ಕೊಲ್ಲೂರು (ಆ,18): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲೂರು ವಲಯದ ಒಕ್ಕೂಟ ಅಧ್ಯಕ್ಷರ ಹಾಗೂ ಸೇವಾಪ್ರತಿನಿಧಿ ಸಭೆ ಆಗಸ್ಟ್,18ರಂದು ಬೀಸಿನಪಾರೆ ಸಭಾ ಭವನದಲ್ಲಿ ನಡೆಯಿತು. ವಲಯಾಧ್ಯಕ್ಷರಾದ ಜಯರಾಮ್ ಪೂಜಾರಿ ಚಕ್ರಮೈದಾನ ರವರು ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಲೂಕು ಯೋಜನಾಧಿಕಾರಿ ಶ್ರೀಮತಿ ಶಶಿರೇಖಾರವರು ದೀಪ ಬೆಳಗಿಸುವುದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ವಲಯ ಹಾಗೂ ಒಕ್ಕೂಟಗಳ ಪ್ರಗತಿ ಪರಿಶೀಲನೆ ಮಾಡಿದರು. ಅಲ್ಲದೆ 24/8/21 ರಂದು ನಡೆಯುವ ಪ್ರಾದೇಶಿಕ ನಿರ್ದೇಶಕರ ಜೊತೆಗೆ ಪ್ರಗತಿ […]
Day: August 18, 2021
ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಸ್ಟಡೀಸ್ : 75ನೇ ಸ್ವಾತಂತ್ರ್ಯೋತ್ಸವ
ಮಧುವನ(ಆ,18): ಸ್ವತಂತ್ರ ದಿನದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಇ ಸಿ ಆರ್ ಗ್ರೂಪ್ ಅಫ್ ಇನ್ಸ್ಟಿಟ್ಯೂಶನ್ಸ್ನ ಆವರಣದಲ್ಲಿ ಇ ಸಿ ಆರ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಮಧು ಟಿ ಭಾಸ್ಕರನ್ ಹಾಗೂ ಉಪಾಧ್ಯಕ್ಷರಾದ ಶ್ರೀ ಕೀರ್ತಿ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳು ದೇಶಕ್ಕೆ ಮೊದಲ ಆದ್ಯತೆ ನೀಡಿ, ಭಾರತವನ್ನು ಸ್ವತಂತ್ರಗೊಳಿಸಲು ದುಡಿದು ಮಡಿದವರ ತ್ಯಾಗ ಬಲಿದಾನವನ್ನು ಸ್ಮರಿಸಿಕೊಳ್ಳುತ್ತಾ ಭವಿಷ್ಯದಲ್ಲಿ ದೇಶಕ್ಕಾಗಿ ದುಡಿಯುವ ಅವಕಾಶ ಒದಗಿ ಬರಲಿ ಎಂದು ಹಾರೈಸುತ್ತಾ […]
ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಸ್ಟಡೀಸ್ : ಬಹುಮಾನ ವಿತರಣಾ ಕಾರ್ಯಕ್ರಮ
ಮಧುವನ ( ಆ, 18): ಇಲ್ಲಿನ ಇ ಸಿ ಆರ್ ಕಾಲೇಜಿನಲ್ಲಿ ಸ್ವತಂತ್ರ ದಿನದ ಅಮೃತ ಮಹೋತ್ಸವದ ಅಂಗವಾಗಿ ನಡೆಸ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ವಿಶ್ವ ಯೋಗದಿನದ ಅಂಗವಾಗಿ ನಡೆದ “ಮನೆಯಲ್ಲಿಯೇ ಯೋಗ” ಎಂಬ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪ್ರಥಮ ವರ್ಷದ ಬಿ. ಬಿ. ಎ ವಿದ್ಯಾರ್ಥಿನಿ ಕುಮಾರಿ ಬಿಂದುಶ್ರೀ ಯವರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಧು ಟಿ ಭಾಸ್ಕರ್ ಅವರು ರೂ. 5000 ನಗದು ಬಹುಮಾನ […]
ಸ್ಪರ್ಧೆಯಲ್ಲಿ ಭಾಗವಹಿಸಲು ಸ್ವಂತಿಕೆ ಹಾಗೂ ಸೃಜನಶೀಲತೆ ಪ್ರಮುಖವಾದುದು – ನರೇಂದ್ರ .ಎಸ್ .ಗಂಗೊಳ್ಳಿ
ಗಂಗೊಳ್ಳಿ (ಆ,18) :ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಅದರ ನೀತಿ-ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ವಿಷಯ ಸಂಗ್ರಹಣೆಗಾಗಿ ವಿವಿಧ ಆಕರಗಳನ್ನು ಬಳಸಿಕೊಂಡರೂ ಕೂಡ ಸ್ವಂತಿಕೆ ಸೃಜನಶೀಲತೆ ಮುಖ್ಯವಾಗಬೇಕು ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಶ್ರೀ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ(ರಿ)ಯ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢಶಾಲಾ […]
ಸುಣ್ಣಾರಿ ಎಕ್ಸ್ಲೆಂಟ್ ಕಾಲೇಜಿನಲ್ಲಿ ವನಮಹೋತ್ಸವ ಆಚರಣೆ
ಕೋಟೇಶ್ವರ (ಆ,18): ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಮೂಡಬಿದ್ರೆ, ಶಿಕ್ಷಾಪ್ರಭಾ ಅಕಾಡೆಮಿ ಕುಂದಾಪುರ, ಹಾಗೂ ಲಯನ್ಸ್ ಕ್ಲಬ್ ಹಂಗಳೂರು (ಕುಂದಾಪುರ) ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ , 6 ರಂದು ವನಮಹೋತ್ಸವ ಕಾರ್ಯಕ್ರಮ ಸುಣ್ಣಾರಿ ಎಕ್ಸ್ಲೆಂಟ್ ಕಾಲೇಜಿನಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಮಾರುತಿಯವರು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಎಮ್.ಎಮ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎಂ. […]
ಸುಣ್ಣಾರಿ ಎಕ್ಸಲೆಂಟ್ ಕಾಲೇಜು :ಸಂಭ್ರಮದ 75ನೇ ಸ್ವಾತಂತ್ರ್ಯ ದಿನಾಚರಣೆ
ಕೋಟೇಶ್ವರ (ಆ ,18): ಇಲ್ಲಿನ ಸುಣ್ಣಾರಿ ಎಕ್ಸಲೆಂಟ್ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರದ ಪ್ರಸಿದ್ಧ ಹೋಮಿಯೋಪತಿ ವೈದ್ಯರಾದ, ಡಾಕ್ಟರ್ ಉತ್ತಮ್ ಕುಮಾರ್ ಶೆಟ್ಟಿ ಧ್ವಜಾರೋಹಣ ಮಾಡಿ, ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಬದುಕಿನ ಬಗ್ಗೆ ತಿಳಿಸಿದರು. ಸುಜ್ಞಾನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್ ರಮೇಶ್ ಶೆಟ್ಟಿ ಮಾತನಾಡಿ ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಇನ್ನೂರು ವರ್ಷ […]
ಹರೀಶ್ ಬಂಗೇರ ತಾಯ್ನಾಡಿಗೆ ಆಗಮನ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಬೆಂಗಳೂರು ಏರ್ಪೋರ್ಟ್
ಬೆಂಗಳೂರು (ಆ,18): ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿದ್ದ ಕುಂದಾಪುರ ಮೂಲದ ಹರೀಶ್ ಬಂಗೇರ ಬೆಂಗಳೂರು ಏರ್ಪೋರ್ಟ್ ತಲುಪಿದ್ದಾರೆ. ಸೌದಿ ದೊರೆಯ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆಂದು ಆರೋಪ ಎದುರಿಸಿರುವ ಹರೀಶ್ ನಿರಪರಾಧಿ ಎಂದು ತಿಳಿದ ಮೇಲೆ ಸೌದಿ ಅರೇಬಿಯಾ ಸರಕಾರ ಇವರನ್ನು ಬಿಡುಗಡೆಗೊಳಿಸಿದ್ದು,ಇದೀಗ ಕುಂದಾಪುರ ಪರಿಸರದ ಜನತೆಗೆ ಸಂತೋಷ ತಂದಿದೆ. ಬೆಂಗಳೂರಿಗೆ ಆಗಮಿಸಿದ ಹರೀಶ್ ಬಂಗೇರರನ್ನು ಲೋಕೇಶ್ ಅಂಕದಕಟ್ಟೆ ಮತ್ತು ತಂಡ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಬರಮಾಡಿಕೊಂಡರು.