ಕೋಟೇಶ್ವರ (ನ,22): ಸುಣ್ಣಾರಿಯ ಎಕ್ಸಲೆಂಟ್ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಾಗಾರವನ್ನು ನ,19 ರಂದು ಹಮ್ಮಿಕೊಳ್ಳಲಾಯಿತು. ಕುಂದಾಪುರದ ಡಿವೈಎಸ್ಪಿ ಕೆ. ಶ್ರೀಕಾಂತ್ ರವರು ಕಾರ್ಯಾಗಾರವನ್ನು ಉದ್ಘಾಟಿಸಿ ,ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಾನೂನು ಅರಿವು ಮೂಡಿಸುವುದರ ಬಗ್ಗೆ ವಿವರಿಸುತ್ತಾ ಇಂದಿನ ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಕ್ಕೆ ಒಳಪಡುವ ಪ್ರಕರಣ ಹೆಚ್ಚಾಗಿ ಕಾಣುತ್ತಿದ್ದೇವೆ. ಇದರಿಂದ ತಮ್ಮ ಇಡೀ ವಿದ್ಯಾರ್ಥಿ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಹಾಗೂ ಮೊಬೈಲ್ ಬಳಕೆ, ಫೇಸ್ಟುಕ್, ಇನ್ಸ್ಟಾಗ್ರಾಂ, ವಾಟ್ಸಾಪ್ ಗಳನ್ನು ತುಂಬಾ ಜಾಗ್ರತೆಯಿಂದ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಉಚ್ಚಿಲ ಮೊಗವೀರ ಭವನ : ಉದ್ಘಾಟನಾ ಸಮಾರಂಭ
ಉಚ್ಚಿಲ(ನ,21): ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ, ಎಂ. ಆರ್.ಪಿ.ಎಲ್ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ನಿರ್ಮಾಣಗೊಂಡ “ಮೊಗವೀರ ಭವನದ ಉದ್ಘಾಟನಾ ಸಮಾರಂಭ” ನ,21 ರಂದು ಬಹಳ ಅದ್ದೂರಿಯಾಗಿ ನಡೆಯಿತು. ಉಡುಪಿ ಶಾಸಕ ಶ್ರೀ ಕೆ ರಘುಪತಿ ಭಟ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕರಾದ ನಾಡೋಜ ಜಿ. ಶಂಕರ್,ಶ್ರೀಮತಿ ಶಾಲಿನಿ ಜಿ . […]
ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಸಮವಸ್ತ್ರ ವಿತರಣೆ
ಗಂಗೊಳ್ಳಿ(ನ ,20): ಇಲ್ಲಿನ ಸರಸ್ವತಿ ವಿದ್ಯಾಲಯ ಪ್ರೌಢಶಾಲಾ ಕನ್ನಡ ಮಾಧ್ಯಮ ವಿಭಾಗದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಇಲ್ಲಿನ ಅಧ್ಯಾಪಕರ ಆರ್ಥಿಕ ಸಹಾಯದೊಂದಿಗೆ ಪ್ರತಿವರ್ಷದಂತೆ ಈ ಬಾರಿ ಕೂಡ ಉಚಿತವಾಗಿ ಸಮವಸ್ತ್ರಗಳನ್ನು ನೀಡಲಾಯಿತು. ಜಿ. ಎಸ್. ವಿ ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್. ಗಣೇಶ್ ಕಾಮತ್ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಉಪಪ್ರಾಂಶುಪಾಲರಾದ ಉಮೇಶ್ ಕರ್ಣಿಕ್ ಮತ್ತು ಅಧ್ಯಾಪಕರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಆರಂಭದ ದಿನಗಳಲ್ಲಿ ಇಲ್ಲಿನ […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಿಎಸ್ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ
ಕುಂದಾಪುರ(ನ,20): ಇಲ್ಲಿನ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ ಸಿಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ (ಸ್ಪೇಸ್) ಇದರ ವಿದ್ಯಾರ್ಥಿಗಳು ಇನ್ಸಿಟ್ಯೂಟ್ ಆಫ್ ಕಂಪೆನಿ ಸಕ್ರೆಟರಿ ಆಫ್ ಇಂಡಿಯಾ ನವೆಂಬರ್ 2021 ರಲ್ಲಿ ನಡೆಸಿದ ಸಿಎಸ್ ಫೌಂಡೇಶನ್ ಸಿಎಸ್ಇಇಟಿ ಪರೀಕ್ಷೆ ಬರೆದ 38 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ತೇರ್ಗಡೆ ಹೊಂದುವುದರ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕಾರ್ತಿಕ್ […]
ಡಾ.ಬಿ.ಬಿ.ಹೆಗ್ಡೆ ಕಾಲೇಜು: ನಮ್ಮ ಭೂಮಿ ಸಂಸ್ಥೆಯ ಪರಿಚಯ ಕಾರ್ಯಕ್ರಮ
ಕುಂದಾಪುರ,(ನ,18): ಇಲ್ಲಿನ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ಹಾಗೂ ಸೆಂಟರ್ ಫಾರ್ ಕಮ್ಯುನಿಟಿ ಸರ್ವಿಸ್ ಘಟಕಗಳ ಆಶ್ರಯದಲ್ಲಿ ತಲ್ಲೂರು – ಕನ್ಯಾನ ದ ನಮ್ಮ ಭೂಮಿ (The Concerned for Working Children) ಸ್ವಯಂ ಸೇವಾ ಸಂಸ್ಥೆಯ ಕುರಿತಾದ ಪರಿಚಯ ಕಾರ್ಯಕ್ರಮವನ್ನು ನ,17 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ನಮ್ಮ ಭೂಮಿ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಕ್ರಪಾ ಎಮ್.ಎಮ್ ಸಂಸ್ಥೆಯ ಹಿನ್ನೆಲೆ, ಧ್ಯೇಯೊದ್ದೇಶಗಳು ಹಾಗೂ ಕಾರ್ಯಕ್ರಮಗಳ ಕುರಿತಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್ ಹಾಗೂ […]
ಗಂಗೊಳ್ಳಿಯ ಶ್ಯಾಮ್ ಗೆ ಕರಾಟೆಯಲ್ಲಿ ಬೆಳ್ಳಿ ಪದಕ
ಗಂಗೊಳ್ಳಿ (ನ, 17) : ಶೋರಿನ್ ರಿಯೂ ಕರಾಟೆ ಎಂಡ್ ಕೊಬುಡೊ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ನಡೆದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ ಫೈಟ್ ವಿದ್ ಗೋಲ್ಡನ್ ಬ್ರೌನ್ ವಿಭಾಗದಲ್ಲಿ ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕವನ್ನು ಪಡೆದಿರುತ್ತಾನೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿರುವ […]
ಪುತ್ತೂರು : ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ – ಮಾಹಿತಿ ಕಾರ್ಯಾಗಾರ
ಪುತ್ತೂರು (ನ, 17) : ಇಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸಿ ಕೆಲಸಕ್ಕಾಗಿ ಹುಡುಕಾಡುವ ಬದಲಿಗೆ ಇತರರಿಗೆ ಉದ್ಯೋಗವನ್ನು ನೀಡುವ ಉದ್ಯಮವನ್ನು ನಿರ್ಮಾಣ ಮಾಡಿ ಸ್ವತಂತ್ರ ಬದುಕನ್ನು ರೂಪಿಸಿಕೊಳ್ಳಿ ಎಂದು ಖಾದಿ ಮತ್ತು ಗ್ರಾಮೋದ್ಯೋಗ ತರಬೇತಿ ಕೇಂದ್ರ ಬೆಂಗಳೂರು ಇದರ ನಿರ್ದೆಶಕ ಡಾ.ಮೋಹನ್ ರಾವ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಉದ್ಯಮಶೀಲತೆ ಅಭಿವೃದ್ಧಿ ಪ್ರಕೋಷ್ಟದ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. […]
ಇ ಸಿ ಆರ್ ಕಾಲೇಜು :ಅಭಿವಿನ್ಯಾಸ ಕಾರ್ಯಕ್ರಮ
ಮಧುವನ(ನ,17): ಇಲ್ಲಿನ ಇ ಸಿ ಆರ್ ಕಾಲೇಜು ಸಭಾಂಗಣದಲ್ಲಿ ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳಿಗೆ “ಓರಿಯಂಟೇಶನ್” ಕಾರ್ಯಕ್ರಮವನ್ನು ನ,17 ರಂದು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಧು ಟಿ ಭಾಸ್ಕರನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನುದ್ದೇಶಿ ಭವಿಷ್ಯದ ಉದ್ದೇಶಿತ ಯೋಜನೆಗಳನ್ನು ವಿವರಿಸಿದರು. ಆಡಳಿತಾಧಿಕಾರಿಗಳಾದ ಶ್ರೀ ಜೋಬಿನ್ ಜೋಸೆಫ್ ಕಾಲೇಜಿನ ನೀತಿ ನಿಯಮಗಳನ್ನು ತಿಳಿಸಿದರು. ಕಾಲೇಜಿನ ಪ್ರಾಂಶಪಾಲರಾದ ಶ್ರೀ ಆಕಾಶ್ ಸಾವಳಸಂಗ್ ಕಾಲೇಜಿನಲ್ಲಿ ನಡೆಯುವ ಪಠ್ಯ, ಪಠ್ಯೇತರ ಹಾಗೂ ಇತರೇ ಪ್ರೋತ್ಸಾಹಕರ ಚಟುವಟಿಕೆಗಳ […]
ತಲ್ಲೂರು ಸರಕಾರಿ ಪ್ರೌಢ ಶಾಲೆ: ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮ
ತಲ್ಲೂರು(ನ,16): ಪ್ರತಿಷ್ಠಿತ ಇನ್ಪೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಯುವಾ ಬ್ರಿಗೇಡ್ ನ ಬೃಹತ್ ಯೋಜನೆಯಾದ ಕೈ ಹಿಡಿದು ನಡೆಸೆನ್ನನು ಎನ್ನುವ ಯೋಜನೆಯಡಿ ರಾಜ್ಯದ 50 ಆಯ್ದ ಸರಕಾರಿ ಶಾಲೆಯ ಮಕ್ಕಳಿಗೆ ಕನ್ನಡದಲ್ಲೇ ಗ್ರಹಿಕೆ ಆಧಾರಿತ ಶಿಕ್ಷಣ ನೀಡುವ ಸಲುವಾಗಿ ಟ್ಯಾಬ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ಪ್ರಯುಕ್ತ ಯುವಾ ಬ್ರಿಗೇಡ್ ಕುಂದಾಪುರದ ವತಿಯಿಂದ ಕುಂದಾಪುರ ತಾಲ್ಲೂಕಿನ ತಲ್ಲೂರು ಸರಕಾರಿ ಪ್ರೌಢ ಶಾಲೆಯ 30 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮುಖ್ಯ […]
ಸ್ಮಾರ್ಟ್ ಕ್ರೀಯೇಷನ್ಸ್ ಎಜುಕೇಶನ್ ಹೈಕಾಡಿ:ನ,18. ರಂದು ಅಂಚೆ ಕಾರ್ಡು ಪ್ರದರ್ಶನ, ಬಹುಮಾನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ
ಹಾಲಾಡಿ(ನ,17): ಸ್ಮಾರ್ಟ್ ಕ್ರೀಯೇಷನ್ಸ್ ಎಜುಕೇಶನ್ ಹೈಕಾಡಿ ಇವರ ವತಿಯಿಂದ ಅಕ್ಟೋಬರ್ 2 ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ ಅಂಚೆ ಕಾರ್ಡಿನಲ್ಲಿ ಗಾಂಧೀಜಿ ಚಿತ್ರ ಬಿಡಿಸುವ ಸ್ಪರ್ಧೆ- ರಾಜ್ಯಮಟ್ಟದ ಅಂಚೆ ಕುಂಚ ಸ್ಪರ್ಧೆ ‘ ನಮ್ಮ ಬಾಪೂಜಿ’ ಕಾರ್ಯಕ್ರಮದ ವಿವಿಧ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಮತ್ತು ಅಂಚೆ ಕಾರ್ಡು ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ನವೆಂಬರ್ 18 ರ ಗುರುವಾರ ಮಧ್ಯಾಹ್ನ 2.00 […]










