ಕೋಟೇಶ್ವರ (ಡಿ.28): ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಬ್ಬೊಬ್ಬ ವಿಜ್ಞಾನಿ ಅಡಗಿದ್ದಾನೆ ಆದರೆ ಆವರ ಪ್ರತಿಭೆಯನ್ನು ಒರೆ ಹಚ್ಚುವ ಕೆಲಸ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಎಂದು ಸುಜ್ಞಾನ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಶಿಕ್ಷಣ ತಜ್ಞ ಡಾ. ರಮೇಶ್ ಶೆಟ್ಟಿಯವರು ಹೇಳಿದರು. ಅವರು ಸುಣ್ಣಾರಿಯ ಎಕ್ಸಲೆಂಟ್ ಪ್ರೌಢಶಾಲೆ ಮತ್ತು ಪಿ.ಯು ಕಾಲೇಜಿನಲ್ಲಿ ಆಯೋಜಿದ ರಾಷ್ಟ್ರೀಯ ಗಣಿತ ದಿನಾಚರಣೆಯೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರೌಢಶಾಲೆಯ […]
Year: 2021
ಸಾಲಿಗ್ರಾಮ: ಸ್ವಾತಂತ್ರ್ಯ ಹೋರಾಟಗಾರರ ಮನೆಯಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ
ಸಾಲಿಗ್ರಾಮ (ಡಿ.28): ಸ್ವರಾಜ್ಯ75 ಸಂಘಟನೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಹಸ್ತ ಚಿತ್ತ ಫೌಂಡೇಶನ್, ಎಂ.ಎಸ್.ಆರ್.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಹಾಗೂ ಗ್ರಾಮಸ್ಥರ ಸಹಕಾರದಿಂದ ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಆಯೋಜಿಸಿದ ಸ್ವಾತಂತ್ರ್ಯ ಹೋರಾಟಗಾರರ ಮನೆಯ ನಾಮಫಲಕವನ್ನು ಶ್ರೀ ಎ.ಎಸ್.ಎನ್.ಹೆಬ್ಬಾರ್ ರವರು ಡಿ.25ರಂದು ಅನಾವರಣಗೊಳಿಸಿದರು . ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಈ ವಿಚಾರಕ್ಕೆ ಸಂಭಂಧಿಸಿದಂತೆ ಕುಂದಾಪುರದ ಹಿರಿಯ ಪತ್ರಕರ್ತ ಶ್ರೀ ಜಾನ್ ಡಿಸೋಜಾ ಮಾತನಾಡಿದರು. ಪಾರಂಪಳ್ಳಿ ದಿ.ಜನಾಧ೯ನ ಮಧ್ಯಸ್ಥ ರ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಸ್ವಚ್ಛತಾ ಜನಾಂದೋಲನ – ಪುನೀತ ಸಾಗರ ಅಭಿಯಾನ
ಶಿರ್ವ(ಡಿ.28): ನಮ್ಮ ಪರಿಸರ ಸ್ವಚ್ಛವಾಗಿದ್ದರೆ ಎಷ್ಟೋ ರೋಗಗಳನ್ನು ಮದ್ದಿಲ್ಲದೇ ದೂರವಾಗಿಸಲು ಸಾಧ್ಯ. ನಮಗೆ ಶಿಕ್ಷಣ ಎಷ್ಟು ಮುಖ್ಯವೋ ಪರಿಸರ ಕಾಳಜಿ ಅಷ್ಟೇ ಮುಖ್ಯ. ಅ ನಿಟ್ಟಿನಲ್ಲಿ ಕಾಲೇಜಿನ ಎನ್ ಸಿ ಸಿ ಘಟಕದ ವಿದ್ಯಾರ್ಥಿಗಳು ಕಾಪು ಬೀಚ್ ಸ್ವಚ್ಛಗೊಳಿಸುವ ಮೂಲಕ ಸರಕಾರದ ಕೆಲಸ ಮಾತ್ರವಲ್ಲ ಪ್ರಜ್ಞಾ ವಂತ ನಾಗರಿಕರೆಲ್ಲರ ಕರ್ತವ್ಯವೆಂದು ಸಾಬೀತು ಪಡಿಸಿದರು. ಕಡಲ ಕಿನಾರೆಯ ವ್ಯಾಪಾರಸ್ಥರು ಸ್ವಚ್ಛತೆಯ ಬಗ್ಗೆ ತಾವೇ ಮುತುವಜಿ೯ ವಹಿಸಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಪ್ರವಾಸಿಗರಿಗೆ ಸ್ವಚ್ಛತೆಯ […]
ಬೈಂದೂರು: ಫಲಾನುಭವಿಗಳಿಗೆ ಸಹಾಯಧನ ವಿತರಿಸಿದ ಶಾಸಕ ಶ್ರೀ ಬಿ.ಎಮ್.ಸುಕುಮಾರ ಶೆಟ್ಟಿ
ಬೈಂದೂರು(ಡಿ.28): ರಾಜ್ಯ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ, ಬೈಂದೂರು ಪ.ಪಂ. ಉಡುಪಿ ಜಿಲ್ಲೆ ಹಾಗೂ ತಾಲೂಕು ಆಡಳಿತ ಕಚೇರಿ ಬೈಂದೂರು ಇವರ ವತಿಯಿಂದ ಬೈಂದೂರು ರೋಟರಿ ಭವನದಲ್ಲಿ ಡಿ.27 ರಂದು ನಡೆದ 2021-22ನೇ ಸಾಲಿನ ಎಸ್.ಎಫ್.ಸಿ. ಅನುದಾನದಡಿಯಲ್ಲಿ ಫಲಾನುಭವಿಗಳಿಗೆ ಸಹಾಯಧನ ಚೆಕ್ ನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ವಿತರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ರಾಜ್ಯ ಸರ್ಕಾರ ಮತ್ತು ಸಂಸದರ ವಿಶೇಷ ಪ್ರಯತ್ನದಿಂದ ಬೈಂದೂರು ಕ್ಷೇತ್ರಕ್ಕೆ ಅಭಿವೃದ್ಧಿ ವಿಷಯದಲ್ಲಿ […]
ಯುವ ಸಾಹಿತಿ ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ರವರಿಗೆ ಸನ್ಮಾನ
ಉಪ್ಪುಂದ(ಡಿ.28): ಯುವ ಸಾಹಿತಿ ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ರವರ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿ ರೈತರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದೇಶಪಾಂಡೆ ಪ್ರತಿಷ್ಠಾನ ಮತ್ತು ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು ಇವರು ನೀಡಿರುವ 2020ನೇ ಸಾಲಿನ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ “ಕಾವ್ಯ ಭೂಷಣ ಪ್ರಶಸ್ತಿ” ಪಡೆದಿರುವ ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ರವರ ಸಾಹಿತ್ಯ ಕ್ಷೇತ್ರದಲ್ಲಿನ ರಾಜ್ಯಮಟ್ಟದ ಸಾಧನೆಯನ್ನು ಗುರುತಿಸಿ ಡಿ.23 ರಂದು ಶ್ರೀ ಕೃಷ್ಣಲಲಿತ ಕಲಾಮಂದಿರ […]
ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಮಂಗಳೂರು ವಲಯದ ಫುಟ್ ಬಾಲ್ ಪಂದ್ಯಾಟಗಳ ಉದ್ಘಾಟನೆ
ಮೂಡುಬಿದ್ರಿ ( ಡಿ.27 ) : ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಆತಿಥ್ಯದಲ್ಲಿ ಡಿ. 27 ಮತ್ತು 28 ರಂದು ನಡೆಯಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯದ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಫುಟ್ ಬಾಲ್ ಪಂದ್ಯಾಟಗಳ ಉದ್ಘಾಟನೆ ಇಂದು ನಡೆಯಿತು.ಪಂದ್ಯಾಟದ ಉದ್ಘಾಟನೆಯನ್ನು ಕರ್ನಾಟಕದ ಸಂತೋಷ್ ಟ್ರೋಫಿ ಆಟಗಾರರಾದ ಬಾವು ನಿಶಾದ್ ಮತ್ತು ರಿಯಾಜ್ ಪಿ ಟಿ ನೆರವೇರಿಸಿ, ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕ್ಯಾಂಪಸ್ […]
••ಯಾರವನು?••
ಅವನೊಂದು ಮಹಾನ್ ಚೇತನ ಹಸಿ ಮಣ್ಣಿಗೆ ನೆತ್ತರ ಸುರಿಸಿಬದುಕನ್ನೇ ಉಳುವವನು….. ಹಸಿದ ಹೊಟ್ಟೆಗೆ ಅನ್ನ ನೀಡಲು ತನ್ನನ್ನೇ ಪಣವಾಗಿಟ್ಟು ನಗುವನು ಕಣ್ಣಂಚಿನ ನೋವಿನ ಕತ್ತು ಹಿಸುಕುತ್ತಾ… ಕಾಣದ ಕನಸಿಗೆ ದಾರಿಯಾಗುವ ಆಸೆ ಬದುಕು ಬರಡಾಗಿರಲು ಭೂಮಿಗೆಲ್ಲಿ ಫಸಲು? ಬಾರದ ಬೆಳೆಗಾಗಿ ದಿನವಿಡೀ ಕಾಯುವನು ಬಹುಶಃ ನಾಳೆಯೂ ಕೂಡಾ!! ಹಸಿಮಣ್ಣ ಎಡೆಯಲ್ಲಿ ಗುಂಡಿತೋಡಿ ಉಸಿರ ಬಚ್ಚಿಡಬಹುದಿತ್ತು ನಿರಾಶಾವಾದಿಯಾಗಿದ್ದಲ್ಲಿ ಆದರೆ ಅವನಲ್ಲ….. ಹಸಿದ […]
ಇಷ್ಟೇನಾ ನಿನ್ನ ಬೆಲೆ…?
ಮನೆ ಮುಂದೆ ಒಲೆ,ಹಸಿ ತೆಂಗಿನ ಗರಿ, ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ,ಬದಿಯಲ್ಲೊಂದು ಸೀಮೆಎಣ್ಣೆ ಡಬ್ಬ, ಸಾಕಾಗದಿದ್ರೆ ಒಂದು ಸ್ವಲ್ಪ ಪೆಟ್ರೋಲು,ಸುರಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ ಈ ನಿನ್ನ ಶರೀರ.ಇಷ್ಟೇನಾ ನಿನ್ನ ಬೆಲೆ…? ಒಂದು ಸಂಜೆ ಪ್ರಾಣ ಪಕ್ಷಿ ಹಾರಿ ಹೋಯಿತು,ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು. ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ ನೋಡುತ್ತಿದ್ದಾರೆ, ಅರೇ, ಬೇಗನೇ ಎತ್ತಿರಿ,ಕತ್ತಲಾಗುತ್ತ ಬಂತು,ಹೊಟ್ಟೆ ಹಸಿದಿದೆ,ಯಾರು ರಾತ್ರಿಯೆಲ್ಲಾ ಕಾಯುವರು? ಇದು ನೆಂಟರ ನಡುವಿನ ಸಂಭಾಷಣೆ…ಇಷ್ಟೇನಾ ನಿನ್ನ ಬೆಲೆ? ನಾ ಸತ್ತು ಆತ್ಮ ಮೇಲಕ್ಕೆ ಹಾರುತ್ತಿದೆ,ನಕ್ಷತ್ರಗಳ ಮೇಲೆ. […]
ಕೋಟ : ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ಕೋಟ(ಡಿ.27):ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಹಾಗೂ ಕೋಟ ಪದ್ಮನಾಭ ಕಿಣಿ ಇವರ ಸೇವೆ ಸ್ಮರಣಾರ್ಥ ಸ್ವರಾಜ್ಯ75 ಸಂಘಟನೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಹಸ್ತ ಚಿತ್ತ ಫೌಂಡೇಶನ್,ಜೈ ಕುಂದಾಪುರ ಸೇವಾ ಟ್ರಸ್ಟ್, ಎಂ.ಎಸ್.ಆರ್.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಹಾಗೂ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕವನ್ನು ಶ್ರೀ ದೇವದತ್ ಭಟ್ ರವರು ಡಿ.26ರಂದು ಕೋಟದಲ್ಲಿ ಅಳವಡಿಸಿ ಶುಭಕೋರಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನರೇಂದ್ರ ಕುಮಾರ್ […]
ಡಾ. ಗೋವಿಂದ ಬಾಬು ಪೂಜಾರಿಯವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಬೆಂಗಳೂರು (ಡಿ.27): ನ್ಯೂಸ್ ಪೇಪರ್ ಆಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಡಿ.26 ರಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಸಮಾಜ ಸೇವಕರು,ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ ಇದರ ಅಧ್ಯಕ್ಷರು ,ಉದ್ಯಮಿ ಗೋವಿಂದ ಬಾಬು ಪೂಜಾರಿರವರಿಗೆ ನೀಡಿ ಗೌರವಿಸಲಾಯಿತು. ವಿದ್ಯಾವಾಚಸ್ಪತಿ ಸಂತೋಷ ಭಾರತಿ ಶ್ರೀಗಳು ,ಸಭಾಪತಿಗಳಾದ ಬಸವರಾಜ್ ಹೊರಟ್ಟಿರವರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಮತ್ತು […]