ಶಿರ್ವ(ಸೆ,28): ಇಲ್ಲಿನ ಸಂತ ಮೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ಕಾಲೇಜಿನ ದೃಶ್ಯ-ಶ್ರಾವ್ಯ ಕೊಠಡಿಯಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿ ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀಯುತ ಸುಚಿತ್ ಕೋಟ್ಯಾನ್ ರವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಜೀವನದಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸೇವಾ ಮನೋಭಾವನೆಯಿಂದ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕು. […]
Day: September 28, 2021
ಶಿರ್ವ ಸಂತ ಮೇರಿ ಮಹಾವಿದ್ಯಾಲಯ: ಬೀಳ್ಕೊಡುಗೆ ಸಮಾರಂಭ
ಶಿರ್ವ(ಸೆ,26): ವಿದ್ಯಾರ್ಥಿಗಳ ಜೀವನದಲ್ಲಿ ಅಮೂಲ್ಯವಾದ ಶಿಕ್ಷಣವೆಂದರೆ ಅದು ಪದವಿ ಶಿಕ್ಷಣ. ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನವನ್ನು ವೃದ್ಧಿಸಿಕೊಳ್ಳಲು ಕಾಲೇಜು ಶಿಕ್ಷಣದಲ್ಲಿ ಅನೇಕ ಅವಕಾಶಗಳಿವೆ. ಆಟ-ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿಯಬೇಕಾಗಿರುವುದು ಇಂದು ಅಗತ್ಯವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಗುರುಹಿರಿಯರ ಮಾರ್ಗದರ್ಶನವನ್ನು ಪಡೆದು ಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜಿನ […]
ವೃತ್ತಿ ಮತ್ತು ಉದ್ಯೋಗ ಕೌಶಲ್ಯಗಳ ವೇಬಿನರ್
ಉಡುಪಿ (ಸೆ, 26): ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಸರಿಯಾದ ಮಾಹಿತಿ ಮತ್ತು ವೃತ್ತಿ ಮಾರ್ಗದರ್ಶನವನ್ನುಪಡೆದು, ನಿರ್ದಿಷ್ಟ ಗುರಿ ಮತ್ತು ಧ್ಯೇಯವನ್ನು ತಲುಪಲು ಕಂಪ್ಯೂಟರ್ ಗಳನ್ನು ಹೆಚ್ಚಾಗಿ ಬಳಸಿಕೊಂಡು ಸಮಾಜಕ್ಕೆ ಬೇಕಾಗುವ ತಂತ್ರಜ್ಞಾನವನ್ನು ರೂಪಿಸಿ,ಸಂಶೋಧನಾ ಮನಸ್ಥಿತಿ ಬೆಳೆಸಿಕೊಂಡು ಉತ್ತಮ ಉದ್ಯೋಗ ಪಡೆಯಬೇಕು. ಇದಕ್ಕೆ ವಿದ್ಯಾರ್ಥಿಗಳು ಪೂರ್ವ ತಯಾರಿಯನ್ನು ಮಾಡುವುದರ ಜೊತೆಗೆ, ಮೂಲಭೂತ ಸೌಕರ್ಯಗಳನ್ನು ಸದ್ಬಳಕೆ ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿದೆಸೆಯಿಂದಲೇ ರೂಡಿಸಿಕೊಳ್ಳಬೇಕೆಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ:ಮೆಕ್ಕೆ ಒಕ್ಕೂಟದ ನಾಲ್ಕು ಹೊಸ ತಂಡಗಳ ಉದ್ಘಾಟನಾ ಕಾರ್ಯಕ್ರಮ
ವಂಡ್ಸೆ (ಸೆ,27):ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕು, ಕೊಲ್ಲೂರು ವಲಯದ ಮೆಕ್ಕೆ ಒಕ್ಕೂಟದ ನಾಲ್ಕು ಹೊಸ ತಂಡಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಕ್ಕೆ ಒಕ್ಕೂಟ ಅಧ್ಯಕ್ಷರಾದ ಎಂ.ಜೆ. ಬೇಬಿ ವಹಿಸಿದ್ದರು. ಮೆಕ್ಕೆ ಒಕ್ಕೂಟದ ಸೇವಾ ಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಕೊಲ್ಲೂರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಮಹಾಬಲ ಪೂಜಾರಿ ಕಾರ್ಯಕ್ರಮ […]
ಸಿಎ ಫೌಂಡೇಶನ್ನ ಪರೀಕ್ಷೆ ತೇರ್ಗಡೆ – ಸಮ್ಮಾನ
ಕುಂದಾಪುರ (ಸೆ,28): ಇನ್ಸ್ಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ 11 ವಿದ್ಯಾರ್ಥಿಗಳು ಸಿಎ ಫೌಂಡೇಶನ್ನ ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ. ಅವರನ್ನು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಕರುಣಾಕರ ಕೊಟೇಗಾರ್ ಸಮ್ಮಾನಿಸಿ ಗೌರವಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಪ್ರಭಾ ಅಕಾಡೆಮಿಯ ಮುಖ್ಯಸ್ಥರಾದ […]
ಕುಂದಾಪುರದ ಕುವರ ಕಿಕ್ ಬಾಕ್ಸರ್ ಅನೀಶ್ ಶೆಟ್ಟಿಗೆ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
ಪಣಜಿ(ಸೆ,27): ಗೋವಾದ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಥಾಯ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಮೊದಲ ಬಾರಿಗೆ ಅಮೆಚೂರು ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ವೃತ್ತಿಪರ ಕಿಕ್ ಬಾಕ್ಸರ್ ಕುಂದಾಪುರ ಮೂಲದ ಅನೀಶ್ ಶೆಟ್ಟಿ ಬೆಳ್ಳಿಯ ಪದಕ ಪಡೆದಿದ್ದಾರೆ. ವೃತ್ತಿಪರ ಸ್ಪರ್ಧೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಗೋವಾದಲ್ಲಿ ತರಬೇತಿ ಪಡೆಯುತ್ತಿರುವ ಅನೀಶ್, ಅಲ್ಲಿಯ ಟ್ರೈಬಲ್ ವಾರಿಯರ್ಸ್ ಗೋವಾ (TWG) ತಂಡವನ್ನು ಪ್ರತಿನಿಧಿಸಿರುತ್ತಾರೆ.ನಾಲ್ಕು ಸುತ್ತಿನ ಹೋರಾಟದಲ್ಲಿ ಅನೀಶ್ ಒಡಿಶಾದ ಸ್ಪರ್ಧಿಯ ವಿರುದ್ಧದ ಅಂತಿಮ ಸುತ್ತಿನಲ್ಲಿ ಪರಾಜಯ ಅನುಭವಿಸಿದರು. […]