ಹೆಮ್ಮಾಡಿ (ಜು, 31) : ಆಧುನಿಕತೆಯ ಒತ್ತಡದ ಬದುಕಿನಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ನಕಾರಾತ್ಮಕ ಪ್ರಭಾವಗಳು ಹೆಚ್ಚಾಗುತ್ತಿದ್ದು ಅದರಿಂದ ಹೊರ ಬರಲು ನಾವು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು. ಆ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ನಮ್ಮ ಲಯನ್ಸ್ ಸಂಸ್ಥೆ ಇಂದು ಗ್ರಾಮೀಣ ಭಾಗದ ಮಹಿಳೆಯರಿಗೆ ಆರೋಗ್ಯವನ್ನು ಕಾಪಾಡಲು ಕಾರ್ಯಗಾರವನ್ನು ಹಮ್ಮಿಕೊಂಡಿದೆ ಎಂದು ಕುಂದಾಪುರ ಲಯನ್ಸ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ನಾಯಕ್ ಕುಂದಾಪುರ ಹೇಳಿದರು. ಅವರು ಲಯನ್ಸ್ ಕ್ಲಬ್ ಕುಂದಾಪುರ, […]
Month: July 2021
ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೋತ್ಸಾಹ ಧನ ವಿತರಣೆ
ನಾವುಂದ ( ಜು, 31) : ಪ್ರತಿ ವರುಷ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗೆ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ 1995-96ನೇ ಸಾಲಿನ ವಿದ್ಯಾರ್ಥಿಗಳ ವತಿಯಿಂದ ನೀಡಲ್ಪಡುವ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಇತ್ತೀಚೆಗೆ ವಿತರಿಸಲಾಯಿತು. ಈ ವರುಷ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದ ವಿಭಾಗದ ವಿದ್ಯಾರ್ಥಿ ಚವೀಶ್ ಜೈನ್ ಅವರಿಗೆ ಈ ಪ್ರೋತ್ಸಾಹಧನವನ್ನು ನೀಡಲಾಯಿತು. ಆನ್ಲೈನ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ 1995-96ನೇ ಸಾಲಿನ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯ : ಆಡಳಿತ ಸಿಬ್ಬಂದಿ ಶ್ರೀಮತಿ ಅಲ್ವಿರಾ ಕ್ಲೇರೆನ್ಸ್ ಫೆರ್ನಾಂಡಿಸ್ ರವರಿಗೆ ಬೀಳ್ಕೊಡುಗೆ
ಶಿರ್ವ( ಜು, 31) : ಒಂದು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸೇವೆಯು ಅತ್ಯಂತ ಅಮೂಲ್ಯ ಹಾಗೂ ಉಪಯುಕ್ತವಾದುದು. ವರ್ಗವಾರು ಕರ್ತವ್ಯವೆನ್ನವುದು ಜವಾಬ್ದಾರಿಯ ಹಿನ್ನೆಲೆಯಲ್ಲಿ ಇದ್ದರೂ ಕೂಡ ಪ್ರತಿಯೊಬ್ಬರ ಸೇವೆಯೂ ಪರಿಗಣಿತ ಹಾಗೂ ಶ್ರೇಷ್ಠ ವಾದುದು ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೆನಿಸ್ ಡೇಸಾ ಸಂತ ಮೇರಿ ಹೇಳಿದರು. ಅವರು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಆಡಳಿತ ಸಿಬ್ಬಂದಿ ಶ್ರೀಮತಿ ಅಲ್ವಿರಾ ಕ್ಲೇರೆನ್ಸ್ […]
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕುರ್ಕಾಲು ಗ್ರಾಮದ ಮಹಿಳೆ ಸರಸ್ವತಿಯ ಉಳಿಸಲು ನೆರವಿಗೆ ಮನವಿ
ಉಡುಪಿ (ಜು, 30): ಕುರ್ಕಾಲು ಗ್ರಾಮದ ಕುಂಜಾರುಗಿರಿ ನಿವಾಸಿ ಶಂಕರ್ ರವರ ಧರ್ಮಪತ್ನಿ ಶ್ರೀಮತಿ ಸರಸ್ವತಿ (ವಯಸ್ಸು, 25)ಯವರು 2 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಡಯಾಲಿಸಿಸ್ ಮಾಡಲು ಕಷ್ಟವಾಗಿದೆ. ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಸರಸ್ವತಿಯವರಿಗೆ ಒಂದು ಹೆಣ್ಣು ಮಗುವಿದೆ. ಪತಿ ಶಂಕರ್ ನಿತ್ಯ ಕಲ್ಲು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಸರಸ್ವತಿಯವರ ಪರಿಸ್ಥಿತಿ […]
ಶ್ರೀ ಗೋವಿಂದ ಬಾಬು ಪೂಜಾರಿಯವರು ಬಡ ಕುಟುಂಬಗಳಿಗೆ ನಾಲ್ಕನೇ ಮನೆ ನಿರ್ಮಿಸಿ, ಹಸ್ತಾಂತರಿಸುವ ಶುಭ ಘಳಿಗೆಯಲ್ಲಿ ….
ತನ್ನ ದುಡಿಮೆಯ ಒಂದು ಭಾಗವನ್ನು ಅಶಕ್ತರ ಪಾಲಿಗೆ ಮೀಸಲಿಟ್ಟು, ನಿರಂತರವಾಗಿ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ್ನು ಹುಟ್ಟುಹಾಕಿ, ಆ ಮೂಲಕ ಕಡು ಬಡವರ ಬದುಕಿನಲ್ಲಿ ಆಶ್ರಯದಾತ, ಅನ್ನದಾತ ಮತ್ತು ಆರೋಗ್ಯದಾತರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಆಶ್ರಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಹಿನ್ನೆಲೆಯಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು […]
ಸೋಶಿಯಲ್ ಮೀಡಿಯಾದ ಒಳ-ಹೊರಗು
ಬೆಂಕಿಯನ್ನು ಮನೆಯೊಳಗೆ ಚಿಕ್ಕದಾಗಿ ಹಚ್ಚಿಟ್ಟರೆ ದೀಪವಾಗಿ ಮನೆ ಬೆಳಗುತ್ತದೆ. ಅದೇ ಮನೆಗೆ ಹಚ್ಚಿದರೆ ಮನೆಯನ್ನೇ ಸುಟ್ಟು ನಾಶ ಮಾಡುತ್ತದೆ. ಇಡೀ ಜಗತ್ತನ್ನೇ ತನ್ನತ್ತ ಸೆಳೆಯುತ್ತ ,ವಿಷಯ ,ವಿಚಾರ ಹಾಗೂ ಭಾವನೆಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಬಹುಬೇಗನೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಫೇಸ್ ಬುಕ್ ಹಾಗೂ ಇತರ ಸೋಶಿಯಲ್ ಮೀಡಿಯಾಗಳು ಇಂದು ಇಡೀ ಜಗತ್ತನ್ನೇ ಆವರಿಸಿದೆ. ಆದರೆ ಈ ಸೋಶಿಯಲ್ ಮೀಡಿಯಾಗಳನ್ನು ನಾವು ದೀಪದಂತೆ ನಾವು ಆರೋಗ್ಯಕರವಾಗಿ ಬಳಸುವುದು ಉತ್ತಮ. ಇಲ್ಲವಾದರೆ ಇದು […]
‘ಹೇಳದೆ ಹೋದ ಮಗಳಿಗೆ’ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ.
ಗಂಗೊಳ್ಳಿ (ಜು, 29) : ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ವೈವಿಧ್ಯಮಯ ಬರಹಗಳ ಮೂಲಕ ಪರಿಚಿತರಾಗಿರುವ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಅವರ ಚೊಚ್ಚಲ ಕೃತಿ ‘ಹೇಳದೆ ಹೋದ ಮಗಳಿಗೆ’ ಪುಸ್ತಕಕ್ಕೆ ತುಮಕೂರಿನ ಪ್ರತಿಷ್ಠಿತ ಸಂಸ್ಥೆ ಗುರುಕುಲ ಕಲಾ ಪ್ರತಿಷ್ಠಾನ(ರಿ)ದ ವತಿಯಿಂದ ಕೊಡಮಾಡುವ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಲಭಿಸಿದೆ. ವೈವಿಧ್ಯಮಯವಾದ ಪ್ರೇರಣಾತ್ಮಕ ಅಂಕಣ ಬರಹಗಳನ್ನು ಒಳಗೊಂಡಿರುವ ಈ ಕೃತಿ […]
ಕುಡಿ – ನುಡಿ
ಎಲ್ಲಾ ಹೆಂಗಳೆಯರು ನನ್ನನ್ನು ಮೆಚ್ಚಿದ್ದೆ, ಮೆಚ್ಚಿದ್ದು ನಾ ಅವರಿಗೆ ಅಣ್ಣಾ ನಂತೆ…..ಅದಕ್ಕೆ ಕಾರಣ ಕೇಳಿದರೆ …..ನಾ ಕುಡಿಯುದಿಲ್ಲವಂತೆ…….!!! ✍️ಈಶ್ವರ ಸಿ ನಾವುಂದ.
ಮೊಗವೀರ ಯುವ ಸಂಘಟನೆ (ರಿ). ಉಡುಪಿ ಜಿಲ್ಲೆ : ಕೋಟೇಶ್ವರ ಘಟಕದ ನೂತನ ಕಾರ್ಯದರ್ಶಿಯಾಗಿ ಪುಂಡಲೀಕ ಮೊಗವೀರ ತೆಕ್ಕಟ್ಟೆ ಆಯ್ಕೆ
ಕೋಟೇಶ್ವರ (ಜು, 29) : ಮೊಗವೀರ ಯುವ ಸಂಘಟನೆ(ರಿ). ಉಡುಪಿ ಜಿಲ್ಲೆ ಇದರ ಕೋಟೇಶ್ವರ ಘಟಕದ 2021- 2023ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜುಲೈ, 25 ರಂದು ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಕಛೇರಿಯಲ್ಲಿ ನಡೆದಿದ್ದು ಮುಂದಿನ ಎರಡು ವರ್ಷಗಳ ಅವಧಿಗೆ ಕಾರ್ಯದರ್ಶಿಯಾಗಿ ಪುಂಡಲೀಕ ಮೊಗವೀರ ತೆಕ್ಕಟ್ಟೆ ಆಯ್ಕೆಯಾಗಿದ್ದಾರೆ. ಹಲವು ಸ್ವಯಂ ಸೇವಾ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಪುಂಡಲೀಕರವರು ರಕ್ತದಾನ, ಅಶಕ್ತರಿಗೆ ನೆರವು, ಲಾಕ್ಡೌನ್ ಸಂದರ್ಭದಲ್ಲಿನ […]