ಬೈಂದೂರು (ಅ,23): ಬೈಂದೂರು ಸರ್ಕಾರಿ ಐಟಿಐ ಕಾಲೇಜನ್ನು ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸುವ ಕಾಮಗಾರಿಗಳು ನಡೆಯುತ್ತಿದ್ದು, ಉನ್ನತ ಶಿಕ್ಷಣ,ಕೌಶಲ್ಯಾಭಿವೃದ್ಧಿ ,ಐಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್ ನಾರಾಯಣ ಅ,23 ರಂದು ಬೈಂದೂರು ಸರಕಾರಿ ಐ.ಟಿ.ಐ ಕಾಲೇಜಿಗೆ ಭೇಟಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು. ನೂತನ 11 ಕೋರ್ಸ್ಗಳು ಆರಂಭವಾಗಲಿದ್ದು, ಅವುಗಳಲ್ಲಿ ಆರು ವಿಷಯಗಳು ಎರಡು ವರ್ಷ ಹಾಗೂ ಐದು ವಿಷಯಗಳು ಒಂದು ವರ್ಷದ ಅವಧಿಯದ್ದಾಗಿದೆ ಎಂದು ತಿಳಿಸಿದರು.ಈ ಸಂಧರ್ಭದಲ್ಲಿ […]
Day: October 23, 2021
ರಾಷ್ಟಮಟ್ಟದ ಕ್ರೀಡಾಕೂಟಕ್ಕೆ ಶಿಕ್ಷಕ ನಾಗರಾಜ ಖಾರ್ವಿ ಆಯ್ಕೆ
ಕುಂದಾಪುರ (ಅ,23): ದಾವಣಗೆರೆಯ ಹರಿಹರದಲ್ಲಿ ನಡೆದ ರಾಜ್ಯಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಈಜುಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಶಿಕ್ಷಕ ನಾಗರಾಜ ಖಾರ್ವಿ ಬ್ರೆಸ್ಟ್ ಸ್ಟ್ರೋಕ್ 50 ಮೀ ಚಿನ್ನಬ್ರೆಸ್ಟ್ ಸ್ಟ್ರೋಕ್ 100 ಮೀ ಚಿನ್ನಬ್ರೆಸ್ಟ್ ಸ್ಟ್ರೋಕ್ 200 ಮೀ ಬೆಳ್ಳಿ50×4 ಮೆಡ್ಲೆ ರಿಲೇ ಕಂಚು100X4 ಫ್ರೀ ಸ್ಟೈಲ್ ರಿಲೇ ಕಂಚು ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರುಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿಯಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ […]
ಜೈಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ: ಅ,24 ರಂದು ಸಹಾಯ ಹಸ್ತ ಹಸ್ತಾಂತರ ಮತ್ತು ಅಭಿನಂದನಾ ಕಾರ್ಯಕ್ರಮ
ಕುಂದಾಪುರ (ಅ,23): “ಯುವ ಮನಸ್ಸುಗಳಿಗೆ ಸ್ಫೂರ್ತಿ, ನೊಂದವರಿಗೆ ನೆರವಿನ ದಾರಿದೀಪ” ಎನ್ನುವ ಧ್ಯೇಯದೊಂದಿಗೆ ಬಹು ಬಗೆಯಸೇವಾ ಕೈಂಕರ್ಯದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸಮಾನ ಮನಸ್ಕ ಯುವಕರಿಂದ ರಚಿತವಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಇದೇ ಅಕ್ಟೋಬರ್,24 ರ ಭಾನುವಾರ ಸಮಯ ಮಧ್ಯಾಹ್ನ 3.30 ಕ್ಕೆ ಕೋಟ ಹಳೆಬಸ್ಟ್ಯಾಂಡ್ ಬಳಿ ಇರುವ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ಸಹಾಯ ಹಸ್ತ ಹಸ್ತಾಂತರ ಮತ್ತು ಅಭಿನಂದನಾ ಕಾರ್ಯಕ್ರಮವನ್ನುನಲ್ಲಿ ಹಮ್ಮಿಕೊಳ್ಳಲಾಗಿದೆ. ಈ […]
ಕರಾವಳಿಯ ಹೆಮ್ಮೆ,ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ
ಮಂಗಳೂರು (ಅ,23): ಮಂಗಳೂರು ಬೀದಿಯಲ್ಲಿ ಬುಟ್ಟಿಯಲ್ಲಿ ಕಿತ್ತಾಳೆ ಹಣ್ಣು ಮಾರಾಟ ಮಾಡಿ ಬಂದ ಲಾಭದ ಹಣವನ್ನು ಗ್ರಾಮೀಣ ಪ್ರದೇಶವಾದ ಹರೇಕಳ ನ್ಯೂಪಡ್ಪುವಿನಲ್ಲಿ ಸರಕಾರಿ ಶಾಲೆ ಆರಂಭಿಸಲು ಶ್ರಮವಹಿಸಿದ ಹರೇಕಳ ಹಾಜಬ್ಬ ನವರ ಶೈಕ್ಷಣಿಕ ಕಾಳಜಿಯನ್ನು ಗುರುತಿಸಿ ಕೇಂದ್ರ ಸರಕಾರ 2020ರ ಸಾಲಿನಲ್ಲಿ ಪ್ರಕಟಿಸಿದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ನ.8ರಂದು ದೆಹಲಿಗೆ ಆಗಮಿಸುವಂತೆ ಕೇಂದ್ರ ಗೃಹಸಚಿವಾಲಯದಿಂದ ಅಧಿಕೃತ ಅಹ್ವಾನ ಬಂದಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ಸರಳ ಸಜ್ಜನಿಕೆಯ […]
ಕೋಟೇಶ್ವರ: ಹೆಣ್ಣುಮಕ್ಕಳ ರಕ್ಷಣೆ, ಸಾಂತ್ವನ ಕೇಂದ್ರಕ್ಕೆ ದಾಖಲು
ಕೋಟೇಶ್ವರ(ಅ,22): ಇಲ್ಲಿನ ಪದವಿ ಕಾಲೇಜು ಸಮೀಪದ ಬಸ್ ನಿಲ್ದಾಣ ಒಂದರಲ್ಲಿ ಪ್ರತಿ ರಾತ್ರಿ ಮಧ್ಯಪಾನ ಸೇವಿಸುತ್ತಿದ್ದ ತಮ್ಮ ತಂದೆ ತಾಯಿಯೊಂದಿಗೆ ಅಸುರಕ್ಷತೆಯಿಂದ ಮಲಗುತ್ತಿದ್ದ ಹನ್ನೊಂದು ವರ್ಷ ಮತ್ತು ಒಂದುವರೆ ವರ್ಷದ ಇಬ್ಬರು ಅಬಲೆಯರನ್ನು ಗಮನಿಸಿದ ಸ್ಥಳೀಯ ಆಶಾಕಾರ್ಯಕರ್ತೆಯರು ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರ ಗಮನಕ್ಕೆ ತಂದು ರಕ್ಷಿಸುವಂತೆ ಕೋರಿದ್ದರು. ಆ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲೋಕೇಶ್ ಅಂಕದಕಟ್ಟೆ ಮಾಹಿತಿ ನೀಡಿ ತುರ್ತು ರಕ್ಷಣೆಗೆ ಮನವಿ […]
ಅವಳೆಂದರೆ….
ಸೊ೦ಟಕ್ಕೆ ಸೆರಗು ಸಿಕ್ಕಿಸಿಕೊಂಡು, ಅತ್ತಿತ್ತ ಗಡಿಬಿಡಿ ಮಾಡಿಕೊಂಡು ಓಡಾಡುತ್ತಿದ್ದ ಆಕೆ ಇತ್ತ ಮನೆಯವರ ಮಾತಿಗೆ ಹೂ ಗುಡುತ್ತಾ, ಮಕ್ಕಳಿಗೆ ಹಾಗೆ ಮಾಡು,ಹೀಗೆ ಮಾಡು ಎಂದು ಮಾರ್ಗಸೂಚಿ ನೀಡುತ್ತಾ ,ಅಡುಗೆ ಕೋಣೆಯಲ್ಲೇ ಇದ್ದು ಮನೆಯವರ ಬೇಕು ಬೇಡಗಳ ದಿನಚರಿಯನ್ನ ಅವಳೇ ಸರಿದೂಗಿಸಿಕೊಂಡು ತನ್ನ ಕೆಲಸ ಮುಂದುವರೆಸುತ್ತಿದ್ದಳು. “ನೀರಿನಲ್ಲಿರೋ ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು ಆದರೆ,ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ”ಎನ್ನೋ ಮಾತಿನ ಅರ್ಥ ತಿಳಿದದ್ದು ಸಂಸಾರಸ್ಥರಾದಾಗಲೇ ..!?ಅವಳೆಂದರೆ,ಮಾಟಗಾತಿಯೋ ! ಜಾದುಗಾರ್ತಿಯೋ ನಾ ಕಾಣೆ, […]