ಸುಣ್ಣಾರಿ( ನ ,24): ಸೋಲೆ ಗೆಲುವಿನ ಸೋಪಾನ ಎನ್ನುವ ಮಾತಿನಂತೆ ಸೋಲಿನಿಂದಾಚೆಗೆ ಬರುವುದು ಹೇಗೆ ಎಂದು ನಾವು ತಿಳಿಯಲಿಲ್ಲ ಎoದಾದರೆ ನಾವು ಗೆಲುವನ್ನು ನಿಭಾಯಿಸುವುದು ಕಷ್ಟಸಾಧ್ಯ . ಯಾವ ವ್ಯಕ್ತಿ ತನ್ನ ಜೀವನದಲ್ಲಿ ಸೋತೆ ಇಲ್ಲ ಎಂದರೆ ಅವನು ಜೀವನದ ಹೊಸತನಕ್ಕೆ ಪ್ರಯತ್ನಿಸಿಲ್ಲ ಎಂದರ್ಥ . ಈ ನಿಟ್ಟಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜತೆಗೆ ನಾಯಕತ್ವಗುಣ ಬೆಳೆಸಿಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವ ಗುಣವನ್ನು ಕಲಿಸಬಲ್ಲದು […]
Month: November 2022
ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ
ಕುಂದಾಪುರ(ನ,25): ಸಿಎ/ ಸಿಎಸ್ ಪ್ರೊಫೆಷನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದಾಪುರದ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್ ಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್(SPACE) ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸಿದ ನವೆಂಬರ್ 2022ರ CSEET (ಸಿಎಸ್ ಫೌಂಡೇಶನ್ ) ಪರೀಕ್ಷೆಯಲ್ಲಿ 22 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಶಿಬಾನಿ (147), ಪೂಜಾ […]
ಸಂತ ಮೇರಿ ಮಹಾವಿದ್ಯಾಲಯ ಶಿರ್ವ: ಶೈಕ್ಷಣಿಕ ಅಧ್ಯಾಯನ ಪ್ರವಾಸ
ಶಿರ್ವ(ನ,24): ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಹಾಗೂ ಐಟಿ ಕ್ಲಬ್ ಜಂಟಿಯಾಗಿ ಜ್ಞಾನ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕೇಂಜಾರು ಶ್ರೀದೇವಿ ಸಮೂಹ ಸಂಸ್ಥೆಯಲ್ಲಿ ಏರ್ಪಡಿಸಿದ ಐಓಟಿ ಯೋಜನೆಯ ಅಭಿವೃದ್ಧಿಯ ಕಾರ್ಯಗಾರವನ್ನು ಅಧ್ಯಾಯನ ಮಾಡಲು ಇತ್ತೀಚೆಗೆ ಭೇಟಿ ನೀಡಿದರು. ಮುಖ್ಯ ಅತಿಥಿ ಮಂಗಳೂರಿನ ಐಕ್ಯೂ ಮ್ಯಾಟ್ರಿಕ್ಸ್ ನಿರ್ದೇಶಕ ಅಜಯ್ ಪ್ರಿನ್ಸ್ಟನ್ ಪಿಂಟೋ ರವರು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡುತ್ತಾ , ಐಓಟಿ ಅಭಿವೃದ್ಧಿ […]
ಗಂಗೊಳ್ಳಿ: ಸರಸ್ವತಿ ವಿದ್ಯಾಲಯದಲ್ಲಿ ಸ್ವಯಂ ಅರಿವಿನ ಕಾರ್ಯಗಾರ
ಗಂಗೊಳ್ಳಿ( ನ,21): ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೊದಲು ಆ ಬಗೆಗೆ ನಿರ್ದಿಷ್ಟವಾದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಗುರಿಯ ದಿಕ್ಕಿನಲ್ಲಿ ಶ್ರಮವಹಿಸಿದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದು ಯುವ ಉದ್ಯಮಿ ಶಾರ್ಲೆಟ್ ಲೋಬೊ ಹೇಳಿದರು. ಅವರು ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಇಂಟರಾಕ್ಟ್ ಕ್ಲಬ್ ಇವರ ಸಹಯೋಗದಲ್ಲಿ ಇಲ್ಲಿನ ಪ್ರೌಢಶಾಲಾ ವಿಭಾಗದ ಮಕ್ಕಳಿಗಾಗಿ ನಡೆದ ಸ್ವಯಂ ಅರಿವಿನ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಸಂಪನ್ಮೂಲ […]
ಅಂತರ್ ಜಿಲ್ಲೆ ಲಾಠಿ ತಿರುಗಿಸುವ ಸ್ಪರ್ಧೆಯಲ್ಲಿ ಯಶ್ ರಾಜ್ ಚಂದನ್ ಗೆ ಚಿನ್ನದ ಪದಕ
ಕುಂದಾಪುರ( ನ,21): ಮಹಾರಾಷ್ಟ್ರ ಲಾತೂರು ಜಿಲ್ಲೆಯ ತುಳ್ಜಾಪುರ್ ನಲ್ಲಿ ನೆಡೆದ ಅಂತರ್ ಜಿಲ್ಲೆ ಲಾಠಿ ತಿರುಗಿಸುವ ಸ್ಪರ್ಧೆಯಲ್ಲಿ 22 ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು,ಅದರಲ್ಲಿ ಉಡುಪಿಯ ಬೈಂದೂರು ಮೂಲದ ಯಶ್ ರಾಜ್ ಚಂದನ್ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ಚಿನ್ನದ ಪದಕ ಪಡೆದಿರುತ್ತಾರೆ. ಬೈಂದೂರು ಮೂಲದ ನಟರಾಜ್ ಚಂದನ್ ಮತ್ತು ಶಾರದಾ ಚಂದನ್ ಅವರ ಸುಪುತ್ರರಾಗಿರುವ ಯಶ್ ರಾಜ್ ಚಂದನ್ ಮಹಾರಾಷ್ಟ್ರದ ನೀಲಾಂಗದ ವಿ ಡಿ ಡಿ ನೊಬೆಲ್ ಪಬ್ಲಿಕ್ ಸ್ಕೂಲ್ ನಲ್ಲಿ […]
ಬಂಟರ ಕ್ರೀಡಾ ಮೇಳದ ಸಂಚಾಲಕರಾಗಿ ಶ್ರೀ ಅರುಣ್ ಕುಮಾರ್ ಶೆಟ್ಟಿ ಆಯ್ಕೆ
ಕುಂದಾಪುರ( ನ,19 ): ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ) ಕುಂದಾಪುರ ದಶಮ ಸಂಭ್ರಮ – 2022 ರ ಪ್ರಯುಕ್ತ ಡಿಸೆಂಬರ್ ತಿಂಗಳ ಕೊನೆಯಲ್ಲಿ ಹಮ್ಮಿಕೊಂಡಿರುವ ಅವಿಭಜಿತ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕದ ಬೇರೆ ಬೇರೆ ಅಹ್ವಾನಿತ ತಂಡಗಳ ಬೃಹತ್ ಕ್ರೀಡಾ ಮೇಳದ ಸಂಚಾಲಕರಾಗಿ ಶ್ರೀ ಎಂ. ಭಾಸ್ಕರ್ ಪೈ ಸರ್ಕಾರಿ ಪ್ರೌಢಶಾಲೆ ಗುಜ್ಜಾಡಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಯವರು […]
ಕೈಗಾರಿಕಾ ಕ್ಷೇತ್ರಗಳಲ್ಲಿ ವಿಫುಲ ಅವಕಾಶ : ಶ್ರೀ. ರಾಜ್ ಗಣೇಶ್ ಕಾಮತ್
ಕಾರ್ಕಳ ( ನ,20): ಇಂದಿನ ದಿನಗಳಲ್ಲಿ ಕಾಮರ್ಸ್ ವಿಭಾಗದಲ್ಲಿ C.A, C.S ಮತ್ತು CMA ಕೋರ್ಸ್ಗಳಿಗೆ ಮಹತ್ತರವಾದ ಬೇಡಿಕೆಯಿದೆ. ಅತೀ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಕೋರ್ಸ್ ಎಂದರೆ CMA (ವೆಚ್ಚ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರ) ಕೋರ್ಸ್. ಈ ಕೋರ್ಸ್ನ ಕಲಿಕಾ ಹಂತಗಳು ಹಾಗೂ ಕೋರ್ಸ್ ಮುಗಿಸಿದ ನಂತರ ಉದ್ಯೋಗಾವಕಾಶಗಳು ವಿಪುಲವಾಗಿ ಲಭ್ಯವಾಗಲಿದೆ ಎಂದು ಲೇಖ್ಪಾಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ರಾಜ್ ಗಣೇಶ್ ಕಾಮತ್ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್ ಪದವಿ […]
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಕ್ಸಲೆಂಟ್ ಪ್ರೌಢಶಾಲೆಯ ಕ್ರೀಡಾ ಪಟುಗಳು
ಕುಂದಾಪುರ (ನ ,18): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಕುಂದಾಪುರ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಕ್ಸಲೆಂಟ್ ಪ್ರೌಢಶಾಲೆ ಸುಣ್ಣಾರಿ ಇಲ್ಲಿನ 9 ನೇ ತರಗತಿಯ ವಿದ್ಯಾರ್ಥಿಗಳಾದ ಯತೀಶ್ ಶೆಟ್ಟಿ ಮತ್ತು ಸಿರಿಕಾ ಇವರು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ 7 ನೇ ತರಗತಿಯ ಅಕ್ಷರ್ ಎನ್ ಶೆಟ್ಟಿ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳನ್ನು ಎಂ.ಎಂ ಹೆಗ್ಡೆ ಎಜುಕೇಶನಲ್ […]
ಸರಸ್ವತಿ ವಿದ್ಯಾಲಯದಲ್ಲಿ ಮಹಿಳಾ ಸ್ವರಕ್ಷಣ ತರಬೇತಿ ಕಾರ್ಯಗಾರ
ಗಂಗೊಳ್ಳಿ ( ನ,18): ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಸ್ವರಕ್ಷಣಾ ತಂತ್ರಗಳನ್ನು ಕಲಿತುಕೊಳ್ಳಬೇಕು. ಇದು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಆಪತ್ತಿನ ಕಾಲದಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕವಿತಾ ಎಂ.ಸಿ ಹೇಳಿದರು. ಅವರು ಇಲ್ಲಿನ ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ,ರೋಟರಿ ಕ್ಲಬ್ ಗಂಗೊಳ್ಳಿ, ವೆಂಕಟೇಶ ಕೃಪ ಟ್ರೇಡರ್ಸ್ ಗಂಗೊಳ್ಳಿ ಸುರಭಿ ಡಿಜಿಟಲ್ ಸ್ಟುಡಿಯೋ […]
ಡಾ | ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ನ,18): ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವಗುಣ, ಸಮಯಪ್ರಜ್ಞೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಎನ್.ಎಸ್.ಎಸ್. ಉತ್ತಮ ವೇದಿಕೆ. ಈ ವೇದಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಉತ್ತಮ ಉದ್ಯೋಗಗಳನ್ನು ಪಡೆಯುವುದರ ಜೊತೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ| ರಾಧಾಕೃಷ್ಣ ಶೆಟ್ಟಿ ಹೇಳಿದರು. ಅವರು ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರಾಷ್ಟ್ರೀಯ […]