ಧರ್ಮವು ಮರೆಯಾಗಿ ಅಧರ್ಮವೇ ಗೆಲ್ಲುತಿರುವ ಈ ಕಾಲಘಟ್ಟದಲ್ಲಿ ಯಾರಿಗೂ ತಿಳಿಯದಂತೆ, ಯಾರಲ್ಲೂ ಹೇಳಿಕೊಳ್ಳದೆ ,ಯಾರಿಗೂ ಬರೆಯಲು ಅವಕಾಶ ಮಾಡಿಕೊಡದೆ ದಾನ-ಧರ್ಮ ಸಮಾಜಸೇವೆ ಮಾಡುತ್ತಿರುವ ಒರ್ವ ವ್ಯಕ್ತಿ ಮತ್ತು ಶಕ್ತಿಯ ಯಶೋಗಾತೆಯನ್ನು ಪ್ರೀತಿಯಿಂದ ನನ್ನನು ಗದರಿಸಿ ಬಿಡುತ್ತಾರೋ ಏನೋ ಎಂಬ ಹೆದರಿಯಿಂದಲೇ ಬರೆಯುವ ಅನಿವಾರ್ಯತೆ ನನಗೆ. ಮಹಾಭಾರತದ ನೀತಿ ಸತ್ಯದಂತೆ ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡದಿದ್ದರೂ ಎಂದೂ ತಪ್ಪುಗಳ ಬಗ್ಗೆ ಚರ್ಚೆಗೆ ಅವಕಾಶ ಕೂಡದೆ ಪರೋಪಕಾರಕ್ಕಾಗಿ ಕೆಲಸ ಮಾಡುವರೇ ಹೊರತು ಪ್ರತ್ಯುಪಕಾರ ವನ್ನು […]
Month: September 2021
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕಳವಾಡಿ- ಮಯ್ಯಾಡಿ :ಅಧ್ಯಕ್ಷರಾಗಿ ರವಿರಾಜ ಚಂದನ್ ಕಳವಾಡಿ ಪುನರಾಯ್ಕೆ
ಬೈಂದೂರು(ಸೆ,25): ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ರವಿರಾಜ ಚಂದನ ಕಳವಾಡಿ ಯವರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕಳವಾಡಿ- ಮಯ್ಯಾಡಿ ಇದರ 28ನೇ ವರ್ಷದ ಅಧ್ಯಕ್ಷ ರಾಗಿ ಪುನರಾಯ್ಕೆಯಾಗಿದ್ದಾರೆ. ಹಾಗೆಯೇ ಕಾರ್ಯಾದರ್ಶಿಯಾಗಿ ಶ್ರೀ ರಾಜು ಪೂಜಾರಿ ಕಳವಾಡಿ ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ, 25) : ಕೊಡುಗೈ ದಾನಿ ಉದ್ಯಮಿ ,ಶೇಫ್ ಟಾಕ್ ಹಾಸ್ಪಿಟಾಲಿಟಿ ಸಂಸ್ಥೆ ಹಾಗೂ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಸಮಾಜ ಸೇವಾ ಕ್ಷೇತ್ರದ ಅನನ್ಯ ಕೊಡುಗೆಯನ್ನು ಗುರುತಿಸಿ ಏಶಿಯಾ ವೇದಿಕ್ ಕಲ್ಚರ್ ಫೌಂಡೇಷನ್ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ। ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ : ಎನ್.ಎಸ್.ಎಸ್ ಘಟಕದ ವತಿಯಿಂದ ಸೆ,26 ರಂದು ಸ್ವಚ್ಚತಾ ಕಾರ್ಯಕ್ರಮ
ಕುಂದಾಪುರ (ಸೆ, 24):ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಬಸ್ರೂರಿನ ಮೂಡ್ಕೇರಿಯ ನಾಥ ಪರಂಪರೆಯ ಪ್ರಾಚೀನ ಶ್ರೀ ಕಾಲಭೈರವ ದೇವಸ್ಥಾನದ ಸ್ವಚ್ಚತಾ ಕಾರ್ಯ “ನಿರ್ಮಲ ದೇಗುಲ” ಕಾರ್ಯಕ್ರಮವನ್ನು ಇದೇ ಸೆಪ್ಟೆಂಬರ್ 26 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ವತಿಯಿಂದ ತಿಳಿಸಿದ್ದಾರೆ.
ಗಾಂಧಿ ಜಯಂತಿಯ ಪ್ರಯುಕ್ತ ರಾಜ್ಯ ಮಟ್ಟದ ಅಂಚೆ ಕಾರ್ಡ್ ನಲ್ಲಿ ಗಾಂಧೀಜಿಯ ಚಿತ್ರ ರಚಿಸುವ ಸ್ಪರ್ಧೆ
ಕೋಟೇಶ್ವರ (ಸೆ,24): ಸ್ಮಾರ್ಟ್ ಕ್ರೀಯೇಷನ್ಸ್ ಎಜುಕೇಶನ್ ಮತ್ತು ಜ್ಞಾನವಾಹಿನಿ ಯುಟ್ಯೂಬ್ ಚಾನೆಲ್ ರವರ ಸಹಭಾಗಿತ್ವದಲ್ಲಿ ಅಕ್ಟೋಬರ್ 2 ರ ಗಾಂಧಿ ಜಯಂತಿ ಅಂಗವಾಗಿ “ನಮ್ಮ ಬಾಪೂಜೀ” ಶೀರ್ಷಿಕೆ ಅಡಿಯಲ್ಲಿ ರಾಜ್ಯ ಮಟ್ಟದ ಅಂಚೆ ಕಾರ್ಡ್ ನಲ್ಲಿ ಗಾಂಧೀಜಿ ಚಿತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗ(ಎಲ್.ಕೆ.ಜಿ ಯಿಂದ 7ನೇ ತರಗತಿವರೆಗೆ), ಪ್ರೌಢ ವಿಭಾಗ (8ನೇ ತರಗತಿಯಿಂದ 10ನೇ ತರಗತಿ) ಹಾಗೂ ಪದವಿಪೂರ್ವ ವಿಭಾಗ ( ಪ್ರಥಮ ಪಿಯುಸಿ ಮತ್ತು […]
ರಕ್ತದಾನ ಶಿಬಿರದ ಕ್ರಾಂತಿ ಪುರುಷ ನಾಡೋಜ ಡಾ. ಜಿ. ಶಂಕರ್ ರವರ ಹುಟ್ಟುಹಬ್ಬದ ಪ್ರಯುಕ್ತ – ಅಕ್ಟೋಬರ್,05 ರಂದು ಬೃಹತ್ ರಕ್ತದಾನ ಶಿಬಿರ
ಉಡುಪಿ(ಸೆ.23): ಕರ್ನಾಟಕ ರಾಜ್ಯದ ಉದ್ದಗಲಕ್ಕೂ ನಾಡೋಜ ಡಾ.ಜಿ.ಶಂಕರ್ ರವರ ಹೆಸರು ಚಿರಪರಿಚಿತ. ಬೃಹತ್ ರಕ್ತದಾನ ಶಿಬಿರ, ಶಿಕ್ಷಣ, ಆರೋಗ್ಯ ಸುರಕ್ಷಾ, ಅಶಕ್ತ ಕಲಾವಿದರಿಗೆ ನೆರವು, ಬಡ ಹಾಗೂ ದುರ್ಬಲ ವರ್ಗದವರಿಗೆ ಆರ್ಥಿಕ ನೆರವು ಹೀಗೆ ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡು ಹಲವು ಜನತೆಯ ಬದುಕಿಗೆ ಬೆಳಕಾದವರು ನಾಡೋಜ ಡಾ.ಜಿ.ಶಂಕರ್. ನಮ್ಮ ಕರಾವಳಿ ಭಾಗದಲ್ಲಿ ರಕ್ತದಾನ ಶಿಬಿರದ ಕ್ರಾಂತಿಯನ್ನು ಕೈಗೊಂಡು “ಕ್ರಾಂತಿ ಪುರುಷ” ಎಂದು ಗುರುತಿಸಲ್ಪಡುವ ನಾಡೋಜ ಡಾ. ಜಿ. […]
ಅನಾರೋಗ್ಯ ಪೀಡಿತ ರಾಜೇಶ್ ಮೊಗವೀರ ರವರಿಗೆ ವೀಲ್ ಚೇರ್ ಹಸ್ತಾಂತರಿಸಿದ ಶ್ರೀ ಗೋವಿಂದ ಬಾಬು ಪೂಜಾರಿ
ನಾವುಂದ (ಸೆ,22): ಕಿಡ್ನಿ ವೈಫಲ್ಯದಿಂದ ದೇಹದ ಬಲ ಕಳೆದುಕೊಂಡಿರುವ ಅರೆಹೊಳೆಯ ಚೌದಿ ಮನೆ ರಾಜೇಶ್ ಮೊಗವೀರ ರವರ ಮನೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಅವರು ಭೇಟಿ ಮಾಡಿ ವೀಲ್ ಚೇರ್ ಹಸ್ತಾಂತರಿಸಿ ಧನ ಸಹಾಯ ಮಾಡಿದರು. ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ತಮ್ಮ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮೂಲಕ ಹಲವಾರು ನೊಂದ ಹಾಗೂ ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿರುತ್ತಾರೆ.
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಎರಡನೇ ಡೋಸ್ ಲಸಿಕಾ ಅಭಿಯಾನ
ಶಿರ್ವ(ಸೆ,21): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಎನ್ಸಿಸಿ, ಎನ್ಎಸ್ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ-ರೇಂಜರ್ಸ್ ಹಾಗೂ ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿಯಾಗಿ ಕರೋನಾ ವಿರುದ್ದ ಎರಡನೇಡೋಸ್ ಲಸಿಕಾ ಅಭಿಯಾನವನ್ನು ಕಾಲೇಜಿನ ಎಲ್ಲಾ ಬೋಧಕ ಬೋಧಕೇತರರು, ವಿದ್ಯಾರ್ಥಿಗಳಿಗೆ ಕಾಲೇಜಿನ ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಸೆಪ್ಟೆಂಬರ್ 21ರಿಂದ ಆಯೋಜಿಸಲಾಗಿದೆ. ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗೆ […]
ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಕುರಿತು ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ
ಬೈಂದೂರು (ಸೆ,22): ಉಡುಪಿ ಜಿಲ್ಲೆಯ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶವನ್ನು ಹೊಂದಿರುವ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 9000 ವಸತಿ ರಹಿತರಿದ್ದು, ಅವರಿಗೆ ಶಾಶ್ವತ ನೆಲೆ ಕಂಡುಕೊಳ್ಳಲು ಹೆಚ್ಚುವರಿ ಮನೆಗಳನ್ನು ಮಂಜುರು ಮಾಡಬೇಕು,ಹಿಂದೆ ಪ್ರತಿ ಗ್ರಾಮ ಪಂಚಾಯತ್ ಗೆ ನೀಡಿರುವ 20 ಮನೆಗಳ ಆದೇಶ ಆದಷ್ಟು ಶೀಘ್ರವಾಗಿ ಶೀಘ್ರ ನೀಡಬೇಕು ಎಂದು ಬೈಂದೂರಿನ ಶಾಸಕ ಬಿ.ಎಂ .ಸುಕುಮಾರ ಶೆಟ್ಟಿ ಸದನದಲ್ಲಿ ವಸತಿ ಸಚಿವ ಶ್ರೀ ವಿ. ಸೋಮಣ್ಣ […]
ರಾಜ್ಯ ಮಟ್ಟದ “ ಶಿಕ್ಷಕ ರತ್ನ” ಪ್ರಶಸ್ತಿಗೆ ಶಿಕ್ಷಕ ಶ್ರೀ ಮಹೇಶ್ ಹೈಕಾಡಿ ಆಯ್ಕೆ
ಉಡುಪಿ (ಸೆ,21): ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ (ರಿ ).ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ ನೀಡುವ ರಾಜ್ಯ ಮಟ್ಟದ “ ಶಿಕ್ಷಕ ರತ್ನ” ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಪಿ.ಆರ್.ಎನ್.ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದ ಉಪ ಮುಖ್ಯೋಪಧ್ಯಾಯರಾದ ಶ್ರೀ ಮಹೇಶ್ ಹೈಕಾಡಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ಶಾಲೆಯ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಗಳಿಂದ […]