ಮೂಡುಬಿದ್ರಿ ( ಡಿ.27 ) : ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಆತಿಥ್ಯದಲ್ಲಿ ಡಿ. 27 ಮತ್ತು 28 ರಂದು ನಡೆಯಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯದ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಫುಟ್ ಬಾಲ್ ಪಂದ್ಯಾಟಗಳ ಉದ್ಘಾಟನೆ ಇಂದು ನಡೆಯಿತು.ಪಂದ್ಯಾಟದ ಉದ್ಘಾಟನೆಯನ್ನು ಕರ್ನಾಟಕದ ಸಂತೋಷ್ ಟ್ರೋಫಿ ಆಟಗಾರರಾದ ಬಾವು ನಿಶಾದ್ ಮತ್ತು ರಿಯಾಜ್ ಪಿ ಟಿ ನೆರವೇರಿಸಿ, ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕ್ಯಾಂಪಸ್ […]
Day: December 27, 2021
••ಯಾರವನು?••
ಅವನೊಂದು ಮಹಾನ್ ಚೇತನ ಹಸಿ ಮಣ್ಣಿಗೆ ನೆತ್ತರ ಸುರಿಸಿಬದುಕನ್ನೇ ಉಳುವವನು….. ಹಸಿದ ಹೊಟ್ಟೆಗೆ ಅನ್ನ ನೀಡಲು ತನ್ನನ್ನೇ ಪಣವಾಗಿಟ್ಟು ನಗುವನು ಕಣ್ಣಂಚಿನ ನೋವಿನ ಕತ್ತು ಹಿಸುಕುತ್ತಾ… ಕಾಣದ ಕನಸಿಗೆ ದಾರಿಯಾಗುವ ಆಸೆ ಬದುಕು ಬರಡಾಗಿರಲು ಭೂಮಿಗೆಲ್ಲಿ ಫಸಲು? ಬಾರದ ಬೆಳೆಗಾಗಿ ದಿನವಿಡೀ ಕಾಯುವನು ಬಹುಶಃ ನಾಳೆಯೂ ಕೂಡಾ!! ಹಸಿಮಣ್ಣ ಎಡೆಯಲ್ಲಿ ಗುಂಡಿತೋಡಿ ಉಸಿರ ಬಚ್ಚಿಡಬಹುದಿತ್ತು ನಿರಾಶಾವಾದಿಯಾಗಿದ್ದಲ್ಲಿ ಆದರೆ ಅವನಲ್ಲ….. ಹಸಿದ […]
ಇಷ್ಟೇನಾ ನಿನ್ನ ಬೆಲೆ…?
ಮನೆ ಮುಂದೆ ಒಲೆ,ಹಸಿ ತೆಂಗಿನ ಗರಿ, ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ,ಬದಿಯಲ್ಲೊಂದು ಸೀಮೆಎಣ್ಣೆ ಡಬ್ಬ, ಸಾಕಾಗದಿದ್ರೆ ಒಂದು ಸ್ವಲ್ಪ ಪೆಟ್ರೋಲು,ಸುರಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ ಈ ನಿನ್ನ ಶರೀರ.ಇಷ್ಟೇನಾ ನಿನ್ನ ಬೆಲೆ…? ಒಂದು ಸಂಜೆ ಪ್ರಾಣ ಪಕ್ಷಿ ಹಾರಿ ಹೋಯಿತು,ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು. ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ ನೋಡುತ್ತಿದ್ದಾರೆ, ಅರೇ, ಬೇಗನೇ ಎತ್ತಿರಿ,ಕತ್ತಲಾಗುತ್ತ ಬಂತು,ಹೊಟ್ಟೆ ಹಸಿದಿದೆ,ಯಾರು ರಾತ್ರಿಯೆಲ್ಲಾ ಕಾಯುವರು? ಇದು ನೆಂಟರ ನಡುವಿನ ಸಂಭಾಷಣೆ…ಇಷ್ಟೇನಾ ನಿನ್ನ ಬೆಲೆ? ನಾ ಸತ್ತು ಆತ್ಮ ಮೇಲಕ್ಕೆ ಹಾರುತ್ತಿದೆ,ನಕ್ಷತ್ರಗಳ ಮೇಲೆ. […]
ಕೋಟ : ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ಕೋಟ(ಡಿ.27):ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಹಾಗೂ ಕೋಟ ಪದ್ಮನಾಭ ಕಿಣಿ ಇವರ ಸೇವೆ ಸ್ಮರಣಾರ್ಥ ಸ್ವರಾಜ್ಯ75 ಸಂಘಟನೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಹಸ್ತ ಚಿತ್ತ ಫೌಂಡೇಶನ್,ಜೈ ಕುಂದಾಪುರ ಸೇವಾ ಟ್ರಸ್ಟ್, ಎಂ.ಎಸ್.ಆರ್.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಹಾಗೂ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕವನ್ನು ಶ್ರೀ ದೇವದತ್ ಭಟ್ ರವರು ಡಿ.26ರಂದು ಕೋಟದಲ್ಲಿ ಅಳವಡಿಸಿ ಶುಭಕೋರಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನರೇಂದ್ರ ಕುಮಾರ್ […]
ಡಾ. ಗೋವಿಂದ ಬಾಬು ಪೂಜಾರಿಯವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಬೆಂಗಳೂರು (ಡಿ.27): ನ್ಯೂಸ್ ಪೇಪರ್ ಆಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಡಿ.26 ರಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಸಮಾಜ ಸೇವಕರು,ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ ಇದರ ಅಧ್ಯಕ್ಷರು ,ಉದ್ಯಮಿ ಗೋವಿಂದ ಬಾಬು ಪೂಜಾರಿರವರಿಗೆ ನೀಡಿ ಗೌರವಿಸಲಾಯಿತು. ವಿದ್ಯಾವಾಚಸ್ಪತಿ ಸಂತೋಷ ಭಾರತಿ ಶ್ರೀಗಳು ,ಸಭಾಪತಿಗಳಾದ ಬಸವರಾಜ್ ಹೊರಟ್ಟಿರವರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಮತ್ತು […]










