ಕುಂದಾಪುರ (ಆ, 09) : ಕೋವಿಡ್ 19 ಎರಡನೇ ಅಲೆ ಮುಗಿದಿದ್ದು, ಮೂರನೆಯ ಅಲೆಯು ಮಕ್ಕಳ ಜೀವಕ್ಕೆ ಅಪಾಯ ಇರುವುದರ ಬಗ್ಗೆ ತಜ್ಞರ ವರದಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ಚಿಕ್ಕಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸ ಬೇಕಾಗಿದ್ದು , ವಿಶೇಷವಾಗಿ ತಾಲೂಕಿನ ಸರಕಾರಿ ಶಾಲೆಯ ಪ್ರಾಥಮಿಕ ತರಗತಿಗಳಿಂದ ಹತ್ತನೇ ತರಗತಿಯ ಮಕ್ಕಳ ಆರೋಗ್ಯ ತಪಾಸಣೆಯನ್ನು ನುರಿತ ವೈದ್ಯರಿಂದ ಮಾಡಿಸಿ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಇದ್ದಲ್ಲಿ ಅಂತಹ ಮಕ್ಕಳಿಗೆ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಆ, 10) : ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಸಾಂಪ್ರದಾಯಿಕವಾಗಿ ಕಳಸಿಗೆಗೆ ಭತ್ತ ಹೊಯ್ಯುವುದರ ಮೂಲಕ ಕುಂದಗನ್ನಡದ ರಾಯಭಾರಿ, ಸಾಂಸ್ಕೃತಿಕ ಚಿಂತಕ ಹಾಗೂ ಶಿಕ್ಷಕ ಮನು ಹಂದಾಡಿಯವರು ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾಷೆಯನ್ನು ಬಳಸುವಿಕೆ, ಬೆಳೆಸುವಿಕೆ ತನ್ಮೂಲಕ ಉಳಿಸುವಿಕೆ ಕುರಿತಂತೆ ಹಾಗೂ ಕುಂದಾಪ್ರ ಭಾಷಾ ಸೊಗಡು ರಂಜನೀಯವಾಗಿ ವಿವರಿಸಿದರು. ಮುಖ್ಯ ಅತಿಥಿಯಾಗಿ […]
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ : ದಾಖಲೆ ನಿರ್ಮಿಸಿದ ಕುಂದಾಪುರದ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಕುಂದಾಪುರ (ಆ, 10) : ಈ ವರ್ಷದ 10ನೇ ತರಗತಿಯ ಪರೀಕ್ಷೆ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದರೂ, ಅಂತಿಮವಾಗಿ ಬಹು ಆಯ್ಕೆಯ ಆಧಾರದ ಮೇಲೆ ಪರೀಕ್ಷೆ ನಡೆಸಿ, ನಿನ್ನೆ ಫಲಿತಾಂಶ ಹೊರಬಂದಿದೆ. ಫಲಿತಾಂಶ ಪಟ್ಟಿಯಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಾಖಲೆ ನಿರ್ಮಿಸಿದ್ದು, ವಿದ್ಯಾರ್ಥಿಗಳಾದ ಅನುಶ್ರೀ ಶೆಟ್ಟಿ, ಪ್ರಣೀತ ಹಾಗೂ ಸೃಜನ್ ಭಟ್ 625ಕ್ಕೆ 625 ಅಂಕಗಳನ್ನು ಪಡೆದು ಹೊಸ ಭಾಷ್ಯ […]
ಖ್ಯಾತ ಜಾನಪದ ಗಾಯಕ ಗಣೇಶ್ ಗಂಗೊಳ್ಳಿ ಯವರಿಗೆ ಗೌರವ ಡಾಕ್ಟರೇಟ್ ಪದವಿ
ಕುಂದಾಪುರ (ಆ, 09) : ಖ್ಯಾತ ಜಾನಪದ ಗಾಯಕ ಗಣೇಶ್ ಗಂಗೊಳ್ಳಿಯವರಿಗೆ ಜಾನಪದ ಸಂಗೀತ, ಸಂಘಟನೆ ಹಾಗೂ ಸಂಘ- ಸಂಸ್ಥೆಗಳಲ್ಲಿ ನ ವಿಶಿಷ್ಟ ಸೇವೆಯನ್ನು ಗುರುತಿಸಿ ತಮಿಳುನಾಡಿನ ಇಂಡಿಯನ್ ಎಂಪಯರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ. ಶ್ರೀಯುತರು ಜಾನಪದ ಗಾಯಕರಾಗಿ ಸರಿಸುಮಾರು 32 ವರ್ಷ ದಿಂದ ನಮ್ಮ ನಾಡು ಅಲ್ಲದೆ ದೇಶದ ಹಲವಾರು ರಾಜ್ಯ ಗಳಲ್ಲಿ ಜನಮನ್ನಣೆ ಗಳಿಸಿದ್ದಾರೆ. ಪ್ರತಿಷ್ಠಿತ ಕನ್ನಡ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿರುವ […]
ಕುಂದಾಪುರದ ಅನನ್ಯತೆ
ಕುಂದಾಪುರ (ಕುಂದಗನ್ನಡ) ಕನ್ನಡ ನಾಡಿನ ವಿಭಿನ್ನ ಹಾಗೂ ವಿಶಿಷ್ಟ ಭಾಷಾ ಸೊಗಡಿನ ಪ್ರದೇಶ. ಸುತ್ತ ಮುತ್ತ ಹಸಿರಿನಿಂದ ಮೈದುಂಬಿ ಕಂಗೊಳಿಸುತ್ತ ,ಹಕ್ಕಿಗಳ ಚಿಲಿಪಿಲಿ ಕಲರವ ಕೇಳುತ್ತ, ಪಶ್ಚಿಮ ದಿಕ್ಕಿನಗಲಕ್ಕೂ ಸಮುದ್ರದ ಬೋರ್ಗರೆಯುವ ಅಲೆಗಳನ್ನು ನೋಡುತ್ತಾ ಖುಷಿ ನೀಡುವ ತಾಣ ನಮ್ಮ ಕುಂದಾಪುರ. ಕುಂದಾಪುರ ಬರೀ ಕರ್ನಾಟಕ ರಾಜ್ಯ ಹಾಗೂ ಭಾರತ ದೇಶದಲ್ಲಿ ಅಲ್ಲದೆ ಅನೇಕ ಕಾರಣಗಳಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ರಾಜ್ಯದ ಇತರೆ ಭಾಗಗಳಿಗಿಂತ ವಿಶಿಷ್ಟ ಶೈಲಿಯ ಅಸ್ಮೀತೆ, ಸಂಸ್ಕೃತಿ ಮತ್ತು […]
ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಆ, 5) : ಕುಂದಗನ್ನಡ ನಾಡು-ನುಡಿ, ಸಂಸ್ಕೃತಿಯ ಕುರಿತಾಗಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕುಂದಗನ್ನಡ ಭಾಗದ ಜನತೆ ಆಚರಿಸುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್ 09 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಂದಾಪ್ರ ಕನ್ನಡದ ರಾಯಭಾರಿ, ಸಾಂಸ್ಕೃತಿಕ ಚಿಂತಕ ಹಾಗೂ ಶಿಕ್ಷಕರಾದ ಶ್ರೀ ಮನು ಹಂದಾಡಿಯವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ […]
ತ್ರಾಸಿ ಡಾನ್ ಬಾಸ್ಕೋ ಸ್ಕೂಲ್ ಎಸೆಸೆಲ್ಸಿಯಲ್ಲಿ ಶೇಕಡ 100 ಫಲಿತಾಂಶ
ಕುಂದಾಪುರ (ಆ, 5) : ಸಿ ಬಿ ಎಸ್ ಇ ಪಠ್ಯಕ್ರಮದ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ತ್ರಾಸಿ ಡಾನ್ ಬಾಸ್ಕೋ ಸ್ಕೂಲ್ ನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಗೆ 100 ಶೇಕಡ ಫಲಿತಾಂಶ ಬಂದಿರುತ್ತದೆ. ಐದು ವರ್ಷಗಳಿಂದ ಸತತ ಈ ದಾಖಲೆಯನ್ನು ಶಾಲೆ ಮಾಡುತ್ತಾ ಬಂದಿದೆ. ಈ ಬಾರಿ 29 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ವಿ.ನಿತ್ಯಶ್ರೀ ಶೇ 94.2 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. […]
ರೋಟರಿ ಕ್ಲಬ್ ಕುಂದಾಪುರ : ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಕುಂದಾಪುರ (ಆ, 03) : ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ Rtn. ಸಾಲಗದ್ದೆ ಶಶಿಧರ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು, ತೋಪ್ಲು ಹಾಗೂ ಹಕ್ಲಾಡಿ ಶಾಲಾ ಮಕ್ಕಳಿಗೆ ಅಗಸ್ಟ್ 2 ರಂದು ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ Rtn. ಶಶಿಧರ ಹೆಗ್ಡೆಯವರು ವಹಿಸಿಕೊಂಡು ಶುಭಹಾರೈಸಿ ಮಾತನಾಡಿದರು. ಜಿಲ್ಲಾ ಪ್ರಶಸ್ತಿ ವಿಜೇತ, ಶಿಕ್ಷಕ […]
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಕ್ರಮ
ಕೊಲ್ಲೂರು (ಆ, 03) : ಇಲ್ಲಿನ ಶ್ರೀಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್,03ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಪ್ರೊ ಡಾ. ಜೆ. ಎಸ್. ಸದಾನಂದ ರವರು ಭೇಟಿ ನೀಡಿ, ಹೊಸ ಶಿಕ್ಷಣ ನೀತಿ ಯ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಪ್ರೊ. ಡಾ. ಜೆ ಎಸ್ ಸದಾನಂದ ರವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. […]
ಕರೋನಾ ಹಿನ್ನೆಲೆ- ಮಂಗಳೂರು ವಿ.ವಿ ಎಲ್ಲಾ ಪದವಿ ಪರೀಕ್ಷೆಗಳ ರದ್ದು – ತರಗತಿಗಳು ಮುಂದೂಡಿಕೆ: ದ.ಕ. ಜಿಲ್ಲಾಧಿಕಾರಿ ಆದೇಶ
ಕರೋನಾ ಲಾಕ್ಡೌನ್ ಕಾರಣದಿಂದಾಗಿ ಬಾಕಿಯಾದ ಮಂಗಳೂರು ವಿ. ವಿ. 1, 3, 5 ಸೆಮಿಸ್ಟರ್ ನ ಪರೀಕ್ಷೆಗಳು ಅಗಸ್ಟ್ 2 ರಂದು ಪ್ರಾರಂಭಗೊಂಡಿದ್ದು, ಈಗ ಮತ್ತೆ ಕರೋನಾ ಮೂರನೇ ಅಲೆಯ ಆತಂಕದಿಂದಾಗಿ ಮುಂದೂಡಲಾಗಿದೆ.