ಭೂಮಿ ತಾಯಿ ಸುತ್ತಲೂ ಹಸಿರನ್ನು ಹೊದಿಕೆ ಮಾಡಿಕೊಂಡು ಕಣ್ಣ್ಮನ ನಾಚುವಂತೆ ಮನಸ್ಸಿಗೆ ಮುದ ನೀಡುತ, ಒಂದು ಕಡೆ ನೋಡಿದರೆ ಶ್ರೀ ಮೂಕಾಂಬಿಕಾ ಅಭಯಾರಣ್ಯ, ಮಧ್ಯದಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಹಲವು ಸಾವಿರಾರು ಪ್ರಭೇದದ ಔಷಧಿ ಸಸ್ಯರಾಶಿಯಿಂದ ಕಂಗೊಳಿಸುವ ಸಸ್ಯಕಾಶಿ, ಮತ್ತೊಂದು ಕಡೆಯಿಂದ ನೋಡಿದರೆ ಕೊಡಚಾದ್ರಿ ಬೆಟ್ಟದ ತುತ್ತತುದಿಯ ಮಧ್ಯದಿಂದ ರುದ್ರ ರಮಣೀಯವಾಗಿ ಅಂಕುಡೊಂಕಾಗಿ ಹಾಲ್ನೊರೆಯಂತೆ ಜುಳು ಜುಳು ಶಬ್ದನಾದದಂತೆ ಹರಿಯುವ ನೀರನಲ್ಲಿ ಲಕ್ಷಾಂತರ ವಿವಿಧ ಬಣ್ಣ,ಪ್ರಭೇದದ ಜಲಚರಗಳ ಬದುಕಿಗೆ ಆಹಾರ […]
Month: May 2021
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿಎಸ್ ಪರೀಕ್ಷೆಯಲ್ಲಿ ಶೇ100 ಫಲಿತಾಂಶ
ಕುಂದಾಪುರ (ಮೇ, 20): ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ,ಸಿಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ (ಸ್ಪೇಸ್) ಯ ವಿದ್ಯಾರ್ಥಿಗಳು ಇನ್ಸಿಟ್ಯೂಟ್ ಆಫ್ ಕಂಪೆನಿ ಸಕ್ರೆಟರಿ ಆಫ್ ಇಂಡಿಯಾ ಮೇ 2021 ರಲ್ಲಿ ನಡೆಸಿದ ಸಿಎಸ್ ಫೌಂಡೇಶನ್ ಸಿಎಸ್ಇಇಟಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಪಡೆದು ಸಾಧನೆಗೈದಿದ್ದಾರೆ. ಪರೀಕ್ಷೆ ಬರೆದ 5 ವಿದ್ಯಾರ್ಥಿಗಳಾದ ದಿಶಾ (131), ಜಯಲಕ್ಷ್ಮಿ (126), ದೀಪಿಕಾ (108), […]
ಬಡ ಕುಟುಂಬದ ಮಹಿಳೆಗೆ ನೆರವಾಗಲು ಮಂದಾದ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ : ಸುಸಜ್ಜಿತ ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಂಕಲ್ಪ
ಕುಂದಾಪುರ (ಮೇ, 20) : ಮೂರ್ನಾಲ್ಕು ದಿನದ ಹಿಂದೆ ತೌಖ್ತೆ ಚಂಡಮಾರುತದ ಪರಿಣಾಮ ಕರಾವಳಿ ಭಾಗದಪ್ಪಳಿಸಿದ ಭಾರಿ ಗಾಳಿ ಮಳೆಯ ಕಂಡು ಬೆಪ್ಪಾಗಿ ಬೆಚ್ಚಗೆ ಮನೆಯೊಳಗೇ ನಾವು ನೀವು ಕುಳಿತಿದ್ದಂತು ನಿಜ. ಆದರೆ ಅದೇ ಪರಿಸ್ಥಿತಿಯಲ್ಲಿ ವ್ಯವಸ್ಥಿತ ಸೂರಿಲ್ಲದೆ ಸೋರುವ ಹಟ್ಟಿಯೊಳಗಡೆ ಸುರಿವ ಮಳೆಗೆ, ಕೊರೆವ ಚಳಿಗೆ ಮೈಯೊಡ್ಡಿ ಗಡಗಡನೆ ನಡುಗುತ್ತಾ ಆ ಕರಾಳ ರಾತ್ರಿಯನ್ನು ಗೋಳಿನಲಿ ಕಳೆದ ಈ ಗೋವುಗಳ ಸ್ಥಿತಿಯಂತೂ ನಾವು ಕಣ್ಣಾರೆ ಕಾಣುವುದಕ್ಕಿಂತಲೂ ಬಹಳ ಶೋಚನೀಯವಾಗಿದ್ದಿದಂತು […]
ನಶಿಸಿ ಹೊಗುತ್ತಿರುವ ಪ್ರಕ್ರತಿಯ ಜೊತೆಗೆ ನರಳುತ್ತಿರುವ ಮಾನವ
ಪ್ರಕೃತಿ ಮಾನವ ಸೇರಿದಂತೆ ಇಡೀ ಜೀವಿ ಸಂಕುಲಕ್ಕೆ ದೇವರು ನೀಡಿಡ ಮಹತ್ವ ಪೂರ್ಣವಾದ ಕೊಡುಗೆ.ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಮನುಜ ತನ್ನ ಸ್ವಾರ್ಥ ಸಾಧನೆಗೆ ಪ್ರಕೃತಿಯನ್ನು ನಾಶ ಮಾಡುತ್ತಾಹೋಗುತ್ತಿದ್ದಾನೆ. ದುರ್ದೈವದ ಸಂಗತಿ ಎನೆಂದರೆ ಪ್ರಕೃತಿ ನಾಶಕ್ಕೆ ಪ್ರತಿಯಾಗಿ ದೊಡ್ಡ ಬೆಲೆ ತೆತ್ತ ಬೇಕಂತ ಮನುಜನಿಗೆ ಗೊತ್ತೇ ಇಲ್ಲ. ಪ್ರಕೃತಿಯಿಂದ ನಾವೋ .. ಇಲ್ಲ ನಮ್ಮಿಂದ ಪ್ರಕ್ರತಿಯೋ, ಇದನ್ನ ಅರ್ಥ ಮಾಡಿಕೊಳ್ಳುವ ವೇಳೆಗೆ ಇಡೀ ಮಾನವ ಸಂಕೂಲವೆ ನಶಿಸಿ ಹೋಗುವ ಸ್ಥಿತಿಗೆ […]
ಕರೋನಾ ಸೋಂಕಿತರಿಗೆ ಪ್ರಾಣವಾಯು ಪೂರೈಸಲು ಮುಂದಾದ ಕರುನಾಡ ಕರ್ಣ ಡಾ. ಜಿ. ಶಂಕರ್
ಕರಾವಳಿ, ಮಲೆನಾಡು ,ಉತ್ತರ ಕರ್ನಾಟಕ ಹೀಗೆ ರಾಜ್ಯದ ಉದ್ದಗಲಕ್ಕೂ ಡಾ.ಜಿ.ಶಂಕರ್ ರವರ ಹೆಸರು ಚಿರಪರಿಚಿತ. ಶಿಕ್ಷಣ, ಆರೋಗ್ಯ ಸುರಕ್ಷಾ, ರಕ್ತದಾನ ಶಿಬಿರ, ಅಶಕ್ತ ಕಲಾವಿದರಿಗೆ ನೆರವು, ಬಡ ಹಾಗೂ ದುರ್ಬಲ ವರ್ಗದವರಿಗೆ ಆರ್ಥಿಕ ನೆರವು ಹೀಗೆ ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡು ಹಲವು ಜನತೆಯ ಬದುಕಿಗೆ ಬೆಳಕಾದವರುನಾಡೋಜಾ ಡಾ.ಜಿ.ಶಂಕರ್. ಕಂಡುಕೇಳರಿಯದ ಕರೋನಾ ನಮ್ಮ ರಾಜ್ಯವನ್ನು ಪ್ರವೇಶಿಸಿದಾಗ ಅದರ ತೀವ್ರತೆಯನ್ನು ಗಮನಿಸಿದ ಡಾ.ಜಿ.ಶಂಕರ್ ರವರು ಯುವಕರ ತಂಡವನ್ನು […]
ನನ್ನ ಅಜ್ಜಿ ಮನೆ!
ಬ್ರಹ್ಮಾವರ ಸಮೀಪದ ಕುಂಜಾಲು ಎಂಬ ಪುಟ್ಟ ಊರಿನಲ್ಲಿದೆ ನನ್ನ ಅಜ್ಜಿಮನೆ. ಪರೀಕ್ಷೆ ಮಗಿದು ಶಾಲೆಯ ರಜೆಯ ಸಮಯದಲ್ಲಿ ಅಜ್ಜಿಯ ಮನೆಗೆ ಹೋಗುವುದು ಆ ದಿನಗಳಲ್ಲಿನ ವಾಡಿಕೆ. ಅಜ್ಜಿಯ ಮನೆಗೆ ಹೋಗೋದೆಂದರೆ ಒಂದು ರೀತಿ ಪ್ರವಾಸಕ್ಕೆ ತೆರಳಿದ ಅನುಭವ. ಅತ್ಯಂತ ಪುರಾತನವಾದ ಅದರಲ್ಲೂ ವಿಶೇಷವಾಗಿ ಮಣ್ಣಿನಲ್ಲಿ ನಿರ್ಮಿಸಿದ ಇಂಗ್ಲೀಷನ L ಆಕಾರಾದ ಮನೆ ನನಗೆ ಅಚ್ಚುಮೆಚ್ಚು. 100 ವರ್ಷಗಳ ಈ ಪುರಾತನ ಮನೆಗೆ ಉಪ್ಪರಿಗೆಯ ಇದೆ. ಹಳೆಯ ಮನೆಯಾದ್ರೂ ಅಲ್ಲಿರುವ ಖುಷಿ, […]
ಗಂಗೊಳ್ಳಿ : ಅರ್ಹ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ
ಗಂಗೊಳ್ಳಿ (ಮೇ, 18): ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಹಾಗೂ ಲಿಶಿಯಸ್ ಸಂಸ್ಥೆಯ ಸಹಯೋಗದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ (ರಿ) ಮೂಲಕ ಕೊರೋನ ಸಂಕಷ್ಟಗಳಿಗೆ ಸ್ಪಂದಿಸುವ ಆಶಯದೊಂದಿಗೆ ಕರ್ನಾಟಕ ರಾಜ್ಯದ ಕೊಂಕಣಿ ಖಾರ್ವಿ ಸಮಾಜದ ಅರ್ಹ ಬಡ ಕುಟುಂಬಗಳಿಗೆ ಕೊಡಮಾಡಿದ ಅಕ್ಕಿಯ ಮೂಟೆಗಳನ್ನು ಗಂಗೊಳ್ಳಿ ವಲಯದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಖಾರ್ವಿ ಸಮುದಾಯದ ಹಿರಿಯ ಮುಖಂಡರಾದ ಜಿ.ಪುರುಷೋತ್ತಮ ಆರ್ಕಾಟಿ, ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಸುರೇಂದ್ರ ಖಾರ್ವಿ, […]
ಚಿಕ್ಕ ಅಕ್ಕನಿಗೊಂದು ಗಂಡು ಹುಡುಕಿ ಮದುವೆ ಮಾಡಲೆಂದು ಅದೆಷ್ಟು ಕಾದಿದ್ದಳು. ಕೊಂಕಣಿ ರಾಮಣ್ಣನ ಕ್ಯಾಮೆರಾ ರೀಲುಗಳಲೆಲ್ಲ ಅಕ್ಕನ ನೆಗೆಟಿವ್ಗಳೇ ತುಂಬಿರುವಷ್ಟು!!!
ಕತ್ತಲು ಆಗಷ್ಟೇ ಕಳಚಿ, ಭೂಮಿ ಬೆಳಕಿಗೆ ಮೈಯೊಡ್ಡುವುದರಲ್ಲಿತ್ತು. ನೆರೆ ಮನೆಯ ಬಚ್ಚಲಿನ ಚಿಮುಣಿ ಚಟ ಚಟ ಸದ್ದಿನೊಂದಿಗೆ ಕರ್ರನೆಯ ಹೊಗೆಯನ್ನು ಸೂಸುತ್ತಾ, ಊರಿಗೆಲ್ಲ ಮಂಜಿನಂತ ಮಬ್ಬನ್ನು ಕವಿಯುವಂತೆ ಮಾಡಿತ್ತು. ವಾರವಿಡೀ ದುಡಿದು ದಣಿದ ಮಂದಿಗೆಲ್ಲ ಮೈಮುರಿಯಲೆಂದೆ ಅಂದು ಭಾನುವಾರ ಬೇರೆ!!! ಅವರೆಲ್ಲ ಮಗ್ಗಲು ಮಗಚಿ, ಮೈ ಮುರಿಯುವ ಹೊತ್ತು ದೂರವೇ ಇತ್ತು. ಮಂದಿ ಕಣ್ಣರಳಿಸುವ ಮುನ್ನವೆ ಅಲ್ಲೊಂದು ಜೀವ ಕಣ್ಮುಚ್ಚಿ , ಬದುಕಿನ ಓಟಕ್ಕೆ ವಿರಾಮವಿಟ್ಟಿತ್ತು. ಮುಂಜಾವಿನ ಮೌನಕ್ಕೆ ಸೆಡ್ಡು […]
ಸಮಾಜಸೇವಕ ಗೋವಿಂದ ಬಾಬು ಪೂಜಾರಿಯವರಿಂದ 350 ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರು ಸರಬರಾಜು
ಬೈಂದೂರು (ಮೇ, 13): ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ಉಪ್ಪುಂದ ಇದರ ಪ್ರವರ್ತಕರಾದ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ನೇತ್ರತ್ವದಲ್ಲಿ ಬೈಂದೂರು ತಾಲೂಕಿನ ಅಳವೆಕೋಡಿ, ತಾರಪತಿ, ಪಡುವರಿ ಹಾಗೂ ಉಪ್ಪುಂದ ವ್ಯಾಪ್ತಿಯ ಸುಮಾರು 350ಕ್ಕೂ ಹೆಚ್ಚಿನ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ಬೇಸಿಗೆ ಸಂದರ್ಭದಲ್ಲಿ ಈ ಭಾಗದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎರುರಾಗುತ್ತಿದ್ದು, ಕಳೆದ ವರ್ಷವೂ ಸಹ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ಉಪ್ಪುಂದದ ವತಿಯಿಂದ ಕುಡಿಯುವ ನೀರಿನ […]
ಪಡು ಗೋಪಾಡಿಯಲ್ಲಿ ವಿದ್ಯುತ್ ಕಡಿತ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಭಾಗಿಯಾದ ಗ್ರಾಮಸ್ಥರು
ಕೋಟೇಶ್ವರ (ಮೇ, 17): ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಪಡು ಗೋಪಾಡಿಯಲ್ಲಿ ಸತತ ಎರಡು ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿದ್ದು ಗ್ರಾಮಸ್ಥರಿಗೆ ದಿನನಿತ್ಯದ ಕಾರ್ಯಚಟುವಟಿಕೆಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕಾಂಚನ್ ನೇತೃತ್ವದ ತಂಡ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡರು. ಈ ತಂಡ ಇಡೀ ದಿನ ವಿದ್ಯುತ್ ಕಂಬಗಳ ಸುತ್ತ ಬೆಳೆದಿರುವ ಮರ-ಗಿಡಗಳ ಗೆಲ್ಲುಗಳನ್ನು ಕತ್ತರಿಸಿ ಮೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಿ ಗ್ರಾಮಸ್ಥರಿಂದ […]