ಕೋಟೇಶ್ವರ (ಜು, 29) : ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ). ಉಡುಪಿ ಜಿಲ್ಲೆ ಇದರ ಕೋಟೇಶ್ವರ ಘಟಕದ 2021- 2023 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜುಲೈ,25 ರಂದು ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಕಛೇರಿಯಲ್ಲಿ ನಡೆಯಿತು. ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸುನೀಲ್. ಜಿ. ನಾಯ್ಕ್ ಚಾತ್ರಬೆಟ್ಟು, ಗೌರವಾಧ್ಯಧ್ಯಕ್ಷರಾಗಿ ಸೌರಭ ರಾಜೀವ ಮರಕಾಲ ಬೀಜಾಡಿ, ಕಾರ್ಯದರ್ಶಿಯಾಗಿ ಪುಂಡಲೀಕ ಮೊಗವೀರ ತೆಕ್ಕಟ್ಟೆ, […]
Month: July 2021
ಗೋಪಾಡಿ : ಶ್ರೀ ರಾಮ ಮಂದಿರದ ಬಳಿ ಪುನುಗು ಬೆಕ್ಕಿನ ರಕ್ಷಣೆ – ಅರಣ್ಯ ಇಲಾಖೆಗೆ ಹಸ್ತಾಂತರ
ಗೋಪಾಡಿ (ಜು, 28) : ಇಲ್ಲಿನ ಶ್ರೀ ರಾಮ ಮಂದಿರದ ಬಳಿ ಅಪರೂಪದ ಪುನುಗು ಬೆಕ್ಕುನ್ನು ಶ್ರೀರಾಮ ಭಜನಾ ಮಂದಿರದ ಸದಸ್ಯರಾದ ಭರತ್ ಶ್ರೀನಿವಾಸ ಕುಂದರ್, ಮಹೇಶ ಕುಂದರ್, ಸಂತೋಷ ಪೂಜಾರಿ ಹಾಗೂ ಕಾರ್ತಿಕ್ ಪೂಜಾರಿಯವರು ಅದನ್ನು ಸುರಕ್ಷಿತವಾಗಿ ರಕ್ಷಿಸಿ ಕುಂದಾಪುರದ ಅರಣ್ಯ ಇಲಾಖೆಯ ಅಧಿಕಾರಿ ಶ್ರೀ ಉಮೇಶ್ ರವರಿಗೆ ಒಪ್ಪಿಸಿದರು.
ಶ್ರೀ ವಿವೇಕಾನಂದರಿಂದ ಮಾನವೀಯ ಮೌಲ್ಯಗಳ ಪುನರುತ್ಥಾನದ ಜನಜಾಗೃತಿ ಪಾದಯಾತ್ರೆ
ಮಾನವೀಯ ಮೌಲ್ಯಗಳ ಪುನರುತ್ಥಾನ ಎಂಬ ವಿಷಯದೊಂದಿಗೆ ಶ್ರೀ ವಿವೇಕಾನಂದ ಹೆಚ್. ಜಿ ಯವರು ಬೀದರ್ ಜಿಲ್ಲೆಯ ವನಮಾರ್ಪಳ್ಳಿಯಿಂದ ನವೆಂಬರ್, 1 ರಂದು ಹೊರಟು ಸುಮಾರು 8 ಸಾವಿರ ಕಿಲೋಮೀಟರ್ ಪಾದಯಾತ್ರೆಗೈಯುತ್ತ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ನೇಹಿತರ ಸರಳ ಆತಿಥ್ಯವನ್ನು ಸ್ವೀಕರಿಸಿ, ಆಶ್ರಯವನ್ನು ಪಡೆದು ರಾಜ್ಯದಾದ್ಯಂತ ಮಾನವೀಯ ಮೌಲ್ಯಗಳ ಕುರಿತಾಗಿ ಅರಿವು ಮೂಡಿಸುತ್ತಿದ್ದಾರೆ. ಇವರ ಪಾದಯಾತ್ರೆ ಜುಲೈ,26 ರಂದು ಬೈಂದೂರಿನ ನಾವುಂದಕ್ಕೆ ಬಂದು ತಲುಪಿದ ಸಂದರ್ಭದಲ್ಲಿ ಬೈಂದೂರಿನ ಜನತೆಯ ವತಿಯಿಂದ ಪ್ರೀತಿಪೂರ್ವಕವಾಗಿ […]
ಮಡಿಕೇರಿ : ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ
ಮಡಿಕೇರಿ (ಜು. 28) : ಇಲ್ಲಿನ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ 6 ನೇ ತರಗತಿಯ ಪ್ರವೇಶಕ್ಕೆ ಆಗಸ್ಟ್, 11 ರಂದು ಜಿಲ್ಲೆಯ 06 ಕೇಂದ್ರಗಳಲ್ಲಿ ಆಯ್ಕೆ ಪರೀಕ್ಷೆ ನಡೆಯಲಿದೆ. ಪ್ರವೇಶ ಪತ್ರವನ್ನು ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಬಳಸಿ https://cbseitms.nic.in/index.aspx ಲಿಂಕ್ ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನೀರಜ್ 7676825036, ಪದ್ಮ ಡಿ.ಟಿ. 7019054680 ಮತ್ತು ಗಂಗಾಧರನ್ ಕೆ. 6363354829 ನ್ನು ಸಂಪರ್ಕಿಸಬಹುದು ಎಂದು ಜವಾಹರ್ ನವೋದಯ […]
ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್ : “ಕ್ಲೌಡ್ ಕಂಪ್ಯೂಟಿಂಗ್” ವಿಷಯದ ಕುರಿತು ತಾಂತ್ರಿಕ ಕಾರ್ಯಗಾರ
ಉಡುಪಿ (ಜು, 27) : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಆಶ್ರಯದಲ್ಲಿ “ಕ್ಲೌಡ್ ಕಂಪ್ಯೂಟಿಂಗ್” ಎಂಬ ವಿಷಯದ ಕುರಿತು ಜುಲೈ 21 ರಂದು ತಾಂತ್ರಿಕ ಉಪನ್ಯಾಸವನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿತ್ತು. ಐ.ಐ.ಐ.ಟಿ. ಕೊಟ್ಟಾಯಂ ನ ಪ್ರಾಧ್ಯಾಪಕರಾದ ಪ್ರೊ.ಕ್ರಿಸ್ಟಿನಾ ತೆರೇಸ್ ಜೋಸೆಫ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಕಾರ್ಯಗಾರವನ್ನು “ಕಂಪ್ಯೂಟರ್ ವಿಷನ್” ಕುರಿತು 30 ಗಂಟೆಗಳ, ಮೌಲ್ಯವರ್ಧಿಕ ಕೋರ್ಸ್ ನ ಸಮಾರೋಪ ಕಾರ್ಯಕ್ರಮಕ್ಕಾಗಿ ಆಯೋಜಿಸಲಾಗಿತ್ತು. […]
ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಕುಂದಾಪುರ (ಜು, 27) : ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಘಟಕ ಆಶ್ರಯದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಜುಲೈ, 26 ರಂದು ಆಯೋಜಿಸಲಾಗಿತ್ತು. ನಿವ್ರತ್ತ ಸೈನಿಕ ರವಿಚಂದ್ರ ಶೆಟ್ಟಿ ತೆಕ್ಕಟ್ಟೆಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸೈನ್ಯದ ಸಿಕ್ಕಿಂ ಮತ್ತು ಸಿಯಾಚಿನ್ ದಿನಗಳನ್ನು ನೆನಪಿಸಿ ರೋಮಾಂಚಗೊಳಿಸಿದರು. ಸೈನ್ಯಕ್ಕೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿಯೂ ತಿಳಿಸಿದರು. ಕಾರ್ಯಕ್ರಮದ […]
ದಿ ಅನಿಸಿಕೆ ಹೌಸ್ ತಂಡದ ಯುಟ್ಯೂಬ್ ಚಾನೆಲ್ ಉದ್ಘಾಟಿಸಿದ ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರೂರ್
ಕುಂದಾಪುರ (ಜು, 26) : ತರೆಮರೆಯ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವುದರ ಜೊತೆಗೆ ನಮ್ಮ ಸುತ್ತಮುತ್ತಲಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಹುಟ್ಟಕೊಂಡಿರುವ ದಿ ಅನಿಸಿಕೆ ಹೌಸ್ ಇನ್ಸ್ಟಾಗ್ರಾಮ್ ಪೇಜ್ ನ ಯುಟ್ಯೂಬ್ ಚಾನೆಲ್ ನ್ನು ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರೂರ್ ರವರು ಜುಲೈ, 25 ರಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಂಡದ ಮುಖ್ಯ ಸದಸ್ಯರಾದ ಸಂಪತ್ ಶೆಟ್ಟಿ, ಸಂಜಯ್ ಶೆಟ್ಟಿ, ಸಾಮ್ಯೂಲ್ ಹಾಗೂ ಇತರರು ಉಪಸ್ಥಿತರಿದ್ದರು. “The […]
ಸರಸ್ವತಿ ವಿದ್ಯಾಲಯದಲ್ಲಿ ನೀಟ್, ಸಿಇಟಿ ಮತ್ತು ಜೆಇಇ ತರಬೇತಿ ಕಾರ್ಯಕ್ರಮ
ಗಂಗೊಳ್ಳಿ (ಜು, 26) : ಇಲ್ಲಿನ ಜಿ .ಎಸ್ .ವಿ .ಎಸ್ ಅಸೋಸಿಯೇಷನ್ ವತಿಯಿಂದ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಈ ಸಾಲಿನ ಶೈಕ್ಷಣಿಕ ವರ್ಷದ ಸಿಇಟಿ, ನೀಟ್ ಮತ್ತು ಜೆಇಇ ಪರೀಕ್ಷಾ ತರಬೇತಿ ಕಾರ್ಯಕ್ರಮ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ ರೋಟರಿ ಇಂಡೋರ್ ಸ್ಟೇಡಿಯಂನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕರಾದ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಇಲಾಖಾ ಪರೀಕ್ಷೆಗಳ […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಬೈಂದೂರು : ಕೊಲ್ಲೂರು ವಲಯ ಮೆಕ್ಕೆ ಒಕ್ಕೂಟದ ಸಂಘದ ಸದಸ್ಯರಿಗೆ 9 ಲಕ್ಷ ರೂ, ಲಾಭಾಂಶ ಮೊತ್ತ ವಿತರಣೆ
ಹೆಮ್ಮಾಡಿ (ಜು, 25): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ಇದರ ಕೊಲ್ಲೂರು ವಲಯದ ಮೆಕ್ಕೆ ಒಕ್ಕೂಟದ ಸಂಘದ ಸದಸ್ಯರಿಗೆ ರೂ,9 ಲಕ್ಷಕ್ಕೂ ಹೆಚ್ಚಿನ ಲಾಭಾಂಶದ ಮೊತ್ತವನ್ನು ವಿತರಣೆ ಮಾಡಲಾಯಿತು. ಮೆಕ್ಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಲಾಭಾಂಶ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಎಂ ಜೆ. ಬೇಬಿರವರು ವಹಿಸಿದ್ದರು. ಯೋಜನೆಯ ತಾಲೂಕು ಲೆಕ್ಕಪರಿಶೋಧಕರಾದ ರಾಘವೇಂದ್ರರವರು ಸದಸ್ಯರಿಗೆ ಮಾಹಿತಿ ನೀಡಿದರು. ಸೇವಾಪ್ರತಿನಿಧಿ ರಾಮ […]
ಬಕ್ರೀದ್ ಹಬ್ಬದ ಆಚರಣೆಯ ಹಿನ್ನೆಲೆ
ಮುಸ್ಲಿಂ ಸಮುದಾಯ ಆಚರಿಸುವ ಹಬ್ಬಗಳಲ್ಲಿ ರಂಜಾನ್ ಮತ್ತು ಬಕ್ರೀದ್ ಪ್ರಮುಖವಾದುದು. ರಂಜಾನ್, ಮುಸ್ಲಿಂ ಸಮುದಾಯ ತಮ್ಮ ಬದುಕಿನಲ್ಲಿ ಅನುಸರಿಸಬೇಕಾದ 5 ಪ್ರಮುಖ ತತ್ವಗಳಲ್ಲಿ ಒಂದಾದರೆ, ಬಕ್ರೀದ್ ತ್ಯಾಗದ ಪ್ರತೀಕವಾಗಿ ಆಚರಿಸಲಾಗುತ್ತದೆ. ಬಕ್ರೀದ್ ನ್ನು ಈದ್-ಉಲ್-ಅದಾ ಎಂದು ಸಹ ಕರೆಯುತ್ತಾರೆ. ಈದ್-ಉಲ್-ಅದಾ(ಬಕ್ರೀದ್) ಇದರ ಹಿಂದೆ ಒಂದು ರೋಚಕ ಇತಿಹಾಸವೇ ಇದೆ. ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹು ಯಾರನ್ನು ಹೆಚ್ಚು ಪ್ರೀತಿಸುತ್ತಾನೋ ಅಂತಹ ವ್ಯಕ್ತಿಗಳಿಗೆ ಕಷ್ಟ ಕೊಟ್ಟು ಅವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾನೆ […]










