ಮಲ್ಪೆ (ಡಿ,03): ಮಲ್ಪೆ ಮೀನಿಗಾರಿಕಾ ಬಂದರಿನಲ್ಲಿ ಡಿ,02 ರ ತಡರಾತ್ರಿ 2.30.ಗಂಟೆಗೆ ಆಂಧ್ರಪ್ರದೇಶ ಮೂಲದ ಮೀನುಗಾರ ಲಕ್ಷ್ಮಣ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ವಿಷಯ ತಿಳಿದ ಆಪತ್ಭಾಂದವ ಈಶ್ವರ ಮಲ್ಪೆ ತಕ್ಷಣ ಬೋಟಿನ ಬಳಿ ತೆರಳಿ ರಕ್ಣಿಸುವುದರ ಜೊತೆಗೆ ಪ್ರಥಮ ಚಿಕಿತ್ಸೆ ನೀಡಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು.ಅಲ್ಲಿನ ವೈದ್ಯರು ಹಾಗೂ ಅವರ ತಂಡ ಲಕ್ಷ್ಮಣ್ ರವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.ಉಡುಪಿ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ತುರ್ತು […]
Year: 2021
ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಿವಿಧ ವೇದಿಕೆಗಳ ಉದ್ಘಾಟನೆ
ಕುಂದಾಪುರ (ಡಿ, 02) : ವಿದ್ಯಾರ್ಥಿ ಬದುಕಿನಲ್ಲಿ ವೈವಿಧ್ಯಮಯ ವೇದಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇರುವ ಸಮಯವನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು. ಔದ್ಯೋಗಿಕವಾಗಿ ಎತ್ತರದ ಸ್ಥಾನವೇರಲು ಇದೆಲ್ಲ ಬಹುದೊಡ್ಡ ಮೆಟ್ಟಿಲಾಗುತ್ತದೆ. ಈ ಕಾಲೇಜು ಅಪರೂಪದ ಈ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವುದು ಶ್ಲಾಘನೀಯ, ಇದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ ಎಂದು ಕನ್ನಡ ಜಾನಪದ ಪರಿಷತ್, ಉಡುಪಿ ಘಟಕದ ಅಧ್ಯಕ್ಷರಾದ ಡಾ.ಗಣೇಶ ಗಂಗೊಳ್ಳಿ ಹೇಳಿದರು. ಅವರು ಕಾಲೇಜಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳನ್ನು ಡಿಸೆಂಬರ್ 02ರಂದು ಉದ್ಘಾಟಿಸಿ […]
ಎಕ್ಸಲೆಂಟ್ ವಿದ್ಯಾಸಂಸ್ಥೆ ಸುಣ್ಣಾರಿ: ಸುನಾದ ಸಂಗಮ- ಸಾಂಸ್ಕೃತಿಕ ಕಲರವ ಉದ್ಘಾಟನೆ
ಕುಂದಾಪುರ(ಡಿ,02): ಸುಣ್ಣಾರಿಯ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೊಸ್ಕರ ಸುನಾದ ಸಂಗಮ ಎನ್ನುವ ವಿನೂತನ ಕಾರ್ಯಕ್ರಮದ ಉದ್ಘಾಟನೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡ್ರಾಮಾ ಜೂನಿಯರ್ ಖ್ಯಾತಿಯ ಸಿಂಚನ ಕೋಟೇಶ್ವರ ಯವರು ಪ್ರತಿಯೊಂದು ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದಾಗ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಕ್ಕಂತಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ. ಎಚ್. ರಮೇಶ್ ಶೆಟ್ಟಿ ಯವರು ಪ್ರಾಸ್ತವಿಕ […]
ಮೂಡ್ಲಕಟ್ಟೆ ಎಂ ಐ ಟಿ: ಯೂತ್ ರೆಡ್ ಕ್ರಾಸ್ ಘಟಕ ಉದ್ಘಾಟನೆ
ಕುಂದಾಪುರ(ಡಿ .02): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಸಹಯೋಗದೊಂದಿಗೆ ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕ್ ಘಟಕ ಸಭಾಪತಿ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವೈಖರಿಯನ್ನು , ಅದರ ಮಹತ್ವವನ್ನು ವಿವರಿಸುತ್ತ ಇಂದಿನ ಯುವ ಪೀಳಿಗೆ ಸಮಾಜಮುಖಿ ಕೆಲಸಗಳಲ್ಲಿ ಸಾದ್ಯವಾದಷ್ಟು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು […]
ಭಾವಗೀತೆ ಸ್ಪರ್ಧೆ:ಅಕ್ಷತಾ ವಿನಯ್ ಪ್ರಥಮ ಸ್ಥಾನ
ಗಂಗೊಳ್ಳಿ (ಡಿ,2): ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ ನಡೆದ ರೋಟರಿ 3182ನ ಜಿಲ್ಲಾ ರೋಟರಿ ಸಾಂಸ್ಕೃತಿಕ ಸ್ಪರ್ಧೆ 2021-22ರ ಏಕವ್ಯಕ್ತಿ ಭಾವಗೀತೆ ಸ್ಪರ್ಧೆಯಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ನ ಸದಸ್ಯೆ ಅಕ್ಷತಾ ವಿನಯ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಡಿ.10 ರಂದು ಉತ್ತಮದಿಂದ ಅತ್ಯುತ್ತಮ ಶಿಕ್ಷಕರಾಗುವತ್ತ ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮ
ಉಡುಪಿ (ಡಿ,2): ಶಿಕ್ಷಕ ವೃತ್ತಿಯನ್ನು ಸಮಾಜದ ಶ್ರೇಷ್ಠ ವೃತ್ತಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ದೇಶದ ಭವಿಷ್ಯದ ಪ್ರಜೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ಕೊಂಡೊಯ್ಯುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ. ಪರಿಣಾಮಕಾರಿ ಬೋಧನಾಕಲೆಯೂ ಶಿಕ್ಷಕ ವೃತ್ತಿಯ ಅಗತ್ಯತೆಗಳಲ್ಲೊಂದು. ಶಿಕ್ಷಕರು ಇನ್ನೂ ಒಳ್ಳೆಯ ರೀತಿಯಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ಬೋಧನೆ ಮಾಡುವುದರ ಕುರಿತು ಒಂದು ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮವನ್ನು ಕುತ್ಯಾರಿನ ಸೂರ್ಯ ಚೈತನ್ಯ ವಿದ್ಯಾಸಂಸ್ಥೆ ಡಿ,10 ರ ಶುಕ್ರವಾರದಂದು ಹಮ್ಮಿಕೊಂಡಿದ್ದು […]
ಯುವ ಜನಾಂಗ ದಾರಿ ತಪ್ಪಬಾರದು : ಶ್ರೀಮತಿ ನಳಿನಾಕ್ಷಿ
ಕುಂದಾಪುರ (ಡಿ ,2): ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ ತಪ್ಪಬಾರದು. ಜೀವನದ ನಿರ್ಣಾಯಕ ಘಟ್ಟದಲ್ಲಿ ಲೈಂಗಿಕ ಆಸಕ್ತಿಗಳು ಬದುಕನ್ನು ಪ್ರಪಾತಕ್ಕೆ ತಳ್ಳುವಂತಾಬಾರದು ಎಂದು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಕೌನ್ಸಿಲರ್ ಶ್ರೀಮತಿ ನಳಿನಾಕ್ಷಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆಯಂದು ಆಯೋಜಿಸಿದ ಏಡ್ಸ್ ಜಾಗೃತಿ […]
ಶ್ರೀ ಶೇಜೇಶ್ವರವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಡಿ,1): ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ,ಶಿವಪ್ಪನಾಯಕ ಅರಮನೆ ಶಿವಮೊಗ್ಗ ಇದರ ಸಹಾಯಕ ನಿರ್ದೇಶಕರು ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಧಾರವಾಡ ಇದರ ಉಪನಿರ್ದೇಶಕ(ಪ್ರಭಾರ)ರಾಗಿರುವ ಶ್ರೀ ಶೇಜೇಶ್ವರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ಹನುಮನಾಯಕ ಇವರ ಮಾರ್ಗದರ್ಶನದಲ್ಲಿ “ಚಿತ್ರದುರ್ಗ ಜಿಲ್ಲೆಯ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಭೂಗೋಳ ; ಒಂದು ಅಧ್ಯಯನ(ಪೂರ್ವ ಇತಿಹಾಸದ ಕಾಲದಿಂದ ಕ್ರಿ.ಶ 18ನೇ ಶತಮಾನದವರೆಗೆ)” ಎಂಬ ವಿಷಯದ ಕುರಿತು ಸಾದರಪಡಿಸಿದ […]
ಶ್ರೇಷ್ಠ ಆರ್ ಶೇಟ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಗಂಗೊಳ್ಳಿ(ನ ,30) : ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ನಡೆಸಲ್ಪಡುವ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿನ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೇಷ್ಠ ಆರ್ ಶೇಟ್ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಚೆಫ್ ಟಾಕ್ ಪ್ರೈವೇಟ್ ಲಿಮಿಟೆಡ್ : ಕೋಲಾರದ ಶಾಖೆ ಉದ್ಘಾಟನೆ
ಕುಂದಾಪುರ (ನ,30): ಗುಣಮಟ್ಟದ ಆಹಾರ ಮತ್ತು ಆತಿಥ್ಯದಲ್ಲಿ ದೇಶದಾದ್ಯಂತ ಹೆಸರುವಾಸಿಯಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದ ಚೆಫ್ ಟಾಕ್ ಪ್ರೈವೇಟ್ ಲಿಮಿಟೆಡ್ ನ ಕೋಲಾರ ಶಾಖೆ ಇತ್ತೀಚೆಗೆ ಉದ್ಘಾಟನೆಗೊಂಡಿತು. ಕೋಲಾರದ ನರಸಾಪುರದಲ್ಲಿನ ಶಾಖೆಯ ಉದ್ಘಾಟನೆಯಲ್ಲಿ ಮಾಜಿ ಶಾಸಕರಾದ ಶ್ರೀ ವರ್ತೂರ್ ಪ್ರಕಾಶ್ ,ಹಾಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಗೋವಿಂದರಾಜು ಹಾಗೂ ಶ್ರೀ ಜೈನ ಯಕ್ಷೇಶ್ವರಿ ಮತ್ತು ಶ್ರೀ ಶನೇಶ್ವರ ಪಾತ್ರಿಗಳಾದ ವಿಜಯ್ ಪೂಜಾರಿ ಉಪ್ಪುಂದ ರವರು ಉಪಸ್ಥಿತರಿದ್ದು […]