ಕುಂದಾಪುರ (ಅ,29): ಕುಂದಾಪುರದ ತಲ್ಲೂರಿನ ನಾರಾಯಣ ಶಾಲೆಯ ವಿಶೇಷ ಚೇತನ ಮಕ್ಕಳಿಗಾಗಿ ಡೆಂಟಲ್ ಕಿಟ್ ಹಸ್ತಾಂತರ ಮತ್ತು ಡೆಂಟಲ್ ಹೆಲ್ತ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಅ,27 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿ ರೋಟೆರಿಯನ್ ಡಾ| ರಾಜರಾಮ್ ಶೆಟ್ಟಿಯವರು ಹಲ್ಲಿನ ಆರೋಗ್ಯದ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದರು.ಶಾಲೆಯ ಮ್ಯಾನೆಂಜಿಂಗ್ ಟ್ರಸ್ಟಿ ಶ್ರೀ ಸುರೇಶ್, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಶಶಿಧರ ಹೆಗ್ಡೆ, ಕಾರ್ಯದರ್ಶಿ ರೋಟೆರಿಯನ್ ಕೆ. ಎಸ್ […]
Year: 2021
ಬದುಕಿನಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಿ- ಪ್ರೊ. ಕೆ.ಉಮೇಶ್ ಶೆಟ್ಟಿ (ಬಿ.ಬಿ ಹೆಗ್ಡೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಕಾರ್ಯಕ್ರಮ)
ಕುಂದಾಪುರ(ಅ,28): ವಿದ್ಯಾರ್ಥಿಗಳು ಬದುಕಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು, ಆ ಮೂಲಕ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ ಉಮೇಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬಿಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಕೆನರಾ ಬ್ಯಾಂಕ್ ವಡೇರಹೊಬಳಿ ಶಾಖೆಯ ಮುಖ್ಯ ಪ್ರಬಂಧಕರಾದ ಶ್ರೀ ಜಗದೀಶ್ ಪೂಜಾರಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯುತ ಮಾತುಗಳನ್ನಾಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ […]
ಪುರಿ ಜಗನ್ನಾಥ….
ಪ್ರತಿಯೊಬ್ಬರ ಹೃದಯದಲ್ಲಿ ಒಂದೇ ವೇದ, ಮಂತ್ರ,ಭಕ್ತಿ. ಜಗನ್ನಾಥ ನಮ್ಮನ್ನು ರಕ್ಷಿಸು…ಕುಂದವಾಹಿನಿ ಓದುಗರಿಗೆ ನನ್ನ ಯಾತ್ರೆಯ ಮೊದಲ ತೀರ್ಥಸ್ಥಳವಾದ ಒಡಿಶಾ ರಾಜ್ಯದ ಪುರಿ ಜಗನ್ನಾಥ ದರ್ಶನದ ನನ್ನ ಅನುಭವ ನಿಮಗೆ ಕಟ್ಟಿ ಕೊಡುವ ಸಣ್ಣ ಪ್ರಯತ್ನ. ಶ್ರೀ ಕೃಷ್ಣ ಪರಮಾತ್ಮ ಬದರಿನಾಥದಲ್ಲಿ ಸ್ನಾನ, ಜ್ನಾನ ಪುರಿಯಲ್ಲಿ ಭೋಜನ, ದ್ವಾರಕಾದಲ್ಲಿ ಅಲಂಕಾರ,ಶಯನಹೀಗೆ ತನ್ನ ಹಲವಾರು ಆಯಾ ಕ್ಷೇತ್ರದಲ್ಲಿ ನಮಗೆ ದರ್ಶನ ನೀಡುವ ದೇವ..ಪುರಿಯಲ್ಲಿ ಜಗನ್ನಾಥನಿಗೆ ನಿತ್ಯ ಒಂಬತ್ತು ಸಮಯದಲ್ಲಿ ಅನ್ನದ ಖಿಚಿಡಿ ಸೇರಿದಂತೆ […]
ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ:”ಮಾತಾಡ್ ಮಾತಾಡ್ ಕನ್ನಡ- ಕನ್ನಡಕ್ಕಾಗಿ ನಾವು ಅಭಿಯಾನ”
ವಂಡ್ಸೆ(ಅ,27): 66 ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಾತಾಡ್ ಮಾತಾಡ್ ಕನ್ನಡ ಕನ್ನಡಕ್ಕಾಗಿ ನಾವು ಅಭಿಯಾನ ಕೆರಾಡಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ ಅ,28 ರಂದು ನಡೆಯಿತು. ಕನ್ನಡ ವಿಭಾಗದ ಮುಖ್ಯಸ್ಥರಾದ ಅರುಣ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಭಾಷ ಉಪನ್ಯಾಸಕ ನಾಗರಾಜ್ ಹೆಮ್ಮಾಡಿ ಪ್ರಾಸ್ತವಿಕ ಮಾತನಾಡಿದರು. ಉಪನ್ಯಾಸಕ ಸುಕೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ಅಭಿಜಿತ್ ಹೆಮ್ಮಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು […]
ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್: ವಿವಿಧ ಘಟಕಗಳ ಪದಪ್ರದಾನ ಸಮಾರಂಭ
ಬಂಟಕಲ್(ಅ,27): ಇಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2021-2 2ರ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವರೆಡ್ ಕ್ರಾಸ್ ಘಟಕ ಹಾಗೂ ರೋಟರಾಕ್ಟ್ ಘಟಕದ ಪದಪ್ರದಾನ ಸಮಾರಂಭವು ಅಕ್ಟೋಬರ್ 21ರಂದು ಕಾಲೇಜಿನಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ […]
ಪಡುಕೋಣೆಯಲ್ಲಿ ಸಾಫಲ್ಯಗೊಂಡ ಯೋಗ ಶಿಬಿರ
ಪಡುಕೋಣೆ(ಅ,27): ಸ್ಥಳೀಯ ಗ್ರಾಮಾಂತರ ಜನರ ಆರೋಗ್ಯವರ್ಧನೆಗಾಗಿ ಆಯುಷ್ಮಾನ್ ಇಲಾಖೆಯ ಸೂಚನೆಯ ಮೇರೆಗೆ ಅಕ್ಟೋಬರ್ 26 ರಂದು ನಾಡ ಪ್ರಾಥಮಿಕ ಆರೋಗ್ಯಕೇಂದ್ರದ ಪ್ರಾಯೋಜಕತ್ವದಲ್ಲಿ ಇಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀಮಹಾವಿಷ್ಣು ಕಲಾಮಂದಿರದಲ್ಲಿ ಆಯೋಜನೆಗೊಂಡ ಸರಳ ಯೋಗ ಮತ್ತು ಪ್ರಾಣಾಯಾಮ ಶಿಬಿರವು ಅಕ್ಟೋಬರ್ 17ರಿಂದ ಪ್ರಾರಂಭವಾಗಿ 26 ರ ತನಕ 10 ದಿನಗಳ ಪರ್ಯಂತ ಶಿಬಿರಾರ್ಥಿಗಳಿಗೆ ತರಬೇತಿ ನಡೆದು ಸಮಾರೋಪಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಪುರುಷೋತ್ತಮ ಅಡಿಗ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ […]
ಅ,28 ರಂದು ಪ್ರಜ್ಞಾ ಸಾಗರ್ ರೆಸ್ಟೋರೆಂಟ್ ಶುಭಾರಂಭ
ಬೆಂಗಳೂರು(ಅ 27): ಪ್ರಜ್ಞಾ ಸಾಗರ್ ಹೋಟೇಲ್ಸ್ ಆಂಡ್ ರೆಸೋರ್ಟ್ ಇದರ ಮೂರನೇ ಶಾಖೆ ಪ್ರಜ್ಞಾ ಸಾಗರ್ ರೆಸ್ಟೋರೆಂಟ್ ಅ,28 ರಂದು ಬೆಂಗಳೂರಿನ ಅಂಬೇಡ್ಕರ್ ನಗರದ ಕೆ.ಆರ್ .ಟವರ್ ನಲ್ಲಿ ಶುಭಾರಂಭಗೊಳ್ಳಲಿದೆ. ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿಯವರು ಪ್ರಜ್ಞಾ ಸಾಗರ್ ರೆಸ್ಟೋರೆಂಟ್ ನ್ನು ಉದ್ಘಾಟಿಸಲಿದ್ದು, ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಸೇವಕ ಶ್ರೀ ಕಾವೇರಪ್ಪ, ಶ್ರೀ ಮನೋಹರ್ ರೆಡ್ಡಿ ,ಶ್ರೀ ರಾಜ ರೆಡ್ಡಿ, ಶ್ರೀ ಜಯಚಂದ್ರ ರೆಡ್ಡಿ, […]
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು: ವಿದ್ಯಾರ್ಥಿಗಳಿಗಾಗಿ ಜೀವನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
ಗಂಗೊಳ್ಳಿ(ಅ,26):ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಜೀವನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಗುಜ್ಜಾಡಿ ಗೋಪಾಲ ನಾಯಕ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಜೀವನ ಎಂಬುದು ಒಂದು ಕ್ರಿಕೆಟ್ ಸ್ಟೇಡಿಯಂ ಇದ್ದ ಹಾಗೆ .ಇಲ್ಲಿ ಬಾಲ್ ಎನ್ನುವ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇಕು.ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕ ಜೀವನದಲ್ಲಿ ಮಾತನಾಡುವ ಕಲೆ, ನಾಯಕತ್ವದ ಗುಣ,ಸಕಾರಾತ್ಮಕ […]
ಉತ್ತರ ಸಿಗದ ಪ್ರಶ್ನೆ…..
ಅದೇನೋ ಗೊತ್ತಿಲ್ಲ .ಸುಮ್ಮನೆ ಕುಳಿತಾಗಲೆಲ್ಲಾ ನನ್ನನ್ನು ಕಾಡೋ ಪ್ರಶ್ನೆ ನಾನ್ಯಾಕೆ ಇಷ್ಟೊಂದು ಬದಲಾದೆ?ಸಮಯ ನನ್ನನ್ನ ಬದಲಿಸಿತಾ? ಇಲ್ಲ ಸಂದರ್ಭಕ್ಕೆ ತಕ್ಕ ಹಾಗೆ ಬದುಕುತ್ತಿರುವೆನಾ? ಇಲ್ಲ ಬದುಕಿನ ಚಂಚಲತೆ ನನ್ನನು ಬದಲಾಯಿಸಿತಾ? ಬಹುಶಃ ಉತ್ತರ ಸಿಗದ ಪ್ರಶ್ನೆ. ಮೊದಲೆಲ್ಲ ನೋಡಿದ್ದನ್ನೆಲ್ಲ ಅಮ್ಮನ ಬಳಿ ಹಠ ಹಿಡಿದು ಕೊಡಿಸುವಂತೆ ಕೇಳುತ್ತಿದ್ದ ನಾನು ಈವಾಗ ಅವಶ್ಯಕತೆ ಇದ್ದರೂ ಅಮ್ಮನ ಬಳಿ ಕೇಳಲು ಹಿಂಜರಿಕೆ! ಕಾರಣವೇ ಇಲ್ಲದ ಜಗಳ ಆಡ್ತಾ ಇದ್ದೆ ಅಣ್ಣ ತಮ್ಮನ ಜೊತೆ. […]
ಸಾಲಿಗ್ರಾಮ: ಗುರುನರಸಿಂಹ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ ಆನಂದ ಸಿ. ಕುಂದರ್ ಪುನರಾಯ್ಕೆ
ಸಾಲಿಗ್ರಾಮ(ಅ,25): ಇಲ್ಲಿನ ಶ್ರೀ ಗುರು ನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉದ್ಯಮಿ ಆನಂದ ಸಿ, ಕುಂದರ್ ಮೂರನೇ ಬಾರಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂಜೀವ ಜಿ. ಅವಿರೋಧ ಆಯ್ಕೆಯಾದರು. ನಿರ್ದೇಶಕರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಅ,24 ರಂದು ಚುನಾವಣೆ ನಡೆದಿದ್ದು,ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.