ಕೋಟೇಶ್ವರ (ನ, 03) : ಕುಂದಾಪುರ ತಾಲೂಕಿನ ಅತೀ ದೊಡ್ಡ ಜಾತ್ರೆ ಪುರಾಣ ಪ್ರಸಿದ್ದ ಧ್ವಜಪುರ – ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲದ ರಥೋತ್ಸವ (ಕೊಡಿ ಹಬ್ಬ) ಇದೇ ನ.19 ರಂದು ನಡೆಯಲಿದೆ. ನ. 19ರಂದು ನಡೆಯಲಿರುವ ಕೊಡಿಹಬ್ಬ ಉತ್ಸವ ಸರಳ ಸಂಭ್ರಮದಿಂದ ಆಚರಿಸಲು ತಾಲೂಕಿನ ಪ್ರತಿಯೋರ್ವ ಭಕ್ತರು ಸಹಕರಿಸಬೇಕೆಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎಂ. ಪ್ರಭಾಕರ ಶೆಟ್ಟಿ ಭಕ್ತರಲ್ಲಿ ಕೋರಿಕೊಂಡಿದ್ದಾರೆ.
Year: 2021
ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ಕ್ಲಬ್ ರನ್ನರ್ ಅಪ್
ಗಂಗೊಳ್ಳಿ (ನ, 04) : ರೋಟರಾಕ್ಟ್ ಡಿಸ್ಟ್ರಿಕ್ಟ್ ಕೌನ್ಸಿಲ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನ ದಾಮೋದರ ಕಿಣಿ ಮೆಮೋರಿಯಲ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ರೋಟರಾಕ್ಟ್ ಇಂಡೋರ್ ಸ್ಫೋರ್ಟ್ಸ್ ಮೀಟ್ ನಲ್ಲಿ ಭಾಗವಹಿಸಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ರನ್ನರ್ ಅಪ್ ಸ್ಥಾನವನ್ನು ಪಡೆಯಿತು. ಅರ್ಲಿ ಬರ್ಡ್, ಅತಿ ಹೆಚ್ಚು ಸದಸ್ಯರ ಭಾಗವಹಿಸುವಿಕೆ ಸೇರಿದಂತೆ ಶ್ರೀನಿಧಿ […]
ಸಂಪ್ರದಾಯಗಳ ಆಚರಣೆಯ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯ ಅರಿವು ನಮಗಿರಬೇಕು – ಉಮಾನಾಥ್ ದೇವಾಡಿಗ ಗಂಗೊಳ್ಳಿ
ಗಂಗೊಳ್ಳಿ (ನ, 04) : ಪ್ರತಿಯೊಂದು ಸಂಪ್ರದಾಯಗಳ ಆಚರಣೆಯ ಹಿಂದೆ ವೈಜ್ಞಾನಿಕ ಹಿನ್ನೆಲೆ ಇರುತ್ತದೆ. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಪ್ರಯತ್ನವನ್ನು ನಾವು ಮಾಡಬೇಕಿದೆ. ಗೂಡುದೀಪ ಸ್ಪರ್ಧೆಯಂತಹ ಕಾರ್ಯಕ್ರಮಗಳು ನಮ್ಮಲ್ಲಿನ ಕಲೆಯನ್ನು ಉದ್ದೀಪನಗೊಳಿಸಲು ನೆರವಾಗುತ್ತವೆ ಎಂದು ಖ್ಯಾತ ಸ್ಯಾಕ್ಸೋಫೋನ್ ವಾದಕ ಉಮಾನಾಥ್ ದೇವಾಡಿಗ ಹೇಳಿದರು. ಅವರು ಗಂಗೊಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ದೀಪಾವಳಿಯ ಅಂಗವಾಗಿ ಆಯೋಜಿಸಿದ್ದ ಗೂಡುದೀಪ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪನ್ಯಾಸಕ ಬರಹಗಾರ […]
ಡಾ.ಬಿ.ಬಿ. ಹೆಗ್ಡೆ ಕಾಲೇಜು:ರಾಷ್ಟ್ರೀಯ ಏಕತಾ ದಿವಸ್- ಪ್ರತಿಜ್ಞೆ ಸ್ವೀಕಾರ
ಕುಂದಾಪುರ (ನ 2): ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಸ್ವಾತಂತ್ರ್ಯ ಭಾರತದ ಪ್ರಥಮ ಗ್ರಹ ಸಚಿವ,ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರ ಜನ್ಮ ದಿನಾಚರಣೆ ಸಲುವಾಗಿ ರಾಷ್ಟ್ರೀಯ ಏಕತಾ ದಿವಸ್ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಹಾಗೂ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದು, ಎನ್.ಎಸ್.ಎಸ್.ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್.ಎಸ್.ಎಸ್. ಘಟಕದ […]
ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಶ್ರಮದಾನ- ಸ್ವಚ್ಚತಾ ಕಾರ್ಯಕ್ರಮ
ಕುಂದಾಪುರ(ನ,2): ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ನ,2 ರಂದು ಸಂಗಮ್ ಬಸ್ ನಿಲ್ದಾಣದಿಂದ ಕಾಲೇಜ್ ಕ್ಯಾಂಪಸ್ ತನಕ ಶ್ರಮದಾನ- ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಎನ್.ಎಸ್.ಎಸ್ ಸ್ವಯಂಸೇವಕರು ಸಕ್ರಿಯವಾಗಿ ಶ್ರಮದಾನ- ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಎನ್.ಎಸ್.ಎಸ್.ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ, ಸಹ ಯೋಜನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್.ಟಿ.ಎನ್, ಉಪನ್ಯಾಸಕರಾದ ಸುಧಾಕರ್ ಪಾರಂಪಳ್ಳಿ, ಸುಕುಮಾರ […]
ದೀಪಾವಳಿಯ ನೆನಪಿನಂಗಳ
ದೀಪಾವಳಿ ……ದೀಪಾವಳಿ…………. ಗೋವಿಂದ ಲೀಲಾವಳಿ.. ಅಳಿಯ ಮಗನಾ…….. ” ಹರಿಯಾ ಆ ಟೇಪ್ ಸೌಂಡ್ ಒಂಚೂರ್ ಕಮ್ಮಿ ಮಾಡ್.. ಕೆಮಿ ಕೆಪ್ಪ್ ಆಯ್ತಾ ನಿಮ್ದ್?”… ಗಡಾ ಹೋಯ್ ಕಮ್ಮಿ ಮಾಡ್, ಇಲ್ದಿರ್ ಅಪ್ಪ ಪಟಾಕಿಗ್ ದುಡ್ದ್ ಕೊಡುದಿಲ್ಲ.. ಹ್ಮಾಂ.. ಸರಿ; ಗಳಿನ್ ಒಟ್ಟಿಯಂಗ್ ದುಡ್ಡ್ ಇಟ್ಟದ್ ತೆಗುವಾ? ಪಟಾಕಿಗ್ ಆತ್ತ್…. ಉದ್ದ ತೆಮಿಗ್ ಕಟ್ಟದ್, ಬಿದ್ರಂಗ್ ಮಾಡದ್ ಗೂಡ್ ದೀಪ ಗಾಳಿಗ್ ಬಾಲ ಬೀಸ್ತಾ ಇತ್ತು…ಬಿಸ್ಲ್ ನೆತ್ತಿಗ್ ಏರುಕ್ ಹತ್ತಿತ್…. ಸೆಗ್ಣಿ […]
ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಪಿಎಚ್ಡಿ ಪದವಿ
ಉಡುಪಿ (ನ, 02) : ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಂಪಾರು ನಿತ್ಯಾನಂದ ಶೆಟ್ಟಿಯವರು ‘ಕುಂದಾಪುರ ಪರಿಸರದ ದೈವಾರಾಧನೆ’ ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅಭಯ್ ಕುಮಾರ್ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಪಿಎಚ್ ಡಿ ಪದವಿ ಲಭಿಸಿದೆ. ಬಹುಬಗೆಯ ಸಾಂಸ್ಕೃತಿಕ ಸಂಶೋಧನಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ವಿವಿಧ ಸಂಘ ಸಂಸ್ಥೆಗಳ ಸಕ್ರಿಯ […]
ತವರು ಮನೆ ಕಲ್ಯಾಣಪುರ : ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯ ಫಲಿತಾಂಶ ಪ್ರಕಟ
ಕಲ್ಯಾಣಪುರ (ನ, 02) : ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಅಪ್ಪಟ ಭಾರತೀಯ ಸಂಸ್ಕೃತಿಯ ಉಡುಗೆಯ (ಫೋಟೋ ಸ್ಪರ್ಧೆಯನ್ನು ತವರು ಮನೆ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದು, ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಗೊಂಡಿದೆ.ವಿಜೇತರ ಪಟ್ಟಿ ಈ ಕೆಳಗಿನಂತಿವೆ.
ಅಗ್ನಿಶಾಮಕ ದಳ ಉಡುಪಿ : ವಿವಿಧ ಕ್ಷೇತ್ರದಲ್ಲಿ ಸಾಧನಗೈದವರಿಗೆ ಸನ್ಮಾನ ಕಾರ್ಯಕ್ರಮ
ಉಡುಪಿ (ನ, 02) : ಉಡುಪಿಯ ಅಗ್ನಿಶಾಮಕ ದಳದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನಗೈದವರಿಗೆ ಸನ್ಮಾನ ಕಾರ್ಯಕ್ರಮವನ್ನು ನ.01ರಂದು ಹಮ್ಮಿಕೊಳ್ಳಲಾಯಿತು. ಜೀವರಕ್ಷಕ, ಮುಳುಗು ತಜ್ಞ ಈಶ್ವರ್ ಮಲ್ಪೆ, ಅಗ್ನಿಶಾಮಕ ದಳದ ಸಿಬ್ಬಂದಿ, ರಾಜ್ಯಮಟ್ಟದ ದೇಹದಾಡ್ಯಪಟು, ವೇಟ್ ಲಿಫ್ಟರ್ ಅಶ್ವಿನ್ ಸನಿಲ್ ರವರ ಸೇವೆಯನ್ನು ಗುರುತಿಸಿ ಉಡುಪಿ ಅಗ್ನಿಶಾಮಕದಳದ ವತಿಯಿಂದ ಗೌರವಧನ ದೊಂದಿಗೆ ಸನ್ಮಾನಿಸಲಾಯಿತು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಸಂತ್ ಕುಮಾರ್, ಜಿಲ್ಲಾ ನಿವೃತ್ತ ಅಧಿಕಾರಿ ಓಬಯ್ಯ ಮೂಲ್ಯ ಹಾಗೂ […]
ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ
ಕಾರ್ಕಳ (ನ. 02) : ಕಾರ್ಕಳ ತಾಲೂಕು ಆಡಳಿತ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಶ್ರೀ ಮಂಜುನಾಥ ಪೈ ಸ್ಮಾರಕ ಪ್ರತಿಷ್ಠಾನ ಸಭಾ ಭವನದಲ್ಲಿ ನ.01ರಂದು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಗೀತಗಾಯನ ರಸಮಂಜರಿ ಕಾರ್ಯಕ್ರಮ ನೀಡಿದ ಕರ್ನಾಟಕ ಜಾನಪದ ಕೋಗಿಲೆ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಗಣೇಶ್ ಗಂಗೊಳ್ಳಿ ಯವರನ್ನು ಕಾರ್ಕಳ ತಾಲೂಕು ಮಾನ್ಯ ತಹಸೀಲ್ದಾರರಾದ ಶ್ರೀ ಕೆ. ಪುರಂದರ ರವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಕಳ […]