ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಬಹಳ ಇತಿಹಾಸವಿದೆ. ಆ ಎಲ್ಲಾ ಇತಿಹಾಸಕ್ಕೆ ಮುಕುಟಪ್ರಯವಾಗಿರುವ ಸ್ಥಳವೇ ಕುಂದಾಪುರ.ಭಾರತಕ್ಕೆ ಹೇಗೆ ಹಿಮಾಲಯವೋ ಅದೇ ರೀತಿಯಲ್ಲಿ ಕುಂದಾಪುರಕ್ಕೆ ನದಿಗಳು. ಮೂಡಣದಲ್ಲಿ ಉಗಮವಾಗುವ ಚಕ್ರ, ಸೌಪರ್ಣಿಕ, ವಾರಾಹಿ, ಕೇದಕ ಹಾಗೂ ಕುಬ್ಜ ಎಂಬ ಈ ಐದು ನದಿಗಳು ಗಂಗೊಳ್ಳಿಯಲ್ಲಿ ಒಂದಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಆ ಸ್ಥಳವೇ ಪಂಚಗಂಗಾವಳಿ. ನದಿಗಳು ಒಂದೆಡೆಯಾದರೆ ದೇವಸ್ಥಾನಗಳು ಇನ್ನೊಂದೆಡೆ. ನೂರಾರು ದೇವಾಲಯಗಳ ಹೊಂದಿರುವ ಕುಂದಾಪುರ ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡೆಯ ವಿನಾಯಕ,ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ, […]
Day: September 5, 2021
ನಾ ಕಂಡಂತೆ ಚಿಂತಕ, ಮಾರ್ಗದರ್ಶಕ ಮತ್ತು ಸಲಹೆಗಾರ ಈಶ್ವರ್ ಸಿ ನಾವುಂದ
ನಿಜ. ಆ ಚಿಂತನೆಗಳು ಬಹಳ ಸೂಕ್ಷ್ಮ ಮತ್ತು ಆಳವಾಗಿದ್ದವು. ಆ ಚಿಂತನೆಗಳ ಒಂದೊಂದು ಪದಗಳನ್ನು ಮಣಿಗಳಂತೆ ಪೋಣಿಸುತ್ತಾ ಹೋದಾಗ ಅದ್ಬುತ ಬರವಣಿಗೆಯಾಗಿ ಹೊರಹೊಮ್ಮತ್ತಿತ್ತು. ಸಾಧನೆ ಮಾಡ ಹೊರಟವರಿಗೆ ಶಕ್ತಿಯಾಗಿ ನಿಲ್ಲುತ್ತಿತ್ತು. ಈ ಬರವಣಿಗೆಯ ಹಿಂದಿರುವ ಕೈ ಬೇರೆ ಯಾರದ್ದು ಅಲ್ಲ. ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಚಿಂತಕ,ಬರಹಗಾರ ಈಶ್ವರ್ ಸಿ ನಾವುಂದರವರದ್ದು. ಯೋಚನೆಗಳು ನನ್ನ ಸಾಧನೆಗಳಾಗಿದ್ದವು ಹಾಗೂ ಶಕ್ತಿಶಾಲಿ ಸಾಧನೆಗಳು ಹೌದು.ಕೆಲವೊಂದು ಸೃಜನಶೀಲ ಕೆಲಸಗಳಿಗೆ ನನ್ನ ಈ ಯೋಚನೆಗಳೇ ಸಾಧನವಾಗಿದ್ದವು. […]
ಗುರು ಮಾತೆ – ಅಕ್ಷರ ಕಲಿಸಿದ ವಿದ್ಯಾ ಸರಸ್ವತಿ : ಸಿಂಗಾರಿ ಅಮ್ಮ ಟೀಚರ್ ನಾವುಂದ
ಗುರು ಎನ್ನುವ ಪರಿಕಲ್ಪನೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಏಕೆಂದರೆ ಒರ್ವ ಗುರು ತಂದೆ-ತಾಯಿಯ ಎರಡು ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನಾಗಿದ್ದು, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಭಾವಿಸುವ ,ಪ್ರೀತಿಸುವ ಹಾಗೂ ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಮತ್ತು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವ ದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಹಾಕಲು ಶಿಕ್ಷಕರು ಮಾರ್ಗದರ್ಶಕರಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವು ಅಜ್ಞಾನವನ್ನು ಓಡಿಸುವುದೇ ಆಗಿದೆ. ಪ್ರತಿಯೊಬ್ಬರ ಜೀವನದ ಏಳು- ಬೀಳುಗಳಿಗೆ […]
ಓ ಗುಣವಂತನೆ
ಓ ಗುಣವಂತನೆನೀ ಗುಣಗಳ ಖಜಾನೆನೀ ಗುಣಕಾರಿ, ನೀನೇ ಗುಣಾಧಿಕಾರಿನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿನೀ ಗುಣವರ್ಧಕ, ನೀನೇ ಗುಣಾತ್ಮಕನೀ ಗುಣವಿಶೇಷ, ನೀನೇ ಗುಣವಾಚಕಗುರಿ ತೋರಿಸುವ ಗುರುವೇನಾ ಹೇಗೇ ಮಾಡಲಿ ನಿನ್ನ ಗುಣಗಾನಓ ಗುಣಮಟ್ಟದ ಉತ್ತುಂಗವೆನಿನಗೆ ಕೋಟಿ ಕೋಟಿ ನಮನ. ಡಾ. ಉಮ್ಮೆ ಸಲ್ಮಾ ಎಂ., ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯