ಗಂಗೊಳ್ಳಿ (ಫೆ:15) : ಇಲ್ಲಿನ ವಿಶ್ವ ಸಾಗರ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ವಲಯ ಮಟ್ಟದ 60 ಗಜಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಅಯೋಧ್ಯ ಟ್ರೋಫಿ-2021 ಸರಸ್ವತಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಫೆಬ್ರವರಿ 12 ರಿಂದ 14 ರ ತನಕ ನಡೆಯಿತು. ಅಯೋಧ್ಯ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಹಿನ್ನೆಲೆಯಲ್ಲಿ ಈ ಪಂದ್ಯಾಕೂಟವನ್ನು ಆಯೋಜಿಸಲಾಗಿತ್ತು. ಸುಮಾರು 24 ತಂಡಗಳು ವಲಯ ಮಟ್ಟದಲ್ಲಿ ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ಅತಿಥೇಯ ವಿಶ್ವ ಸಾಗರ […]
Year: 2021
ನರೇಂದ್ರ ಎಸ್ ಗಂಗೊಳ್ಳಿಗೆ ರಾಜ್ಯಮಟ್ಟದ ಪ್ರಶಸ್ತಿ
ಕುಂದಾಪುರ (ಫೆ – 15): ಬೀದರ್ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ರಿ). ಬೀದರ್ ಮತ್ತು ಮಂದಾರ ಕಲಾವಿದರ ವೇದಿಕೆ ಬೀದರ್ ಜಿಲ್ಲೆ ಇವರು ಕೊಡಮಾಡುವ ರಾಜ್ಯ ಮಟ್ಟದ ಕರ್ನಾಟಕ ಪ್ರತಿಭಾ ಚೂಡಾಮಣಿ ರತ್ನ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಬಹುಮುಖ ಪ್ರತಿಭಾನ್ವಿತ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಆಯ್ಕೆಯಾಗಿದ್ದಾರೆ. ಈ ವರೆಗೆ ರಾಜ್ಯ ಮಟ್ಟದ ವಿವಿಧ ದಿನಪತ್ರಿಕೆಗಳಲ್ಲಿ ಸುಮಾರು ಒಂದು ಸಾವಿರದ ಐನೂರಕ್ಕೂ ಹೆಚ್ಚಿನ ಲೇಖನಗಳು ಕಥೆ-ಕವನಗಳನ್ನು ಬರೆದಿರುವ, […]
ಗ್ರೌಂಡ್ ರೈಡರ್ ವಲಯ ಮಟ್ಟದ ಕ್ರಿಕೆಟ್ ಪಂದ್ಯಕೂಟ -ಸಾಧಕರಿಗೆ ಸನ್ಮಾನ
ಗೌಂಡ್ ರೈಡರ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಬೈಂದೂರು ವಲಯ ಮಟ್ಟದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಕನ್ನಡ ನೆಲದಲ್ಲಿ ಛತ್ರಪತಿ ಶಿವಾಜಿ
ಬಸ್ರೂರು ಹಿಂದೆ ಗತವೈಭವ ಮೆರೆದ ಸ್ಥಳ. ಇಲ್ಲಿಯ ಒಂದೊಂದು ಕಲ್ಲು ಒಂದೊಂದು ಇತಿಹಾಸದ ಚಿತ್ರಣವನ್ನೂ ತಿಳಿಸುತ್ತದೆ. ಆಳುಪ, ವಿಜಯನಗರ, ಕೆಳದಿಯಂತಹ ಆಳ್ವಿಕೆ ನಡೆಸಿದ ಪ್ರದೇಶ ಬಸ್ರೂರು. ಬಾರಕೂರು ತನ್ನ ರಾಜಧಾನಿಯನ್ನಾಗಿ ಮಾಡಿ ಬಸ್ರೂರು ವ್ಯಾಪಾರದ ಕೇಂದ್ರವನ್ನಾಗಿ ಆಳುಪರು ಆಳ್ವಿಕೆ ನಡೆಸುತ್ತಿದ್ದರು. ಬಾರಕೂರು ಹಾಗೂ ಬಸ್ರೂರು ಅವಳಿ ಪ್ರದೇಶವೆಂದು ಕರೆಯುತ್ತಿದ್ದರು. ಗುರು ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಸುಭದ್ರವಾಗಿ ಆಳ್ವಿಕೆ ನಡೆಸಿದ ರಾಜ ಮನೆತನ, ವಿಜಯನಗರ ಆಳ್ವಿಕೆ ನಡೆಸಿದ ಪ್ರಸಿದ್ಧ ಪ್ರದೇಶ ಕೂಡಾ ಬಸ್ರೂರು. […]
ಲಯನ್ ಎನ್.ಎಂ.ಹೆಗ್ಡೆ ಅಧಿಕೃತ ಭೇಟಿ
ಲಯನ್ಸ್ ಕ್ಲಬ್ ಬಸ್ರೂರು ಮೂಡ್ಲಕಟ್ಟೆಗೆ 317C ಯ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ನೀಲಕಂಠ ಮಂಜುನಾಥ್ ಹೆಗ್ಡೆಯವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.
ಭಾರತ್ ಮಾತಾಕಿ ಜೈ
ನಿನ್ನಯ ಮಡಿಲಿನಲ್ಲಿ ನೆತ್ತರ ಮಡುವಿನಲ್ಲಿ ಮಲಗಿದ್ದಾಗಲೂಅರಿಗಳಾಡುವ ಪ್ರಶ್ನೆಗೆ ಗುಡುಗುಡುಗಿ ನೀಡುವ ಉತ್ತರವೊಂದೆ “ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಎಂದೆ” ಭಾರತ್ಮಾತಾಕೀ_ಜೈ . . . .🇮🇳 Feb_14_2019 #Pulwama_Attack 🙁
Net – Work
Net – Work ಕಟ್ಟು ಪಾಡುಗಳ ನಡುವೆ ಬದುಕು ಕಟ್ಟುವ ಪಾಡು ಪೆಟ್ಟುಗಳ ನಡುವೆ ಪಟ್ಟು ಬಿಡದೆ ಕಟ್ಟುವ ಗೂಡು ದಿಟ್ಟವಾಗಿ ಅಟ್ಟದಿ ಕುಳಿತು ಮೌನದಿ ಹಾಡುವ ಹಾಡು #ಏನೇ_ಹೇಳಿ, ಒಟ್ಟು ಇಷ್ಟ ಕಷ್ಟ ನಷ್ಟಗಳ ನಡುವೆ ನಡೆಯುವುದು ಸಂತುಷ್ಟ ಜೀವನದ ಹೊಟ್ಟೆಪಾಡು . #Say_Whatever, Life Is a ” Net – Work ” . . . . 🕸️
ಸಮುದಾಯ ತಿಂಗಳ ಕಥಾ ಓದು
ಕೊರೋನಾ ಎಂಬ ವಿಚಿತ್ರ ಸಂಕಟದ ಸಂದರ್ಭದಲ್ಲಿ ಆಧುನಿಕ ರಂಗಭೂಮಿಯ ಹೊಸ ಸಾಧ್ಯತೆ ಮತ್ತು ದಾರಿಗಳನ್ನು ಕಂಡುಕೊಳ್ಳುತ್ತಿರುವಾಗ ಈ ಹಿನ್ನೆಲೆಯಲ್ಲಿ ನಮ್ಮದು ಈ ಪ್ರಯತ್ನ ಎನ್ನುತ್ತಾ ಆರಂಭಿಸಿದರು ಸಂಕಥನ ಎನ್ನುವ ರಂಗ ಓದನ್ನು ಮಂದಾರ ಕಲಾವಿದರು ಈ ಸಂಜೆ ಕುಂದಾಪುರ ಜೇಸಿ ಭವನದಲ್ಲಿ.ಪುಟ್ಟ, ಪುಟ್ಟ ಒಂದೈದು ಕತೆ-ಲೇಖನ-ಕವಿತೆಗಳ ಎಳೆಗಳನ್ನು ಬಿಡಿಬಿಡಿಯಾಗಿ ರೋಹಿತ್ ಬೈಕಾಡಿ ವಿನ್ಯಾಸಗೊಳಿಸಿದ್ದರು. ವಿಶಿಷ್ಟ ತೀರ್ಪು ಇದರಲ್ಲಿ ಬ್ರೆಡ್ ಮತ್ತು ಜಾಮ್ ಕದ್ದ ಕಾರಣಕ್ಕಾಗಿ ಹದಿನೈದರ ಹುಡುಗನೊಬ್ಬನನ್ನು ಕಟಕಟೆಯಲ್ಲಿ ಪ್ರಶ್ನಿಸಲಾಗುತ್ತದೆ. […]
ರೋಟರಿ ಕ್ಲಬ್ ಹಳೆಯ ಕಟ್ಟಡದ ಮಾಡುಕುಸಿತ
ಕುಂದಾಪುರ(ಫೆಬ್ರವರಿ 13) : ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಇರುವ ರೋಟರಿ ಕ್ಲಬ್ನ ಹಳೆ ಕಟ್ಟಡದ ಮಾಡು ಶುಕ್ರವಾರ ಸಂಜೆ ದಿಢೀರ್ ಕುಸಿದಿದೆ. ಎರಡು ವರ್ಷಗಳ ಹಿಂದೆ ಈ ಕಟ್ಟಡದವನ್ನು ದುರಸ್ತಿಗೊಳಿಸಲಾಗಿತ್ತು. ಇದರ ಪಕ್ಕದಲ್ಲೆ ಇರುವ ಹೊಸ ಕಟ್ಟಡದಲ್ಲಿ ನರ್ಸರಿ ಶಾಲೆ, ಮಕ್ಕಳಿಗೆ ಚಿತ್ರಕಲೆ, ಸಂಗೀತ ತರಬೇತಿಗೆ ಅವಕಾಶ ಕಲ್ಪಿಸಲಾಗಿತ್ತು. ಅದೇ ದಿನ ಸಂಜೆ 06:30ಕ್ಕೆ ರೋಟರಿ ಕ್ಲಬ್ ನ ವಾರದ ಸಭೆ ನಡೆಯಬೇಕಿದ್ದು […]
ಜಾನಪದ ಭೂಷಣ ಪ್ರಶಸ್ತಿಗೆ ಗಣೇಶ್ ಗಂಗೊಳ್ಳಿ ಆಯ್ಕೆ
ಖ್ಯಾತ ಗಾಯಕ ,ಜಾನಪದ ಚಿಂತಕ ಹಾಗೂ ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾಗಿರುವ ಗಣೇಶ್ ಗಂಗೊಳ್ಳಿಯವರು ಜಾನಪದ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.