ಬೆಂಗಳೂರು ( ಅ,31): ಇಲ್ಲಿನ ಕೂಡ್ಲು ಸಮೀಪ ಇರುವ ವಲಸೆ ಕಾರ್ಮಿಕರ ಕೇರಿಯ ಜನರೊಂದಿಗೆ ಟಿಮ್ ಕುಂದಾಪುರಿಯನ್ ತಂಡದವರು ಸಂಭ್ರಮದಿಂದ ದೀಪಾವಳಿ ಹಬ್ಬ ಮತ್ತು ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆ ಆಚರಿಸಿದರು. ಈ ಸಂದರ್ಭದಲ್ಲಿ ಟಿಮ್ ಕುಂದಾಪುರಿಯನ್ ತಂಡದ ಸದಸ್ಯ ಮತ್ತು ಮಾಧ್ಯಮ ನಿರೂಪಕ ರಂಜಿತ್ ಶಿರಿಯಾರ ಮಾತನಾಡಿ ಮಹಾನಗರದ ಒತ್ತಡದ ಜೀವನದ ಮಧ್ಯೆ ಬಿಡುವು ಮಾಡಿಕೊಂಡು ನಿಮ್ಮೊಂದಿಗೆ ನಾವು ನಮ್ಮ ಪೋಷಕರನ್ನು ಕಾಣುತ್ತವೆ. ನಿಮ್ಮ ಮಕ್ಕಳ ಮುಂದಿನ ಶೈಕ್ಷಣಿಕ ಜೀವನ […]
Day: October 31, 2022
ಗಂಗೊಳ್ಳಿ: ಜಿಲ್ಲಾ ಮಟ್ಟದ ಪುರುಷರ ಶೆಟಲ್ ಬ್ಯಾಡ್ಮಿಂಟನ್ ಉದ್ಘಾಟನೆ
ಗಂಗೊಳ್ಳಿ( ಅ,31): ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವಲ್ಲಿ ಪ್ರತಿಯೊಬ್ಬರು ಮನಸ್ಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ತಮ್ಮನ್ನು ಹೆಚ್ಚು ಮುತುವರ್ಜಿಯಿಂದ ತೊಡಗಿಸಿಕೊಳ್ಳಬೇಕಿದೆ ಎಂದು ಲಿಫ್ಟ್ ನ್ ಒಲಿವೆರಾ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ಎಸ್ಎಂಎಲ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಮಟ್ಟದ ಪುರುಷರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಎಸ್ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. […]
ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಹೊಸಂಗಡಿ(ಅ,30): ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ ಇದರ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಪ್ರೌಢ ಶಾಲೆ, ಬಂಗ್ಲೆಗುಡ್ಡೆ ಇಲ್ಲಿ ಅ,29 ರ ಶನಿವಾರ ಉದ್ಘಾಟನೆಗೊಂಡಿತು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಭಾಸ್ಕರ ಶೆಟ್ಟಿ ಇವರು ಶಿಬಿರ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಹಾಗೂ ಸ್ವಾವಲಂಬಿಯಾಗಿ ಬದುಕಬೇಕು, ಹಾಗೆ ಬದುಕಬೇಕಾದರೆ ಎನ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಈ ಕಾರ್ಯಕ್ರಮದ […]
ಆಪದ್ಬಾಂಧವ ಈಶ್ವರ ಮಲ್ಪೆಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಉಡುಪಿ(ಅ.30) : ಸಮಾಜ ಸೇವಕ, ಮುಳುಗು ತಜ್ಞ, ಜೀವರಕ್ಷಕ, ಆಪದ್ಬಾಂಧವ ಉಡುಪಿಯ ಈಶ್ವರ ಮಲ್ಪೆಯವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ . ತಮ್ಮ ವೈಯುಕ್ತಿಕ ಹಾಗೂ ಕೌಟುಂಬಿಕ ಬದುಕಿನ ಸಾಕಷ್ಟು ಸವಾಲುಗಳ ನಡುವೆಯೂ ಜನಸೇವೆ ಮಾಡಬೇಕೆಂದು ಸ್ವಯಂ ಪ್ರೇರಣೆಯಿಂದ, ನಿಸ್ವಾರ್ಥ ಸೇವೆಯಲ್ಲಿ ತಲ್ಲೀನರಾಗಿರುವುದರ ಜೊತೆಗೆ ತುರ್ತು ಆಂಬ್ಯುಲೆನ್ಸ್ ಸೇವೆಯಲ್ಲಿ ನಿರತರಾಗಿ ,ನೀರಿಗೆ ಬಿದ್ದವರನ್ನು ಅಪಾಯದಿಂದ ಪಾರುಮಾಡುವ ,ಹಾಗೆಯೇ ನೀರಿಗೆ ಬಿದ್ದು ನಾಪತ್ತೆಯಾಗಿ ಕಣ್ಮರೆಯಾಗಿರುವ ಅದೆಷ್ಟೋ ಮ್ರತ ದೇಹವನ್ನು […]