ಬೈಂದೂರು (ಅ, 12) :ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯ ಜೊತೆಗೆ ಉತ್ತಮ ಆದರಾತಿಥ್ಯಕ್ಕೆ ಹೆಸರುವಾಸಿಯಾದ ಡಾ. ಗೋವಿಂದ ಬಾಬು ಪೂಜಾರಿಯವರ ಮಾಲೀಕತ್ವದ ಶೆಫ್ಟಾಕ್ ಸಂಸ್ಥೆಗೆ ಆಲ್ ಇಂಡಿಯಾ ಬಿಸಿನೆಸ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ -2021 ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ.ಗೋವಿಂದ ಬಾಬು ಪೂಜಾರಿಯವರು ಪ್ರಶಸ್ತಿಯನ್ನು ಸ್ವೀಕರಿಸಿದರು.
Month: October 2021
ರಾಜ್ಯಮಟ್ಟದ ದೇಹದಾಡ್ಯ ಸ್ಫರ್ಧೆ : ಸೋಮಶೇಖರ್ ಖಾರ್ವಿ ದ್ವಿತೀಯ ಸ್ಥಾನ
ಕುಂದಾಪುರ (ಅ, 12) : ಶಿವಮೊಗ್ಗ ಯುವ ದಸರಾದಲ್ಲಿ ನಡೆದ ರಾಜ್ಯಮಟ್ಟದ ದೇಹದಾಡ್ಯ ಸ್ಫರ್ಧೆಯ 65 ಕೆಜಿ ವಿಭಾಗದಲ್ಲಿ ಹೆಮ್ಮಾಡಿಯ ನ್ಯೂ ವೀರ ಮಾರುತಿ ವ್ಯಾಯಾಮ ಶಾಲೆಯ ಶ್ರೀ ಸೋಮಶೇಖರ್ ಖಾರ್ವಿ ದ್ವಿತೀಯ ಸ್ಥಾನ ಪಡೆದಕೊಂಡಿದ್ದಾರೆ. ವಿವಿಧ ಜಿಲ್ಲಾ ಮತ್ತು ರಾಜ್ಯ ಮಟ್ಟದ ದೇಹದಾಢ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಸೋಮಶೇಖರ್ ಖಾರ್ವಿ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ: 28 ನೇ ವರ್ಷದ ಶ್ರೀ ಶಾರದೋತ್ಸವ ಸಂಭ್ರಮ
ಬೈಂದೂರು (ಅ,10): ಬೈಂದೂರಿನ ಕಳವಾಡಿಶ್ರೀ ಈಶ್ವರ ಮಾರಿಕಾಂಬಾ ದೇವರ ಸನ್ನಿಧಿಯಲ್ಲಿ 28 ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮ ವಿಜ್ರಂಭಣೆಯಲ್ಲಿ ನಡೆಯಲಿದೆ. ಅಕ್ಟೋಬರ್ 12 ರ ಮಂಗಳವಾರ ಬೆಳಿಗ್ಗೆ 10 -00 ಗಂಟೆಗೆ ಶಾರದಾ ಪ್ರತಿಷ್ಠಾಪನೆ,12-00 ಗಂಟೆಗೆ ಮಧ್ಯಾಹ್ನ ಪೂಜೆ ,ಸಂಜೆ 6.30 ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ರಾತ್ರಿ 8:00 ಗಂಟೆಗೆ ಶ್ರೀ ಈಶ್ವರ ಮಾರಿಕಾಂಬ ಪರಿವಾರ ದೇವರುಗಳಿಗೆ ನವರಾತ್ರಿ ಪೂಜೆ ಮತ್ತು ಶ್ರೀ ಶಾರದಾಂಬೆಗೆ ರಾತ್ರಿ […]
ಬಿಲ್ಲವ ಯುವ ವಾಹಿನಿ ಮತ್ತು ಗಾಂಧಿ ವಿಚಾರ ವೇದಿಕೆ ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣ ಗುರು-ಮಹಾತ್ಮಾ ಗಾಂಧಿ ಸಮನ್ವಯತೆ ವಿಚಾರ ಗೋಷ್ಠಿ
ಮೂಡುಬಿದಿರೆ(ಅ,10):ಬಿಲ್ಲವ ಯುವ ವಾಹಿನಿ ಮತ್ತು ಗಾಂಧಿ ವಿಚಾರ ವೇದಿಕೆ ಮೂಡುಬಿದಿರೆ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು-ಮಹಾತ್ಮಾ ಗಾಂಧಿ ಸಮನ್ವಯತೆಯ ಕುರಿತಾದ ವಿಚಾರ ಗೋಷ್ಠಿ ಅಕ್ಟೋಬರ್ ,10ರಂದು ಜರುಗಿತು. ಈ ವಿಚಾರಗೋಷ್ಠಿಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಾಹುಬಲಿ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು. ವಿಚಾರ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿಂತಕ ಶ್ರೀ ಅರವಿಂದ ಚೋಕ್ಕಾಡಿ ಮಹಾತ್ಮಾ ಗಾಂಧಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಭೇಟಿಯಾದ ಕ್ಷಣದ ಸ್ವಾರಸ್ಯಕರ ಘಟನೆಗಳನ್ನು ತಿಳಿಸಿದರು.ಮಾರ್ಚ್,12 […]
ಮೊಗವೀರ ಯುವ ಸಂಘಟನೆ ,ಬೈಂದೂರು- ಶಿರೂರು ಘಟಕ: ನಾಡೋಜ ಜಿ.ಶಂಕರ್ ರವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಬೈಂದೂರು (ಅ,10): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಬೈಂದೂರು- ಶಿರೂರು ಘಟಕದ ವತಿಯಿಂದ ನಾಡೋಜ ಡಾ. ಜಿ ಶಂಕರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಸಲಹೆಗಾರರಾದ ಶ್ರೀ ಎನ್. ಡಿ.ಚಂದನ್, ಶ್ರೀ ಜಗನ್ನಾಥ. ಎಮ್. ಉಪ್ಪುಂದ, ಬೈಂದೂರು-ಶಿರೂರು ಘಟಕದ ಅಧ್ಯಕ್ಷರಾದ ಶ್ರೀ ರವಿರಾಜ್ ಚಂದನ್ ಕಳವಾಡಿ, ಮಾಜಿ ಅಧ್ಯಕ್ಷರುಗಳಾದ […]
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್: ವಿಶ್ವ ಸೇವಾ ದಿನಾಚರಣೆ
ಕುಂದಾಪುರ (ಅ,10): ವಿಶ್ವ ಸೇವಾ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಪ್ರತೀ ವರ್ಷ ಸೇವೆಯೇ ಉಸಿರು ಎನ್ನುವ ಧ್ಯೇಯಯೊಂದಿಗೆ ಸಮಾಜ ಸೇವಕರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಹಾಗೆಯೇ ಈ ವರ್ಷ ಅದೇ ರೀತಿ ಎಳೆಯ ವಯಸ್ಸಿನಲ್ಲಿ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಾ ಬಂದಿರುವ 13 ವರ್ಷದ ಬಾಲಕ ವಿರಾಟ್ ನನ್ನು ಈ ಬಾರಿ ಗುರುತಿಸಿ ಗೌರವಿಸುವ ಕೆಲಸಕ್ಕೆ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಮುಂದಾಗಿದೆ. […]
ಡಾ.ಬಿ.ಬಿ. ಹೆಗ್ಡೆ ಕಾಲೇಜು: ಎನ್. ಸಿ.ಸಿ ಕೆಡೆಟ್ ಗಳಿಂದ ಫೈರಿಂಗ್ ಕ್ಯಾಂಪ್ ನಲ್ಲಿ ಉತ್ತಮ ಪ್ರದರ್ಶನ
ಕಾರ್ಕಳ(ಅ,10): ಉಡುಪಿ ಜಿಲ್ಲೆಯ ಕಾರ್ಕಳದ ನಕ್ರೆಯಲ್ಲಿ ನಡೆದ ಎನ್.ಸಿ.ಸಿ ಫೈರಿಂಗ್ ಕ್ಯಾಂಪ್ನಲ್ಲಿ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್. ಸಿ.ಸಿ ಕೆಡೆಟ್ಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಉತ್ತಮ ಫೈರಿಂಗ್ ನಡೆಸಿದ ಏಳು ವಿದ್ಯಾರ್ಥಿಗಳನ್ನು ಕಾಲೇಜಿನ ಬೆಸ್ಟ್ ಫೈರಿಂಗ್ ಕೆಡೆಟ್ ಗಳೆಂದು ಆಯ್ಕೆ ಮಾಡಲಾಗಿದೆ. ಕಾಲೇಜಿನ ಎನ್ಸಿಸಿ ಅಧಿಕಾರಿ ಶಿವರಾಜ್ ಸಿ. ಅರೆಹೊಳೆ ಈ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದು, ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ,ಉಪಪ್ರಾಂಶುಪಾಲ ಶ್ರೀ ಚೇತನ್ ಶೆಟ್ಟಿ ಕೋವಾಡಿ ಹಾಗೂ ಕಾಲೇಜಿನ […]
ಉಡುಪಿ: ನವರಾತ್ರಿಯ ಸಂಭ್ರಮದಲ್ಲಿ ಮಹಿಳೆಯರು
ಉಡುಪಿ (ಅ.8): ನವರಾತ್ರಿಯ ಸಡಗರ ದೇಶದೆಲ್ಲೆಡೆ ಮನೆ ಮಾಡುತ್ತಿದ್ದು, ವಿವಿಧ ಸಂಘ -ಸಂಸ್ಥೆ ಗಳಲ್ಲಿ ,ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಬಣ್ಣ ಬಣ್ಣದ ಉಡುಗೆ ತೊಡುಗೆ ಗಳಲ್ಲಿ ಕಂಗೊಳಿಸಿತ್ತಿದ್ದು ,ನವರಾತ್ರಿಯ ಸಂಭ್ರಮಕ್ಕೆ ಮೆರುಗು ನೀಡುತ್ತಿದ್ದಾರೆ. ಉಡುಪಿಯಲ್ಲಿ ಮಹಿಳೆಯರು ನವರಾತ್ರಿಯ ಪ್ರಯುಕ್ತ ಬಣ್ಣ ಬಣ್ಣದ ಉಡುಗೆ ತೊಡುಗೆಯೊಂದಿಗೆ ಫೋಟೋಗೆ ಫೋಸ್ ನೀಡಿದ ಕ್ಷಣ.
ಕುಂದಾಪುರ:ವಿಶ್ವ ಅಂಚೆ ದಿನಾಚರಣೆ
ಕುಂದಾಪುರ (ಅ,9): ಭಾರತೀಯ ಅಂಚೆ ಇಲಾಖೆಯ ಕುಂದಾಪುರ ಪ್ರಧಾನ ಅಂಚೆ ಕಛೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಇಲಾಖೆಯ 167 ವರ್ಷ ಚರಣೆಯ ಸಂಭ್ರಮವನ್ನುಅಕ್ಟೋಬರ್ 9 ರಿಂದ 15 ರ ವರೆಗೆ “ಅಂಚೆ ಸಪ್ತಾಹ”ದ ಮೂಲಕ ಆಚರಿಸಲಾಗುತ್ತಿದೆ. ಅಂಚೆ ಉಪ ಅಧೀಕ್ಷಕರಾದ ಪಿ ಏನ್ ಸತೀಶ, ಅಂಚೆ ನಿರೀಕ್ಷಿಕರಾದ ಡಿ ಎಮ್ ರಾಮಚಂದ್ರ, ಅಂಚೆಪಾಲಕರಾದ ಮಂಜುನಾಥ್ ಎಚ್ ಹಾಗೂ ಅಂಚೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಕಾಲಿಕ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ಥ: ದುರಸ್ಥಿ ಕಾರ್ಯನಿರತ ಅಂಪಾರು ಗ್ರಾಮಪಂಚಾಯತ್ ನ ಪರಿಶ್ರಮಕ್ಕೆ ಶ್ಲಾಘನೆ
ಅಂಪಾರು(ಅ,9):ಇತ್ತೀಚೆಗೆ ಅಂಪಾರು ಪರಿಸರದಲ್ಲಿ ಗುಡುಗು ,ಮಿಂಚು ಸಹಿತ ಸುರಿದ ಅಕಾಲಿಕ ಮಳೆಯ ಪರಿಣಾಮವಾಗಿ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬಗೆ, ಶಾನ್ಕಟ್ಟು ಕನ್ನಾಲಿಗೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಜೋರಾಗಿ ಬೀಸಿದ ಗಾಳಿಯಿಂದಾಗಿ ಬೃಹದಾಕಾರದ ಮರಗಳು ಮನೆ ಹಾಗೂ ರಸ್ತೆಯ ಮೇಲೆರಗಿದ್ದವು.ಇನ್ನೂ ಕೆಲವು ಭಾಗಗಳಲ್ಲಿ ಫಲವತ್ತಾದ ಅಡಿಕೆ, ತೆಂಗಿನ ಮರಗಳು ಧರೆಗುರುಳಿ ಬಿದ್ದಿದೆ.ಅದಲ್ಲದೇ ಗಾಳಿಯ ರಭಸಕ್ಕೆ ಮನೆಗಳ ಹಾಗೂ ದನದ ಕೊಟ್ಟಿಗೆಗಳ ಹೆಂಚು ಹಾಗೂ ತಗಡಿನ ಮಾಡು ಸಂಪೂರ್ಣ ಜಖಂಗೊಂಡಿದ್ದು, ಸಿಡಿಲಿನ ಹೊಡೆತಕ್ಕೆ ಸಿಲುಕಿ […]










