ಕುಂದಾಪುರ ( ಡಿಸೆಂಬರ್ 15): ತಮಿಳುನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ(CDS) ಜ.ಬಿಪಿನ್ ರಾವತ್ ದಂಪತಿ ಸೇರಿದಂತೆ, ಹುತಾತ್ಮರಾದ ಎಲ್ಲಾ ವೀರ ಯೋಧರಿಗೆ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಡಿಸೆಂಬರ್ 15ರಂದು ದೀಪ ನಮನ ಸಲ್ಲಿಸಲಾಯಿತು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಬೋಧಕೇತರರು ಕೈಯಲ್ಲಿ ಮೇಣದ ದೀಪ ಬೆಳಗಿಸಿ, ದೇಶಭಕ್ತಿ ಗೀತೆ ಹಾಡುವುದರ ಮೂಲಕ ಹುತಾತ್ಮರ ಆತ್ಮಕ್ಕೆ ದೀಪ ಪ್ರಜ್ವಲನದ ಶ್ರದ್ಧಾಂಜಲಿ ಸಲ್ಲಿಸಿದ್ದರು. ಈ […]
Year: 2021
ಗಂಗೊಳ್ಳಿ: ಡಾ. ಬಿ.ಆರ್ ಅಂಬೇಡ್ಕರ್ ರ ವರ ಪರಿನಿರ್ವಾಣ ದಿನಾಚರಣೆ
ಗಂಗೊಳ್ಳಿ(ಡಿ.13) : ಡಾ. ಅಂಬೇಡ್ಕರ್ ಯುವಕ ಮಂಡಲ (ರಿ) ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಳಿ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯ ಅಂಬೇಡ್ಕರ್ ಭವನದಲ್ಲಿ ಬಿ.ಆರ್ ಅಂಬೇಡ್ಕರ್ ರ ವರ 65ನೇ ವರುಷದ ಪರಿನಿರ್ವಾಣ ದಿನಾಚರಣೆ ನಡೆಯಿತು. ಯುವಕ ಮಂಡಲದ ಉಪಾಧ್ಯಕ್ಷ ಕಿರಣ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಭಾಸ್ಕರ್ ಹೆಚ್. ಜಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಶೈಲಿ […]
ಮೂಡ್ಲಕಟ್ಟೆ ಎಂ ಐ ಟಿ: ಅಪರಾಧ ತಡೆ ಮಾಸಾಚರಣೆ -2021 ಕಾರ್ಯಕ್ರಮ
ಕುಂದಾಪುರ(ಡಿ.13): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮದ ಪ್ರಯುಕ್ತ ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆ ಕಂಡ್ಲೂರು ಇದರ ಸಹಯೋಗದೊಂದಿಗೆ ಅಪರಾಧ ತಡೆ ಮಾಸಾಚರಣೆ 2021 ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಕಂಡ್ಲೂರು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶ್ರೀ ನಿರಂಜನ್ ಗೌಡ ಬಿ ಎಸ್ ಆಗಮಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. “ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾದದ್ದು, ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು […]
ವಕ್ವಾಡಿ: ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮ ಫಲಕ ಅಳವಡಿಕೆ
ಕುಂದಾಪುರ(ಡಿ, 12): ಕುಂಭಾಶಿ ಸಮೀಪದ ವಕ್ವಾಡಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೃಷ್ಣ ಐತಾಳ್ ರವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂಬ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಸ್ವರಾಜ್ಯ 75 ತಂಡ ಹಾಗೂ ವಿವಿಧ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಯಿತು. ಶ್ರೀ ಪ್ರೇಮಾನಂದ ಶೆಟ್ಟಿ ಕಟ್ಕೇರಿ ಯವರು ನಾಮಫಲಕ ಅನಾವರಣಗೊಳಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶಪ್ರೇಮ ನಾವು ಪ್ರತಿದಿನ ಸ್ಮರಿಸಬೇಕು ಹಾಗೂ ಸರಕಾರ ಸ್ವಾತಂತ್ರ್ಯ ಹೋರಾಟಗಾರರ ಮನೆಯ ಬಗ್ಗೆ ಕಳಕಳಿಯನ್ನು […]
ಸಮುದಾಯ ಆರೋಗ್ಯ ಕೇಂದ್ರ ಬೈಂದೂರು:ಅಂಬ್ಯುಲೆನ್ಸ್ ಸೇವೆಗೆ ಸಹಾಯ ಹಸ್ತ ಚಾಚಿದ ಡಾ. ಗೋವಿಂದ ಬಾಬು ಪೂಜಾರಿ
ಬೈಂದೂರು(ಡಿ.11); ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಯವರು ಬಹುಬಗೆಯ ಸಮಾಜಸೇವೆ ಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು , ಅದಕ್ಕೆ ಪೂರಕವಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ವಾಹನ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸರಕಾರದಿಂದ ಸಿಬ್ಬಂದಿ ನೇಮಕವಾಗುವ ತನಕ ತಾತ್ಕಾಲಿಕವಾಗಿ ಅಂಬ್ಯುಲೆನ್ಸ್ ನ ಓರ್ವ ಚಾಲಕನಿಗೆ ಮಾಸಿಕ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಡೀಸೆಲ್ ವೆಚ್ಚವನ್ನು ಭರಿಸಿಕೊಡುವುದರ ಮೂಲಕ ಮಾನವೀಯ ನೆಲೆಯ […]
ಡಾ.ಬಿ.ಬಿ. ಹೆಗ್ಡೆ ಕಾಲೇಜು: ಯೂತ್ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ ( ಡಿ,10):ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಸಹಯೋಗದೊಂದಿಗೆ ಯೂತ್ ರೆಡ್ ಕ್ರಾಸ್ ಘಟಕದ 2021-22 ನೇ ಸಾಲಿನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಕಾರ್ಯದರ್ಶಿ ವೈ. ಸೀತರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವೈಖರಿಯನ್ನು , ಅದರ ಮಹತ್ವವನ್ನು ವಿವರಿಸುತ್ತ ಇಂದಿನ […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ :ಬ್ಯಾಂಕಿಂಗ್ ಹಾಗೂ ಎಂ.ಬಿ.ಎ ಪರೀಕ್ಷೆಗೆ ನೂತನ ಬ್ಯಾಚ್ ಉದ್ಘಾಟನೆ
ಕುಂದಾಪುರ (ಡಿ,9): ದೇಶಕ್ಕೆ ಅತಿ ಹೆಚ್ಚು ಬ್ಯಾಂಕುಗಳನ್ನು ಕೊಡುಗೆಯಾಗಿ ನೀಡಿದ ಅವಳಿ ಜಿಲ್ಲೆ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಉದ್ಯೋಗಕ್ಕೆ ಮತ್ತು ಬ್ಯಾಂಕ್ ಪರೀಕ್ಷೆ ಎದುರಿಸಲು ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರಯತ್ನ ಪಡಬೇಕು ಮತ್ತು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ ಇದರ ಕಾರ್ಯ ಮೆಚ್ಚುವಂತದ್ದು ಎಂದು ಕೆನರಾ ಬ್ಯಾಂಕಿನ ರಿಕವರಿ ಮ್ಯಾನೇಜರ್ ಪ್ರಭಾಕರ ಶೆಟ್ಟಿಯವರು ನೂತನ ಬ್ಯಾಚ್ನ್ನು […]
ಡಾ.ಬಿ.ಬಿ. ಹೆಗ್ಡೆ ಕಾಲೇಜು : ಐವರಿಗೆ ಚಿನ್ನದ ಪದಕ
ಕುಂದಾಪುರ(ಡಿ,9): ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಪೂರೈಸಿದ ಐದು ವಿದ್ಯಾರ್ಥಿಗಳು ಪೈನಾನ್ಶಿಯಲ್ ಎಕೌಂಟಿಗ್ನಲ್ಲಿ ಮುನ್ನೂರಕ್ಕೆ ಮುನ್ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಜಿಲ್ಲೆಯಲ್ಲಿಯೇ ಇದೊಂದು ವಿಶಿಷ್ಠ ಸಾಧನೆಗೆ ಕಾಲೇಜು ಸಾಕ್ಷಿಯಾಗಿದೆ. ಕಾಲೇಜಿನ ಸಾಧನೆಯ ಕಿರೀಟಕ್ಕೆ ಐದು ಚಿನ್ನದ ಗರಿ ಎಂದು ಪ್ರಾಂಶುಪಾಲರಾದ ಪ್ರೊ.ಕೆ.ಉಮೇಶ್ ಶೆಟ್ಟಿ ತಿಳಿಸಿದ್ದಾರೆ. ಪ್ರತೀಕ್ಷಾ, ಅಂಕಿತಾ, ಸುಚಿತ್ರಾ ಶೆಟ್ಟಿ, ಬಿಬಿ ಹಾಜಿರಾ, ಹಾಗೂ ಅನನ್ಯ ಈ ಸಾಧನೆಗೈದ ವಿದ್ಯಾರ್ಥಿನಿಯರು. ಈ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ […]
ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೊಲ್ಲೂರು: ಅಪರಾಧ ತಡೆ ಮಾಸಾಚರಣೆ-2021
ಕೊಲ್ಲೂರು(ಡಿ,7): ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಆರಕ್ಷಕ ಠಾಣೆ ಕೊಲ್ಲೂರು ಇವರ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಚರಣೆ 2021ರ ಪ್ರಯುಕ್ತ ವಿದ್ಯಾರ್ಥಿಗಳಿಗೆ ಅಪರಾಧ ತಡೆಯ ಬಗ್ಗೆ ಕೊಲ್ಲೂರಿನ ಠಾಣಾಧಿಕಾರಿ ನಾಸಿರ್ ಹುಸೇನ್ರವರು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಅರುಣ್ಪ್ರಕಾಶ್ ಶೆಟ್ಟಿಯವರು ವಹಿಸಿಕೊಂಡಿದ್ದರು.ಉಪನ್ಯಾಸಕರಾದ ಗೋಪಾಲಕೃಷ್ಣ ಜಿ.ಬಿ. ಪೂರ್ಣಿಮಾ ಎನ್ ಜೋಯಿಸ್, ಸುಕೇಶ್ ಶೆಟ್ಟಿ ಹೊಸಮಠ, ರಾಮನಾಯ್ಕ ಕೆ.ಬಿ. […]
ಡಾ.ಬಿ.ಬಿ. ಹೆಗ್ಡೆ ಕಾಲೇಜು: ಏಡ್ಸ್ ಕುರಿತು ಅರಿವು ಮೂಡಿಸುವ ಭಿತ್ತಿ ಚಿತ್ರ ಸ್ಪರ್ಧೆ
ಕುಂದಾಪುರ (ಡಿ,6): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ ಹಾಗೂ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನ- 2021 ಮತ್ತು 75ನೇ ವರ್ಷದ ಸ್ವತಂತ್ರ ದಿನವನ್ನು ಆಚರಿಸುವ (New India @75) ಪ್ರಯುಕ್ತ ಹೆಚ್ಐವಿ / ಏಡ್ಸ್ ಬಗ್ಗೆ ಅರಿವು ಮೂಡಿಸಲು ಕಾಲೇಜಿನ ವಿದ್ಯಾರ್ಥಿಗಳಿಗೆ ಭಿತ್ತಿ ಚಿತ್ರ ಸ್ಪರ್ಧೆಯನ್ನು […]