ಬೆಂಗಳೂರು ( ಆ,4) : ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಚಿವ ಸಂಪುಟಕ್ಕೆ ಕರಾವಳಿಯ ಮೂವರು ಆಯ್ಕೆಯಾಗಿದ್ದು, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸಚಿವ ಸ್ಥಾನದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಮಂತ್ರಿಯಾಗಿದ್ದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಮೊದಲ ಬಾರಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹಾಗೂ ಸುಳ್ಯದ ಶಾಸಕ, ಮಾಜಿ ಸಚಿವ ಶ್ರೀ ಅಂಗಾರ ರವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಹಾಲಾಡಿ ಶ್ರೀನಿವಾಸ […]
Month: August 2021
ರೋಟರಿ ಕ್ಲಬ್ ಕುಂದಾಪುರ : ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಕುಂದಾಪುರ (ಆ, 03) : ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ Rtn. ಸಾಲಗದ್ದೆ ಶಶಿಧರ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು, ತೋಪ್ಲು ಹಾಗೂ ಹಕ್ಲಾಡಿ ಶಾಲಾ ಮಕ್ಕಳಿಗೆ ಅಗಸ್ಟ್ 2 ರಂದು ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ Rtn. ಶಶಿಧರ ಹೆಗ್ಡೆಯವರು ವಹಿಸಿಕೊಂಡು ಶುಭಹಾರೈಸಿ ಮಾತನಾಡಿದರು. ಜಿಲ್ಲಾ ಪ್ರಶಸ್ತಿ ವಿಜೇತ, ಶಿಕ್ಷಕ […]
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಕ್ರಮ
ಕೊಲ್ಲೂರು (ಆ, 03) : ಇಲ್ಲಿನ ಶ್ರೀಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್,03ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಪ್ರೊ ಡಾ. ಜೆ. ಎಸ್. ಸದಾನಂದ ರವರು ಭೇಟಿ ನೀಡಿ, ಹೊಸ ಶಿಕ್ಷಣ ನೀತಿ ಯ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಪ್ರೊ. ಡಾ. ಜೆ ಎಸ್ ಸದಾನಂದ ರವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. […]
ಕರೋನಾ ಹಿನ್ನೆಲೆ- ಮಂಗಳೂರು ವಿ.ವಿ ಎಲ್ಲಾ ಪದವಿ ಪರೀಕ್ಷೆಗಳ ರದ್ದು – ತರಗತಿಗಳು ಮುಂದೂಡಿಕೆ: ದ.ಕ. ಜಿಲ್ಲಾಧಿಕಾರಿ ಆದೇಶ
ಕರೋನಾ ಲಾಕ್ಡೌನ್ ಕಾರಣದಿಂದಾಗಿ ಬಾಕಿಯಾದ ಮಂಗಳೂರು ವಿ. ವಿ. 1, 3, 5 ಸೆಮಿಸ್ಟರ್ ನ ಪರೀಕ್ಷೆಗಳು ಅಗಸ್ಟ್ 2 ರಂದು ಪ್ರಾರಂಭಗೊಂಡಿದ್ದು, ಈಗ ಮತ್ತೆ ಕರೋನಾ ಮೂರನೇ ಅಲೆಯ ಆತಂಕದಿಂದಾಗಿ ಮುಂದೂಡಲಾಗಿದೆ.
ಮುಂಬೈ ವೆಡ್ಡಿಂಗ್ ಅಸೋಸಿಯೇಷನ್ ವತಿಯಿಂದ ರಾಜ್ ಸಾಹೇಬ್ ಠಾಕ್ರೆ ಭೇಟಿ
ಮಂಬೈ (ಆ, 03) : ಕೊರೊನಾ ಲಾಕ್ದೌನ್ ನಿಂದಾಗಿ ಮುಂಬೈಯಲ್ಲಿ ಕೇಟರಿಂಗ್ ಮತ್ತು ಡೆಕೋರೇಷನ್ ಉದ್ಯಮಕ್ಕೆ ಬಹಳಷ್ಟು ಪೆಟ್ಟು ಬಿದ್ದಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ನವಿ ಮುಂಬೈ ವೆಡ್ಡಿಂಗ್ ಅಸೋಷಿಯೇಷನ್ (ರಿ.) ಕಳೆದ ಕೆಲವು ತಿಂಗಳುಗಳಿಂದ ಬಹಳ ಶ್ರಮ ಪಡುತ್ತಿದೆ. ಹಲವಾರು ಜನಪ್ರತಿನಿಧಿಗಳ ಬಳಿ ತೆರಳಿ ನೆನೆಗುದಿಗೆ ಬಿದ್ದಿರುವ ಈ ಉದ್ಯಮವನ್ನು ಮತ್ತು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಕೇಟರಿಂಗ್ ಉದ್ಯಮವನ್ನು ಉಳಿಸಿ ಕೊಡಬೇಕಾಗಿ […]
ಗುರುಕುಲ ಚಾಣಕ್ಯ ಪ್ರಶಸ್ತಿಗೆ ಬಿ. ಎಸ್. ಬಾಗೇವಾಡಿಮಠ ಆಯ್ಕೆ
ರಾಣಿಬೇನ್ನೂರು (ಆ, 03) : ನಗರದ ಯುವ ಕವಿ ಸಾಹಿತಿ ಹಾಗೂ ಲೇಖಕರಾದ ಹಾವೇರಿ ಜಿಲ್ಲೆಯರಾಣಿಬೆನ್ನೂರಿನ ಬಸವರಾಜ .ಎಸ್ . ಬಾಗೇವಾಡಿಮಠ ರವರು ಸಾಹಿತ್ಯ, ಸಮಾಜ ಸೇವೆ, ಹಾಗೂ ಇವರ ಮಾನವೀಯ ಸೇವೆಗಳನ್ನು ಗುರುತಿಸಿ ಗುರು ಕುಲ ಚಾಣಕ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗುರುಕುಲ ಕಲಾ ಪ್ರತಿಷ್ಠಾನ (ರಿ) ರಾಜ್ಯ ಘಟಕದ ಸಂಸ್ಥೆಯ ಅಧ್ಯಕ್ಷರಾದ ಹುಲಿಯೂರು ದುರ್ಗ ಲಕ್ಷ್ಮೀ ನಾರಾಯಣ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗೊಳ್ಳಿ : ಬಿಲ್ಲವ ಹಿತರಕ್ಷಣಾ ವೇದಿಕೆಯ ಪ್ರಥಮ ಸಭೆ
ಗಂಗೊಳ್ಳಿ (ಆ, 3) : ಒಂದು ಸಮುದಾಯದ ಹಿತರಕ್ಷಣೆಗಾಗಿ ಸಂಬಂಧಪಟ್ಟ ಎಲ್ಲರೂ ಒಮ್ಮನಸ್ಸಿನಿಂದ ಕೆಲಸವನ್ನು ಮಾಡಬೇಕು. ಸಮಗ್ರ ಪರಿಶ್ರಮದಿಂದಲೇ ಸಮುದಾಯದ ಹಿತ ರಕ್ಷಣೆ ಸಾಧ್ಯ ಎಂದು ಬಿಲ್ಲವ ಸಮುದಾಯದ ಹಿರಿಯರಾದ ಮುತ್ತ ಕುಂದರ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ನಡೆದ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ಜತ್ತನ್ ಮಾತನಾಡಿ, ಸಂಸ್ಥೆಗಳು ಸಮುದಾಯದ ಕೆಳವರ್ಗದ ಜನರನ್ನು ಕೂಡ […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಹಳ್ಳಿಹೊಳೆ ಒಕ್ಕೂಟದ ಸಂಘದ ಸದಸ್ಯರಿಗೆ ಲಾಭಾಂಶ ಹಂಚಿಕೆ
ಹಳ್ಳಿಹೊಳೆ (ಆ, 2) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ಇದರ ಕೊಲ್ಲೂರು ವಲಯದ ಹಳ್ಳಿಹೊಳೆ ಒಕ್ಕೂಟದ ಸಂಘದ ಸದಸ್ಯರಿಗೆ ಸುಮಾರು 7.59 ಲಕ್ಷಕ್ಕೂ ಹೆಚ್ಚು ಲಾಭಾಂಶ ಮೊತ್ತವನ್ನು ಆಗಸ್ಟ್ 01ರಂದು ವಿತರಣೆ ಮಾಡಲಾಯಿತು. ಲಾಭಾಂಶ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶಂಕರ್ ನಾಯ್ಕ ರವರು ವಹಿಸಿದ್ದರು. ವಲಯದ ಮೇಲ್ವಿಚಾರಕರಾದ ಶ್ರೀ ರಾಮ. ಎನ್ ರವರು ಸದಸ್ಯರಿಗೆ ಮಾಹಿತಿ ನೀಡಿದರು. ಸೇವಾಪ್ರತಿನಿಧಿ ಕೃಷ್ಣ […]
ಮೀನುಗಾರರನ್ನು ಕರೋನ ಲಸಿಕೆಯ ಆದ್ಯತೆಯ ಪಟ್ಟಿಯಲ್ಲಿ ಸೇರಿಸಬೇಕು
ಕರೋನಾ ಲಾಕ್ಡೌನಿನ ಕಳೆದೆರಡು ಅವಧಿಯಲ್ಲಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು, ಸರಕಾರದ ಪ್ಯಾಕೇಜುಗಳು ಸರಿಯಾಗಿ ಸಿಗದೆ ಬದುಕು ಸಾಗಿಸಿದ ಮೀನುಗಾರರು ಮತ್ತೆ ಕಡಲಿಗೆ ಇಳಿಯಲು ಸಜ್ಜಾಗುತ್ತಿದ್ದಾರೆ. ಕರೋನಾ ಮೂರನೆ ಅಲೆಯ ಭಯದ ನಡುವೆ ಹೊಟ್ಟೆಪಾಡಿಗಾಗಿ ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸರ್ಕಾರದ ನಿಯಮದಂತೆ ಮೀನು ಹಿಡಿಯಲು ಹೊರಡುತ್ತಿರುವ ಬಹುತೇಕ ಮೀನುಗಾರರಿಗೆ ಕರೋನಾ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಕರೋನಾ ಲಸಿಕಾಕರಣ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಜೊತೆಗೆ ಸರ್ಕಾರ ಮೀನುಗಾರರನ್ನು ಕರೋನ ಲಸಿಕೆಯ […]
ಗುರುಕುಲ ಸೇವಾ ರತ್ನ ಪ್ರಶಸ್ತಿಗೆ ಡಾ. ಪಿ. ಎಮ್. ಭೋಜೆ ಆಯ್ಕೆ
ಬೆಳಗಾವಿ (ಆ, 2) : ಜಿಲ್ಲೆಯ ಸದಗಾಲ ಗ್ರಾಮದ ಡಾ| ಪ್ರಕಾಶ ಎಮ್. ಭೋಜೆಯವರು ಒರ್ವಸೃಜನಶೀಲ ಶಿಕ್ಷಕರು, ಸಾಹಿತಿ, ಹಾಗೂ ಲೇಖಕರಾಗಿದ್ದಾರೆ. ಇವರು ತಮ್ಮ ಶಿಕ್ಷಣ ಜೊತೆಗೆ ಬಡ ಮಕ್ಕಳಿಗೆ ಉಚಿತ ಪಾಠ ಬೋಧನೆ ಮಾಡಿ ಜ್ಞಾನ ದಾಸೋಹಿಯಾಗಿ ಪ್ರೇರಣೆರಾಗಿದ್ದಾರೆ. ಇವರ ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಮಾಜ ಸೇವೆಯಲ್ಲಿನ ಗಣನೀಯ ಸೇವೆ ಹಾಗೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ತುಮಕೂರಿನಲ್ಲಿ ನಡೆಯಲಿರುವ ಪ್ರಥಮ ರಾಜ್ಯ ಗುರುಕುಲ ಸಾಹಿತ್ಯ ಸಮ್ಮೇಳನದಲ್ಲಿ ಗುರುಕುಲ […]