ಕುಂದಾಪುರ(ಮಾ.24): ಎಂಐಟಿ ಕುಂದಾಪುರದ ಎಂಬಿಎ ವಿದ್ಯಾರ್ಥಿಗಳು ಸಿದ್ಧಪಡಿಸಿದ “ಜನತಾ ಗ್ರೂಪ್ಗಾಗಿ ಸಾಮರ್ಥ್ಯ ಆಧಾರಿತ ಸಂದರ್ಶನಕ್ಕಾಗಿ ಪ್ರಶ್ನಾವಳಿ” ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಕೋಟಾದ ಜನತಾ ಗ್ರೂಪ್ನಲ್ಲಿ ನಡೆಯಿತು. ಜನತಾ ಗ್ರೂಪ್ ಕೋಟ ಇದರ ಸಿಇಒ, ಡಾ.ಧಾನೇಶ್ ಜೇವಾನಿ, ಸಿಎಫ್ಒ ಅಶ್ವಥ್ ಶೆಟ್ಟಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಎಂ.ಎಸ್. ಕೃಷ್ಣ, ಪ್ರಮೋಟರ್ ಗಳಾದ ಶ್ರೀ ಪ್ರಶಾಂತ್ ಕುಂದರ್, ಶ್ರೀ ರಕ್ಷಿತ್ ಕುಂದರ್, ಕಾರ್ಖಾನೆಯ ಉಸ್ತುವಾರಿ ಶ್ರೀ ಶ್ರೀನಿವಾಸ ಕುಂದರ್, ಮೂಡ್ಲಕಟ್ಟೆ ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನ್ ಹಾಗೂ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಡಾ|ಬಿ. ಬಿ ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ಗೆ ಭೇಟಿ
ಕುಂದಾಪುರ (ಮಾ.24):ಇಲ್ಲಿನ ಡಾ|ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಂಘ, ವಾಣಿಜ್ಯ ಸಂಘ ಹಾಗೂ ರೋಟರ್ಯಾಕ್ಟ್ ಕ್ಲಬ್ ನ ವಿದ್ಯಾರ್ಥಿಗಳು ಕೋಟೇಶ್ವರದ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ಗೆ ಕೌಶಲ್ಯ ಆಭಿವ್ರದ್ಧಿ ಹಾಗೂ ತರಬೇತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾ.24 ರಂದು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ನ ಮಾಲಕರಾದ ಶ್ರೀ ಚಂದ್ರಶೇಖರ್ ಹಾಗೂ ಸಾತ್ವಿಕ್ ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ […]
ವರಸಿದ್ಧಿ ವಿನಾಯಕ ಪಿ.ಯು ಕಾಲೇಜು ಕೆರಾಡಿ:ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಕೆರಾಡಿ(ಮಾ.20): ಇಲ್ಲಿನ ವರಸಿದ್ಧಿ ವಿನಾಯಕ ಪಿ.ಯು ಕಾಲೇಜಿನ 2021 – 2022 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಮಾ.17 ರಂದು ಕಾಲೇಜಿನ ಕ್ರಷ್ಣಮ್ಮ ಸಭಾಭವನದಲ್ಲಿ ಜರುಗಿತು. ಕಾಲೇಜಿನ ಸಂಸ್ಥಾಪಕರಾದ ಶ್ರೀ ಕೆರಾಡಿ ಚಂದ್ರಶೇಖರ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿಗಳು ಎರಡು ವರ್ಷದ ತಮ್ಮ ಕಾಲೇಜು ಜೀವನದ ಅನುಭವ ಅನಿಸಿಕೆಗಳನ್ನು ಹಂಚಿಕೊಂಡರು. ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಪ್ರಾಂಶುಪಾಲರಾದ […]
ಸಂತ ಮೇರಿ ಕಾಲೇಜು ಶಿರ್ವ: ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಶಿವ೯(ಮಾ.20) : ಸಂತ ಮೇರಿ ಕಾಲೇಜಿನ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಜ್ಞಾನ ವೈಜ್ಞಾನಿಕ ಮನೋಧರ್ಮ ಕ್ಕಾಗಿ ಯುವಜನತೆ ಎಂಬ ಧ್ಯೇಯದ ಅಡಿಯಲ್ಲಿ ಪ್ರೌಢ ಶಾಲಾ ವಿಭಾಗ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾನಗರ ಮುದರಂಗಡಿಯಲ್ಲಿ ನಡೆಯಿತು. ಪ್ರತಿಯೊಬ್ಬ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಥಿ೯ಯು ನಿಷ್ಠೆಯಿಂದ ಪಾಲ್ಗೊಂಡು ತನ್ನ ಮುಂದಿನ ಜೀವನದಲ್ಲಿ ನಾಯಕನಾಗಿ ಹೊರಹೊಮ್ಮಲು ಸಾಧ್ಯವೆಂದು ಕಾರ್ಯಕ್ರಮ ಉದ್ಘಾಟಿಸಿ ಮುದರಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷಶ್ರೀ ಶರತ್ ಶೆಟ್ಟಿ ಮಾತನಾಡಿದರು. ಬದುಕಿನಲ್ಲಿ […]
ರಾಜ್ಯ ಮಟ್ಟದ ಕ್ವಿಜ್: ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ
ಕುಂದಾಪುರ (ಮಾ.20): ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದಂದು ನಡೆಸಿದ ಜ್ಞಾನ ವಿಜ್ಞಾನ, ರಾಜ್ಯಮಟ್ಟದ ಕ್ವಿಜ್ನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ವಿಜ್ಞಾನ ವಿದ್ಯಾರ್ಥಿಗಳಾದ ಕುಮಾರಿ ಅನನ್ಯ ಹಾಗೂ ಕುಮಾರಿ.ನಾಗಶ್ರೇಯಾ ಪ್ರಥಮ ಸ್ಥಾನಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅವರಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಬಹುಮಾನ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕ ಕಾಳಾವರ ಶ್ರೀ ಉದಯ […]
ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ :ಶಿಕ್ಷಕಿ ಕೃಪಾ ರಾಜ್ಯಮಟ್ಟಕ್ಕೆ ಆಯ್ಕೆ
ಮಂಗಳೂರು (ಮಾ.16): ದಕ್ಷಿಣ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸೈಂಟ್ ಅಲೋಸಿಯಸ್ ಈಜುಕೊಳದಲ್ಲಿ ನಡೆದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಈಜುಸ್ಪರ್ಧೆಯಲ್ಲಿ ಭಾಗವಹಿಸಿದ ಸರಕಾರಿ ಪ್ರೌಢಶಾಲೆ ಮುಲ್ಲಕಾಡು ಇಲ್ಲಿನ ಹಿಂದಿ ಶಿಕ್ಷಕಿ ಕೃಪಾ ರವರು 200 ಮೀ. ಫ್ರೀ ಸ್ಟೈಲ್ ಚಿನ್ನದ ಪದಕ, 100 ಮೀ. ಬ್ರೆಸ್ಟ್ ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ, 50 ಮೀ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ ಪಡೆದು ರಾಜ್ಯಮಟ್ಟಕ್ಕೆ […]
ಇ ಸಿ ಆರ್ ಕಾಲೇಜು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ 2021-22 ಉದ್ಘಾಟನೆ
ಮಧುವನ( ಮಾ.15): ಇಲ್ಲಿನ ಇ ಸಿ ಆರ್ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ2021-22 ರ ಉದ್ಘಾಟನಾ ಸಮಾರಂಭವು ಮಾ. 14 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಿನಮಕ್ಕಿ, ಹರ್ಕೂರು ಕುಂದಾಪುರ ಇಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಲೂರು ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಶ್ರೀಮತಿ ಜಲಜ ಶೆಡ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ […]
ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ: ಬಹುಮಾನ ವಿತರಣೆ
ಕುಂದಾಪುರ (ಮಾ.15):ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2021-22 ನೇ ಸಾಲಿನ ವಿದ್ಯಾರ್ಥಿ ಕ್ಷೇಮ ನಿಧಿಯಿಂದ ಮಾ.14 ರಂದು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ 45 ವಿದ್ಯಾರ್ಥಿಗಳು ಈ ಪುರಸ್ಕಾರವನ್ನು ಪಡೆದಿರುತ್ತಾರೆ. ಹಿರಿಯ ಉಪನ್ಯಾಸಕರಾದ ಶ್ರೀ ಭುಜಂಗ ಶೆಟ್ಟಿ ಮತ್ತು ಶ್ರೀ ಚಂದ್ರಶೇಖರ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ಶಿವಾನಂದ ನಾಯಕ್ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ವನಿತಾ ನಾಯ್ಕ ವಂದಿಸಿದರು. […]
ಬೆಳಗಾವಿ: ರವಿಗೌಡ ಪಾಟೀಲ್ ರವರಿಗೆ ಡಾಕ್ಟರೇಟ್ ಪದವಿ
ಬೆಳಗಾವಿ (ಮಾ.10): ಇಲ್ಲಿನ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ & ರಿಸರ್ಚ್ ಇದರ ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿಗೌಡ ಪಾಟೀಲ್ ರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಇನ್ವೆಸ್ಟಿಗೇಶನ್ ಆಫ್ ಮ್ಯಾಕಾನಿಕಲ್ ಅಕೌಸ್ಟಿಕ್ ಆ್ಯಂಡ್ ತರ್ಮಲ್ ಬಿಹೇವಿಯರ್ ಆಫ್ ಸಿಲಿಕಾ ಆರೋಜೆಲ್ ಆ್ಯಂಡ್ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಫಿಲ್ಲಡ್ ವಿದ್ ಇಪೋಕ್ಸಿ ಕಂಪೋಸಿಟ್ ಮೆಟಿರಿಯಲ್ ಎನ್ನುವುದು ಮಹಾ ಪ್ರಬಂಧ ಮಂಡನೆಗೆ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು ದಾವಣಗೆರೆಯ ಬಾಪುಜಿ ಇನಸ್ಟಿಟ್ಯೂಟ್ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ: ವಿಶ್ವ ಮಹಿಳಾ ದಿನಾಚರಣೆ
ಕುಂದಾಪುರ:(ಮಾ.9): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ವೇದಿಕೆ ಹಾಗೂ ಜೇಸಿಐ ಕುಂದಾಪುರ ಸಿಟಿ ಇವರ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು . ಈ ಸಂದರ್ಭ ಲೇಖಕಿ ಸವಿತಾ ಮಾಧವ ಶಾಸ್ತ್ರೀ , ವಿದ್ಯಾರ್ಥಿ ಪ್ರತಿಭೆಗಳಾದ ಅಕ್ಷತಾ, ಸೌಜನ್ಯಾ ಹಾಗೂ ನವ್ಯಾ ಪಿ.ಯವರನ್ನು ಸನ್ಮಾನಿಸಲಾಯಿತು.ಕಾಲೇಜು ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಜೇಸಿ ಅಭಿಲಾಷ್ ಬಿ.ಎ., […]










