ಗಂಗೊಳ್ಳಿ(ಜು,21): ನಾವು ಮಾಡುವ ಸೇವೆ ಅರ್ಹ ವ್ಯಕ್ತಿಗಳಿಗೆ ತಲುಪಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದ ಸೇವೆಯಿಂದ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ರೋಟರಿ ಕ್ಲಬ್ ನ ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಉಮೇಶ್ ಪುತ್ರನ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಗಂಗೊಳ್ಳಿಯ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಮಾಜ ಸೇವಾ […]
Month: July 2022
ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಕುಂದಾಪುರ(ಜು,19): ನೂತನವಾಗಿ ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೈಂದೂರು ಶಾಸಕರಾದ ಶ್ರೀ ಬಿ.ಎಂ .ಸುಕುಮಾರ ಶೆಟ್ಟಿಯವರು ಧರ್ಮಸ್ಥಳದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ದೇಶವ್ಯಾಪಿ ಹಲವು ಜನಪರ ಯೋಜನೆಗಳನ್ನು ವಿಸ್ತರಿಸಲು ಇದೀಗ ಅನುವು ಮಾಡಿಕೊಟ್ಟ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಸಿ.ಎ ಪರೀಕ್ಷೆಯಲ್ಲಿ ತನುಷಾ ಡಿ.ರಾವ್ ಉತ್ತೀರ್ಣ
ಕುಂದಾಪುರ (ಜು,15); ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಮೇ 2022ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕೋಟೇಶ್ವರದ ತನುಷಾ ಡಿ.ರಾವ್ ಉತ್ತೀರ್ಣರಾಗಿದ್ದಾರೆ. ಇವರು ಕುಂದಾಪುರದ ಸಿ. ಎ ಎನ್. ಶಾಂತರಾಮ್ & ಕೋ ಇಲ್ಲಿ ತರಬೇತಿ ಪಡೆದಿರುತ್ತಾರೆ. ಇವರು ಕೋಟೇಶ್ವರದ ಕುಂಬ್ರಿ ಯ ದಿನೇಶ್ ಚಂದ್ರ ರಾವ್ ಹಾಗೂ ಮಮತಾ ಎಸ್ ರಾವ್ ದಂಪತಿಯ ಪುತ್ರಿ ಮತ್ತು ಕುಂದಾಪುರದ ಪ್ರತಿಷ್ಠಿತ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಹಳೆವಿದ್ಯಾರ್ಥಿ.
ಗಂಗೊಳ್ಳಿ:ರೋಟರಿ ಕ್ಲಬ್ ವತಿಯಿಂದ ವನಮೋತ್ಸವ
ಗಂಗೊಳ್ಳಿ (ಜು,15): ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಮೈದಾನದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ,ಕಾರ್ಯದರ್ಶಿ ಚಂದ್ರಕಲಾ ಟಿ. ಮತ್ತು ರೋಟರಿ ಕ್ಲಬ್ ಸದಸ್ಯರಾದ ಲಕ್ಷ್ಮಿಕಾಂತ್ ಮಡಿವಾಳ, ನಾರಾಯಣ ನಾಯ್ಕ್, ಜನಾರ್ದನ ಪೆರಾಜೆ,ರಾಮನಾಥ ನಾಯಕ್, ಗಿರೀಶ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಗಂಗೊಳ್ಳಿ : ಸಿ.ಎ ಪರೀಕ್ಷೆಯಲ್ಲಿ ಸ್ವಸ್ತಿಕ್ ಶೆಣೈ ಉತ್ತೀರ್ಣ
ಗಂಗೊಳ್ಳಿ(ಜು,15): ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಮೇ 2022ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸ್ವಸ್ತಿಕ್ ಶೆಣೈ ಉತ್ತೀರ್ಣರಾಗಿದ್ದಾರೆ. ಇವರು ಕುಂದಾಪುರದ ಶಾನುಭಾಗ್ ಹೆಗಡೆ ಅಂಡ್ ಅಸೋಸಿಯೇಟ್ಸ್ ನಲ್ಲಿ ತರಬೇತಿ ಪಡೆದಿರುತ್ತಾರೆ. ಗಂಗೊಳ್ಳಿಯ ಉದ್ಯಮಿ ಟಿ. ವೆಂಕಟೇಶ್ ದೇವಣ್ಣ ಶೆಣೈ ಮತ್ತು ವಿಜಯಲಕ್ಷ್ಮಿ ಶೆಣೈ ದಂಪತಿಯ ಪುತ್ರನಾಗಿರುವ ಇವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ.
ಆರ್. ಎನ್. ಶೆಟ್ಟಿ ಪಿ ಯು ಕಾಲೇಜು ಕುಂದಾಪುರ: ಪ್ರಾಂಶುಪಾಲರಿಗೆ ಅಭಿನಂದನೆ
ಕುಂದಾಪುರ(ಜು,15): ಹಲವು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆಸಲ್ಲಿಸುತಿರುವ ಕುಂದಾಪುರದ ಆರ್. ಎನ್. ಶೆಟ್ಟಿ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಕುಂದಾಪುರದ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ . ಈ ಹಿನ್ನೆಲೆಯಲ್ಲಿ ಕಾಲೇಜಿನ ಭೋದಕ -ಭೋಧಕೇತರ ಸಿಬ್ಬಂದಿಗಳು ಶುಭಕೋರಿದರು .
ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ :ಸಿಎ ಪರೀಕ್ಷೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರ(ಜು,15): ಸಿಎ /ಸಿಎಸ್ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ರಾಷ್ಟ್ರೀಯ ಮಟ್ಟದ ಅನೇಕ ರ್ಯಾಂಕ್ ಗಳನ್ನು ಪಡೆದ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಕುಂದಾಪುರ. ಸಿಎ ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಂಸ್ಥೆಯ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಜುಲೈ15ರಂದು ಕುಂದೇಶ್ವರ ರಸ್ತೆಯ ಸಂಸ್ಥೆಯ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿತು. ಇನ್ಸ್ಟಿಟ್ಯೂಟ್ ಆಫ್ ಚಾರ್ಟ್ ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ 2022 ರಲ್ಲಿ ನಡೆಸಿದ […]
ಪರಸ್ಪರ ಸಹಕಾರದಿಂದ ಸೇವೆ: ಲ. ಪ್ರಕಾಶ ಟಿ. ಸೋನ್ಸ್
ಕುಂದಾಪುರ(ಜು,15):ಜಗತ್ತಿನ ಅತಿ ದೊಡ್ಡ ಸೇವಾ ಸಂಘಟನೆಯಾದ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ಅಗತ್ಯವಿರುವವರಿಗೆ ಬೇಕಾದ ಸೇವೆಯನ್ನು ನೀಡುವುದು. ಕುಂದಾಪುರ ಲಯನ್ಸ್ ಕ್ಲಬ್ ಕಳೆದ50 ವರ್ಷಗಳಿಂದ ವಿವಿಧ ಸೇವೆಗಳನ್ನು ಸೇವೆಗಳನ್ನು ನೀಡುತ್ತಾ ನೊಂದವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತಾ ಬಂದಿದೆ. ಇನ್ನು ಮುಂದೆಯು ಕೂಡಾ ಒಳ್ಳೆಯ ಸೇವೆ ಜನತೆಗೆ ಈ ಕ್ಲಬಿನಿಂದ ಸಿಗುವಂತಾಗಲಿ ಎಂದು ಲಯನ್ಸ್ 317ಸಿ ಜಿಲ್ಲೆಯ ಮಾಜಿ ಗವರ್ನರ್ ಲ. ಪ್ರಕಾಶ ಟಿ. ಸೋನ್ಸ್ ಲಯನ್ ಕ್ಲಬ್ ಕುಂದಾಪುರದ […]
ತ್ರಾಸಿ:ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರ ಹೆಬ್ಬಾರ್ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ತ್ರಾಸಿ(ಜು,07): ಸ್ವರಾಜ್ಯ ೭೫” ಇದರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆಯ ಅಭಿಯಾನದ 14ನೇ ಕಾಯ೯ಕ್ರಮ ಬೈಂದೂರು ತಾಲೂಕು ವ್ಯಾಪ್ತಿಯ ತ್ರಾಸಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರ ಹೆಬ್ಬಾರ್ ಮನೆಯಲ್ಲಿ ಜುಲೈ,03 ರಂದು ನಡೆಯಿತು. ನಾಮ ಫಲಕ ಅನಾವರಣವನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿರುವ ಶ್ರೀಯುತ ನೀಲಾವರ ಸುರೇಂದ್ರ ಅಡಿಗರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕೆಯ ಮಿತ್ರರಾದ ಶ್ರೀ ಜನಾರ್ದನ ಮರವಂತೆ ಇವರು ವಹಿಸಿದ್ದರು. ಕಾರ್ಯಕ್ರಮದ ಅತಿಥಿಯಾಗಿ ಶ್ರೀ ಶ್ರೀಧರ್ […]
ಲಾ & ಪ್ರ್ಯಾಕ್ಟೀಸ್ ಆಫ್ ಬ್ಯಾಂಕಿಂಗ್ ಪುಸ್ತಕ ಬಿಡುಗಡೆ
ಕುಂದಾಪುರ (ಜು,8):ಮಂಗಳೂರು ವಿ.ವಿ ಬಿ.ಕಾಂ ದ್ವೀತಿಯ ಸೆಮೆಸ್ಟರ್ ಹೊಸ ಶಿಕ್ಷಣ ನೀತಿಗೆ ಅನುಗುಣವಾದ ಲಾ & ಪ್ರ್ಯಾಕ್ಟೀಸ್ ಆಫ್ ಬ್ಯಾಂಕಿಂಗ್ ಪುಸ್ತಕವನ್ನು ಬೈಂದೂರು ಶಾಸಕ & ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿ ತಮ್ಮ ಗ್ರಹ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು. ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಣ ಕ್ಷೇತ್ರದಲ್ಲಿ 26 ವರ್ಷಗಳ ಅನುಭವ ಹೊಂದಿರುವ ಪ್ರೋ.ಕೆ.ಉಮೇಶ್ ಶೆಟ್ಟಿ ಹಾಗೂ ತ್ರಿಶಾ ಕಾಲೇಜು ಉಡುಪಿ ಇದರ ಉಪನ್ಯಾಸಕರಾದ ಶ್ರೀ ಸಂತೋಷ ಶೆಟ್ಟಿಯವರು ಈ […]