ಬೈಂದೂರು (ಅ, 31) : ಶ್ರೀ ಮಹಾಸತಿ ಯಕ್ಷಗಾನ ಚಿಕ್ಕಮೇಳ ನಾಯ್ಕನಕಟ್ಟೆ ಇದರ ಈ ವರ್ಷದ ಕೊನೆಯ ಸೇವೆಯಾಟ ನ,01ರಂದು ಮುಗಿಸುವುದೆಂದು ತಿಮ್ಮಪ್ಪ ದೇವಾಡಿಗ, ಸಂಚಾಲಕರಾದ ನಾಗರಾಜ್ ಭಟ್ ಹಾಗೂ ದೇವಸ್ಥಾನದ ಮುಕ್ತೇಶ್ವರರಾದ ನಾಗೇಂದ್ರ ಕಾರಂತರು ತಿಳಿಸಿರುತ್ತಾರೆ. ಮೇಳಕ್ಕೆ ಸಂಪೂರ್ಣವಾಗಿ ಸಹಕರಿಸಿ ದೇವಿಯನ್ನು ಬರಮಾಡಿಕೊಂಡು ದೇವಿಯನ್ನು ಆರಾಧಿಸಿದ ಕುಂದಾಪುರ ತಾಲ್ಲೂಕಿನ ಕುಂದಾಪುರ ಪರಿಸರ ಹೇರಿಕುದ್ರು ,ಆನಗಳ್ಳಿ ,ಉಪ್ಪಿನಕುದ್ರು, ಸಬ್ಲಾಡಿ ಪಾರ್ತಿಕಟ್ಟೆ , ಜಾಲಾಡಿ, ಹೆಮ್ಮಾಡಿ, ಬಗ್ವಾಡಿ, ಕಟ್ ಬೆಲ್ತೂರು, ಹಟ್ಟಿಯಂಗಡಿ, […]
Month: October 2021
ತೆರೆಮರೆಯ ಸಮಾಜ ಸೇವಕ ಸಾಯಿನಾಥ್ ಶೇಟ್ ಕುಂದಾಪುರ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ (ಅ, 30) : ಪ್ರಚಾರ ಬಯಸದ, ತನ್ನ ಕೈಯಲ್ಲಾದಷ್ಟು ಅಶಕ್ತರಿಗೆ ಸಹಾಯ ಮಾಡುವ ಕುಂದಾಪುರದ ತೆರೆಮರೆಯ ಸರಳ ಸ್ವಭಾವದ ಸಮಾಜ ಸೇವಕ ಶ್ರೀ ಸಾಯಿನಾಥ್ ಶೇಟ್ ರವರು ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ. ಕಳೆದ ಲಾಕ್ ಡೌನ್ ಸಮಯದಲ್ಲಿ ತಿಂಗಳುಗಟ್ಟಲೆ ಏಕಾಂಗಿಯಾಗಿ ಯಾವುದೇ ಪ್ರಚಾರದ ಅಪೇಕ್ಷೆ ಇಲ್ಲದೆ ಅದೆಷ್ಟೋ ಜನರ ಹಸಿವು ತಣಿಸಿದ ಶೇಟ್ ರವರು ಕಲಾಕ್ಷೇತ್ರ ಕುಂದಾಪುರದ ಸಕ್ರಿಯ ಸದಸ್ಯರಾಗಿದ್ದಾರೆ.
ಎಣಿಕೆ
ಒಂದು.. ಎರಡು… ಮೂರು…ನೂರಾ ಎಪ್ಪತ್ತೈದು…. ಅಲ್ಲಲ್ಲ…. ಎಪ್ಪತ್ತಾರು…ಛೇ.. ಲೆಕ್ಕ ತಪ್ಪಿತು…ಇರುಳಲ್ಲಿ ನಕ್ಷತ್ರಗಳನ್ನು ಎಣಿಸುತ್ತಿದ್ದೇನೆಮತ್ತೆ ಮತ್ತೆ ನನಗೆ ಲೆಕ್ಕತಪ್ಪುತ್ತಿದೆಬುಟ್ಟಿಯಲ್ಲಿದ್ದ ಮಲ್ಲಿಗೆ ಹೂಗಳು ಚೆಲ್ಲಿದಂತೆಬಾನಿನ ತುಂಬಾ ಹರಡಿ ಬಿದ್ದಿವೆಒಂದು ಕ್ರಮವೆಂಬುದೇ ಇಲ್ಲ, ಅಥವಾ ನನಗೆ ತಿಳಿದಿಲ್ಲಅದೆಷ್ಟೋ ದಿನಗಳಿಂದ ಲೆಕ್ಕಹಾಕುತ್ತಿದ್ದರೂ ಎಣಿಕೆ ತಪ್ಪಿಮೊದಲಿನಿಂದಲೇ ಶುರುಮಾಡುತ್ತಿದ್ದೇನೆಎಷ್ಟನೇ ಸಲ? ಅದರ ಲೆಕ್ಕವೂ ನನಗಿಲ್ಲಲೆಕ್ಕ ಹಾಕುತ್ತಿರುವುದಾದರೂ ಯಾಕೆ?ನನಗೂ ತಿಳಿದಿಲ್ಲ. ಆದರೂ ಬೇಕು, ಎಣಿಸಲೇ ಬೇಕುಕಪ್ಪನೆ ಮೋಡದೊಳಗೆ ಅವಿತುಕುಳಿತ ನಕ್ಷತ್ರಗಳನ್ನೂಹೊರಗೆಳೆದು ತೊಳೆದು ಎಣಿಸಬೇಕುಎಂದಾದರೊಂದು ದಿನ ನನಗೆ ಪಕ್ಕಾ ಲೆಕ್ಕ ಸಿಕ್ಕೀತು […]
ಲಿಯೋ ಅಧ್ಯಕ್ಷರಾಗಿ ಭವಿಷ್ಯ ಶೆಟ್ಟಿ ಕೊವಾಡಿ ಆಯ್ಕೆ
ತಲ್ಲೂರು (ಅ. 30) : ಲಿಯೋ ಕ್ಲಬ್ ಬಸ್ರೂರು ಮೂಡ್ಲಕಟ್ಟೆಯ ನೂತನ ಅಧ್ಯಕ್ಷರಾಗಿ ಭವಿಷ್ಯ ಶೆಟ್ಟಿ ಕೋವಾಡಿ ಆಯ್ಕೆ ಯಾಗಿರುತ್ತಾರೆ. ಇವರು ಬಾಲ ಬರಹಗಾರ, ವಾಗ್ಮಿ ,ಯಕ್ಷಗಾನ ಕಲಾ ಪ್ರತಿಭೆ. ಉತ್ತಮ ನಾಯಕತ್ವ ಗುಣಗಳನ್ನು ಮೈಗುಾಡಿಸಿಕೊಂಡಿರುವ ಇವರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಎಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕೆಮ್ಮಣ್ಣು ಗಣಪತಿ ವ್ಯವಸಾಯ ಸಂಘ ನಿ. ವತಿಯಿಂದ ಸಮಾಜ ಸೇವಕ ಈಶ್ವರ್ ಮಲ್ಪೆಯವರಿಗೆ ಸನ್ಮಾನ
ಉಡುಪಿ (ಅ, 30): ಇಲ್ಲಿನ ಕೆಮ್ಮಣ್ಣು ಗಣಪತಿ ವ್ಯವಸಾಯ ಸಂಘ ನಿ. ವತಿಯಿಂದ ಜೀವರಕ್ಷಕ, ಈಜುಪಟು ಶ್ರೀ ಈಶ್ವರ್ ಮಲ್ಪೆ ಯವರ ಸಮಾಜಸೇವೆ ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಯಾಗಿ ಈಶ್ವರ್ ಮಲ್ಪೆ ಯವರು ಸಂತಸವನ್ನು ವ್ಯಕ್ತಪಡಿಸುವುದರ ಜೊತೆಗೆ ಇನ್ನು ಸಮಾಜಸೇವೆಯ ಕರ್ತವ್ಯದ ಹೊಣೆ ಹೆಚ್ಚಾಗಿದೆಯೆಂದು ಸಂತೋಷದಿಂದಲೇ ಹೇಳಿಕೊಂಡರು.
ಯೆನೆಪೋಯ ಇಂಜಿನಿಯರಿಂಗ್ ಕಾಲೇಜು : ಯೆನ್ ಸಂಭ್ರಮ – 2021
ಮೂಡುಬಿದ್ರಿ (ಅ, 31) : ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿವಿಧ ಕಾರ್ಯಕ್ರಮಗಳು “ಯೆನ್ ಸಂಭ್ರಮ – 2021 ” ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಿಮಿಕ್ರಿ ಕಲಾವಿದೆ ಮತ್ತು ಗಿನ್ನಿಸ್ ರೆಕಾರ್ಡ್ ನಾಮನಿರ್ದೇಶಿತ ಕಲಾವಿದೆ ಅಕ್ಷತಾ ಕುಡ್ಲ ಮಾತನಾಡಿ, ಇಂತಹ ಸ್ಪರ್ಧಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಕ್ರಿಯಾಶೀಲತೆಗೆ ವೇದಿಕೆಯಾಗುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು […]
ಮೊಬೈಲ್ ಎಕ್ಸ್ ಕುಂದಾಪುರ: ದೀಪಾವಳಿ ಹಬ್ಬದ ಪ್ರಯುಕ್ತ 9 ನೇ ವರ್ಷದ ಡಬ್ಬಲ್ ಧಮಾಕ ಆಫರ್
ಕುಂದಾಪುರ (ಅ,30): ಲಕ್ಷಾಂತರ ಗ್ರಾಹಕರಿಗೆ ಸಂತ್ರಪ್ತ ಹಾಗೂ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿರುವ ಕುಂದನಗರಿಯ ನಂಬರ್ 1ಮಲ್ಟಿ ಬ್ರಾಂಡ್ ಶೋರೂಮ್ ಮೊಬೈಲ್ ಎಕ್ಸ್ ನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಅಕ್ಟೋಬರ್ 31 ರಿಂದ ನವೆಂಬರ್ 15 ರ ವರೆಗೆ ಸಂಸ್ಥೆಯ 9 ನೇ ವರ್ಷದ ಡಬ್ಬಲ್ ಧಮಾಕ ಆಫರ್ ನೀಡಲಾಗುತ್ತಿದೆ . ಆಫರ್ ವಿಶೇಷತೆಗಳು ಎಲ್ಲ ಮೊಬೈಲ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಉಚಿತ ಉಡುಗೊರೆಗಳು ಪ್ರತಿ ಸ್ಮಾರ್ಟ್ ಫೋನ್ ಖರೀದಿಯ […]
ಉಡುಪಿ ಹೆಲ್ಪ್ ಲೈನ್ (ರಿ): ಸರ್ವ ಧರ್ಮಿಯರ ದೀಪಾವಳಿ ಹಬ್ಬ ಆಚರಣೆ
ಉಡುಪಿ (ಅ,30): ಹಸಿದವರ ಬಾಳಿನ ಆಶಾಕಿರಣ ಎನ್ನುವ ಆಶಯದೊಂದಿಗೆ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಉಡುಪಿ ಹೆಲ್ಪ್ ಲೈನ್ (ರಿ) ವತಿಯಿಂದ “ಸರ್ವ ಧರ್ಮೀಯರ ದೀಪಾವಳಿ ಹಬ್ಬದ ಆಚರಣೆಯನ್ನು ಸಂತೆಕಟ್ಟೆಯಕೃಷ್ಣಾನುಗ್ರಹ ಅರ್ಹ ಸಂಸ್ಥೆ ಹಾಗೂ ದತ್ತು ಸ್ವೀಕಾರ ಕೇಂದ್ರ , ಕೃಷ್ಣಾನುಗ್ರಹ ಮಕ್ಕಳ ಸಂಸ್ಥೆ,ಕೃಷ್ಣಾನುಗ್ರಹ “ಮಮತೆಯ ತೊಟ್ಟಿಲು ಇಲ್ಲಿ ಅ,31ರ ರವಿವಾರದಂದು ಆಚರಿಸಲಾಗುವುದು. ಬೆಳ್ಳಿಗೆ 10:30 ಕ್ಕೆ ಸಭಾ ಕಾರ್ಯಕ್ರಮ , ಯೋಗ ಪಟು “ಉದ್ಬವ್ ದೇವಾಡಿಗ ಬೆಳ್ಮಣ್ಣು” ಅವರಿಂದ […]
ನ.7 ರಂದು ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
ಬಂಟಕಲ್(ಅ,30): ಇಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಇದರ 8ನೇ ವರ್ಷದ ಪದವಿ ಪ್ರದಾನ ಸಮಾರಂಭವು ನ, 07 ರ ಭಾನುವಾರದಂದು ಕಾಲೇಜಿನ ಆವರಣದಲ್ಲಿ ಜರುಗಲಿದೆ.ಕಾರ್ಯಕ್ರಮದಲ್ಲಿ 2020-21ರ ಶೈಕ್ಷಣಿಕ ವರ್ಷದಲ್ಲಿ ಅಂತಿಮ ವರ್ಷದ ಬಿ.ಇ. ಪದವಿ ಪೂರೈಸಿದ ಅರ್ಹ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಗುವುದು. ಇದೇ ಸಂದರ್ಭದಲ್ಲಿ ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಚಿನ್ನದ ಪದಕವನ್ನು ನೀಡಲಾಗುವುದು. ಶ್ರೀ ರಾಮ ನಾಯಕ್, ಜನರಲ್ ಮ್ಯಾನೇಜರ್, ಕೆನರಾ ಬ್ಯಾಂಕ್, ಮಣಿಪಾಲ […]