ಗಂಗೊಳ್ಳಿ (ನ, 01) : ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ವಂತ ರಚನೆಯ ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿದ್ದು ನವೆಂಬರ್ 3ರ ಒಳಗೆ ಸ್ಪರ್ಧಾಳುಗಳು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನವೆಂಬರ್ ನಾಲ್ಕರ ಸಂಜೆ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9900357414, 9945919718, 9481751521, 9632867885 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.
Year: 2021
ಗಂಗೊಳ್ಳಿಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ
ಗಂಗೊಳ್ಳಿ (ನ, 01) : ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿ(ರಿ)ವತಿಯಿಂದ ಗಂಗೊಳ್ಳಿಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಂಗೊಳ್ಳಿಯ ಕನ್ನಡ ಧ್ವಜ ಕಟ್ಟೆಯ ಬಳಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಅಧ್ಯಕ್ಷರಾದ ಜಿ.ಗೋಪಾಲ ಪೂಜಾರಿ ಮಾತನಾಡಿ ಕನ್ನಡಿಗರಾದ ನಾವು ನಮ್ಮ ದಿನನಿತ್ಯದ ಸಂವಹನದಲ್ಲಿ ಹೆಚ್ಚೆಚ್ಚು ಕನ್ನಡವನ್ನು ಬಳಸಬೇಕು. ಕನ್ನಡ ನಾಡು ನುಡಿಯ ಬಗ್ಗೆ ಸದಾಕಾಲ ಗೌರವ […]
ಶಾರದಾ ಆಂಗ್ಲ ಮಾಧ್ಯಮ ಶಾಲೆ ಬಸ್ರೂರು : ಕನ್ನಡ ರಾಜ್ಯೋತ್ಸವ
ಬಸ್ರೂರು (ನ, 01) : ಇಲ್ಲಿನ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅರ್ಥಶಾಸ್ತ್ರ ಉಪನ್ಯಾಸಕ ,ಪ್ರಸಿದ್ಧ ನಿರೂಪಕ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಧ್ವಜರೋಹಣಗೈದು ಕನ್ನಡ ನಾಡು, ನುಡಿ, ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ , ಆಡಳಿತ ಮಂಡಳಿಯ ಮೊಸೆಸ್ ಮನೋಹರ್, ಜುನೈದ್, […]
ಶ್ರೀ ಮಹಾಸತಿ ಯಕ್ಷಗಾನ ಚಿಕ್ಕಮೇಳ ನಾಯ್ಕನಕಟ್ಟೆ : ನ, 01 ರಂದು ಈ ವರ್ಷದ ಕೊನೆಯ ಸೇವೆಯಾಟ
ಬೈಂದೂರು (ಅ, 31) : ಶ್ರೀ ಮಹಾಸತಿ ಯಕ್ಷಗಾನ ಚಿಕ್ಕಮೇಳ ನಾಯ್ಕನಕಟ್ಟೆ ಇದರ ಈ ವರ್ಷದ ಕೊನೆಯ ಸೇವೆಯಾಟ ನ,01ರಂದು ಮುಗಿಸುವುದೆಂದು ತಿಮ್ಮಪ್ಪ ದೇವಾಡಿಗ, ಸಂಚಾಲಕರಾದ ನಾಗರಾಜ್ ಭಟ್ ಹಾಗೂ ದೇವಸ್ಥಾನದ ಮುಕ್ತೇಶ್ವರರಾದ ನಾಗೇಂದ್ರ ಕಾರಂತರು ತಿಳಿಸಿರುತ್ತಾರೆ. ಮೇಳಕ್ಕೆ ಸಂಪೂರ್ಣವಾಗಿ ಸಹಕರಿಸಿ ದೇವಿಯನ್ನು ಬರಮಾಡಿಕೊಂಡು ದೇವಿಯನ್ನು ಆರಾಧಿಸಿದ ಕುಂದಾಪುರ ತಾಲ್ಲೂಕಿನ ಕುಂದಾಪುರ ಪರಿಸರ ಹೇರಿಕುದ್ರು ,ಆನಗಳ್ಳಿ ,ಉಪ್ಪಿನಕುದ್ರು, ಸಬ್ಲಾಡಿ ಪಾರ್ತಿಕಟ್ಟೆ , ಜಾಲಾಡಿ, ಹೆಮ್ಮಾಡಿ, ಬಗ್ವಾಡಿ, ಕಟ್ ಬೆಲ್ತೂರು, ಹಟ್ಟಿಯಂಗಡಿ, […]
ತೆರೆಮರೆಯ ಸಮಾಜ ಸೇವಕ ಸಾಯಿನಾಥ್ ಶೇಟ್ ಕುಂದಾಪುರ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ (ಅ, 30) : ಪ್ರಚಾರ ಬಯಸದ, ತನ್ನ ಕೈಯಲ್ಲಾದಷ್ಟು ಅಶಕ್ತರಿಗೆ ಸಹಾಯ ಮಾಡುವ ಕುಂದಾಪುರದ ತೆರೆಮರೆಯ ಸರಳ ಸ್ವಭಾವದ ಸಮಾಜ ಸೇವಕ ಶ್ರೀ ಸಾಯಿನಾಥ್ ಶೇಟ್ ರವರು ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ. ಕಳೆದ ಲಾಕ್ ಡೌನ್ ಸಮಯದಲ್ಲಿ ತಿಂಗಳುಗಟ್ಟಲೆ ಏಕಾಂಗಿಯಾಗಿ ಯಾವುದೇ ಪ್ರಚಾರದ ಅಪೇಕ್ಷೆ ಇಲ್ಲದೆ ಅದೆಷ್ಟೋ ಜನರ ಹಸಿವು ತಣಿಸಿದ ಶೇಟ್ ರವರು ಕಲಾಕ್ಷೇತ್ರ ಕುಂದಾಪುರದ ಸಕ್ರಿಯ ಸದಸ್ಯರಾಗಿದ್ದಾರೆ.
ಎಣಿಕೆ
ಒಂದು.. ಎರಡು… ಮೂರು…ನೂರಾ ಎಪ್ಪತ್ತೈದು…. ಅಲ್ಲಲ್ಲ…. ಎಪ್ಪತ್ತಾರು…ಛೇ.. ಲೆಕ್ಕ ತಪ್ಪಿತು…ಇರುಳಲ್ಲಿ ನಕ್ಷತ್ರಗಳನ್ನು ಎಣಿಸುತ್ತಿದ್ದೇನೆಮತ್ತೆ ಮತ್ತೆ ನನಗೆ ಲೆಕ್ಕತಪ್ಪುತ್ತಿದೆಬುಟ್ಟಿಯಲ್ಲಿದ್ದ ಮಲ್ಲಿಗೆ ಹೂಗಳು ಚೆಲ್ಲಿದಂತೆಬಾನಿನ ತುಂಬಾ ಹರಡಿ ಬಿದ್ದಿವೆಒಂದು ಕ್ರಮವೆಂಬುದೇ ಇಲ್ಲ, ಅಥವಾ ನನಗೆ ತಿಳಿದಿಲ್ಲಅದೆಷ್ಟೋ ದಿನಗಳಿಂದ ಲೆಕ್ಕಹಾಕುತ್ತಿದ್ದರೂ ಎಣಿಕೆ ತಪ್ಪಿಮೊದಲಿನಿಂದಲೇ ಶುರುಮಾಡುತ್ತಿದ್ದೇನೆಎಷ್ಟನೇ ಸಲ? ಅದರ ಲೆಕ್ಕವೂ ನನಗಿಲ್ಲಲೆಕ್ಕ ಹಾಕುತ್ತಿರುವುದಾದರೂ ಯಾಕೆ?ನನಗೂ ತಿಳಿದಿಲ್ಲ. ಆದರೂ ಬೇಕು, ಎಣಿಸಲೇ ಬೇಕುಕಪ್ಪನೆ ಮೋಡದೊಳಗೆ ಅವಿತುಕುಳಿತ ನಕ್ಷತ್ರಗಳನ್ನೂಹೊರಗೆಳೆದು ತೊಳೆದು ಎಣಿಸಬೇಕುಎಂದಾದರೊಂದು ದಿನ ನನಗೆ ಪಕ್ಕಾ ಲೆಕ್ಕ ಸಿಕ್ಕೀತು […]
ಲಿಯೋ ಅಧ್ಯಕ್ಷರಾಗಿ ಭವಿಷ್ಯ ಶೆಟ್ಟಿ ಕೊವಾಡಿ ಆಯ್ಕೆ
ತಲ್ಲೂರು (ಅ. 30) : ಲಿಯೋ ಕ್ಲಬ್ ಬಸ್ರೂರು ಮೂಡ್ಲಕಟ್ಟೆಯ ನೂತನ ಅಧ್ಯಕ್ಷರಾಗಿ ಭವಿಷ್ಯ ಶೆಟ್ಟಿ ಕೋವಾಡಿ ಆಯ್ಕೆ ಯಾಗಿರುತ್ತಾರೆ. ಇವರು ಬಾಲ ಬರಹಗಾರ, ವಾಗ್ಮಿ ,ಯಕ್ಷಗಾನ ಕಲಾ ಪ್ರತಿಭೆ. ಉತ್ತಮ ನಾಯಕತ್ವ ಗುಣಗಳನ್ನು ಮೈಗುಾಡಿಸಿಕೊಂಡಿರುವ ಇವರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಎಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕೆಮ್ಮಣ್ಣು ಗಣಪತಿ ವ್ಯವಸಾಯ ಸಂಘ ನಿ. ವತಿಯಿಂದ ಸಮಾಜ ಸೇವಕ ಈಶ್ವರ್ ಮಲ್ಪೆಯವರಿಗೆ ಸನ್ಮಾನ
ಉಡುಪಿ (ಅ, 30): ಇಲ್ಲಿನ ಕೆಮ್ಮಣ್ಣು ಗಣಪತಿ ವ್ಯವಸಾಯ ಸಂಘ ನಿ. ವತಿಯಿಂದ ಜೀವರಕ್ಷಕ, ಈಜುಪಟು ಶ್ರೀ ಈಶ್ವರ್ ಮಲ್ಪೆ ಯವರ ಸಮಾಜಸೇವೆ ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಯಾಗಿ ಈಶ್ವರ್ ಮಲ್ಪೆ ಯವರು ಸಂತಸವನ್ನು ವ್ಯಕ್ತಪಡಿಸುವುದರ ಜೊತೆಗೆ ಇನ್ನು ಸಮಾಜಸೇವೆಯ ಕರ್ತವ್ಯದ ಹೊಣೆ ಹೆಚ್ಚಾಗಿದೆಯೆಂದು ಸಂತೋಷದಿಂದಲೇ ಹೇಳಿಕೊಂಡರು.
ಯೆನೆಪೋಯ ಇಂಜಿನಿಯರಿಂಗ್ ಕಾಲೇಜು : ಯೆನ್ ಸಂಭ್ರಮ – 2021
ಮೂಡುಬಿದ್ರಿ (ಅ, 31) : ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿವಿಧ ಕಾರ್ಯಕ್ರಮಗಳು “ಯೆನ್ ಸಂಭ್ರಮ – 2021 ” ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಿಮಿಕ್ರಿ ಕಲಾವಿದೆ ಮತ್ತು ಗಿನ್ನಿಸ್ ರೆಕಾರ್ಡ್ ನಾಮನಿರ್ದೇಶಿತ ಕಲಾವಿದೆ ಅಕ್ಷತಾ ಕುಡ್ಲ ಮಾತನಾಡಿ, ಇಂತಹ ಸ್ಪರ್ಧಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಕ್ರಿಯಾಶೀಲತೆಗೆ ವೇದಿಕೆಯಾಗುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು […]