ಹೆಮ್ಮಾಡಿ (ಜೂ, 07): ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಎಜುಕೇಶನಲ್ ಟ್ರಸ್ಟ್ (ರಿ) ಶಿವಮೊಗ್ಗ ಹಾಗೂ ಕುಂದಾಪುರ ಎಜುಕೇಶನಲ್ ಸೊಸೈಟಿ (ರಿ) ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜೂನ್ 07 ರಂದು ಮಾರಣಕಟ್ಟೆಯಲ್ಲಿ ಚಾಲನೆ ನೀಡಲಾಯಿತು. ಧಾರ್ಮಿಕ ದತ್ತಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಸದರಾದ ಬಿ. ವೈ. ರಾಘವೇಂದ್ರ, ಬೈಂದೂರು ಶಾಸಕ ಶ್ರೀ ಬಿ. ಎಂ. […]
Day: June 7, 2021
ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಪತ್ತೆ – ಸಮಾಜ ಸೇವಕ ಸುರೇಂದ್ರ ಸಂಗಮ್ ನೇತ್ರತ್ವದ ತಂಡದಿಂದ ರಕ್ಷಣೆ
ಕುಂದಾಪುರ (ಜೂ, 7):ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಮಾಜ ಸೇವಕ ಸುರೇಂದ್ರ ಕಾಂಚನ್ ಸಂಗಮ್, ಕುಂದಾಪುರ ಪುರಸಭೆಯ ಉಪಾಧ್ಯಕ್ಷ ಸಂದೀಪ ಖಾರ್ವಿ, ಪತ್ರಕರ್ತ ಕಿರಣ್ ಪೂಜಾರಿ ಮದ್ದುಗುಡ್ಡೆಯವರು 108 ಸಿಬ್ಬಂದಿಯ ಸಹಕಾರದಿಂದ ಸಮೀಪದ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು. ಇವರ ಮಾನವೀಯ ನೆಲೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ : ವಿಶ್ವ ಪರಿಸರ ದಿನಾಚರಣೆ
ಗೋಪಾಡಿ (ಜೂ, 07): ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಂದ್ರ ಕಾಂಚನ್ ಸಂಗಮ್ ಹಾಗೂ ಅಂಗನವಾಡಿ ಶಿಕ್ಷಕಿ ಶ್ರೀಮತಿ ಜಯಂತಿ ರವರು ಸರಿ ಸುಮಾರು 15 ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.ಕೋವಿಡ್ ನಿಯಮದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗೌರವ – ಧನ
ಮೌನ ಮನೆ ಮಾಡಿದೆ. ಹೊರಗೆ ಮೊದಲ ಮುಂಗಾರು ಮಳೆ. ಸಿಡಿಲು, ಗುಡುಗಿನ ಜೊತೆಗೆ ಅ ನಿಮಿತ್ತ ಕೆ.ಇ.ಬಿ. ಯವ ಕರೆಂಟ್ ಬೇರೆ ತೆಗೆದಿದ್ದ. ಮಾತಿಲ್ಲ ಕತೆಯಿಲ್ಲ, ಮಳೆ ಆರ್ಭಟ ಬಿಟ್ಟು ಮಳೆಯನ್ನೇ ನೋಡುತ್ತಾ ಕುಳಿತ ನನಗೆ ಮಧ್ಯಾಹ್ನ ವಿಕಾಸ್ ಹೇಳಿದ ಮಾತು ತಲೆಯಲ್ಲಿ ಕೊರೆಯುತ್ತಾ ಇತ್ತು. ವಿಕಾಸ್ ಯಾರು ಅಂತ ನಿಮಗೆ ಹೇಳಲಿಲ್ಲ! ವಿಕಾಸ್ ಬೆಂಗಳೂರನಲ್ಲಿ ಪರಿಚಯವಾದ ನಟನೆಯಲ್ಲಿ ಆಸಕ್ತಿ ಇರುವ ಹುಡುಗ. ಸಮಾನ ಅಭಿರುಚಿ ಇರುವುದರಿಂದ ಬೇಗನೆ ಗೆಳೆತನವಾಯಿತು. […]