ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಕುಂದಾಪುರ ಇದರ ಹವಾನಿಯಂತ್ರಿತ ನವೀಕೃತ ಶಾಖೆಯನ್ನು ಬೈಂದೂರಿನ ಶಾಸಕ ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಗ್ರಾಹಕರ ವಿಶ್ವಾಸ ಗಳಿಸಿ ಯಶಸ್ಸಿನತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಹೊಂದಿ ಸೊಸೈಟಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅವರು ಹೇಳಿದರು.
Year: 2021
ಯಕ್ಷಗಾನದ ಅನರ್ಘ್ಯ ರತ್ನ ಡಾ. ಶ್ರೀಧರ್ ಭಂಡಾರಿ ನಿಧನ
ಉಡುಪಿ( ಫೆ:19) ತೆಂಕುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ ಡಾ.ಶ್ರೀಧರ್ ಭಂಡಾರಿ(73 ) ಯವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಇವರು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ಗಣಮಣಿ ಪಾತ್ರಕ್ಕೆ ಹೊಸ ಆಯಾಮ ನೀಡಿರುತ್ತಾರೆ.ಅಭಿಮನ್ಯು,ಸುಧನ್ವ ,ಕ್ರಷ್ಣ ಮುಂತಾದ ಪುಂಡುವೇಷಗಳಿಗೆ ಹೆಸರುವಾಸಿಯಾಗಿದ್ದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬನ್ನೂರು ನಿವಾಸಿಯಾಗಿದ್ದು, 2019ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಧರ್ಮಸ್ಥಳ ಮೇಳದ […]
ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ಸ್ಥಗಿತ ವಿರೋಧಿಸಿ ಪ್ರತಿಭಟನೆಗೆ ಸಜ್ಜು
ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸ್ಥಗಿತ ವಿರೋಧಿಸಿ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಫೆ. 22ರಂದು ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ಗೆ ಕರೆ ನೀಡಿದ್ದು, ನಾಗರೀಕರು ಹಾಗೂ ಸ್ಥಳೀಯ ಹಲವಾರು ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.
ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕದ ಕಛೇರಿಗೆ ಶ್ರೀ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಭೇಟಿ
ಬೈಂದೂರು (ಫೆ – 18) : ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ, ಬೈಂದೂರು – ಶಿರೂರು ಘಟಕದ ಯಡ್ತರೆಯ ಆಡಳಿತ ಕಛೇರಿಗೆ ಫೆಬ್ರವರಿ 17 ರಂದು ಶ್ರೀ ನಿಜಶರಣ ಚೌಡಯ್ಯನವರ ಗುರುಪೀಠ ಶ್ರೀಕ್ಷೇತ್ರ ನರಸೀಪುರದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಭೇಟಿನೀಡಿ, ಸಂಘಟನೆಯ ಸದಸ್ಯರುಗಳಿಗೆ ಆಶೀರ್ವದಿಸಿ,ಮಂತ್ರ ದಕ್ಷತೆ ನೀಡಿದರು. ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕ ಅಧ್ಯಕ್ಷ ರವಿರಾಜ ಚಂದನ್ ಕಳವಾಡಿ, […]
ಮನಿಗ್ ಯಾರಾರು ನೆಂಟ್ರ ಬಂದಾಳಿಕೆ! (ಕುಂದಗನ್ನಡದ ಲೇಖನ)
ಮೂರ ಗಂಟಿಯಿಂದ ಕಾದ್ ಕಾದ್ ಸಾಕಾಯ್ತ್.. ಇವತ್ ಬತ್ರೊ ಇಲ್ಯೊ…..?? 5 ಗಂಟಿ ಬಸ್ಸಿಗಾರು ಬಂದಿರ್ ಸಾಕಿದ್ದಿತ್.
ಇ.ಸಿ .ಆರ್. ಕಾಲೇಜು : ಪ್ಲಾಸ್ಟಿಕ್ ಮುಕ್ತ ಕಡಲ ತಡಿ ಅಭಿಯಾನ
ಇಲ್ಲಿನ ಇ .ಸಿ .ಆರ್. ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನ ಎನ್ ಎಸ್ ಎಸ್, ನೇಚರ್ ಕ್ಲಬ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 16 ರಂದು ಕೋಟ ಪಡುಕೆರೆ ಕಡಲ ತಡಿಯುದ್ದಕ್ಕೂ “ಪ್ಲಾಸ್ಟಿಕ್ ಮುಕ್ತ ಕಡಲ ತಡಿ ” ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಧಾರಿಣಿ ಕೆ. ಎಸ್. ಗೆ ಸ್ವರ ಕುಡ್ಲ ಸೀಸನ್ – 3 ಪ್ರಶಸ್ತಿ
ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಮಂಗಳೂರು ಇವರು ಫೆಬ್ರವರಿ 10ರಂದು ಆಯೋಜಿಸಿದ “ಸ್ವರ ಕುಡ್ಲ” ಸೀಸನ್ 3 ಅಂತರ್ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಧಾರಿಣಿ ಕೆ.ಎಸ್ ಕುಂದಾಪುರ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಫೆ : 21 ರಂದು ತೋನ್ಸೆ ರಕ್ತ ದಾನ ಶಿಬಿರ
ಉಡುಪಿ ಹೆಲ್ಪ್ ಲೈನ್ (ರಿ), ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಇವರ ನೇತೃತ್ವದಲ್ಲಿ ,ರಕ್ತ ನಿಧಿ ಕೇಂದ್ರ- ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಫೆಬ್ರವರಿ 21ರಂದು ಕೆಮ್ಮಣ್ಣು ಲಿಟ್ಲ್ ಫ್ಲವರ್ ಚರ್ಚ್ ಹಾಲ್ ನಲ್ಲಿ ಬ್ರಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಮೂಡ್ಲಕಟ್ಟೆ ಎಂ ಐ ಟಿ : ಎಂ.ಬಿ.ಎ. ವಿಧ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಾಗಾರ
ಪ್ರಥಮ ವರ್ಷದ ಎಂ.ಬಿ.ಎ ವಿಧ್ಯಾರ್ಥಿಗಳಿಗೆ ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ಪಂಚಾಯತ್ ಗೆ ಎಂ.ಬಿ.ಎ ವಿಧ್ಯಾರ್ಥಿಗಳ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.