ಗೆಲ್ಲಲೇಬೇಕೆಂದು ಮನದೊಳಗೆಪಣತೊಟ್ಟವನೊಬ್ಬಅಡಿಗಡಿಗೆ ಸೋತ, ಮತ್ತೆ ಸೋತಸೋಲುತ್ತಲೇ ಹೋದಕೆಲವೊಮ್ಮೆ ನಿಕೃಷ್ಟವಾಗಿಅವನು ಪ್ರತೀ ಸೋಲಿನಿಂದಲೂ ಕಲಿತದ್ದುಹೇಗೆಲ್ಲ ಸೋಲಬಹುದು ಎಂಬುದನ್ನು.ಸೋತಾಗಲೆಲ್ಲ ಪಟ್ಟಿಮಾಡಿಕೊಂಡತಪ್ಪು ಹೆಜ್ಜೆ ತಪ್ಪು ಊಹೆತಪ್ಪು ಲೆಕ್ಕಾಚಾರ ತಪ್ಪು ಯೋಜನೆಎಲ್ಲವನ್ನೂ ಟಿಪ್ಪಣಿ ಮಾಡಿಕೊಂಡ ತಪ್ಪುಗಳಿಗೆಲ್ಲ ಉತ್ತರ ಹುಡುಕುತ್ತಾಸರಿಯಾಗಿಸುತ್ತಾ ಸಾಗಿದಸೋಲಿನೆಲ್ಲಾ ದಾರಿಯನ್ನೂ ಕಂಡುಕೊಂಡಸೋಲಿನ ಪಾಠಗಳಿಗೆ ವೀಷಯವಾಗಿಯೇ ಗುರುವಾಗಿಬಿಟ್ಟ ಈಗ ಅವನಿಗೆ ನೂರಾರು ಶಿಷ್ಯರುಎಲ್ಲರೂ ಗೆಲ್ಲುತ್ತಿದ್ದಾರೆಒಂದೊಂದು ಗೇಲುವೂ ಮೈಲಿಗಲ್ಲೇಸೋತವನೊಬ್ಬನ ಗೆಲುವುಗಳುಬೆಳಕನ್ನು ಹರಿಸುತ್ತಿವೆ ಕತ್ತಲ ದಾರಿಯಲ್ಲಿಎಂದೂ ಸೋಲರಿಯದಂತೆ….. ಕಿಗ್ಗಾಲು.ಜಿ.ಹರೀಶ್
Day: July 4, 2021
ಉಡುಪಿ ಡಯೆಟ್ ಯೂಟ್ಯೂಬ್ ಚಾನೆಲ್ – ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆ ಕೈಗೊಂಡ ಮಹತ್ವಪೂರ್ಣ ಹೆಜ್ಜೆ : ಶಿಕ್ಷಕ ಗಣೇಶ್ ಸಿ. ಎನ್. ಅಭಿಪ್ರಾಯ
ಉಡುಪಿ (ಜು, 4) : ಉಡುಪಿ ಡಯೆಟ್ ಯೂಟ್ಯೂಬ್ ಚಾನೆಲ್ ಇದು ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲು ಕೈಗೊಂಡ ಮಹತ್ವ ಪೂರ್ಣ ಹಾಗೂ ಅದ್ಭುತ ಹೆಜ್ಜೆ.ಈ ಕರೋನಾದಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕಲಿಕೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇದು ಶಿಕ್ಷಕರಿಗೆ ಮತ್ತು ಪೋಷಕರಿಗೆ ಸಹಕಾರಿಯಾಗುತ್ತದೆ. ಈ ಯೂಟ್ಯೂಬ್ ಚಾನೆಲ್ಗೆ ಚಂದಾದಾರರಾಗಲು ಮತ್ತು ಮಕ್ಕಳಿಗೆ ಇಂಗ್ಲಿಷ್ ಕಲಿಯಲು ಸಹಾಯ ಮಾಡಲು ನಾನು ಎಲ್ಲ ಪೋಷಕರನ್ನು ಕೋರುತ್ತೇನೆ ಎಂದು […]
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಪ್ರಾರಂಭ
ಕುಂದಾಪುರ (ಜು, 4): ಡಾ.ಬಿ.ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕಾಲೇಜು ಕುಂದಾಪುರ ಹಾಗೂ ಕುಂದಾಪುರದ ಪ್ರಸಿದ್ಧ ತರಬೇತಿ ಸಂಸ್ಥೆ ಸೃಷ್ಟಿ ಇನ್ಫೋಟೆಕ್, (ಕಿಯೋನಿಕ್ಸ್ ಕುಂದಾಪುರ, ಚಿನ್ಮಯಿ ಆಸ್ಪತ್ರೆಯ ಹತ್ತಿರ) ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು 2021-22 ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗುತ್ತಿದೆ. ಪದವಿ ಕೋರ್ಸುಗಳ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದ್ದು ಉನ್ನತ […]
ಸಂಬಂಧ
ಮಾನವ ಸಂಬಂಧಗಳ ನಿರ್ವಹಣೆ ಇದು ಅತ್ಯಂತ ಕಷ್ಟಕರ ಹಾಗೂ ನಿರಂತರ ಪ್ರಕ್ರಿಯೆಯಾಗಿದೆ. ಏಕೆಂದರೆ ಆಧುನಿಕತೆಯ ಬದುಕಿನಲ್ಲಿ ಸಂಬಂಧಗಳು ವಿಮುಖ ಗೊಳ್ಳುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಜಾಗತೀಕರಣದ ನಾಗಾಲೋಟಕ್ಕೆ ಸಿಲುಕಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಆತಂಕ ನಮ್ಮೆಲ್ಲರನ್ನು ಕಾಡತೊಡಗಿದೆ. ಭಾರತೀಯ ಸಂಸ್ಕೃತಿಯಲ್ಲಿನ ಮಾನವ ಸಂಬಂಧಗಳ ಮೌಲ್ಯತೆಗೆ ಮತ್ತು ಪಾವಿತ್ರ್ಯತೆಗೆ ಇದ್ದ ಬೆಲೆ ಇವತ್ತು ಪಾಶ್ಚಾತೀಕರಣ ಜೀವನ ಶೈಲಿಯಿಂದಾಗಿ ಪ್ರವಾಹದ ಹರಿದು ಹೋಗುತ್ತಿರುವ ಕೊಳಕು ನೀರಿನಂತಾಗಿದೆ. ವಾಸ್ತವವಾಗಿ ಇಂದಿನ ದಿನಗಳಲ್ಲಿ ನೆನಪಿಗೆ […]
ಬಲವಂತದ ಬರವಣಿಗೆ ಸರಿಯಲ್ಲ – ನರೇಂದ್ರ ಎಸ್. ಗಂಗೊಳ್ಳಿ : ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬದುಕಿಗೆ ಬರಹ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮ
ಬಲವಂತದ ಬರವಣಿಗೆ ಸರಿಯಲ್ಲ. ಸೃಜನಶೀಲತೆಯಿಂದ ಬರಹಗಳು ಹುಟ್ಟಬೇಕು. ಹೆಚ್ಚಿನ ಓದು, ವಿಚಾರ ಮಂಥನ, ಚರ್ಚೆ ಇತ್ಯಾದಿ ಉತ್ತಮ ಬರಹಗಾರರನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಆಸಕ್ತಿಯ ಕ್ಷೇತ್ರ ಯಾವುದೇ ಇದ್ದರೂ ಓದುವಿಕೆ ನಿರಂತರವಾಗಿರಲಿ ಎಂದು ಅವರು ಹೇಳಿದರು.
ಸಾಯಿನಾಥ್ ಶೇಟ್ ರ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ
ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರು ಹಲವರು. ಅದರಲ್ಲೂ ನಿರಾಶ್ರಿತರು, ಕಡು ಬಡವರು, ವಲಸೆ ಕಾರ್ಮಿಕರು, ಭಿಕ್ಷುಕರು ಹೊಟ್ಟೆ ತುಂಬಿಸಿಕೊಳ್ಳಲು ಆಹಾರಕ್ಕಾಗಿ ಹಾಹಾಕಾರ ಪಟ್ಟಿದ್ದು ಅಷ್ಟಿಷ್ಟಲ್ಲ. ಈ ವಿಷಯವನ್ನು ಗಮನಿಸಿದ ಹಲವಾರು ಸಂಘ-ಸಂಸ್ಥೆಗಳು, ಕೊಡುಗೈದಾನಿಗಳು ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ನೀಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ಕೂಟರ್ ಏರಿ ಸಂಕಷ್ಟಕ್ಕೆ ಸಿಲುಕಿದವರಿರುವ ಸ್ಥಳಕ್ಕೆ ಭೇಟಿ ನೀಡಿ ಆಹಾರ ಪೊಟ್ಟಣಗಳನ್ನು ವಿತರಿಸಿ ಅದೆಷ್ಟೋ ಬಡಜನರ ಹಸಿವನ್ನು […]
ಅಪಘಾತಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಕಲಾವಿದನ ನೆರವಿಗಾಗಿ “ಅಮ್ಮ ವೇದಿಕೆ” – ಮನೆ ನಿರ್ಮಿಸಿ ಕೊಡುವ ಸಂಕಲ್ಪ
ಬಗ್ವಾಡಿ (ಜು, 4) : ಬೈಕ್ ಅಪಘಾತದಲ್ಲಿ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಬರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರನಿಗೆ ಸಹ್ರದಯಿ, ಸಮಾನ ಮನಸ್ಕರ ತಂಡವೊಂದು ಸಹಾಯ ಮಾಡಲು ಮುಂದಾಗಿದೆ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿರುವ ಕಲಾವಿದನಿಗೆ ಸುಸಜ್ಜಿತವಾದ ಮನೆಯೊಂದನ್ನು ನಿರ್ಮಿಸಿ ಕೊಡಲು “ಅಮ್ಮ ವೇದಿಕೆ” ಯೊಂದು ಸಜ್ಜಾಗಿದೆ. ಆರ್ಥಿಕವಾಗಿ ಬಡತನದಲ್ಲಿರುವ ಈ ಕಲಾವಿದನ ಜೊತೆ ಅಜ್ಜಿ, ಅಮ್ಮ ಹಾಗೂ ಸಹೋದರ […]
ತಲ್ಲೂರಿನ ಬಡ ಕುಟಂಬ ಗಿರಿಜಾ ಮೊಗವೀರರ ಮನೆ ನಿರ್ಮಾಣಕ್ಕೆ ಸಹಾಯಹಸ್ತ ಚಾಚಿದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿ
ಕುಂದಾಪುರ (ಜು, 04): ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ಗಿರಿಜಾ ಮೊಗವೀರ ರ ಬಡ ಕುಟಂಬದ ಮನೆ ನಿರ್ಮಾಣಕ್ಕೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ( ರಿ) ಉಪ್ಪುಂದ ಇದರ ಅಧ್ಯಕ್ಷರಾದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಸಹಾಯಹಸ್ತ ಚಾಚಿದ್ದಾರೆ. ಗಿರಿಜಾರವರ ಮನೆಯ ಮೇಲ್ಛಾವಣಿಯ ಕಾಮಗಾರಿ ವೆಚ್ಚವನ್ನ ಭರಿಸುವುದಾಗಿ ಶ್ರೀ ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ. ಸ್ವತಃ ತಾವೇ ಗಿರಿಜಾ ರವರ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ […]