ಕುಂದಾಪುರ(ಫೆ.21): ಪಡುಗಡಲಿನಿಂದ ಕೃತಿಯಲ್ಲಿ ಕಡಲಿಗೆ ಸಂಬಂಧಿಸಿದಂತೆ ಜನಪದೀಯ ವಿಚಾರ, ವೈಚಾರಿಕ ಚಿಂತನೆ, ಸಂಸ್ಕೃತಿ-ಸಂಪ್ರದಾಯದ ವಿವರಣೆಗಳಿವೆ. ಖಾರ್ವಿಯವರು ಮೀನುಗಾರಿಕೆಯಲ್ಲಿ ಪಡೆದ ನೈಜ ಅನುಭವಗಳ ಮಿಶ್ರಣ ಈ ಕೃತಿಯಲ್ಲಿದೆ. ಮೀನುಗಾರಿಕೆ ಮತ್ತು ಕಡಲಿನ ಕುರಿತು ಇಷ್ಟು ಸಂಖ್ಯೆಯಲ್ಲಿ ಅಂಕಣಗಳನ್ನು ಬರೆದಿದ್ದು ಇದೇ ಮೊದಲು. ಮೀನುಗಾರಿಕಾ ಪದವಿಯಲ್ಲಿ ಪಠ್ಯವಾಗುವಷ್ಟು ಪ್ರಬುದ್ಧ ಮತ್ತು ಸಮೃದ್ಧ ಸಾಹಿತ್ಯ ಇದರಲ್ಲಿದೆ.” ಎಂದು ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ಹೆಚ್ ನಾಯ್ಕ್ ರವರು ಹೇಳಿದರು. ಇವರು ಕಿನ್ನಿಗೋಳಿಯ ಯುಗಪುರುಷ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಕವನ ಸ್ಪರ್ಧೆ – ನರೇಂದ್ರ ಎಸ್. ಗಂಗೊಳ್ಳಿ ದ್ವಿತೀಯ ಸ್ಥಾನ
ಗಂಗೊಳ್ಳಿ (ಫೆ. 13) : ಕುಂದ ಸಿರಿ ಬಳಗ ತನ್ನ ಜಾಲತಾಣಗಳ ಮೂಲಕ ಆಯೋಜಿಸಿದ್ದ ಕನ್ನಡದಲ್ಲಿ ಕವನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ರಚಿಸಿದ “ಮೃತ್ಯು” ಕವನವು ಬಹುಮಾನಕ್ಕೆ ಭಾಜನವಾಗಿದ್ದು 1000 ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಸಿ. ಎ. ಪರೀಕ್ಷೆಯಲ್ಲಿ ವಿದ್ಯಾಶ್ರೀ ಮಧ್ಯಸ್ಥ ಉತ್ತೀರ್ಣ
ಕುಂದಾಪುರ (ಫೆ. 13) : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಡಿಸೆಂಬರ್ 2021ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ತ್ರಾಸಿಯ ವಿದ್ಯಾಶ್ರೀ ಮಧ್ಯಸ್ಥ ಉತ್ತೀರ್ಣರಾಗಿದ್ದಾರೆ. ಇವರು ತ್ರಾಸಿಯ ಅನಂತ ಮಧ್ಯಸ್ಥ ಮತ್ತು ಪೂರ್ಣಿಮಾ ಮಧ್ಯಸ್ಥ ಇವರ ಪುತ್ರಿ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ.
ಪಡುಗಡಲಿನಿಂದ ಕೃತಿ ಲೋಕಾರ್ಪಣೆ
ಕುಂದಾಪುರ (ಫೆ. 13) : ಪಡುಗಡಲಿನಿಂದ ಕೃತಿಯಲ್ಲಿ ಕಡಲಿಗೆ ಸಂಬಂಧಿಸಿದಂತೆ ಜನಪದೀಯ ವಿಚಾರ, ವೈಚಾರಿಕ ಚಿಂತನೆ, ಸಂಸ್ಕೃತಿ-ಸಂಪ್ರದಾಯದ ವಿವರಣೆಗಳಿವೆ. ಖಾರ್ವಿಯವರು ಮೀನುಗಾರಿಕೆಯಲ್ಲಿ ಪಡೆದ ನೈಜ ಅನುಭವಗಳ ಮಿಶ್ರಣ ಈ ಕೃತಿಯಲ್ಲಿದೆ. ಮೀನುಗಾರಿಕೆ ಮತ್ತು ಕಡಲಿನ ಕುರಿತು ಇಷ್ಟು ಸಂಖ್ಯೆಯಲ್ಲಿ ಅಂಕಣಗಳನ್ನು ಬರೆದಿದ್ದು ಇದೇ ಮೊದಲು. ಮೀನುಗಾರಿಕಾ ಪದವಿಯಲ್ಲಿ ಪಠ್ಯವಾಗುವಷ್ಟು ಪ್ರಬುದ್ಧ ಮತ್ತು ಸಮೃದ್ಧ ಸಾಹಿತ್ಯ ಇದರಲ್ಲಿದೆ ಎಂದು ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ಹೆಚ್ ನಾಯ್ಕ್ ಅವರು ಹೇಳಿದರು. […]
ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಮಾರಣಕಟ್ಟೆ, (ಫೆಬ್ರವರಿ 13) : ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ 2021- 22 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಫೆ.12ರಂದು ಶ್ರೀ ಕ್ಷೇತ್ರ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರಗಿತು. ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಸದಾಶಿವ ಶೆಟ್ಟಿ ಯವರು ದೀಪ ಪ್ರಜ್ವಲಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು […]
ಡಾI ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ
ಕುಂದಾಪುರ (ಫೆ.10): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಇದೇ ಫೆ.12 ರಿಂದ 18 ರ ತನಕ ಶ್ರೀ ಕ್ಷೇತ್ರ ಮಾರಣಕಟ್ಟೆಯಲ್ಲಿ ನಡೆಯಲಿದೆ. ಫೆ.12 ರ ಬೆಳಿಗ್ಗೆ 11:00 ಕ್ಕೆ ಮಾರಣಕಟ್ಟೆಯ ಮಹಾಲಿಂಗೇಶ್ವರ ಸಭಾ ಭವನದಲ್ಲಿ ಶಿಬಿರದ ಉದ್ಘಾಟನೆ ನಡೆಯಲಿದ್ದು ,ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಕುಂದಾಪುರ ಇದರ ಅಧ್ಯಕ್ಷರು ಹಾಗೂ ಬೈಂದೂರಿನ ಶಾಸಕ ಶ್ರೀ. […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಿ.ಎ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ
ಕುಂದಾಪುರ(ಫೆ.10) ಕುಂದೇಶ್ವರ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿ.ಎ/ಸಿ.ಎಸ್/ಸಿ.ಎಮ್.ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆoಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಮತ್ತು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊoದಿಗೆ ತೇರ್ಗಡೆ ಹೊಂದುವುದರ ಮೂಲಕ ವಿಶೇಷ ಸಾಧನೆಗೈದಿರುತ್ತಾರೆ. ಡಿಸೆಂಬರ್ನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪುನೀತ್ ಶೆಟ್ಟಿ (449) ಅಂಕಗಳನ್ನು ಪಡೆಯುವುದರ ಮೂಲಕ ಸಿ.ಎ […]
ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಭೂ-ಯುವಸೇನಾ ತರಬೇತಿ ಶಿಬಿರ
ಶಿರ್ವ(ಫೆ.9): ಸಂತ ಮೇರಿ ಮಹಾವಿದ್ಯಾಲಯದ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ ಕೆ ಸಿಂಗ್ ಅವರ ಮಾರ್ಗದರ್ಶನದಲ್ಲಿ ಒಂದು ದಿನದ ಶಸ್ತ್ರ ತರಬೇತಿ ಶಿಬಿರ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೋನಿಸ್ ರವರು ಶಸ್ತ್ರಾಸ್ತ್ರವನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ಪ್ರತಿಯೊಬ್ಬ ಕ್ಯಾಡೆಟ್ಗಳು ಪ್ರತ್ಯಕ್ಷವಾಗಿ ಅನುಭವ ಪಡೆದುಕೊಳ್ಳುವುದು ಅತೀ ಅಗತ್ಯ ಮುಂದೆ ವಿವಿಧ ಉದ್ಯೋಗಾವಕಾಶಗಳಿಗೆ ಇದು ಸಹಕಾರಿ ಎಂದು […]
ಇ ಸಿ ಆರ್ ಕಾಲೇಜು: ಕ್ಯಾನ್ಸರ್ ಅರಿವು ಕಾರ್ಯಕ್ರಮ
ಮಧುವನ(ಫೆ.9): ಇಲ್ಲಿನ ಇ ಸಿ ಆರ್ ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಫೆ.4 ರಂದು “ಫ್ಲಾಶ್ ಮೊಬ್ – ಕ್ಯಾನ್ಸರ್ ಅರಿವು ಕಾರ್ಯಕ್ರಮ” ಆಯೋಜಿಸಲಾಗಿತ್ತು. ಕಾಲೇಜಿನಪ್ರಾಂಶುಪಾಲ ಶ್ರೀ ಆಕಾಶ್ ಸಾವಳ ಸಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ನೃತ್ಯ ರೂಪಕದ ಮೂಲಕ ಧೂಮಪಾನ, ಮಧ್ಯಪಾನ ಸೇವನೆಯಿಂದಾಗಿ ಕ್ಯಾನ್ಸರ್ಗೆ ಕಾರಣವಾಗುತ್ತದೆ ಹಾಗೆಯೇ ಇದರ ಸೇವನೆ ತ್ಯಜಿಸಿ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಬದುಕು ನಡೆಸುವ ಬಗೆಗೆ ಅರಿವು ಮೂಡಿಸಿದರು. ಕಾಲೇಜಿನ […]
ಕುಂದಾಪುರ ಸ.ಪ.ಪೂ ಕಾಲೇಜು: ವಿಶ್ವಾಸ ಕಿರಣ ಕಾರ್ಯಕ್ರಮ
ಕುಂದಾಪುರ (ಫೆ.6): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಆಂಗ್ಲ ಭಾಷಾ ವಿಷಯದ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ವಿಶ್ವಾಸ ಕಿರಣ ತರಗತಿಗಳನ್ನು ಕುಂದಾಪುರ ಸ.ಪ.ಪೂ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 101 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿದ್ದು, ಪ್ರತಿ ದಿನವೂ ಮೂರು ತಂಡಗಳನ್ನು ಮಾಡಿ ತರಗತಿಗಳನ್ನು ನಡೆಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಶ್ರೀ […]










