ಪುತ್ತೂರು (ಡಿ, 26) : ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ನಿಯಂತ್ರಿತ ಬಳಕೆ, ಮನಸ್ಸಿನ ನಿಯಂತ್ರಣ, ನಕಾರಾತ್ಮಕ ವಿಚಾರಗಳನ್ನು ದೂರವಿಡುವುದರೊಂದಿಗೆ ಮಾನಸಿಕ ಶಾಂತತೆಯನ್ನು ಕಾಪಾಡಿಕೊಳ್ಳುವುದು ಆವಶ್ಯಕ ಎಂದು ಹೆಸರಾಂತ ಸಲಹೆಗಾರ್ತಿ ಪ್ರೀತಿ ಶೆಣೈ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಅಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ, ಕುಂದುಕೊರತೆ ನಿವಾರಣಾ ಕೋಶ ಮತ್ತು ಪೋಷಕ ಸಂಬಂಧ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಶ್ರೀರಾಮ ಸಭಾಭವನದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಉದ್ದೀಪನಾ […]
Day: December 26, 2021
ಮುಳ್ಳಿಕಟ್ಟೆ: ಹಾರ್ಡ್ ವೇರ್ ಶಾಪ್ ಬೆಂಕಿಗಾಹುತಿ- ಶಾರ್ಟ್ ಸರ್ಕಿಟ್ ನಿಂದ ನಡೆದ ದುರಂತ
ಮುಳ್ಳಿಕಟ್ಟೆ(ಡಿ,26): ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಬೆನಕ ಹಾರ್ಡ್ ವೇರ್ ಶಾಪ್ ಗೆ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ತಗುಲಿದ ಪರಿಣಾಮ ಇಡೀ ಅಂಗಡಿಯೇ ಸುಟ್ಟು ಹೋಗಿದೆ. ಡಿ,25 ರ ಸಂಜೆ ಈ ಘಟನೆ ಸಂಭವಿಸಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಸಿಬ್ಬಂದಿ ಬರುವಷ್ಟರಲ್ಲಿ ದಹನ ಶೀಲ ಸರಕುಗಳಿಂದಾಗಿ ಅರ್ಧ- ಮುಕ್ಕಾಲು ಗಂಟೆಯಲ್ಲೇ ಅಂಗಡಿಯೊಳಗಿನ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ .ಗಂಗೊಳ್ಳಿ ಪೊಲೀಸ್ […]
ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ 2022 ರ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ
ಕೋಟ (ಡಿ,23): ಯಕ್ಷಗಾನ ವಿದ್ವಾಂಸ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ರಂಗನಟ, ಸಾಹಿತಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ 2022 ರ ಪ್ರಶಸ್ತಿಯನ್ನು ಯಕ್ಷಗಾನ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ ಪ್ರದಾನ ಮಾಡಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ ಉಡುಪ, ಮಂದಾರ್ತಿ ಅಧ್ಯಕ್ಷ ಬಲರಾಮ ಕಲ್ಕೂರು, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂಡ ಸಮಿತಿ ನಿರ್ಧರಿಸಿದೆ. ಬಡಗು ತಿಟ್ಟಿನ ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ, ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ, ಸೌಕೂರು […]
ಕಳಸ: ನದಿಯಲ್ಲಿ ಮುಳುಗಿ ಯುವಕರ ಸಾವು -ಮ್ರತ ದೇಹ ಶೋಧಿಸಿ ಕುಟುಂಬಕ್ಕೆ ಹಸ್ತಾಂತರಿಸಿದ ಈಶ್ವರ್ ಮಲ್ಪೆ
ಕಳಸ (ಡಿ,25): ಭದ್ರ ನದಿಯ ನೀರಿನಲ್ಲಿ ಮುಳುಗಿ ಮ್ರತರಾದ ಇಬ್ಬರು ಯುವಕರ ಮೃತ ದೇಹ ಶೋಧಕಾರ್ಯ ಯಶಸ್ವಿಯಾಗದ ಕಾರಣ ಉಡುಪಿ ಜಿಲ್ಲೆಯ ಈಶ್ವರ್ ಮಲ್ಪೆ ಯವರಿಗೆ ಮೃತದೇಹವನ್ನು ಶೋಧಿಸಿ ಕೊಡುವುದರ ಬಗ್ಗೆ ಕರೆ ಬಂದಿತ್ತು. ಕರೆಗೆ ಓಗೊಟ್ಟ ಮುಳುಗು ತಜ್ಞ ಜೀವರಕ್ಷಕ ಈಶ್ವರ್ ಮಲ್ಪೆ ತಕ್ಷಣ ಕಾರ್ಯಪ್ರವೃತ್ತರಾಗಿ ಡಿ,25 ರ ಬೆಳಿಗ್ಗೆ 4 ಗಂಟೆಯಿಂದಲೇ ಸ್ಥಳೀಯ ಯುವಕರ ಸಹಾಯದಿಂದ ಶೋಧನೆಗೆ ಇಳಿದಿದ್ದು ಮ್ರತದೃಹವನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮೃತದೇಹವನ್ನು ಪಡೆದ ವಾರಸುದಾರರು […]
ಮೂಡ್ಲಕಟ್ಟೆ ಎಂ ಐ ಟಿ: ಕ್ರಿಸ್ಮಸ್ ಸಂಭ್ರಮಾಚರಣೆ
ಕುಂದಾಪುರ(ಡಿ,26): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿ.ಆರ್.ಐ.ಡಿ ಇದರ ಉಪಾಧ್ಯಕ್ಷರು, ವಿವಿಧ ಶೈಕ್ಷಣಿಕ ಸಂಸ್ಥೆಗಳ ಸಲಹೆಗಾರರಾದ ಶ್ರೀ ಜಯಪ್ರಕಾಶ್ ರಾವ್ ಹಾಗೂ ಶ್ರೀ ವಸಂತ್ ಕೇದಿಗೆ ಯವರು ಆಗಮಿಸಿದ್ದರು. ಕಾಲೇಜಿನ ಅಧ್ಯಕ್ಷರಾದ ಶ್ರೀ ಸಿದ್ಢಾರ್ಥ ಜೆ ಶೆಟ್ಟಿ ಕ್ರಿಸ್ಮಸ್ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಇಂಜಿನಿಯರಿಂಗ್, ಎಮ್ ಬಿ ಎ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು […]
ಮೂಡ್ಲಕಟ್ಟೆ ಎಂ ಐ ಟಿ: ಧ್ಯೇಯೋದ್ದೇಶ ಮರುನವೀಕರಣ ಕುರಿತು ಒಂದು ದಿನದ ಕಾರ್ಯಾಗಾರ
ಕುಂದಾಪುರ(ಡಿ.26): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಧ್ಯೇಯೋದ್ದೇಶ ಮರುನವೀಕರಣ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜಿ.ಆರ್.ಐ.ಡಿ ಇದರ ಉಪಾಧ್ಯಕ್ಷರು, ವಿವಿಧ ಶೈಕ್ಷಣಿಕ ಸಂಸ್ಥೆಗಳ ಸಲಹೆಗಾರರೂ ಆದ ಶ್ರೀ ಜಯಪ್ರಕಾಶ್ ರಾವ್ ಹಾಗೂ ಶ್ರೀ ವಸಂತ್ ಕೇದಿಗೆ ಇವರು ಆಗಮಿಸಿದ್ದರು. ಕಾಲೇಜಿನ ಧ್ಯೇಯೋದ್ದೇಶ, ಗುರಿ ಹಾಗೂ ಮೌಲ್ಯಗಳನ್ನು ವೃದ್ಧಿಸುವಲ್ಲಿ ಪ್ರಾಧ್ಯಾಪಕರಾಗಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದ್ದಲ್ಲದೆ ವಿವಿಧ ಚಟುವಟಿಕೆಗಳನ್ನು ನೀಡುವುದರ ಮೂಲಕ […]
ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ : ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮ
ಉಡುಪಿ (ಡಿ,26): ನಮ್ಮ ಖಾಸಗಿ ಮಾಹಿತಿಗಳು ಕ್ಲೌಡ್ ಸರ್ವರ್ ಗಳಲ್ಲಿ ಶೇಖರವಾಗುವುದರಿಂದ ಇವು ಸುರಕ್ಷಿತವಲ್ಲ. ಯಾವುದೇ ಮೊಬೈಲ್ ತಂತ್ರಾಂಶಗಳನ್ನು ಉಪಯೋಗಿಸುವಾಗ ಮಾಹಿತಿಗಳನ್ನು ಅಪರಿಚರೊಡನೆ ಹಂಚಿಕೊಳ್ಳಬಾರದು . ನಮಗೆ ಬರುವ ಇಮೇಲ್ ಮತ್ತು ಎಸ್ ಎಂ ಎಸ್ ಗಳ ಬಗೆಗೆ ಜಾಗರೂಕರಾಗಿರಬೇಕು . ಯಾವುದೇ ಬ್ಯಾಂಕ್ ನವರು ಕರೆ ಮಾಡಿ ಒಟಿಪಿ, ಪಾಸ್ವರ್ಡ್ ಅಥವಾ ಸಿವಿವಿ ಗಳನ್ನು ಕೇಳುವುದಿಲ್ಲ. ಬಳಕೆದಾರರು ವಿವೇಚನೆಯನ್ನು ಬಳಸಿ ವ್ಯವಹರಿಸಿದರೆ ಹಾನಿಯನ್ನು ತಪ್ಪಿಸಬಹುದು . ಫೇಸ್ ಬುಕ್ […]