ಕಲ್ಯಾಣಪುರ(ಜು,22): ಮಿಲಾಗ್ರಿಸ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ದಿನಾಂಕ ಜುಲೈ 22 ರ ಗುರುವಾರದಂದು ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ಸಂತೆಕಟ್ಟೆ ಪರಿಸರದ ನಯಂಪಳ್ಳಿ ಮತ್ತು ಕೊಡಂಕೂರು ಪರಿಸರದ ಗದ್ದೆಯಲ್ಲಿ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಇದರ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಇದರ ಕೋಶಾಧಿಕಾರಿಗಳಾದ ಶ್ರೀ ರಾಘವೇಂದ್ರ ಕಿಣಿ […]
Day: July 22, 2021
ಸರಕಾರಿ ಪದವಿಪೂರ್ವ ಕಾಲೇಜು,ನಾವುಂದ : ಚವೀಶ್ ಜೈನ್ ಕಾಲೇಜಿಗೆ ಪ್ರಥಮ ಸ್ಥಾನ
ನಾವುಂದ (ಜು,22): ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು,ಇದರಲ್ಲಿ ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ನಾವುಂದ ಚವೀಶ್ ಜೈನ್ 600 ರಲ್ಲಿ 590 ಅಂಕಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಕಾಲೇಜಿನ ಪ್ರಾಂಶುಪಾಲರು, ಭೋಧಕ ಹಾಗೂ ಭೋಧಕೇತರ ವ್ರಂದ ಚವೀಶ್ ಜೈನ್ ಗೆ ಶುಭಾಶಯ ಕೋರಿರುತ್ತಾರೆ.
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್: ನೂತನ ಸಾರಥಿಯಾಗಿ ಲ.ಜಯಶೀಲ ಶೆಟ್ಟಿ ಕಂದಾವರ ಆಯ್ಕೆ
ಕುಂದಾಪುರ( ಜುಲೈ .22): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ನೂತನ ಸಾರಥಿಯಾಗಿ ಕೋಡಿ ಬ್ಯಾರೀಸ್ ಪ್ರೌಢಶಾಲೆಯ ಅಧ್ಯಾಪಕರೂ, ಉಡುಪಿ ಜಿಲ್ಲಾ ಸಮಾಜ ವಿಜ್ಞಾನ ಶಿಕ್ಷಕರ ಸಂಘದ ಗೌರವಾಧ್ಯಕ್ಷರೂ, ಕುಂದಾಪುರ ಬುಕ್ ಹೌಸ್ ನ ಮಾಲೀಕರಾದ ಲ. ಜಯಶೀಲ ಶೆಟ್ಟಿ ಕಂದಾವರ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕುಂದಾಪುರದ ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಲ.ಗಿರೀಶ್ ಮೇಸ್ತ , ಕೋಶಾಧಿಕಾರಿಯಾಗಿ ಶ್ರೀ ರಾಮಕೃಷ್ಣ ಕೋ ಆಪರೇಟಿವ್ ಸೊಸೈಟಿ […]
ಲಯನ್ಸ್ ಜಿಲ್ಲೆ 317 ಸಿ, ಪ್ರಾಂತ್ಯ 5 ರ ವ್ಯಾಪ್ತಿಯ, ವಲಯ 2 ರ ವಲಯಾಧ್ಯಕ್ಷರಾಗಿ ಲ. ಅಶೋಕ್ ಶೆಟ್ಟಿ ಸಂಸಾಡಿ ಅಯ್ಕೆ
ಕುಂದಾಪುರ(ಜು 22) : ಲಯನ್ಸ್ ಜಿಲ್ಲೆ 317 ಸಿ, ಪ್ರಾಂತ್ಯ 5 ರ ವ್ಯಾಪ್ತಿಯ, ವಲಯ 2 ರ ವಲಯಾಧ್ಯಕ್ಷರಾಗಿ ಕುಂದಾಪುರದ ಪ್ರತಿಷ್ಠಿತ ಜೆ.ಕೆ ಹೋಟೆಲ್ ನ ಆಡಳಿತ ಪಾಲುದಾರರು, ಯುವ ಉದ್ಯಮಿ, ರಾಜಕೀಯ ಧುರೀಣರು, ಸಮಾಜ ಸೇವಕರು ಹಾಗೂ ಕೊಡುಗೈ ದಾನಿಯಾದ ಲ. ಅಶೋಕ್ ಶೆಟ್ಟಿ ಸಂಸಾಡಿ Mjf ಯವರನ್ನು ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ನಿಯುಕ್ತಿಗೊಳಿಸಿದ್ದಾರೆ. ಲ. ಅಶೋಕ್ ಶೆಟ್ಟಿ ಸಂಸಾಡಿ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ […]
ಸಂತ ಮೇರಿ ಮಹಾವಿದ್ಯಾಲಯ, ಶಿರ್ವ : ಹಸಿರಿನಿಂದ ಉಸಿರು – ವನ ಮಹೋತ್ಸವ ಕಾರ್ಯಕ್ರಮ
ಶಿರ್ವ(ಜು,22): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಗ್ರೀನ್ ಟೀಚರ್ ಫೋರಂ, ಎನ್ ಸಿಸಿ, ಎನ್ಎಸ್ ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋವರ್ಸ-ರೇಂಜರ್ಸ್ ಸಂಯುಕ್ತ ಆಶ್ರಯದಲ್ಲಿ ಹಸಿರಿನಿಂದ ಉಸಿರು – ವನಮಹೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ಕ್ಯಾಂಪಸ್ ನಲ್ಲಿ ಫಲನೀಡುವ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೆನ್ನಿಸ್ ಅಲೆಕ್ಸಾಂಡರ್ ಡೇಸ್ ರವರು ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾಲೇಜಿನ […]
ಉಪ್ಪುಂದ : ಸಂಸ್ಥೆಯ ಸಿಬ್ಬಂದಿಗಳಿಗೆ 1 ಲಕ್ಷ ಮೌಲ್ಯದ ಹೆಲ್ತ್ ಕಾರ್ಡ್ ವಿತರಿಸಿದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿ
ಉಪ್ಪುಂದ (ಜು,22):ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ವರಲಕ್ಷ್ಮೀ ಕೋ -ಆಪರೇಟಿವ್ ಸೊಸೈಟಿಯ ನೌಕರರಿಗೆ, ನಿರ್ದೇಶಕರಿಗೆ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಿಗೆ ತನ್ನ ಸ್ವಂತ ಹಣದಲ್ಲಿ ಸುಮಾರು 1 ಲಕ್ಷ ರೂ, ಮೌಲ್ಯದ ಹೆಲ್ತ್ ಕಾರ್ಡ್ ನ್ನು ವಿತರಿಸಿದರು. ತಮ್ಮ ಸಂಸ್ಥೆಯಲ್ಲಿ ದುಡಿಯುವ ಸಿಬ್ಬಂದಿಗಳಿಗೆ ಆರೋಗ್ಯ ತುರ್ತು ಸಂದರ್ಭದಲ್ಲಿ ಈ ಹೆಲ್ತ್ ಕಾರ್ಡ್ ಬಳಸಿ […]