ಉಡುಪಿ (ಅ.8): ನವರಾತ್ರಿಯ ಸಡಗರ ದೇಶದೆಲ್ಲೆಡೆ ಮನೆ ಮಾಡುತ್ತಿದ್ದು, ವಿವಿಧ ಸಂಘ -ಸಂಸ್ಥೆ ಗಳಲ್ಲಿ ,ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಬಣ್ಣ ಬಣ್ಣದ ಉಡುಗೆ ತೊಡುಗೆ ಗಳಲ್ಲಿ ಕಂಗೊಳಿಸಿತ್ತಿದ್ದು ,ನವರಾತ್ರಿಯ ಸಂಭ್ರಮಕ್ಕೆ ಮೆರುಗು ನೀಡುತ್ತಿದ್ದಾರೆ. ಉಡುಪಿಯಲ್ಲಿ ಮಹಿಳೆಯರು ನವರಾತ್ರಿಯ ಪ್ರಯುಕ್ತ ಬಣ್ಣ ಬಣ್ಣದ ಉಡುಗೆ ತೊಡುಗೆಯೊಂದಿಗೆ ಫೋಟೋಗೆ ಫೋಸ್ ನೀಡಿದ ಕ್ಷಣ.
Day: October 9, 2021
ಕುಂದಾಪುರ:ವಿಶ್ವ ಅಂಚೆ ದಿನಾಚರಣೆ
ಕುಂದಾಪುರ (ಅ,9): ಭಾರತೀಯ ಅಂಚೆ ಇಲಾಖೆಯ ಕುಂದಾಪುರ ಪ್ರಧಾನ ಅಂಚೆ ಕಛೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಇಲಾಖೆಯ 167 ವರ್ಷ ಚರಣೆಯ ಸಂಭ್ರಮವನ್ನುಅಕ್ಟೋಬರ್ 9 ರಿಂದ 15 ರ ವರೆಗೆ “ಅಂಚೆ ಸಪ್ತಾಹ”ದ ಮೂಲಕ ಆಚರಿಸಲಾಗುತ್ತಿದೆ. ಅಂಚೆ ಉಪ ಅಧೀಕ್ಷಕರಾದ ಪಿ ಏನ್ ಸತೀಶ, ಅಂಚೆ ನಿರೀಕ್ಷಿಕರಾದ ಡಿ ಎಮ್ ರಾಮಚಂದ್ರ, ಅಂಚೆಪಾಲಕರಾದ ಮಂಜುನಾಥ್ ಎಚ್ ಹಾಗೂ ಅಂಚೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಕಾಲಿಕ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ಥ: ದುರಸ್ಥಿ ಕಾರ್ಯನಿರತ ಅಂಪಾರು ಗ್ರಾಮಪಂಚಾಯತ್ ನ ಪರಿಶ್ರಮಕ್ಕೆ ಶ್ಲಾಘನೆ
ಅಂಪಾರು(ಅ,9):ಇತ್ತೀಚೆಗೆ ಅಂಪಾರು ಪರಿಸರದಲ್ಲಿ ಗುಡುಗು ,ಮಿಂಚು ಸಹಿತ ಸುರಿದ ಅಕಾಲಿಕ ಮಳೆಯ ಪರಿಣಾಮವಾಗಿ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬಗೆ, ಶಾನ್ಕಟ್ಟು ಕನ್ನಾಲಿಗೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಜೋರಾಗಿ ಬೀಸಿದ ಗಾಳಿಯಿಂದಾಗಿ ಬೃಹದಾಕಾರದ ಮರಗಳು ಮನೆ ಹಾಗೂ ರಸ್ತೆಯ ಮೇಲೆರಗಿದ್ದವು.ಇನ್ನೂ ಕೆಲವು ಭಾಗಗಳಲ್ಲಿ ಫಲವತ್ತಾದ ಅಡಿಕೆ, ತೆಂಗಿನ ಮರಗಳು ಧರೆಗುರುಳಿ ಬಿದ್ದಿದೆ.ಅದಲ್ಲದೇ ಗಾಳಿಯ ರಭಸಕ್ಕೆ ಮನೆಗಳ ಹಾಗೂ ದನದ ಕೊಟ್ಟಿಗೆಗಳ ಹೆಂಚು ಹಾಗೂ ತಗಡಿನ ಮಾಡು ಸಂಪೂರ್ಣ ಜಖಂಗೊಂಡಿದ್ದು, ಸಿಡಿಲಿನ ಹೊಡೆತಕ್ಕೆ ಸಿಲುಕಿ […]