ಕೋಟೇಶ್ವರ(ಜೂ, 27) : ದೇಶಿಯ ಗೋ ತಳಿಗಳ ರಕ್ಷಣೆ ಹಾಗೂ ಪಂಚಗವ್ಯ ಉತ್ಪನ್ನಗಳ ಮಹತ್ವವನ್ನು ಸಾರುತ್ತಿರುವ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಕಪಿಲೆ ಗೋ ಸಮ್ರದ್ದಿ ಟ್ರಸ್ಟ್ ನ ಗೋಶಾಲೆಗೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ರೋಟರಿ ಸಹಾಯಕ ಗವರ್ನರ್ ಡಾ|ನಾಗಭೂಷಣ ಉಡುಪ ತಮ್ಮ ಧರ್ಮಪತ್ನಿ ಡಾ| ಶರ್ಮದಾ ರೊಂದಿಗೆ ಜೂನ್, 26 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಪಿಲೆ ಗೋ ಸಮ್ರದ್ದಿ ಟ್ರಸ್ಟ್ ನ ಪ್ರವರ್ತಕರಾದ […]
Month: June 2021
ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯಹೊಂದಿ, ಅನ್ಯ ಜಿಲ್ಲೆ / ರಾಜ್ಯದಲ್ಲಿ ವ್ಯಾಸಂಗ ನಡೆಸುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ
ಉಡುಪಿ (ಜೂ, 29) : ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯ ಹೊಂದಿ ಇತರ ಜಿಲ್ಲೆ / ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾವು ವಾಸ್ತವ್ಯ ಹೊಂದಿರುವ ಉಡುಪಿ ಜಿಲ್ಲೆಯಲ್ಲಿಯೇ ಕರೋನಾ ಲಸಿಕಾಕರಣವನ್ನು ನಡೆಸಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿವರಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದ್ದು, ಕೋವಿಡ್-19 ಲಸಿಕೆಯನ್ನು ಪಡೆಯಲಿಚ್ಚಿಸುವ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯಹೊಂದಿ, ಅನ್ಯ ಜಿಲ್ಲೆ / ರಾಜ್ಯದಲ್ಲಿ ವ್ಯಾಸಂಗ ನಡೆಸುತ್ತಿರುವ 18 ವರ್ಷ […]
ನಮ್ಮನೆ ಬೆಕ್ಕು
ನಮ್ಮನೆ ಬೆಕ್ಕು ಲಾಂಗೂಲವನ್ನು ಲಂಬ ಕೋನದಲ್ಲಿ ಮೇಲಕ್ಕೆತ್ತಿಮೀಸೆಗಳನ್ನು ನೆಟ್ಟಗೆ ಮಾಡಿಕೊಂಡುಸರಳ ರೇಖೆಯಲ್ಲೇ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟುನಡೆದು ಬರುವಾಗ ವಿಶ್ವ ಸುಂದರಿಯರನ್ನುನೆನಪಿಸುತ್ತದೆ ನಮ್ಮನೆಯ ಬೆಕ್ಕು ! ಬಿಳಿಯ ಬಣ್ಣ ಮೈತುಂಬ ರೋಮರೋಮ್ ನಿಂದ ಬಂದದ್ದೇ? ನೀವೇನಾದರೂಕೇಳಿದರೆ ರೂಮ್ ಬಿಟ್ಟು ಹೊರಹೋಗದ್ದುಅಲ್ಲಿಂದ ಬರುವುದು ಹೇಗೆ? ಅದೇನು ಭಕ್ತಿ ? ಅದೇನು ನಿಯತ್ತು?ಬಟ್ಟಲಿಗೆ ಹಾಕಿಟ್ಟ ಹಾಲು ಕುಡಿಯುವಾಗಲೂಕಣ್ಮುಚ್ಚಿ ಪರಶಿವನ ಧ್ಯಾನಕಾಡಿ ಬೇಡಿ ಅರಚಿ ಕಿರುಚಿವ್ಹಿಸ್ಕಸ್ ಮೆದ್ದ ಮೇಲೆಕುಂಭಕರ್ಣನೂ ನಾಚಬೇಕು ಅದರ ನಿದ್ದೆಗೆ ಮುಟ್ಟಿದೊಡನೆ ಮೈಮರೆತುಶೀರ್ಷಾಸನ […]
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಕ್ಕೆ : ಅರಣ್ಯ ಇಲಾಖೆ ಹಾಗೂ ಅರಣ್ಯಸಮಿತಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ
ಜಡ್ಕಲ್ (ಜೂನ್, 26) : ಪ್ರಾದೇಶಿಕ ಅರಣ್ಯ ಉಪ ವಿಭಾಗ ಕುಂದಾಪುರ ಹಾಗೂ ಗ್ರಾಮ ಅರಣ್ಯಸಮಿತಿ ಜಡ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಜೂನ್ ,25 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಕ್ಕೆ ಯಲ್ಲಿ ನಡೆಯಿತು. ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಜಾಕ್ಷಿ ಶೆಟ್ಟಿ, ಗಿಡ ನೆಡುವುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ […]
ಅದ್ಯಾವ ಸೀಮೆಯ ಮಾಯಗಾತಿ ನೀನು..!
ಅದ್ಯಾವ ಸೀಮೆಯ ಮಾಯಗಾತಿ ನೀನು..ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ..ಸುಮ್ಮನಿರಲು ಈ ಹೃದಯ ಬಿಡಬೇಕಲ್ಲ.. ಅರೇ ! ಇದೇನು ನಿನ್ನ ಹುಚ್ಚಾಟ ಅನ್ನುವುದು ನೀನುನೀನಿಲ್ಲದೆ ಬದುಕೆನು ನಾನು..ನನಗೆ ನೀನೆ ವ್ಯಾಕ್ಸಿನ್ನು… ಬಿಸಿರಕ್ತ ಹರಿಯುವ ಈ ದೇಹಕ್ಕೆ ..ಅಣು ಕಣದಿ ನಿನ್ನದೆ ಛಾಯೆ..ಈ ನನ್ನ ಬದುಕೆಲ್ಲಾ ನಿನ್ನದೆಯಾ ಮಾಯೆ. ನಿನ್ನ ಪ್ರೀತಿ ಸಂಜೆಯಲಿ ಗುಂಯ್ಗುಡುವ ಸೊಳ್ಳೆಯಂತೆ..ಮಧ್ಯರಾತ್ರಿ ಕಚ್ಚುವ ತಿಗಣೆಯಂತೆಮುಂಜಾನೆಯಲ್ಲಿ ಮುದುಡುವ ಚಳಿಯಂತೆ..ಮಧ್ಯಾಹ್ನದಲ್ಲಿ ನೆತ್ತಿ ಸುಡುವ ಬಿಸಿಲಂತೆ.ಅದಕ್ಕೆ ನಾ ಹೇಳುವೆ ನೀ ನನ್ನಲೊವಿನವಳು..ಮುದ್ದು ಲವ್ ಯೂ…. […]
ಕೋಟ: ಗೀತಾನಂದ ಫೌಂಡೇಶನ್( ರಿ) ಮತ್ತು ಜನತಾ ಸಂಸ್ಥೆ ವತಿಯಿಂದ “ಸೃಷ್ಠಿ” ಸಸಿಗಳನ್ನು ನೆಟ್ಟು ಪೋಷಿಸುವ ವಿನೂತನ ಕಾರ್ಯಕ್ರಮ
ಕೋಟ (ಜೂ, 25): ಸಾಮಾಜಿಕ,ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕೊಡುಗೈದಾನಿ ,ಉದ್ಯಮಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಆನಂದ .ಸಿ.ಕುಂದರ್ ರವರ ಸಂಚಾಲಕತ್ವದ ಗೀತಾನಂದ ಫೌಂಡೇಶನ್( ರಿ) ಮತ್ತು ಜನತಾ ಸಂಸ್ಥೆ ಜಂಟಿಯಾಗಿ “ಸೃಷ್ಠಿ” ಸಸಿಗಳನ್ನು ನೆಟ್ಟು ಪೋಷಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿ ವರುಷದಂತೆ ಈ ವರ್ಷವೂ ಸಹ ಸುಮಾರು 6000 ಗಿಡಗಳನ್ನು “ಸೃಷ್ಠಿ”ಕಾರ್ಯಕ್ರಮದಡಿಯಲ್ಲಿ ವಿತರಿಸುವ ಸಲುವಾಗಿ ಸಸಿಗಳನ್ನು ಸಂಗ್ರಹಿಸಲಾಗಿದೆ. ತಾರೆ, ಕುಂಟು ನೆರಳೆ, […]
ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸುವ ಮೂಲಕ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ ಶ್ರೀ ಗೋವಿಂದ ಬಾಬು ಪೂಜಾರಿ
ಉಪ್ಪುಂದ (ಜೂ, 26): ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಹಸ್ರಾರು ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಿರುವ ಕೊಡುಗೈದಾನಿ, ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಜೂನ್ ,26 ರಂದು ತಮ್ಮ 44 ನೇ ಜನ್ಮದಿನದ ಶುಭ ಸಂದರ್ಭದಲ್ಲಿ ಉಪ್ಪುಂದದ ಕಾಸನಾಡಿ ಗ್ರಾಮದ ವಿಜಯ ರಮೇಶ್ ಪೂಜಾರಿಯವರಿಗೆ ನೂತನ ಮನೆ ಶ್ರೀ ವರಲಕ್ಷ್ಮಿ ನಿಲಯ ” ಗ್ರಹಪ್ರವೇಶ ನೆರವೇರಿಸಿ, ಮನೆಯ ಕೀ ಯನ್ನು ಹಸ್ತಾಂತರ ಮಾಡುವುದರ ಮೂಲಕ ತಮ್ಮ ಜನ್ಮ […]
ನಾ ನಿನಗೆ ಮತ್ತೆ ನೆನಪಾದರೆ….?
ನಾ ನಿನಗೆ ಮತ್ತೆ ನೆನಪಾದರೆ….? ನಿನ್ನೊಳಗೆ ನಾ ಕಳೆದು ಹೋದೆಕಾಣೆಯಾದವರ ಪಟ್ಟಿಯಲ್ಲಿಮರೆಯದೆ ಸೇರಿಸಿಕೋ ನನ್ನನ್ನು ಯಾರಾದರೂ ನಿನ್ನಲ್ಲಿ ವಿಳಾಸ ಹುಡುಕುವಳು ಬಂದರೆ ಕೊಟ್ಟುಬಿಡು ನನ್ನ ಕೇರಾಫ್ ಅಡ್ರೆಸ್ವಿರಸ ಮರೆತು ನನ್ನ ಹೃದಯಕೊಂದು ಸ್ವತಂತ್ರ ಕೊಟ್ಟುಬಿಡು ಪಾಪ ಬದುಕಲಿ ಬಿಡು, ಬಡ ಜೀವಮನಸು ಮಲ್ಲಿಗೆ ….ಗೊತ್ತಾಯಿತು ಬಿಡು!ನೀ ಯಾರದೋ ಸುಖದ ಅಮಲಿನಲ್ಲಿ ತೇಲಾಡುವ ಮಾದಕ ಪರಿಮಳದ ಕೆಂಡ ಸಂಪಿಗೆ ಮತ್ತೆ ನೆನಪಾದರೆ ಕೊಟ್ಟು ಬಿಡು ಒಂದು ತಪ್ಪಿದ ಕರೆಯಾದರು…ಬಂದು ಬಿಡುವೆ ನಿನ್ನ […]
ಮೂಡ್ಲಕಟ್ಟೆ ಎಂ ಐ ಟಿ : ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ
ಕುಂದಾಪುರ (ಜೂ, 25): ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯ ದ್ರಷ್ಟಿಯಿಂದ ಆರಂಭಿಸಿದ “ಅಪ್ನಾ-ಸಪ್ನಾ” ಸಂಘಟನೆಯ ಆಶ್ರಯದಲ್ಲಿ ರಾಜ್ಯದ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಸಾವಿಶ್ಕಾರ್ ಎಂಬ ಈ ಸಾಂಸ್ಕೃತಿಕ ಉತ್ಸವದಲ್ಲಿ 21ಕ್ಕೂ ಹೆಚ್ಚೂ ವಿವಿಧ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ಸಾವಿಶ್ಕಾರ್ 2.0 ಇದರ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂಬಿಕಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿನಾಯಕ […]
ವಂಡ್ಸೆ : ಶಾಸಕರ ನಿವಾಸದಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರ ನುಡಿ ನಮನ ಕಾರ್ಯಕ್ರಮ
ವಂಡ್ಸೆ (ಜೂ, 24) : ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಡ್ಡಿಯಾದ ಆರ್ಟಿಕಲ್ 370 ಬಗ್ಗೆ ಮೊದಲು ಧ್ವನಿ ಎತ್ತಿದವರು ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರು. ಇವರ ಪ್ರಯತ್ನದ ಫಲವಾಗಿ ಜನಸಂಘದ ರಚನೆಯಾಯಿತು. ಇವರು ಬಿತ್ತಿದ ರಾಷ್ಟ್ರೀಯತೆ ಮತ್ತು ಭಾರತೀಯತೆಯ ಗುಣಗಳಿಂದಾಗಿ ಇಂದು ನಮ್ಮ ಬಿಜೆಪಿ ಪಕ್ಷ ವಿಶ್ವದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದರು. ಉದಾತ್ತ ಕಾರಣಗಳಿಗಾಗಿ ಹುತಾತ್ಮರಾದ ಶ್ಯಾಮಪ್ರಸಾದ್ ಮುಖರ್ಜಿಯವರು ಎಂದೆಂದಿಗೂ […]










