ತ್ರಾಸಿ (ಆ, 12) : ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಬಡ ವರ್ಗದ ಜನರಿಗೆ ಕಷ್ಟ ಕಾಲದ ಆಪತ್ಬಾಂಧವನಾಗಿದ್ದಾರೆ. ಆಶ್ರಯ ಇಲ್ಲದಿರುವ ಕಡು ಬಡವರಿಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಮೂರು ಮನೆಗಳನ್ನು ಹಸ್ತಾಂತರಿಸಿದ್ದು , ಇದೀಗ ನಾಲ್ಕನೇ ಮನೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿದೆ. ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ […]
Month: August 2021
ಕೊಲ್ಲೂರು : ನವಚೈತನ್ಯ ಜೆ. ಎಲ್. ಜಿ. ತಂಡದ ಉದ್ಘಾಟನೆ
ಕೊಲ್ಲೂರು (ಆ, 12) : ಕೊಲ್ಲೂರು ವಲಯ ಮೆಕ್ಕೆ ಒಕ್ಕೂಟದ ವಾಟೇಗುಂಡಿಯಲ್ಲಿ ನೂತನವಾಗಿ ನವಚೈತನ್ಯ ಜೆ.ಎಲ್.ಜಿ. ತಂಡದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ರಾಮ ಎನ್. ಸಂಘದ ಬಗ್ಗೆ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಒಕ್ಕೂಟದ ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್, ಒಕ್ಕೂಟದ ಪದಾಧಿಕಾರಿ ಮಂಜುನಾಥ್ ನಾಯ್ಕ್ ರವರ ಸಮ್ಮುಖದಲ್ಲಿ ನೂತನ ಸಂಘವನ್ನು ಉದ್ಘಾಟನೆ ಮಾಡಲಾಯಿತು. ಸಭೆಯಲ್ಲಿ ನವಚೈತನ್ಯ ಸಂಘದ ಸದಸ್ಯರು ಉಪಸ್ಥಿತರಿದ್ದು, ಸಂಘದ ಉದ್ಘಾಟನೆಯ ಸವಿ […]
ನನ್ನ ಭಾರತಕ್ಕೆ ಕೇವಲ ಒಂದೇ ಚಿನ್ನ ಗೆಲ್ಲುವ ಸಾಮರ್ಥ್ಯವೇ…?
ನನ್ನ ಭಾರತಕ್ಕೆ ಕೇವಲ ಒಂದೇ ಚಿನ್ನ ಗೆಲ್ಲುವ ಸಾಮರ್ಥ್ಯವೇ…?ನನ್ನ ಭಾರತದಲ್ಲಿ ದೇಶಕ್ಕೆ ಒಬ್ಬ ಅಲ್ಲ … ಜಿಲ್ಲೆಗೆ ಒಬ್ಬ ನೀರಜ್ ಚೋಪ್ರ ಸಿಗುತ್ತಾರೆ. ಹೇಗೆ?ಒಂದು ಚಿನ್ನ ಗೆದ್ದವರಿಗೆ ನೂರು ತಲೆಮಾರಿಗಾಗುವಷ್ಟು ಸುರಿಯುವುದಕ್ಕಿಂತ ನೂರು ಚಿನ್ನ ಗೆಲ್ಲಲು ನೂರು ಬಡ ಪ್ರತಿಭೆಗಳನ್ನು ಗುರುತಿಸಿ ಆರ್ಥಿಕ ವೆಚ್ಚ ಸಂಪೂರ್ಣ ಸರ್ಕಾರಗಳು ಬರಿಸಿದರೆ ಇದು ಸಾಧ್ಯ. ಜೊತೆಗೆ ಅತೀ ಹೆಚ್ಚು ಚಿನ್ನ ಗೆಲ್ಲುವ ದೇಶವೂ ನಮ್ಮದಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಖುಷಿಯ ಜೊತೆಗೆ ಹೆಮ್ಮೆಯೂ […]
ತನ್ನ ಸಾಧನೆಯನ್ನು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಅರ್ಪಿಸಿದ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಣೀತಾ
ಕುಂದಾಪುರ (ಆ, 11) : ಬಸ್ರೂರಿನ ನಿವಾಸಿ, ಸರಕಾರಿ ಪ್ರೌಢಶಾಲೆ ಕೋಣಿಯ ಮುಖ್ಯೋಪಾಧ್ಯಾಯರಾದ ವಿದ್ವಾನ್ ಮಾಧವ ಅಡಿಗ ಹಾಗೂ ಶ್ರೀಮತಿ ಲಕ್ಷ್ಮೀ ಎಮ್, ಅಡಿಗರವರ ಪುತ್ರಿ ಪ್ರಣೀತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾಳೆ. ಪ್ರಣೀತಾ ಹೇಳುವಂತೆ “ಭವಿಷ್ಯದಲ್ಲಿ ಎಂಜಿನಿಯರ್ ಆಗಿ ಸಮಾಜ ಕಟ್ಟುವ ಬಯಕೆ ನನಗಿದೆ , ಕರೋನಾ ಆತಂಕದ ಕ್ಲಿಷ್ಟ ಕಾಲದಲ್ಲಿಯೂ ಶಿಕ್ಷಕರ ನಿರಂತರ ಪ್ರೋತ್ಸಾಹ , ತಂದೆ ತಾಯಿಯವರ […]
ಎಸ್ಎಸ್ಎಲ್ಸಿ ಫಲಿತಾಂಶ : ಕುಂದಾಪುರದ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ಸ್ರಜನ್ ಭಟ್ 625 ಕ್ಕೆ 625 ಅಂಕ
ಕುಂದಾಪುರ (ಆ, 10) : ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸೃಜನ್ ಭಟ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಆಯಾಯ ದಿನದ ಪಾಠವನ್ನು ಆಂದೇ ಕಲಿತು ಮುಗಿಸುತ್ತಿದ್ದಿದ್ದರಿಂದ ಹೆಚ್ಚು ಒತ್ತಡದಿಲ್ಲದೆ ಪರೀಕ್ಷೆ ಬರೆಯಲು ಸಾಧ್ಯವಾಯಿತು. ಶಿಕ್ಷಕರು ಹಾಗೂ ತಂದೆ-ತಾಯಿಯ ಸಹಕಾರ ಮರೆಯಲಾಗದ್ದು ಎಂದು ಸೃಜನ್ ಅನುಭವವನ್ನು ಹಂಚಿಕೊಂಡಿದ್ದಾರೆ. ಕುಂದಾಪುರ ತಾಲೂಕು ವಡೇರ್ಹೋಬಳಿಯ ನಿವಾಸಿಗಳು […]
ಎಸ್ಎಸ್ಎಲ್ಸಿ ಫಲಿತಾಂಶ : ಕುಂದಾಪುರದ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ಅನುಶ್ರೀ 625 ಕ್ಕೆ 625 ಅಂಕ
ಕುಂದಾಪುರ (ಆ, 10) : ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಅನುಶ್ರೀ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಕಾಳಾವರದ ನಿವಾಸಿ ಶ್ರೀ ಬಾಬು ಶೆಟ್ಟಿ ಹಾಗೂ ಶ್ರೀಮತಿ ಸುಲೋಚನ ದಂಪತಿಯ ಪುತ್ರಿ ಅನುಶ್ರೀ ಶೆಟ್ಟಿಯ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕ. “ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನನ್ನಿಂದಾಗಬಹುದಾದ ಸಹಾಯ ಮಾಡುವುದು ನನ್ನ ಬದುಕಿನ ಗುರಿ. ಐ.ಎ.ಎಸ್. ಅಧಿಕಾರಿಯಾಗಿ […]
ಅಂಪಾರು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಬಡ ಕುಟುಂಬಗಳಿಗೆ ಹಕ್ಕುಪತ್ರ ಕಲ್ಪಿಸುವ ಭರವಸೆ – ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಅಂಪಾರು(ಆ,11): ಕಳೆದ ಆರೇಳು ದಶಕಗಳಿಂದ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿಯರ್ ಜಡ್ಡು ಎಂಬಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಆರು ಕುಟುಂಬಗಳು ವಾಸವಾಗಿದ್ದಾರೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗ ಎಂಬ ಕಾರಣಕ್ಕೆ ಅವರಿಗೆ ಯಾವುದೇ ಹಕ್ಕು ಪತ್ರ ಇರಲಿಲ್ಲ. ಆ ಸ್ಥಳಕ್ಕೆ ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರು, ಸಹಾಯಕ ಕಮಿಷನರ್ ರಾಜು, ತಹಶೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ನಿರೀಕ್ಷಕ ರಾಘವೇಂದ್ರ ಹಾಗೂ ಸ್ಥಳಿಯ ಮುಖಂಡರೊಂದಿಗೆ ಭೇಟಿ […]
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಬೋಧಕ ಮತ್ತು ಬೋಧಕೇತರ ಸಂಘದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ
ಕುಂದಾಪುರ (ಆ, 11) : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ಬೋಧಕ ಮತ್ತು ಬೋಧಕೇತರ ಸಂಘದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಉಪನ್ಯಾಸಕ ಯೋಗಿಶ್ ಶ್ಯಾನುಭೋಗ್ರವರಿಗೆ ಮತ್ತು ಇನ್ನೊರ್ವರಾದ ಶ್ರೀಲತಾ ಇವರಿಗೆ ಸಂಘದಿಂದ ಉಡುಗೊರೆ ನೀಡಲಾಯಿತು. […]
ಅಕ್ಷೋಹಿಣಿ ಟೀಮ್ : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಕುಂದಾಪುರ (ಆ, 09) : ಆಸಾಡಿ ಅಮಾಸಿ ಆಗಸ್ಟ್ 8 ರ ವಿಶ್ವ ಕುಂದಾಪ್ರ ಕನ್ನಡ ದಿನ ಅಂಗವಾಗಿ ಅಕ್ಷೋಹಿಣಿ ಟೀಮ್ ಕುಂದಾಪುರ ಆಯೋಜಿಸಿದ “ನಾನು ನನ್ನ ಕುಂದಾಪ್ರ “ಎನ್ನುವ ವಿಷಯದ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆಯ ಮೊದಲ ಬಹುಮಾನ ಮಂಜುನಾಥ ಗುಂಡ್ಮಿ ಹಾಗೂ ದ್ವೀತಿಯ ನವ್ಯಶೀ ದೊರೆತಿದ್ದು, ಸಂಸ್ಥೆಯ ವತಿಯಿಂದ ವಿಜೇತರಿಗೆ ಹಸ್ತಾಂತರಿಸಲಾಯಿತು.
ಡಾನ್ ಬಾಸ್ಕೋ ಸ್ಕೂಲ್ ತ್ರಾಸಿ : ಸೈಬರ್ ಸೆಕ್ಯುರಿಟಿ ಅರಿವು ಕಾರ್ಯಕ್ರಮ
ತ್ರಾಸಿ (ಆ, 10) : ಇಲ್ಲಿನ ಡಾನ್ ಬಾಸ್ಕೋ ಸೀನಿಯರ್ ಸೆಕೆಂಡರಿ ಶಾಲೆಯ ವೆಲ್ಫೇರ್ ವಿಭಾಗದ ಆಶ್ರಯದಲ್ಲಿ ಇತ್ತೀಚೆಗೆ ವರ್ಚುವಲ್ ಮೋಡ್ನಲ್ಲಿ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಿತು. ಉಡುಪಿಯ ಪೃಥ್ವಿಷನ್ ಸಂಸ್ಥೆಯ ಸ್ಥಾಪಕರು ಹಾಗೂ ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಪರಿಣಿತರಾಗಿರುವ ಶ್ರೀ ಪೃಥ್ವೀಶ್ ಕೆ, ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸೈಬರ್ ಭದ್ರತೆಗೆ ಸಂಬಂಧಿಸಿದ ಪ್ರಸ್ತುತ ಸಮಸ್ಯೆಗಳ […]