ಕುಂದಾಪುರ (ಜು, 22) : ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ಕನ್ನಡ ವಿಭಾಗ ಹಾಗೂ ಕುಂದವಾಹಿನಿ ಅಂತರ್ಜಾಲ ಸುದ್ದಿತಾಣದ ಜಂಟಿ ಆಯೋಜನೆಯಲ್ಲಿ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ‘ಕುಂದಾಪ್ರ ಕನ್ನಡದಲ್ಲಿ “ಕುಂದಗನ್ನಡ ಭಾಷಿ ಮತ್ತು ಬದ್ಕ್” ಎನ್ನುವ ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮೂರು […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಕೃಷಿ ಚಟುವಟಿಕೆಗಳಲ್ಲಿ ನಾವು ಸ್ವಾವಲಂಬಿಯಾಗಬೇಕು – ಶ್ರೀ ಮುರಳಿ ಕಡೆಕಾರು
ಕಲ್ಯಾಣಪುರ(ಜು,22): ಮಿಲಾಗ್ರಿಸ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ದಿನಾಂಕ ಜುಲೈ 22 ರ ಗುರುವಾರದಂದು ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ಸಂತೆಕಟ್ಟೆ ಪರಿಸರದ ನಯಂಪಳ್ಳಿ ಮತ್ತು ಕೊಡಂಕೂರು ಪರಿಸರದ ಗದ್ದೆಯಲ್ಲಿ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಇದರ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಇದರ ಕೋಶಾಧಿಕಾರಿಗಳಾದ ಶ್ರೀ ರಾಘವೇಂದ್ರ ಕಿಣಿ […]
ಸರಕಾರಿ ಪದವಿಪೂರ್ವ ಕಾಲೇಜು,ನಾವುಂದ : ಚವೀಶ್ ಜೈನ್ ಕಾಲೇಜಿಗೆ ಪ್ರಥಮ ಸ್ಥಾನ
ನಾವುಂದ (ಜು,22): ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು,ಇದರಲ್ಲಿ ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ನಾವುಂದ ಚವೀಶ್ ಜೈನ್ 600 ರಲ್ಲಿ 590 ಅಂಕಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಕಾಲೇಜಿನ ಪ್ರಾಂಶುಪಾಲರು, ಭೋಧಕ ಹಾಗೂ ಭೋಧಕೇತರ ವ್ರಂದ ಚವೀಶ್ ಜೈನ್ ಗೆ ಶುಭಾಶಯ ಕೋರಿರುತ್ತಾರೆ.
ಸಂತ ಮೇರಿ ಮಹಾವಿದ್ಯಾಲಯ, ಶಿರ್ವ : ಹಸಿರಿನಿಂದ ಉಸಿರು – ವನ ಮಹೋತ್ಸವ ಕಾರ್ಯಕ್ರಮ
ಶಿರ್ವ(ಜು,22): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಗ್ರೀನ್ ಟೀಚರ್ ಫೋರಂ, ಎನ್ ಸಿಸಿ, ಎನ್ಎಸ್ ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋವರ್ಸ-ರೇಂಜರ್ಸ್ ಸಂಯುಕ್ತ ಆಶ್ರಯದಲ್ಲಿ ಹಸಿರಿನಿಂದ ಉಸಿರು – ವನಮಹೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ಕ್ಯಾಂಪಸ್ ನಲ್ಲಿ ಫಲನೀಡುವ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೆನ್ನಿಸ್ ಅಲೆಕ್ಸಾಂಡರ್ ಡೇಸ್ ರವರು ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾಲೇಜಿನ […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿಎ/ಸಿಎಸ್ ಆಸಕ್ತರಿಗೆ ನೂತನ ಬ್ಯಾಚ್ ಆರಂಭ
ಕುಂದಾಪುರ (ಜು, 20) : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜುಲೈ 2021 ರಂದು ಪ್ರಕಟಿಸಿರುವ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿಎಸ್ ಕೋರ್ಸುಗಳನ್ನು ಆಯ್ಕೆಮಾಡಿಕೊಳ್ಳಲು ಹಾದಿ ಸುಲಭವಾಗಿದೆ. ಸಿಎ ಮತ್ತು ಸಿಎಸ್ ಕೋರ್ಸುಗಳನ್ನು ಪೂರ್ಣಗೊಳಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಉಜ್ವಲ ಭವಿಷ್ಯವಿದೆ. ಈ ನಿಟ್ಟಿನಲ್ಲಿ ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಆಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (SPACE) ಶಿಕ್ಷಣ […]
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣೆ
ಕುಂದಾಪುರ (ಜು, 19) : ಡಾ|ಬಸ್ರೂರು ಭುಜಂಗ ಹೆಗ್ಡೆಯವರ ನೆನಪಿನಲ್ಲಿ ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸಲು ಸ್ಥಳದಾನ ಮಾಡಿದ ಸೌಕೂರು ಸೇರ್ವೆಗಾರ್ ಮನೆತನದ ವಿಶಾಲಾಕ್ಷಿ ಬಿ.ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ.ಕೆ .ಉಮೇಶ್ ಶೆಟ್ಟಿ ಸಂಸ್ಮರಣಾ ಮಾತುಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಇಂಗ್ಲಿಷ್ ಉಪನ್ಯಾಸಕಿ ಶ್ರೀಮತಿ ದೀಪಿಕಾ ರಾಘವೇಂದ್ರ ಮತ್ತು ಭೌತಶಾಸ್ತ್ರ […]
ಕವಿ ಕೆ.ವಿ.ತಿರುಮಲೇಶ್ ಕವಿತೆಗಳು ಮಲೆಯಾಳಕ್ಕೆ ಅನುವಾದ
ಬ್ರಹ್ಮಾವರ(ಜು,18): ಮಲೆಯಾಳದ ಮಹಾಕವಿ ಚಙ್ಙಪ್ಪುಳ ಕೃಷ್ಣ ಪಿಳ್ಳೆಯವರು ಹೇಳಿದಂತೆ ಕಾವ್ಯವು ಒಬ್ಬ ನರ್ತಕಿ ಇದ್ದಂತೆ. ನರ್ತಕಿ ತನಗೆ ಹೇಳಬೇಕಾದ ವಿಚಾರಗಳನ್ನು ಸನ್ನೆ – ಸಂಕೇತಗಳ ಮೂಲಕವೇ ಸೂಚಿಸುತ್ತಾಳೆ. ಚಙ್ಙಪ್ಪುಳ, ವಳ್ಳತ್ತೋಳ್, ಉಳ್ಳೂರ್ ಮೊದಲಾದ ಮಹಾಕವಿಗಳು ಮಲೆಯಾಳ ಕಾವ್ಯದ ತೋರುಗಂಬಗಳಾಗಿ ಉತ್ಕೃಷ್ಟ ಕಾವ್ಯ ರಚನೆ ಮಾಡಿದರು. ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಮೊದಲಾದ ಮಹಾಕಾವ್ಯಗಳು, ಭಗವದ್ಗೀತೆಯಂಥ ಅಮೂಲ್ಯ ಗ್ರಂಥ, ಕಾಳಿದಾಸ-ಭಾಸರಂಥ ಮಹಾಕವಿಗಳು ಸಾಹಿತ್ಯವನ್ನು ಶ್ರೀಮಂತವಾಗಿಸಿದಂತಹ ನಾಡು ನಮ್ಮದು. ಅವರ ಆದರ್ಶದಲ್ಲೇ ಮಲೆಯಾಳ ಕಾವ್ಯವು […]
ಪೊಲೀಸ್ ಸಬ್ಇನ್ಸ್ಪೆಕ್ಟರ್ (PSI ) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ : ಸಂಭಾವ್ಯ ವೇಳಾಪಟ್ಟಿ ಪ್ರಕಟ
ಬೆಂಗಳೂರು (ಜು,18) : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 545, 402 ನಾಗರಿಕ ಪೊಲೀಸ್ ಸಬ್ಇನ್ಸ್ಪೆಕ್ಟರ್(PSI) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳಿಗೆ ದಿನಾಂಕ ನಿಗದಿಪಡಿಸಿದೆ. 545 ಸಿವಿಲ್ ಪಿಎಸ್ಐ ಹುದ್ದೆಗಳ ನೇಮಕಾತಿಗೆ ದಿನಾಂಕ 10-10-2021 ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 402 ಸಿವಿಲ್ ಪಿಎಸ್ಐ ಹುದ್ದೆಗಳ ನೇಮಕಾತಿಗೆ ದಿನಾಂಕ 24-10-2021 ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪ್ರಸ್ತುತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ, ದೈಹಿಕ […]
ಜುಲೈ, 20 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ
ಬೆಂಗಳೂರು (ಜು, 18) : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಜು. 20ಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದೆ ಎಂದು ಪಿ.ಯು ಶಿಕ್ಷಣ ಇಲಾಖೆಯ ನಿರ್ದೇಶಕರ ಕಛೇರಿಯಿಂದ ಪ್ರಕಟಣೆ ಹೊರಬಿದ್ದಿದೆ. 2020-21ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸುವ ಸಲುವಾಗಿ ನೋಂದಣಿ ಸಂಖ್ಯೆ ನೀಡಲಾಗುತ್ತಿದೆ.ಫಲಿತಾಂಶ ಪ್ರಕಟಗೊಳಿಸುವ ವಿಚಾರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ […]
ಭಾಗಮಂಡಲ : ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭದಲ್ಲಿ ಉಚಿತ ಆಟೋ ರೀಕ್ಷಾ ಸೇವೆ
ಭಾಗಮಂಡಲ (ಜು, 17) : ಕೋವಿಡ್ ಸಂಕಷ್ಟ ಹಾಗೂ ಸವಾಲುಗಳ ನಡುವೆಯೂ ಕರ್ನಾಟಕ ಸರಕಾರವು ಅತ್ಯಂತ ಸುರಕ್ಷಿತ ಮುಂಜಾಗ್ರತಾ ಕ್ರಮ ಗಳೊಂದಿಗೆ ಈ ಬಾರಿಯ ಎಸ್. ಎಸ್. ಎಲ್. ಸಿ. ಪರೀಕ್ಷೆ ಯನ್ನು ಇದೇ ಜುಲೈ 19 ರಿಂದ ನಡೆಸಲು ತೀರ್ಮಾನಿಸಿದೆ. ಹಾಗೆಯೇ ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಸರ್ಕಾರದ ವತಿಯಿಂದ ಮಾಡಲಾಗಿದೆ. ಒಂದು ವೇಳೆ ದೂರದಿಂದ ಕಾಲ್ನಡಿಗೆಯಲ್ಲಿ ಬಂದು ಆಕಸ್ಮಿಕ ವಾಗಿ ಬಸ್ಸು […]