ಕೋಟೇಶ್ವರ (ಆ ,18): ಇಲ್ಲಿನ ಸುಣ್ಣಾರಿ ಎಕ್ಸಲೆಂಟ್ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರದ ಪ್ರಸಿದ್ಧ ಹೋಮಿಯೋಪತಿ ವೈದ್ಯರಾದ, ಡಾಕ್ಟರ್ ಉತ್ತಮ್ ಕುಮಾರ್ ಶೆಟ್ಟಿ ಧ್ವಜಾರೋಹಣ ಮಾಡಿ, ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಬದುಕಿನ ಬಗ್ಗೆ ತಿಳಿಸಿದರು. ಸುಜ್ಞಾನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್ ರಮೇಶ್ ಶೆಟ್ಟಿ ಮಾತನಾಡಿ ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಇನ್ನೂರು ವರ್ಷ […]
Month: August 2021
ಹರೀಶ್ ಬಂಗೇರ ತಾಯ್ನಾಡಿಗೆ ಆಗಮನ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಬೆಂಗಳೂರು ಏರ್ಪೋರ್ಟ್
ಬೆಂಗಳೂರು (ಆ,18): ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿದ್ದ ಕುಂದಾಪುರ ಮೂಲದ ಹರೀಶ್ ಬಂಗೇರ ಬೆಂಗಳೂರು ಏರ್ಪೋರ್ಟ್ ತಲುಪಿದ್ದಾರೆ. ಸೌದಿ ದೊರೆಯ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆಂದು ಆರೋಪ ಎದುರಿಸಿರುವ ಹರೀಶ್ ನಿರಪರಾಧಿ ಎಂದು ತಿಳಿದ ಮೇಲೆ ಸೌದಿ ಅರೇಬಿಯಾ ಸರಕಾರ ಇವರನ್ನು ಬಿಡುಗಡೆಗೊಳಿಸಿದ್ದು,ಇದೀಗ ಕುಂದಾಪುರ ಪರಿಸರದ ಜನತೆಗೆ ಸಂತೋಷ ತಂದಿದೆ. ಬೆಂಗಳೂರಿಗೆ ಆಗಮಿಸಿದ ಹರೀಶ್ ಬಂಗೇರರನ್ನು ಲೋಕೇಶ್ ಅಂಕದಕಟ್ಟೆ ಮತ್ತು ತಂಡ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಬರಮಾಡಿಕೊಂಡರು.
ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ : ಯುವ ತಿರಂಗಾ ಯಾತ್ರಾ ಸೈಕಲ್ ಜಾಥಾ
ಕುಂದಾಪುರ (ಆ, 16) : ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಆಗಸ್ಟ್15 ರಂದು ಯುವ ತಿರಂಗಾ ಯಾತ್ರಾ ಸೈಕಲ್ ಜಾಥಾ ನಡೆಯಿತು. ಕುಂದಾಪುರ ಶಾಸ್ತ್ರೀ ವೃತ್ತದಿಂದ ಹೊರಟು ಹೆದ್ದಾರಿ ಮಾರ್ಗವಾಗಿ ಕೋಟೇಶ್ವರ ಪೇಟೆಯ ಮೂಲಕ ತಿರುವು ಪಡೆದು ಕುಂದಾಪುರ ಪೇಟೆಯಯತ್ತ ಸಾಗಿದ ಜಾಥಾ ನಂತರ ಶಾಸ್ತ್ರೀ ವೃತ್ತದಲ್ಲಿ ಪೂರ್ಣಗೊಳಿಸಲಾಯಿತು. ಸೈಕಲ್ ಜಾಥಕ್ಕೆ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಚಾಲನೆ ನೀಡಿದರು. […]
ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾ : ಯೋಧರಿಗೆ ಸನ್ಮಾನ
ಕುಂದಾಪುರ (ಆ, 16) : ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಮಾತ್ರಭೂಮಿಯ ರಕ್ಷಣೆಗಾಗಿ ಹೋರಾಡಿದ ಯೋಧರನ್ನು ಗೌರವಿಸುವ ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ನೇತ್ರತ್ವದಲ್ಲಿ ಆಗಸ್ಟ್ 15 ರಂದು ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿವೃತ್ತ ಯೋಧರಾದ ಶ್ರೀವಿಶ್ವನಾಥ ಹಂದೆ ಕುಂಭಾಶಿ ಹಾಗೂ ಕೋಟ ಪಡುಕರೆಯ ಯೋಧ ಶ್ರೀ ಲೋಹಿತ್ ಪೂಜಾರಿ ಯವರನ್ನು ಅತ್ಯಂತ ಗೌರವ ಪೂರ್ವಕವಾಗಿ ಅವರ […]
ಬಡಾಬಾಳು : ಅಟಲ್ ಜೀ ಬಸ್ ತಂಗುದಾಣ ಉದ್ಘಾಸಿದ ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ
ಸಿದ್ದಾಪುರ (ಆ, 17) : ಸಿದ್ದಾಪುರ ಗ್ರಾಮ ಪಂಚಾಯತ್ ಬಡಾಬಾಳುವಿನಲ್ಲಿ ದೇಶದ ಮಾಜಿ ಪ್ರಧಾನಿ, ಧೀಮಂತ ನಾಯಕ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲಿ ಅಟಲ್ ಜೀ ಬಸ್ ತಂಗುದಾಣ ವನ್ನು ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗ ಬಡಾಬಾಳು ಇದರ ಸದಸ್ಯರು, ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವ
ಕುಂದಾಪುರ (ಆ, 16) : ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾಲೇಜಿನ ಸಂಸ್ಥಾಪಕರು, ಬೈಂದೂರಿನ ಶಾಸಕರಾದ ಶ್ರೀ. ಬಿ. ಎಂ. ಸುಕುಮಾರ ಶೆಟ್ಟಿಯವರು ಧ್ವಜಾರೋಹಣಗೈದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಹುಂತ್ರಿಕೆ ಸುಧಾಕರ ಶೆಟ್ಟಿ, ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಕೋವಾಡಿ ಚೇತನ್ ಶೆಟ್ಟಿ, ಎನ್ಸಿಸಿ ಅಧಿಕಾರಿ ಶಿವರಾಜ್ ಸಿ. ನಾವುಂದ ಹಾಗೂ ಸಂಸ್ಥೆಯ ಬೋಧಕ ಮತ್ತು […]
ಡಾನ್ ಬಾಸ್ಕೋ ಸ್ಕೂಲ್, ತ್ರಾಸಿ : ಸಂಭ್ರಮದ 75 ನೇ ಸ್ವಾತಂತ್ರ್ಯೋತ್ಸವ
ತ್ರಾಸಿ (ಆ, 16) : ಇಲ್ಲಿನ ಡಾನ್ ಬಾಸ್ಕೋ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲಾ ಆವರಣದಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಲಾಯಿತು. ಗ್ಲೋಬ್ ಇಂಟರ್ಲಾಕ್ಸ್ ನಾಡಾದ ಮಾಲೀಕರು ಮತ್ತು ಪೋಷಕರಾದ ಸಂತೋಷ ಡಿ’ಸೋಜಾಧ್ವಜಾರೋಹಣ ಗೈದರು. ಧ್ವಜಾರೋಹಣ ಸಮಾರಂಭದಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಕೋವಿಡ್ ಸಂತ್ರಸ್ತರು ಮತ್ತು ಯೋಧರನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ದಿನದ ಸಂದೇಶಗಳನ್ನು ಹಿಂದಿ, ಕನ್ನಡ ಮತ್ತು ಇಂಗ್ಲೀಷ್ 3 ಭಾಷೆಗಳಲ್ಲಿ ಕ್ರಮವಾಗಿ […]
ಸಂಸದ ಶ್ರೀ ಬಿ. ವೈ. ರಾಘವೇಂದ್ರ ರಿಗೆ ಜನ್ಮದಿನದ ಶುಭಾಶಯ ಕೋರಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ಶಿವಮೊಗ್ಗ (ಆ, 16) : ಶಿವಮೊಗ್ಗ ಲೋಕ ಸಭಾ ಕ್ಚೇತ್ರದ ಸಂಸದ ಶ್ರೀ ಬಿ. ವೈ. ರಾಘವೇಂದ್ರರವರ ಹುಟ್ಟು ಹಬ್ಬದ ದಿನದಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರು ಶಿಕಾರಿಪುರದ ಸಂಸದರ ನಿವಾಸಕ್ಕೆ ತೆರಳಿ ಶುಭಾಶಯ ತಿಳಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ರವರು ಬೈಂದೂರು ಕ್ಷೇತ್ರದ ಬಗ್ಗೆ ತೋರಿದ ವಾತ್ಸಲ್ಯದಿಂದಾಗಿ ಹಿಂದುಳಿದ ಕ್ಷೇತ್ರವೊಂದು ಅಭಿವೃದ್ಧಿಯತ್ತ ದಾಪುಗಾಲು ಇಡುವಂತಾಗಿದೆ. ನಾನು ಚುನಾವಣೆಯ ಸಂದರ್ಭದಲ್ಲಿ ಹೇಳಿದಂತೆ […]
ಭಾರತಾಂಬೆ
ಹೇ ಭಾರತಾಂಬೆ, ನಾ ನಿನ್ನ ಮಡಿಲಲ್ಲಿ ನಲಿದಾಡುವ ಕಂದನೂರು ಜನ್ಮ ತಾಳಿದರು ತಿರಿಸಲಾರೆ ನಾ ನಿನ್ನ ಋಣಾನುಬಂಧ. ನಿನ್ನ ಮಡಿಲೇ ಗಂಧದ ಗುಡಿ ನನಗೆಹಚ್ಚ ಹಸಿರಿನ ಗಿರಿವನಗಳೆ ನೀನಿತ್ತ ಉಸಿರು ನನಗೆ ನೀ ಸಿರಿ ದೇವತೆ, ನೀ ಜ್ಞಾನಮಯಿನೀ ಶಕ್ತಿ ದೇವತೆ, ನೀ ಕರುಣಾಮಯಿ ನೀ ನಮ್ಮ ಬಾಳ ಜ್ಯೋತಿನಿನ್ನಿಂದಲೇ ಜೇವನದ ಕಾಂತಿಸದಾ ನಮಿಪೆ ನಿನ್ನ ಚರ್ಣಗಳಿಗೆ ಹೇ ಭಾರತಾಂಬೆ.ಜೈ ಭಾರತಾಂಬೆ, ಜೈ ಭಾರತಾಂಬೆ. ಕವಿಯತ್ರಿ: ಡಾ. ಉಮ್ಮೆ ಸಲ್ಮಾ […]
ಗಂಗೊಳ್ಳಿ: ಸರಸ್ವತಿ ವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯೋತ್ಸವ
ಗಂಗೊಳ್ಳಿ (ಆ,15): ಇಲ್ಲಿನ ಸರಸ್ವತಿ ವಿದ್ಯಾಲಯದ ಪದವಿಪೂರ್ವ ಕಾಲೇಜು, ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಧ್ವಜಾರೋಹಣವನ್ನು ನೆರವೇರಿಸಿದರು. ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲ ಉಮೇಶ್ ಕರ್ಣಿಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.