ಕೋಟೇಶ್ವರ (ಆ,25): ಕರೋನಾ ಮುಕ್ತ ಗ್ರಾಮ ಪ್ರಶಂಸೆಗೆ ಪಾತ್ರವಾದ ಗೋಪಾಡಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನಿರಂತರ ಪ್ರಯತ್ನದಿಂದಾಗಿ ಕರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು ,ಮುಂಜಾಗ್ರತಾ ಕ್ರಮವಾಗಿ ಸತತ ನಾಲ್ಕನೇ ಬಾರಿಗೆ ಕೋವಿಡ್ ಲಸಿಕಾ ಅಭಿಯಾನವನ್ನು ಆಗಸ್ಟ್ ,24 ರಂದು ಆಯೋಜಿಸಲಾಗಿತ್ತು. ಈ ಅಭಿಯಾನ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಸರ್ವ ಸದಸ್ಯರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಎಸ್ ಡಿ.ಎಂ.ಸಿ ಅಧ್ಯಕ್ಷರು,ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು […]
Month: August 2021
ನಾ ಕಂಡಂತೆ ಕರುಣಾಮಯಿ ಶ್ರೀ ಗೋವಿಂದ ಬಾಬು ಪೂಜಾರಿ
ಅದು ಇಡೀ ಜಗತ್ತನ್ನೇ ಸರ್ವನಾಶ ಮಾಡಲು ಬಂದ ಕರೋನ ಮಹಾಮಾರಿಯ ಆರಂಭದ ಸಮಯ. ಕರೋನಾ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ಡೌನ್ ಅನಿವಾರ್ಯವಾಗಿ ಆ ಸಂದರ್ಭದಲ್ಲಿ ಕಂಡುಬಂದರೂ ಸಹ ಹಲವರ ಬದುಕಿನ ದಿಕ್ಕು ತಪ್ಪಿದಂತೂ ಸುಳ್ಳಲ್ಲ. ಸರಿಸುಮಾರು ನಾಲ್ಕು ತಿಂಗಳು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದೆ. 30 ವರ್ಷದಿಂದ ಮುಂಬೈಯಲ್ಲಿ ವಾಸವಾಗಿದ್ದ ನನಗೆ ಬಹುತೇಕ ಎಲ್ಲಾ ಕ್ಯಾಟ್ ರಿಂಗ್ ವಲಯದ ಒಡನಾಟವಿದೆ. ಸಣ್ಣ ಮಟ್ಟದಲ್ಲಿ ನನ್ನ ಒಡೆತನದಲ್ಲಿ ಆಕಾಶ್ ಹೆಲ್ತ್ ಫುಡ್ ಪಾಸ್ತಾ ಅಂಡ್ […]
ಪುರಾಣ ಪ್ರಸಿದ್ಧ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ನಟ,ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ
ವಂಡ್ಸೆ (ಆ,24): ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಪುರಾಣ ಪ್ರಸಿದ್ಧ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಆಗಸ್ಟ್,24 ರಂದು ಕನ್ನಡ ಚಿತ್ರರಂಗದ ಹೆಸರಾಂತ ನಟ,ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪ್ರದೀಪ್ ಶೆಟ್ಟಿ ಬೆಳ್ಳಾಲ ,ದಿವ್ಯಾಧರ್ ಶೆಟ್ಟಿ ಕೆರಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕೆರಾಡಿಯಿಂದ ನಾಲೈದು ಕಿಲೋಮೀಟರ್ ಕಾಡು ದಾರಿಯಲ್ಲಿ ಸಾಗಿದರೆ ಅತ್ಯoತ ಎತ್ತರದ ಸ್ಥಳದಲ್ಲಿ ಉರ್ಧ್ವಮುಖಿಯಾಗಿ ಮೂಡುಗಲ್ಲು ಗುಹೆಯ ಒಳಗೆ ಹರಿಯುವ ನೀರಿನ […]
ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ : ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಮಂಗಳೂರು (ಆ, 24) : ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಸ್ಥೆಯಾದ ವಿಜ್ಞಾನ ಭಾರತಿ ಯ ಕರ್ನಾಟಕದ ಘಟಕವಾದ ಸ್ವದೇಶಿ ವಿಜ್ಞಾನ ಆಂದೋಳನ – ಕರ್ನಾಟಕ’ ಸಂಸ್ಥೆ ಇದೇ ಸೆಪ್ಟೆಂಬರ್ 15 ರಿಂದ 17ರ ವರೆಗೆ 16ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದೊಂದಿಗೆ, ಮಂಗಳ […]
ಬೈಂದೂರು ಮಂಡಲ ಬಿ.ಜೆ.ಪಿ. ಎಸ್ಸಿ ಮೊರ್ಚಾ : ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಶಾಸಕರ ಬಿ. ಎಂ. ಸುಕುಮಾರ ಶೆಟ್ಟಿಯವರಿಗೆ ಮನವಿ
ವಂಡ್ಸೆ (ಆ, 23) : ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಬೈಂದೂರು ಮಂಡಲ ಬಿ.ಜೆ.ಪಿ ಎಸ್ಸಿ ಮೊರ್ಚಾದ ಸದಸ್ಯರು ಕ್ಷೇತ್ರದ ಶಾಸಕರಾದ ಬಿ ಎಂ ಸುಕುಮಾರ ಶೆಟ್ಟಿಯವರಿಗೆ ಆಗಸ್ಟ್,22 ರಂದು ಶಾಸಕರ ನಿವಾಸಕ್ಕೆ ತೆರಳಿ ಮನವಿ ನೀಡಿದರು. ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ಚಂದ್ರ ಪಂಚವಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಮೂಡುಬಗೆ, ನಿಕಟಪೂರ್ವ ತಾಲೂಕು ಪಂಚಾಯಿತಿ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಹಾಗೂ […]
ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ : ಭಕ್ತರಿಂದ ದೇವಾಲಯದ ಗರ್ಭಗುಡಿ ದ್ವಾರಕ್ಕೆ ಹಿತ್ತಾಳೆ ಹೋದಿಕೆ ಹಾಗೂ ಪ್ರಭಾವಳಿ ಹಸ್ತಾಂತರ
ಬೈಂದೂರು (ಆ, 23) : ವಿಶ್ವಕರ್ಮ ಸಮಾಜಬಾಂಧವರ ಪ್ರಮುಖ ಧಾರ್ಮಿಕ ಕೇಂದ್ರವಾದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಳ್ಳೂರು -11 ರ ಉಪ್ರಳ್ಳಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಗರ್ಭಗುಡಿಯ ಶಿಲಾಮಯ ದ್ವಾರಬಾಗಿಲುಗಳಿಗೆ ಭಕ್ತರಾದ ಶ್ರೀ ಯೋಗೀಶ್ ಆಚಾರ್ಯ ಮತ್ತು ಶ್ರೀಮತಿ ಶರ್ಮಿಳಾ ಯೋಗೀಶ್ ಆಚಾರ್ಯ ಬಸ್ರೂರು ದಂಪತಿಗಳು ಹಿತ್ತಾಳೆಯ ಕಲಾತ್ಮಕ ಹೊದಿಕೆಯನ್ನು ಹಾಗೂ ಸುಬ್ರಾಯ ಆಚಾರ್ಯ ಮತ್ತು ಮಕ್ಕಳು ಅಕ್ಸಾಲಿಮನೆ ಬಗ್ವಾಡಿ ಯವರು ದೇವರಿಗೆ ಹಿತ್ತಾಳೆಯ ಪ್ರಭಾವಳಿಯನ್ನು ಸೇವಾರೂಪದಲ್ಲಿ ದೇವಾಲಯದ […]
ಗಂಗೊಳ್ಳಿ: ಮೀನುಗಾರರಿಗೆ ಅತ್ಯಾಧುನಿಕ ಜೀವ ರಕ್ಷಕ ಸಲಕರಣೆ ಗಳನ್ನು ಸರಕಾರ ಒದಗಿಸಬೇಕು: ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ ಮನವಿ
ಗಂಗೊಳ್ಳಿ(ಆ,22): ಸರಕಾರ ಮೀನುಗಾರರಿಗೆ ಅತ್ಯಾಧುನಿಕವಾದ ಜೀವ ರಕ್ಷಕ ಸಲಕರಣೆಗಳು ಒದಗಿಸಬೇಕು ಹಾಗೂ ಅಳಿವೆ ಬಾಗಿಲಿನ ಸುತ್ತಮುತ್ತಲು ಮೀನುಗಾರರಿಗೆ ಯಾವುದೇ ರೀತಿಯ ಜೀವ ಹಾನಿಯಾಗದಂತೆ 24X7 ರಕ್ಷಣಾ ಪಡೆ ನಿರ್ಮಿಸಿ ಕಾರ್ಯನಿರತರಾಗುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಗಂಗೊಳ್ಳಿ ವಲಯ ನಾಡದೋಣಿ ಸಂಘದ ವತಿಯಿಂದ ಯಶವಂತ ಖಾರ್ವಿಯವರ ನೇತ್ರತ್ವದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕಿ ಸುಮಲತಾ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗಣಪತಿ ಖಾರ್ವಿ, ನಿರ್ದೇಶಕ ರಾಜೇಶ್ ಖಾರ್ವಿ ಹಾಗೂ ಜೊತೆ […]
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ 75ರ ಸ್ವಾತಂತ್ರ್ಯೋತ್ಸವ ಆಚರಣೆ
ಕುಂದಾಪುರ(ಆ,15): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ 75 ರ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ಕೋಟೇಶ್ವರದ ಅಂಶೂ ಐಕಾನ್ ಅಪಾರ್ಟ್ಮೆಂಟ್ ನಲ್ಲಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಲ.ಕಂದಾವರ ಜಯಶೀಲ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಮಹನೀಯರಾದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ. ಎಚ್. ಪ್ರಭಾಕರ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಗೋವಿಂದ ಶೆಟ್ಟಿ, ಶ್ರೀ […]
ವಿದ್ಯಾರ್ಥಿಗಳು ಆಂತರಿಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು: ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್
ಪುತ್ತೂರು(ಆ,22): ವಿದ್ಯಾರ್ಥಿಗಳು ಉತ್ತಮ ಉದ್ಯೋಗವನ್ನು ಪಡೆಯಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಆಂತರಿಕ ಶೈಕ್ಷ ಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದದು ಇಂದು ಅನಿವಾರ್ಯವಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಪೂರ್ವ ತಯಾರಿಯನ್ನು ಮಾಡುವುದರ ಜೊತೆಗೆ, ಸರಿಯಾದ ಮಾಹಿತಿ ಮತ್ತು ವೃತ್ತಿ ಮಾರ್ಗದರ್ಶನವನ್ನು ಪಡೆದು, ನಿರ್ದಿಷ್ಟ ಗುರಿಯನ್ನು ತಲುಪಬೇಕೇಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಗಣಕವಿಜ್ಞಾನ ವಿಭಾಗ […]
ಡಾ.ಬಿ.ಬಿ.ಹೆಗ್ಡೆ ಕಾಲೇಜು, ಕುಂದಾಪುರ: ಓಣಂ ಸಂಭ್ರಮ
ಕುಂದಾಪುರ (ಆ,21): ಇಲ್ಲಿನ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಓಣಂ ಹಬ್ಬವನ್ನು ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಹಿಂದಿ ವಿಭಾಗದ ಆಯೋಜನೆಯಲ್ಲಿ ಆಗಸ್ಟ್,21 ರಂದು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ ಉಮೇಶ್ ಶೆಟ್ಟಿ ಯವರು ದೀಪ ಬೆಳಗಿಸುವ ಮೂಲಕ ಓಣಂ ಆಚರಣೆಗೆ ಶುಭಹಾರೈಸಿದರು.ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ.ಚೇತನ್ ಶೆಟ್ಟಿ ಕೋವಾಡಿ,ಐಕ್ಯೂಎಸಿ ಘಟಕದ ಸಂಯೋಜಕಿ ಅವಿತಾ ಕೋರೆಯಾ,ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ದೀಪಾ ಹಾಗೂ ಕಾಲೇಜಿನ ಬೋಧಕ ,ಬೋಧಕೇತರ ವ್ರಂದ ಹಾಗೂ ವಿದ್ಯಾರ್ಥಿಗಳು […]