕಾಗಿ ಎಕ್ಸಲೆಂಟ್ ಆ್ಯಪ್ ಅನ್ನು ಹೊರತಂದಿದ್ದು ವಿಧಾನ ಪರಿಷತ್ನ ಸದಸ್ಯರಾಗಿರುವ ಶ್ರೀ ಎಸ್ ಎಲ್ ಭೋಜೆಗೌಡರವರು ಆಗಸ್ಟ್ 29 ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಆ್ಯಪ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಭೋಜೆಗೌಡರು ಅಪಾರ ಅನುಭವವುಳ್ಳ ಡಾ. ರಮೇಶ ಶೆಟ್ಟಿ ತಂಡಕ್ಕೆ ಶುಭವಾಗಲಿ ಮತ್ತು ತಂಡದ ಪ್ರಯತ್ನಕ್ಕೆ […]
ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆ ಗಂಗೊಳ್ಳಿ : ಸಾಧಕ ವಿದ್ಯಾರ್ಥಿ ಶ್ರೇಯಾ ಮೇಸ್ತ ಹಾಗೂ ಸಂಜಯ್ ಮೇಸ್ತ ರಿಗೆ ಸನ್ಮಾನ
ಗಂಗೊಳ್ಳಿ (ಆ, 30) : ಇಲ್ಲಿನ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಗೆ ಉಡುಪಿ ಜಿಲ್ಲಾ ಸನ್ಮಾನ್ಯ ಉಪ ನಿರ್ದೇಶಕರಾದ ಎನ್. ಹೆಚ್. ನಾಗೂರ್ ಭೇಟಿ ನೀಡಿ ಎಸ್.ಎಸ್ .ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೇ 625 ಅಂಕ ಗಳಿಸಿದ ಕುಮಾರಿ ಶ್ರೇಯ ಮೇಸ್ತ ಹಾಗೂ ಸಹೋದರ ಸಂಜಯ್ ಮೇಸ್ತ (625/600) ರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ವಲಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಪದ್ಮನಾಭ, ಕಾರ್ಮೆಲ್ ಸಂಸ್ಥೆಯ ಶಿಕ್ಷಣ ಕಾರ್ಯದರ್ಶಿ […]
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೈಕಂಬ್ಳಿ : ಜ್ಞಾನ ಫೌಂಡೇಶನ್ ಬೆಂಗಳೂರು ವತಿಯಿಂದ ಉಚಿತ ಸಮ ವಸ್ತ್ರ ವಿತರಣೆ
ವಂಡ್ಸೆ (ಆ, 29) : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೈಕಂಬ್ಳಿಯ ವಿದ್ಯಾರ್ಥಿಗಳಿಗೆ ಆರ್ಡಿಯ ಸಿ. ಎ. ಸುದೀಪ್ ಶೆಟ್ಟಿ ನಾಯಕತ್ವದ ಜ್ಞಾನ ಫೌಂಡೇಶನ್ ಬೆಂಗಳೂರು ಕೊಡಮಾಡಿದ ಉಚಿತ ಸಮವಸ್ತ್ರವನ್ನು ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆಯವರು ವಿತರಿಸಿದರು. ಗ್ರಾಮೀಣ ಭಾಗದ ನಮ್ಮ ಶಾಲೆಗೆ ಕಟ್ಟಡಗಳ ಕೊರತೆಯಿದೆ. ಅಗತ್ಯ ಸೌಲಭ್ಯಗಳ ಪೂರೈಕೆಗೆ ದಾನಿಗಳ ಸಹಕಾರ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರೇರಣಾ ಮತ್ತು ಜ್ಞಾನ ಪೌಂಢೇಶನ್ ಈ ರೀತಿಯ ಸಹಕಾರಕ್ಕೆ ಧನ್ಯವಾದ ಎಂದು […]
ಕುಂದಾಪುರ : ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಕುಂದಾಪುರ (ಆ, 28 ): ಕ್ರೀಡೆಗಳಲ್ಲಿನ ವಿದ್ಯಾರ್ಥಿಗಳ ಆಸಕ್ತಿ ನಾಯಕತ್ವ ಗುಣವನ್ನು ಬೆಳೆಸುತ್ತದೆ. ಬದುಕಿನಲ್ಲಿ ಕ್ರೀಡಾ ಸ್ಪೂರ್ತಿ ಇದ್ದರೆ ಧೈರ್ಯಗೆಡದೆ ಕನಸುಗಳನ್ನು ಸಾಧಿಸಬಹುದು.ವಿದ್ಯಾರ್ಥಿಗಳು ಆರಂಭಿಕ ಹಂತದ ಕ್ರೀಡಾ ಪ್ರೋತ್ಸಾಹಗಳ ಮೂಲಕ ಒಲಿಂಪಿಕ್ಸ್ ನಂತಹ ಜಾಗತಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ ಸೀತಾರಾಮ ನಕ್ಕತಾಯ ರವರು ಶುಭ ಹಾರೈಸಿದರು. ಅವರು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಆಚರಿಸಿದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. […]
ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಗಂಗೊಳ್ಳಿ (ಆ, 27) : ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ವತಿಯಿಂದ ಎಸ್ ಎಂ ಗೋಪಾಲಕೃಷ್ಣ ಬೆಳ್ಳಾರೆ ಪ್ರಾಯೋಜಕತ್ವದಲ್ಲಿ, ಪೈ ಟೆಕ್ಸ್ ಟೈಲ್ಸ್ ಮತ್ತು ಪೈ ಗಾರ್ಮೆಂಟ್ಸ್ ಗಂಗೊಳ್ಳಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ […]