ಕುಂದಾಪುರ (ಅ, 15) : ಈ ಟೀನೇಜಿನ ಮೋಹಗಳು, ನಮ್ಮ ಗುರಿಯೆಡೆಗಿನ ದಾರಿ ತಪ್ಪಿಸಬಾರದು. ಕನಸು ಕಾಣುವುದಷ್ಟೆ ಅಲ್ಲ, ದಿನನಿತ್ಯ ಅದನ್ನೆ ಯೋಚಿಸಬೇಕು, ಅದನ್ನು ಸಾಧಿಸುವ ಮಾರ್ಗವೇ ನಿತ್ಯದ ತಪನ ಆಗಿರಬೇಕು. ಇಂತಹ ಪರಿಶ್ರಮವಿದ್ದರೆ ಮಹತ್ವದ ಕನಸುಗಳು ನನಸಾಗುತ್ತದೆ ಎಂದು ಪತ್ರಕರ್ತ, ಸಾಂಸ್ಕೃತಿಕ ಚಿಂತಕ ವಸಂತ್ ಗಿಳಿಯಾರ್ ಹೇಳಿದರು. ಅವರು ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇಲ್ಲಿನ ಪ್ರಥಮ ವರ್ಷದ ಪದವಿ ಪ್ರವೇಶಾರ್ಥಿಗಳಿಗೆ ಆಯೋಜಿಸಿದ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಶಾರದಾ ಪೂಜೆ
ಕುಂದಾಪುರ (ಅ, 11) : ಇಲ್ಲಿನ ಡಾ|ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನವರಾತ್ರಿಯ ಆಚರಣೆಯ ಭಾಗವಾಗಿ ಶಾರದಾ ಪೂಜೆ ನೆರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಮಾತನಾಡಿ ನವರಾತ್ರಿಯ ಶುಭಾಶಯ ಕೋರಿ ಸರ್ವರಿಗೂ ಶಾರದಾದೇವಿಯು ಆಯುರಾರೋಗ್ಯ ನೀಡಿ ಕಾಪಾಡಲಿ ಎಂದರು. ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಪಾಲಕ ಮಹೇಶ್ ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಣ […]
ವರಸಿದ್ಧಿ ವಿನಾಯಕ ಕಾಲೇಜು ಕೆರಾಡಿ : ಸಿಎ ಮತ್ತು ಸಿ.ಎಸ್. ಕೋರ್ಸ್ ಗಳ ಕುರಿತು ಮಾಹಿತಿ ಕಾರ್ಯ
ವಂಡ್ಸೆ (ಅ, 12) : ವರಸಿದ್ಧಿ ವಿನಾಯಕ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು ಕೆರಾಡಿ ಇದರವಾಣಿಜ್ಯ ವಿಭಾಗದ ವತಿಯಿಂದ ಮಾಹಿತಿ ಕಾರ್ಯಾಗಾರ ಏರ್ಪಡಿಸಿದ್ದು, ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿ ಎಸ್ ಕೋರ್ಸ್ ಗಳ ಅಧ್ಯಯನ, ಪರೀಕ್ಷಾ ಸಿದ್ಧತೆ ಹಾಗೂ ಅದಕ್ಕಿರುವ ವಿಪುಲ ಉದ್ಯೋಗವಕಾಶಗಳ ಕುರಿತು ಚಾರ್ಟೆಡ್ ಅಕೌಂಟೆಂಟ್ ಗುರುರಾಜ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಕುಮಾರ್ ಆರ್ ವಹಿಸಿದ್ದು, […]
ಬಿಲ್ಲವ ಯುವ ವಾಹಿನಿ ಮತ್ತು ಗಾಂಧಿ ವಿಚಾರ ವೇದಿಕೆ ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣ ಗುರು-ಮಹಾತ್ಮಾ ಗಾಂಧಿ ಸಮನ್ವಯತೆ ವಿಚಾರ ಗೋಷ್ಠಿ
ಮೂಡುಬಿದಿರೆ(ಅ,10):ಬಿಲ್ಲವ ಯುವ ವಾಹಿನಿ ಮತ್ತು ಗಾಂಧಿ ವಿಚಾರ ವೇದಿಕೆ ಮೂಡುಬಿದಿರೆ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು-ಮಹಾತ್ಮಾ ಗಾಂಧಿ ಸಮನ್ವಯತೆಯ ಕುರಿತಾದ ವಿಚಾರ ಗೋಷ್ಠಿ ಅಕ್ಟೋಬರ್ ,10ರಂದು ಜರುಗಿತು. ಈ ವಿಚಾರಗೋಷ್ಠಿಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಾಹುಬಲಿ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು. ವಿಚಾರ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿಂತಕ ಶ್ರೀ ಅರವಿಂದ ಚೋಕ್ಕಾಡಿ ಮಹಾತ್ಮಾ ಗಾಂಧಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಭೇಟಿಯಾದ ಕ್ಷಣದ ಸ್ವಾರಸ್ಯಕರ ಘಟನೆಗಳನ್ನು ತಿಳಿಸಿದರು.ಮಾರ್ಚ್,12 […]
ಡಾ.ಬಿ.ಬಿ. ಹೆಗ್ಡೆ ಕಾಲೇಜು: ಎನ್. ಸಿ.ಸಿ ಕೆಡೆಟ್ ಗಳಿಂದ ಫೈರಿಂಗ್ ಕ್ಯಾಂಪ್ ನಲ್ಲಿ ಉತ್ತಮ ಪ್ರದರ್ಶನ
ಕಾರ್ಕಳ(ಅ,10): ಉಡುಪಿ ಜಿಲ್ಲೆಯ ಕಾರ್ಕಳದ ನಕ್ರೆಯಲ್ಲಿ ನಡೆದ ಎನ್.ಸಿ.ಸಿ ಫೈರಿಂಗ್ ಕ್ಯಾಂಪ್ನಲ್ಲಿ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್. ಸಿ.ಸಿ ಕೆಡೆಟ್ಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಉತ್ತಮ ಫೈರಿಂಗ್ ನಡೆಸಿದ ಏಳು ವಿದ್ಯಾರ್ಥಿಗಳನ್ನು ಕಾಲೇಜಿನ ಬೆಸ್ಟ್ ಫೈರಿಂಗ್ ಕೆಡೆಟ್ ಗಳೆಂದು ಆಯ್ಕೆ ಮಾಡಲಾಗಿದೆ. ಕಾಲೇಜಿನ ಎನ್ಸಿಸಿ ಅಧಿಕಾರಿ ಶಿವರಾಜ್ ಸಿ. ಅರೆಹೊಳೆ ಈ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದು, ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ,ಉಪಪ್ರಾಂಶುಪಾಲ ಶ್ರೀ ಚೇತನ್ ಶೆಟ್ಟಿ ಕೋವಾಡಿ ಹಾಗೂ ಕಾಲೇಜಿನ […]
ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಂದ ಚೈತನ್ಯ ವೃದ್ಧಾಶ್ರಮಕ್ಕೆ ವಾಟರ್ ಪ್ಯೂರಿಫೈರ್ ಕೊಡುಗೆ
ಕುಂದಾಪುರ (ಅ,7): ಇಂದಿನ ವಿದ್ಯಮಾನದಲ್ಲಿ ಇದ್ದ ಹಣವನ್ನು ಸದುಪಯೋಗ ಮಾಡಿಕೊಳ್ಳುದಕ್ಕಿಂತ ದುರುಪಯೋಗ ಮಾಡುವುದೇ ಹೆಚ್ಚು. ದಿನದಿಂದ ದಿನಕ್ಕೆ ವೃದ್ಧಾಶ್ರಮಗಳೂ ಹೆಚ್ಚುತ್ತಲೇ ಇವೆ.ಇದರಿಂದಾಗಿ ಅಲ್ಲಿನ ಚಿಕ್ಕ ಚಿಕ್ಕ ಸಮಸ್ಯೆಗೆ ಪರಿಹಾರಗಳು ದೊರಕುತ್ತಿಲ್ಲ.ಇದನ್ನರಿತ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳು ಚೈತನ್ಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ತಮ್ಮ ಕೈಲಾದ ಸಹಾಯವನ್ನು ಮಾಡಿದರು. ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ದಿನ ಹಾಗೂ ಎತ್ನಿಕ್ ಡೇಯಲ್ಲಿ ವಿಜೇತರಾಗಿ ಪಡೆದ ಹಣದಿಂದ ಚೈತನ್ಯ ವೃದ್ಧಾಶ್ರಮಕ್ಕೆ ಸುಮಾರು ಐದು […]
ಡಾ. ಬಿ.ಬಿ. ಕಾಲೇಜು ಕುಂದಾಪುರ: ಎನ್.ಸಿ.ಸಿ ಕೆಡೇಟ್ಸ್ಗಳಿಗೆ ಶಸ್ತ್ರಾಭ್ಯಾಸ ತರಬೇತಿ
ಕುಂದಾಪುರ (ಅ,07): ಇಲ್ಲಿನ ಡಾ. ಬಿ.ಬಿ. ಕಾಲೇಜಿನ ಎನ್.ಸಿ.ಸಿ ಕೆಡೇಟ್ಸ್ಗಳಿಗೆ ಶಸ್ತ್ರಾಭ್ಯಾಸ ತರಬೇತಿಯನ್ನು ತರಬೇತುದಾರರಾದ ಬಾಲ್ರಾಜ್ ಮತ್ತು ಮಹಿಂದ್ರಾ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ, ಎನ್ಸಿಸಿ ಅಧಿಕಾರಿ ಶಿವರಾಜ್ ಸಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಬೋಧಕ ಮತ್ತು ಬೋಧಕೇತರು, ಎನ್ಸಿಸಿ ಕೆಡೇಟ್ಸ್ಗಳು ಉಪಸ್ಥಿತರಿದ್ದರು.
ಸುಪ್ರಭಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ :ಸಿಇಟಿ/ನೀಟ್/ಜೆಇಇ ತರಬೇತಿ ಸಂಸ್ಥೆ ಉದ್ಘಾಟನೆ (ಸುಜ್ಞಾನ್ ಎಜುಕೇಶನ ಟ್ರಸ್ಟ್ ಮೂಡುಬಿದ್ರಿ ಸಾರಥ್ಯದಲ್ಲಿ)
ಕುಂದಾಪುರ (ಅ,07): ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಸಂಪೂರ್ಣ ಆಡಳಿತದ ಚುಕ್ಕಾಣಿ ಹಿಡಿದು ಗುಣಮಟ್ಟದ ಶಿಕ್ಷಕರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಆತ್ಯುತ್ತಮ ಶಿಕ್ಷಣ ಒದಗಿಸುತ್ತಿರುವ, ಶೈಕ್ಷಣಿಕ ಕ್ಷೇತ್ರದಲ್ಲಿ 30 ವರ್ಷಗಳ ಸುಧೀರ್ಘ ಅನುಭವವುಳ್ಳ ಸ್ವತಃ ಭೌತಶಾಸ್ತ್ರ ವಿಷಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಡಾ. ರಮೇಶ್ ಶೆಟ್ಟಿ ಯವರು ಅಧ್ಯಕ್ಷರಾಗಿರುವ, ಕುಂದಾಪುರದಲ್ಲಿ ಶಿಕ್ಷಪ್ರಭಾ ಆಕಾಡೆಮಿಯ ಮೂಲಕ ಸಿಎ ಮತ್ತು ಸಿಎಸ್ ಪರೀಕ್ಷೆಗೆ ರಾಷ್ಟ್ರೀಯ ಮಟ್ಟದಲ್ಲಿ ರ್ಯಾಂಕ್ಗಳನ್ನು […]
ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ : ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಭೇಟಿ
ಕುಂದಾಪುರ (ಅ, 06) : ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ರವರು ಅಕ್ಟೋಬರ್,06 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವರು ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪರಿಚಯ ದೃಶ್ಯಿಕೆಯನ್ನು ಬಿಡುಗಡೆಗೊಳಿಸಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಬೈಂದೂರಿನ ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಉಪನ್ಯಾಸಕರಾದ […]
ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಹಾಲಾಡಿ – ಶಂಕರನಾರಾಯಣ ಘಟಕ : ನಾಡೋಜ ಡಾ. ಜಿ. ಶಂಕರ್ ರವರ 66ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆ
ಹಾಲಾಡಿ (ಅ, 05) : ನಾಡೋಜ ಡಾ. ಜಿ. ಶಂಕರ್ ರವರ 66ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಇದರ ಹಾಲಾಡಿ-ಶಂಕರನಾರಾಯಣ ಘಟಕದ ವತಿಯಿಂದ ಡಾ.ಜಿ.ಶಂಕರ್ ರವರ 66ನೇ ವರ್ಷದ ಹುಟ್ಟುಹಬ್ಬವನ್ನು ವಾಗ್ಜ್ಯೋತಿ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ ಅಧ್ಯಕ್ಷತೆಯನ್ನು ಡಾ.ಜಿ.ಶಂಕರ್ ರವರ ಸಹೋದರರಾದ ಶ್ರೀ ಶಿವ ಜಿ. […]










