ಮುಳ್ಳಿಕಟ್ಟೆ(ಫೆ,27 ): ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿನಮಕ್ಕಿ ಗೋಳಿಕಟ್ಟೆಯ ಸ್ವಾತಂತ್ರ್ಯ ಹೋರಾಟಗಾರಮಂಕಿ ದಿ.ರಾಮಣ್ಣನವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎನ್ನುವ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ಫೆ.27ರಂದು ನಡೆಯಿತು. ಕಾರ್ಯಕ್ರಮದಲ್ಲಿ ನಾಮ ಫಲಕವನ್ನು ಮೊಗವೀರ ಮಹಾಜನ ಸೇವಾ ಸಂಘ (ರಿ), ಬಗ್ವಾಡಿ ಹೋಬಳಿ ,ಕುಂದಾಪುರ ಶಾಖೆಯ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಹಟ್ಟಿಯಂಗಡಿ ಯವರು ಅನಾವರಣಗೈದರು. ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಹಾಗೂ ಮಂಕಿ ರಾಮಣ್ಣರ ಸೇವೆಯ […]
Day: February 28, 2022
ಡಾ|ಬಿ. ಬಿ ಹೆಗ್ಡೆ ಕಾಲೇಜು : ಮಾತೃ ಭಾಷಾ ದಿನಾಚರಣೆ
ಕುಂದಾಪುರ (ಫೆ.25): ಡಾ| ಬಿ .ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ ಕನ್ನಡ ವಿಭಾಗದ ಆಯೋಜನೆಯಲ್ಲಿ ಮಾತೃ ಭಾಷಾ ದಿನಾಚರಣೆಯನ್ನು ಫೆ.25 ರಂದು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಕ್ರಷ್ಣಮೂರ್ತಿ ಡಿ.ಬಿ ಮಾತನಾಡಿ ಸಂಸ್ಕೃತಿ ,ಸಂಪ್ರದಾಯ, ಆಚರಣೆಗಳು ಮರೆಯಾದಂತೆ ಭಾಷೆಯ ಪದಗಳು ಮರೆಯಾಗುತ್ತದೆ . ಆ ನಿಟ್ಟಿನಲ್ಲಿ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸುವ […]
“ದೇಗುಲವೀ ದೇಹ”
ಹೃದಯವು ಬಲೂನಲ್ಲ ….ಆದರೂ ಗಾಳಿ ತುಂಬಿಸಿಕೊಳ್ಳುತ್ತೆರಕ್ತವು ನೀರಲ್ಲ …ಆದರೂ ದೇಹದೊಳಗೆ ಹರಿಯುತ್ತಿರುತ್ತೆಹೊಟ್ಟೆಯು ಚೀಲವಲ್ಲ…ಆದರೂ ಆಹಾರ ತುಂಬಿಸಿಕೊಳ್ಳುತ್ತೆಕೈಕಾಲುಗಳು ಯಂತ್ರವಲ್ಲ…ಆದರೂ ಪ್ರತಿಕ್ಷಣವೂ ಚಲನೆಯಲ್ಲಿರುತ್ತೆ ಎಲುಬುಗಳು ಕಬ್ಬಿಣವಲ್ಲ …ಆದರೂ ದೇಹಕ್ಕೆ ರಕ್ಷಣೆ ನೀಡುತ್ತೆಕೈ-ಬೆರಳುಗಳು ಅಳತೆಯ ಕೋಲಲ್ಲ…ಆದರೂ ಅಳತೆಗೆ ಉಪಯೋಗವಾಗುತ್ತೆಚರ್ಮ ಕಂಬಳಿಯಲ್ಲ…..ಆದರೂ ಬಿಸಿಲು ಮಳೆ ಚಳಿಗೆ ಕವಚವಾಗುತ್ತೆಕಣ್ಗಳೆರಡು ಸಮುದ್ರವಲ್ಲ….ಆದರೂ ದುಃಖದಿ ಉಕ್ಕಿ ಹರಿಯುತ್ತೆಮೆದುಳು ಸಾಧನವಲ್ಲ… ಆದರೂ ದೇಹದಾಂಗವ ಶೋಧಿಸುತ್ತಿರುತ್ತೆ… ಕವನ : ಜಗದೀಶ್ ಮೇಲ್ಮನೆ ಉಪ್ಪುಂದ