ಗಂಗೊಳ್ಳಿ (ಡಿ.6): ಕಳೆದ 12 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಮತ್ತು ಕೋವಿಡ್ ಸಮಯದಲ್ಲಿ ನಿರಂತರವಾಗಿ ಸೇವಾ ಮನೋಭಾವನೆಯೊಂದಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಉತ್ತಮವಾದ ನಿರ್ವಹಣೆಯನ್ನು ತೋರಿದ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಕಲ್ಪನಾ ಜಿ ಆರ್. ಪ್ರಭಾಕರ್ ಅವರನ್ನು ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಕಾರ್ಟೂನು ಹಬ್ಬದಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ, ಮನೋವೈದ್ಯ ಡಾ. ಪಿ ವಿ […]
Year: 2021
ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ
ಕುಂದಾಪುರ (ಡಿ,06): ಅಪರಾಧಗಳು ಸಂಭವಿಸದಂತೆ ಎಚ್ಚರವಹಿಸುವುದು ನಮ್ಮ ಕರ್ತವ್ಯ.ಬದುಕಿನ ಭದ್ರತೆಗೆ ನೀವೆಲ್ಲರೂ ಪೋಲಿಸ್ನಂತೆಯೇ ಎಚ್ಚರದಲ್ಲಿ ಇರಬೇಕು. ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬದಲಾಗಿ ಅದನ್ನು ದುರುಪಯೋಗ ಮಾಡಿಕೊಳ್ಳಬಾರದು. ಅಪರಾಧಗಳು ನಮ್ಮ ಬದುಕಿನ ಕನಸನ್ನು ಕಸಿದುಕೊಳ್ಳುತ್ತವೆ. ಹಾಗಾಗಿ ಕೆಟ್ಟದನ್ನು ನಾವು ಯೋಚಿಸಬಾರದು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಕುಂದಾಪುರ ಪೋಲಿಸ್ ಉಪಾಧೀಕ್ಷಕರಾದ ಶ್ರೀಕಾಂತ್ ಕೆ. ಕರೆ ನೀಡಿದರು. ಅವರು ಬಿ.ಬಿ. ಹೆಗ್ಡೆ ಕಾಲೇಜಿನವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜನೆಯ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ […]
ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಕೊಲ್ಲೂರು: ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣಾ ದಿನಾಚರಣೆ
ಕೊಲ್ಲೂರು(ಡಿ,6): ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಪರಿನಿರ್ವಾಣಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಅರುಣ್ಪ್ರಕಾಶ್ ಶೆಟ್ಟಿಯವರು ವಹಿಸಿಕೊಂಡು ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ರವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಗೊಳ್ಳಬೇಕೆಂದು ಕರೆನೀಡಿದರು. ವಿದ್ಯಾರ್ಥಿಗಳಾದ ದ್ವಿತೀಯ ವಾಣಿಜ್ಯ ವಿಭಾಗದ ದೀಕ್ಷಾ, ಪ್ರಥಮ ಕಲಾ ವಿಭಾಗದ ಕೀರ್ತನಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಹಾಗೂ ದ್ವಿತೀಯ ಕಲಾ ವಿಭಾಗದ ಸಿಂದುಶ್ರೀ ಮಯ್ಯ ದೇಶಭಕ್ತಿಗೀತೆ ಹಾಡಿದರು. ಉಪನ್ಯಾಸಕರಾದ ಗೋಪಾಲಕೃಷ್ಣ ಜಿ.ಬಿ, […]
•••ಅವಳೆಂದರೆ•••
ನಾ ಹೇಗೆ ವರ್ಣಿಸಲಿ ನಿನ್ನ ಪುಸ್ತಕ ಪೆನ್ನುಗಳಿಗೆ ಸೀಮಿತವೇ … ನಿನ್ನೆಲ್ಲಾ ಅನುರಣನ ನೆನಪುಗಳು..? ನಾಲ್ಕು ಸಾಲು ಗೀಚಿದರೆ ಮುಗಿಯಿತೇ ನಮ್ಮೆಲ್ಲ ಸ್ನೇಹ ಸಂಬಂಧಗಳು….?? ತಡಕಾಡುವುದೀ ಮನ ಹೊಸ ಪದ ಹುಡುಕಲು…. ಮಿಡಿಯುವುದೀ ಕ್ಷಣ ನಿನ್ನತನವ ಗುರುತಿಸಲು…. ನಾ ಹೇಗೆ ಬರೆಯಲಿ ಹೇಳು….. ಪದಕಡಲ ಸಾಮ್ರಾಜ್ಞಿ ನೀನು…. ಪದ ಪೋಣಿಸುವ ತಿರುಕ ನಾನು…. ಒಮ್ಮೊಮ್ಮೆ ಯೋಚಿಸುವೆ ನಿನ್ನ ನೆರಳ … ಚಿತ್ರಿಸುವ ಕಲಾಕಾರ ನಾನು…. ಚಿತ್ರಭಂಡಾರವೇ ನೀನಾಗಿರುವಾಗ ನಾನೆಷ್ಟು ಗೀಚಲಿ ಹೇಳುನಿನ್ನ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯ: ಬೀಳ್ಕೊಡುಗೆ ಸಮಾರಂಭ
ಶಿರ್ವ(ಡಿ.5): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 36 ವರ್ಷ ಅಧಿಕ ಕಾಲ ಕಾಲೇಜಿನ ಕಚೇರಿ ಸಹಾಯಕ ಸಿಬ್ಬಂದಿಯಾಗಿ ಸೇವೆಸಲ್ಲಿಸಿದ ಶ್ರೀರಂಗ ರವರಿಗೆ ಬಿಳ್ಕೊಡುಗೆ ಕಾರ್ಯಕ್ರಮವನ್ನು ಡಿ,04 ಹಮ್ಮಿಕೊಳ್ಳಲಾಯಿತು. ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ಜೊತೆಗೆ ಕಚೇರಿ ಸಿಬ್ಬಂದಿ ವರ್ಗದವರು ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಕಾಲೇಜಿನ ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದರಲ್ಲಿ ಸಹಾಯಕ ಸಿಬ್ಬಂದಿ ಪಾತ್ರ ಮಹತ್ವದ್ದು. ಶ್ರೀರಂಗ ರವರು ನಮ್ಮ ಸಂಸ್ಥೆಯಲ್ಲಿ ಅಚ್ಚುಕಟ್ಟಾಗಿ ಅವರ ಕಾರ್ಯ ದಕ್ಷತೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು ಹಾಗೂ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಬೇಸಿಕ್ ಅಕೌಂಟಿಂಗ್ ಕುರಿತು ವಿಶೇಷ ಉಪನ್ಯಾಸ
ಶಿರ್ವ(ಡಿ,5): ಇಂದಿನ ವಾಣಿಜ್ಯ ಕ್ಷೇತ್ರಗಳಲ್ಲಿ ಲೆಕ್ಕಪತ್ರಗಳ ಲೆಕ್ಕಚಾರ ಮಾಡಲು ಬೇಸಿಕ್ ಅಕೌಂಟಿಂಗ್ ಬಗ್ಗೆ ಯುವಕರಲ್ಲಿ ಜ್ಞಾನದ ಅರಿವು ಇರಬೇಕೆಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಬೇಸಿಕ್ ಅಕೌಂಟಿಂಗ್ ಕುರಿತು ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಸ್ಯಾಮ್ ಜೋಯಲ್ ಡೈಸ್ ರವರು ಪ್ರಾಯೋಗಿಕವಾಗಿ ವಿವರಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಉದ್ಯೋಗ ಕ್ಷೇತ್ರದಲ್ಲಿ ಅಕೌಂಟಿಂಗ್ ಎಕ್ಸ್ಪರ್ಟ್ ಗಳಿಗೆ […]
ಶ್ರೀ ಧವಲಾ ಕಾಲೇಜು ಮೂಡಬಿದಿರೆ: ಎನ್.ಎಸ್.ಸ್ ಘಟಕದ 2021- 22 ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆ
ಮೂಡಬಿದಿರೆ(ಡಿ,5): ಶ್ರೀ ಧವಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಇದರ 2021 -22 ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಡಿ,03ರಂದು ಕಾಲೇಜಿನ ಕಾನ್ಫರೆನ್ಸ್ ಹಾಲಿನಲ್ಲಿ ನಡೆಯಿತು. ನಿವೃತ್ತ ವೃತ್ತ ನಿರೀಕ್ಷಕ ಶ್ರ ರಾಜಾರಾಮ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ನ ಉಪಯುಕ್ತತೆ ಮತ್ತು ಅದನ್ನು ವಿದ್ಯಾರ್ಥಿಗಳು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ವಿವರಿಸಿದರು. ಎನ್ಎಸ್ಎಸ್ ಎನ್ನುವುದು ಸ್ವಯಂ ಸೇವಕರಿಂದ ಕೂಡಿದ ಸಂಸ್ಥೆ. ಸ್ವಯಂಸೇವಕರು ಸ್ವ ಹಿತಾಸಕ್ತಿಯಿಂದ ಸಾಮಾಜಿಕ ಶೈಕ್ಷಣಿಕ ಸೇವೆಗಳನ್ನು […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ
ಶಿರ್ವ(ಡಿ,5): ಕಂಪ್ಯೂಟರ್ ಜ್ಞಾನ ಇಂದಿನ ಯುವಕರಲ್ಲಿ ಅತ್ಯಂತ ಅವಶ್ಯಕವಾಗಿದೆ. ಕಲಿಕೆಯ ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಕಂಪ್ಯೂಟರ್ ಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿಕೊಂಡದಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಬಹುದೆಂದು ಕಾಲೇಜಿನ ಕಚೇರಿ ಅಧೀಕ್ಷಕಿ ಶ್ರೀಮತಿ ಡೊರಿಯನ್ ಡಿಸಿಲ್ವಾ ಹೇಳಿದರು. ಅವರು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಕಂಪ್ಯೂಟರ್ ಸಾಕ್ಷರತ ಕೋಶ ಜಂಟಿಯಾಗಿ ಏರ್ಪಡಿಸಿದ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ ದಲ್ಲಿ ಮುಖ್ಯ ಅತಿಥಿಗಳಾಗಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು […]
ಆಚ್ಲಾಡಿ ಗ್ರಾಮದ ಸೊಬಗು
ಕನ್ನಡ ಕರಾವಳಿ ಪ್ರಕ್ರತಿಯ ರಮಣೀಯ ತಾಣ. ಒಂದೆಡೆ ಪಶ್ಚಿಮ ಘಟ್ಟದ ಸಾಲಾದರೆ, ಇನ್ನೊಂದೆಡೆ ಕಡಲ ಕಿನಾರೆ ಕರಾವಳಿಗೆ ಸಾಕಷ್ಟು ಮೆರುಗು ನೀಡಿದೆ. ಸದಾ ಹಸಿರುಟ್ಟ ಭೂತಾಯಿ ಇಲ್ಲಿ ಸಂತಸದ ನಗೆ ಬೀರುತ್ತಿದ್ದಾಳೆ. ವಿದ್ಯಾ ದೇವತೆ ಕೂಡ ಇಲ್ಲಿ ಪ್ರಸನ್ನಳಾಗಿದ್ದಾಳೆ ಎನ್ನುವುದು ಹೆಮ್ಮೆ ವಿಷಯ . ಇಂತಹ ಪುಣ್ಯ ಭೂಮಿಯಲ್ಲಿನ ಜನ ಅನಾದಿ ಕಾಲದಿಂದಲೂ ದೈವ ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಉಡುಪಿ ಹಾಗೂ ದಕ್ಷಿಣ ಕನ್ನಡ ಹತ್ತು ಹಲವು ಪುರಾತನ […]
ಇಂಡಿಯ ಬುಕ್ ಅಫ್ ರೆಕಾರ್ಡ್ ಸಾಧಕಿ ಬಾಲ ಪ್ರತಿಭೆ ಅಗಮ್ಯ ಎಂ ಶೆಟ್ಟಿ ಯನ್ನು ಅಭಿನಂದಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ವಂಡ್ಸೆ (ಡಿ,2): ಉಪ್ಪುಂದದ ನಿವಾಸಿ , ಉದ್ಯಮಿ ಶ್ರೀ ಗುರುದತ್ತ ಶೆಟ್ಟಿ ಹಾಗೂ ಶ್ರೀಮತಿ ಮಮತಾ ಶೆಟ್ಟಿ ದಂಪತಿಯ ಒಂದು ವರ್ಷದ ಆರು ತಿಂಗಳ ಪುತ್ರಿ ಅಗಮ್ಯ ಎಂ ಶೆಟ್ಟಿ ತನ್ನ ವಿಶೇಷ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯಿಂದ ಭಾರತದ ಪ್ರತಿಷ್ಠಿತ ಇಂಡಿಯ ಬುಕ್ ಅಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದಾರೆ . ಈ ಬಾಲಪ್ರತಿಭೆಯ ವಿಶೇಷ ಸಾಧನೆಯನ್ನು ಗುರುತಿಸಿ ಬೈಂದೂರು ಶಾಸಕ ಬಿ ಎಂ ಸುಕುಮಾರ ಶೆಟ್ಟಿಯವರು ತಮ್ನ ಸ್ವಗ್ರಹದಲ್ಲಿ ಅಗಮ್ಯ […]