ಕುಂದಾಪುರ (ಅ ,28) : ಕನ್ನಡದ ಅಸ್ಮಿತೆಯನ್ನು ಸಾರುವ ವಿನೂತನ ಅಭಿಯಾನ ʼಕೋಟಿ ಕಂಠ ಗಾಯನʼವು ಅ.28 ರಂದು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು. ಕನ್ನಡ ,ನಾಡು -ನುಡಿಯ ಮಹತ್ವವನ್ನು ಸಾರುವ ಆರು ಹಾಡುಗಳನ್ನು ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಒಕ್ಕೊರಲಿನಿಂದ ಹಾಡಿ ಕನ್ನಡಾಭಿಮಾನವನ್ನು ಮೆರೆದರು.
Day: October 29, 2022
ಕೋಟಿ ಕಂಠ ಗೀತ ಗಾಯನಕ್ಕೆ ಸಾಕ್ಷಿಯಾದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಶಾಲೆ ಕುಂದಾಪುರ
ಕುಂದಾಪುರ( ಅ,29): ನಾಡು ನುಡಿಯ ಕುರಿತು ಅಭಿಮಾನ ಮೂಡಿಸುವ , ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸಿದ “ಕೋಟಿ ಕಂಠ ಗೀತಗಾಯನ” ಕಾರ್ಯಕ್ರಮವನ್ನು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಂಶುಪಾಲರನ್ನು ಒಳಗೊಂಡoತೆ ಸಮೂಹ ಗೀತಗಾಯನ ಅ.28 ರಂದು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳೆಲ್ಲರೂ ಸಮವಸ್ತ್ರ ಧರಿಸಿ ಶಿಸ್ತು ಬದ್ಧವಾಗಿ ಸರ್ಕಾರವು ನಿಗದಿಪಡಿಸಿದ ಗೀತೆಗಳಾದ ಜಯಭಾರತ ಜನನಿಯ ತನುಜಾತೆ, […]
ಯಕ್ಷ ಕಲಾವಿದ ,ಅಬ್ಬರದ ಮಹಿಷಾಸುರ ಖ್ಯಾತಿಯ ನಂದೀಶ್ ಜನ್ನಾಡಿ
ನವರಸಗಳಿಂದ ಕೂಡಿದ ಒಂದು ಕಲಾ ಪ್ರಕಾರ ಇದೆ ಎಂದಾದರೆ ಅದು ಯಕ್ಷಗಾನ ಮಾತ್ರ. ಹಾಡುಗಾರಿಕೆ, ವೇಷ ಭೂಷಣಗಳ ಒಳಗೊಂಡ ಒಂದು ಸ್ವತಂತ್ರ ಕಲೆಯಾದ ಯಕ್ಷಗಾನ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು, ಕೇರಳದ ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನವನ್ನು ಭಕ್ತಿಯಿಂದ ಆರಾಧನಾ ಕಲೆಯಾಗಿ ನಂಬಿದವರು ಇದ್ದಾರೆ. ಯಕ್ಷಗಾನವು ಮೂರು ತಿಟ್ಟುಗಳು ಬಡಗು ತಿಟ್ಟು, ತೆಂಕುತಿಟ್ಟು , ನಡುತಿಟ್ಟು ಎಂದು ವಿಂಗಡಿಸಲ್ಪಟ್ಟಿದ್ದರೂ ಆದರ ಮೂಲ ತತ್ವಗಳು ಮತ್ತು […]