ಕುಂದಾಪುರ (ಜು,15); ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಮೇ 2022ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕೋಟೇಶ್ವರದ ತನುಷಾ ಡಿ.ರಾವ್ ಉತ್ತೀರ್ಣರಾಗಿದ್ದಾರೆ.
ಇವರು ಕುಂದಾಪುರದ ಸಿ. ಎ ಎನ್. ಶಾಂತರಾಮ್ & ಕೋ ಇಲ್ಲಿ ತರಬೇತಿ ಪಡೆದಿರುತ್ತಾರೆ. ಇವರು ಕೋಟೇಶ್ವರದ ಕುಂಬ್ರಿ ಯ ದಿನೇಶ್ ಚಂದ್ರ ರಾವ್ ಹಾಗೂ ಮಮತಾ ಎಸ್ ರಾವ್ ದಂಪತಿಯ ಪುತ್ರಿ ಮತ್ತು ಕುಂದಾಪುರದ ಪ್ರತಿಷ್ಠಿತ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಹಳೆವಿದ್ಯಾರ್ಥಿ.